ಜೀವನಾಡಿಪಟ್ಟಿಯ ಮಾಧ್ಯಮದಿಂದ ಸಾಕ್ಷಾತ್ ಮಹರ್ಷಿಗಳು ಅವತಾರತ್ವವನ್ನು ಜಗತ್ತಿನೆದುರಿಗೆ ತಂದಂತಹ ವಿಶ್ವಗುರು, ರಾಷ್ಟ್ರಗುರು ಮತ್ತು ಮೋಕ್ಷಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರು ೧೯೯೯ ರಲ್ಲಿ ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಸನಾತನ ಸಂಸ್ಥೆಯ ರಜತ ಮಹೋತ್ಸವ ವರ್ಷದ ನಿಮಿತ್ತದಿಂದ ಈಗ ಸಂಸ್ಥೆಯ ಕಾರ್ಯಗಳನ್ನು ನೋಡುವಾಗ ಇದೊಂದು ದಿವ್ಯ ಮತ್ತು ಅಲೌಕಿಕ ಕಾರ್ಯವಾಗಿದೆಯೆನ್ನುವ ಅನುಭವ ಬಂದೇ ಬರುತ್ತದೆ. ಸನಾತನದ ಅಧ್ಯಾತ್ಮ ಮತ್ತು ಧರ್ಮ ಇವುಗಳ ಪ್ರಸಾರದ ಕಾರ್ಯವು ವ್ಯಾಪಕ ಸ್ತರದಲ್ಲಿ ಜಗತ್ತಿನ ಮನುಷ್ಯ, ಸಮಾಜ ಮತ್ತು ರಾಷ್ಟ್ರಗಳ ಹಿತವನ್ನು ಯಾವ ರೀತಿ ಸಾಧಿಸುತ್ತಿದೆ ಎನ್ನುವುದು ಗಮನಕ್ಕೆ ಬಂದಾಗ ಮನಸ್ಸು ಕೃತಜ್ಞತಾಭಾವದಿಂದ ತುಂಬಿ ಬರುತ್ತದೆ. ಈ ದೈವೀ ಧರ್ಮ ಮತ್ತು ರಾಷ್ಟ್ರ ಕಾರ್ಯದ ಸಂಕ್ಷಿಪ್ತ ಪರಿಚಯವನ್ನು ಇಲ್ಲಿ ಪ್ರಸ್ತುತಪಡಿಸುತ್ತಿದ್ದೇವೆ.
‘ಆನಂದ (ಈಶ್ವರ) ಪ್ರಾಪ್ತಿಗಾಗಿ ಸಾಧನೆ ಕಲಿಸುವುದು ಇದು ಮುಖ್ಯ ಉದ್ದೇಶ ಅಧ್ಯಾತ್ಮದ ಜ್ಞಾನವು ಅಗಾಧ ಮತ್ತು ಅನಂತವಾಗಿದೆ. ಸಾಮಾನ್ಯರಿಗೆ ಅದು ಕಠಿಣವೆನಿಸಬಹುದು ಅಥವಾ ‘ಇದರಲ್ಲಿ ನಿರ್ದಿಷ್ಟವಾಗಿ ಯಾವ ಉಪಾಸನೆಯನ್ನು ಮಾಡುವುದು ?, ಎನ್ನುವ ಪ್ರಶ್ನೆ ಮೂಡುತ್ತದೆ. ‘ಪೂಜೆ, ದೇವಸ್ಥಾನಕ್ಕೆ ಹೋಗುವುದು, ಉಪವಾಸ, ತೀರ್ಥಯಾತ್ರೆ, ಆಧ್ಯಾತ್ಮಿಕ ಗ್ರಂಥಗಳ ವಾಚನ, ಕಥೆ-ಕೀರ್ತನೆ, ವ್ರತಾಚರಣೆಗಳನ್ನು ಮಾಡಿದರೆ ದೇವರಿಗೆ ಸಂಬಂಧಿಸಿದಂತೆ ಏನಾದರೂ ಮಾಡುವುದು, ಎಂದು ಜನಸಾಮಾನ್ಯರಿಗೆ ತಿಳಿದಿರುತ್ತದೆ; ಆದರೆ ಆನಂದಪ್ರಾಪ್ತಿ, ಅಂದರೆ ಈಶ್ವರಪ್ರಾಪ್ತಿಯ ದಿಶೆಯಲ್ಲಿ ಹೋಗಲು ‘ಕಾಲಾನುಸಾರ ಪ್ರತಿದಿನ ಕೃತಿಯ ಸ್ತರದಲ್ಲಿ ನಿಯೋಜನಾಬದ್ಧ ಸಾಧನೆಯನ್ನು ಯಾವುದು ಮತ್ತು ಅದನ್ನು ಹೇಗೆ ಮಾಡಬೇಕು ?, ಎನ್ನುವುದನ್ನು ಸನಾತನ ಸಂಸ್ಥೆಯು ಮೊಟ್ಟ ಮೊದಲು ಹೇಳಿತು. ಇದುವೇ ಸನಾತನ ಸಂಸ್ಥೆಯ ವತಿಯಿಂದ ಹೇಳಲಾಗುವ ಸಾಧನೆಯ ವೈಶಿಷ್ಟ್ಯವೂ ಆಗಿದೆ. ಆನಂದಪ್ರಾಪ್ತಿ ಇದು ಪ್ರತಿಯೊಂದು ಜೀವಿಯ ಜೀವನದ ಏಕಮೇವ ಉದ್ದೇಶವಾಗಿರುತ್ತದೆ. ನಾವು ಏನೆಲ್ಲ ಮಾಡುತ್ತೇವೆಯೋ, ಅದರಿಂದ ಆನಂದ ಸಿಗಬೇಕು ಎಂಬುದಕ್ಕಾಗಿ ಮಾಡುತ್ತೇವೆ. ಆನಂದವನ್ನು ಹೇಗೆ ಪಡೆಯುವುದು ? ಎನ್ನುವುದನ್ನು ಕೇವಲ ಅಧ್ಯಾತ್ಮಶಾಸ್ತ್ರವೇ ಕಲಿಸಬಹುದು. ಇದನ್ನೇ ಸನಾತನ ಸಂಸ್ಥೆಯು ಸಮಾಜದ ಮೇಲೆ ಬಿಂಬಿಸಿತು.
ಸನಾತನ ಸಂಸ್ಥೆಯು ಹೇಳಿರುವ ಸಾಧನೆಯ ವೈಶಿಷ್ಟ್ಯಗಳು
೧. ವೈಜ್ಞಾನಿಕ; ಆದರೆ ಸುಲಭ ಭಾಷೆಯಲ್ಲಿ ಅಧ್ಯಾತ್ಮ ಮತ್ತು ಸಾಧನೆಯನ್ನು ತಿಳಿಸುವುದು : ಮಾನವನ ಜೀವನದ ಉದ್ದೇಶವೇನು ? ಆನಂದವನ್ನು ಪಡೆಯಲು ಸಾಧನೆಯನ್ನು ಮಾಡುವುದು ಏಕೆ ಆವಶ್ಯಕವಾಗಿದೆ ? ಕಲಿಯುಗದಲ್ಲಿ ಸರ್ವಶ್ರೇಷ್ಠವಾದ ಸಾಧನೆ ಯಾವುದು ? ಸಾಧನೆಯ ಮೂಲಭೂತ ತತ್ತ್ವಗಳು ಯಾವುವು ? ವ್ಯಷ್ಟಿ ಮತ್ತು ಸಮಷ್ಟಿ ಸಾಧನೆಯೆಂದರೆ ಏನು ? ಮುಂತಾದ ಎಲ್ಲ ಮಾಹಿತಿ ವೈಜ್ಞಾನಿಕ ಪರಿಭಾಷೆಯಲ್ಲಿ; ಆದರೆ ಸುಲಭ ಮತ್ತು ಸೂತ್ರಬದ್ಧ ರೀತಿಯಲ್ಲಿ ಸನಾತನ ಸಂಸ್ಥೆಯು ಪ್ರಪ್ರಥಮ ಬಾರಿಗೆ ಪ್ರವಚನಗಳು, ಸತ್ಸಂಗ, ಗ್ರಂಥ, ಧ್ವನಿಮುದ್ರಿಕೆಗಳು, ನಿಯತಕಾಲಿಕೆಗಳು ಮುಂತಾದ ವಿವಿಧ ಮಾಧ್ಯಮಗಳಿಂದ ಜಿಜ್ಞಾಸು ಸಮಾಜದ ವರೆಗೆ ತಲುಪಿಸಿತ.
೨. ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಗುರುಕೃಪಾಯೋಗದ ನಿರ್ಮಿತಿ ! : ಸಾಧನೆ ಅಥವಾ ಈಶ್ವರಪ್ರಾಪ್ತಿಯ ಅನೇಕ ಮಾರ್ಗಗಳಿದ್ದರೂ, ಪ್ರತಿಯೊಂದು ಮಾರ್ಗದಲ್ಲಿ ‘ಗುರುಕೃಪಾ ಹಿ ಕೇವಲಂ ಶಿಷ್ಯ ಪರಮಮಂಗಲಮ್; ಅಂದರೆ ‘ಕೇವಲ ಗುರುಕೃಪೆಯಿಂದಲೇ ಶಿಷ್ಯನ ಪ್ರಗತಿಯಾಗಲು ಸಾಧ್ಯ, ಈ ಅಧ್ಯಾತ್ಮದ ತತ್ತ್ವವು ಅನ್ವಯವಾಗುವುದರಿಂದ ಕಾಲಾನುಸಾರ ಶೀಘ್ರ ಆಧ್ಯಾತ್ಮಿಕ ಉನ್ನತಿಗಾಗಿ ಭಕ್ತಿಯೋಗ, ಕರ್ಮಯೋಗ ಮತ್ತು ಜ್ಞಾನಯೋಗ ಇತ್ಯಾದಿ ಯೋಗಮಾರ್ಗಗಳ ಸಂಗಮವಾದ ‘ಗುರುಕೃಪಾಯೋಗ ವನ್ನು ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ನಿರ್ಮಿಸಿದರು. ಸ್ವಭಾವದೋಷ ನಿರ್ಮೂಲನೆ, ಅಹಂ ನಿರ್ಮೂಲನೆ, ಭಾವಜಾಗೃತಿ, ನಾಮಜಪ, ಸತ್ಸಂಗ, ಸೇವೆ, ತ್ಯಾಗ, ಪ್ರೀತಿ ಈ ಹಂತಗಳನ್ನು ಈ ಯೋಗದ ಅಂತರ್ಗತ ಹೇಳಲಾಗಿವೆ. ಇವೆಲ್ಲ ಹಂತಗಳ ಮಾಧ್ಯಮದಿಂದ ಒಂದೇ ಸಮಯದಲ್ಲಿ ಸಾಧನೆ ಮಾಡಲು ಪ್ರಯತ್ನಿಸುವುದರಿಂದ ಶೀಘ್ರ ವಾಗಿ ಆಧ್ಯಾತ್ಮಿಕ ಉನ್ನತಿಯಾಗುತ್ತದೆ.
೩. ವ್ಯಕ್ತಿಯ ಪ್ರಕೃತಿಗನುಸಾರ ಸಾಧನೆಗೆ ಪ್ರಾಧಾನ್ಯತೆ ನೀಡುವುದು : ಸನಾತನ ಸಂಸ್ಥೆಯ ಸಾಧನೆಯ ವೈಶಿಷ್ಟ್ಯವೆಂದರೆ ‘ವ್ಯಕ್ತಿಗಳೆಷ್ಟೋ ಅಷ್ಟು ಪ್ರಕೃತಿ, ಅಷ್ಟು ಸಾಧನಾಮಾರ್ಗಗಳು, ಈ ಅಧ್ಯಾತ್ಮದ ತತ್ತ್ವಕ್ಕನುಸಾರ ಸಾಧನೆಯನ್ನು ಹೇಳಲಾಗುತ್ತದೆ. ಆದುದರಿಂದ ‘ಸನಾತನ ಸಂಸ್ಥೆ ಸಾಂಪ್ರದಾಯಿಕವಲ್ಲ.
೪. ಪ್ರತ್ಯಕ್ಷ ಸಾಧನೆಯ ಕೃತಿಯನ್ನು ಮಾಡಿಸಿಕೊಳ್ಳುವುದು : ‘ಅಧ್ಯಾತ್ಮವು ಕೇವಲ ಶೇ. ೨ ರಷ್ಟು ಶಾಬ್ದಿಕ ಮತ್ತು ಶೇ. ೯೮ ರಷ್ಟು ಕೃತಿಯ ಶಾಸ್ತ್ರವಾಗಿದೆ, ಈ ತತ್ತ್ವವನ್ನು ಪ್ರಪ್ರಥಮವಾಗಿ ಜಗತ್ತಿಗೆ ಸನಾತನ ಸಂಸ್ಥೆ ಹೇಳಿದೆ. ಸಾಧನೆಯ ತಾತ್ತ್ವಿಕ ಅಂಶಗಳನ್ನು ಕೃತಿಗೆ ತರಲು ಜಿಜ್ಞಾಸುಗಳಿಂದ ಪ್ರಯತ್ನಿಸಿಕೊಳ್ಳುವುದು, ಸನಾತನ ಸಂಸ್ಥೆಯ ವೈಶಿಷ್ಟ್ಯವಾಗಿದೆ. ಅನೇಕ ಸಂತರು ಈಶ್ವರಪ್ರಾಪ್ತಿಗಾಗಿ ಷಡ್ರಿಪು ನಿರ್ಮೂಲನೆ ಅಥವಾ ಅಂತಃಕರಣಶುದ್ಧಿಯ ಪ್ರಕ್ರಿಯೆ ಯನ್ನು ಹೇಳಿದ್ದಾರೆ.
ಆದರೆ ಸನಾತನದ ಸಾಧನೆಯ ವೈಶಿಷ್ಟ್ಯವೆಂದರೆ ‘ಮನಸ್ಸಿಗೆ ಸಂಬಂಧಿತ ಈ ಪ್ರಕ್ರಿಯೆ ಶಾಸ್ತ್ರಶುದ್ಧವಾಗಿ ಹೇಗೆ ಮಾಡುವುದು ?, ಎನ್ನುವುದನ್ನು ‘ಸ್ವಭಾವದೋಷ ಮತ್ತು ಅಹಂ ನಿರ್ಮೂಲನೆ ಈ ಪ್ರಕ್ರಿಯೆಯ ಮೂಲಕ ಪ್ರತ್ಯಕ್ಷದಲ್ಲಿ ಕಲಿಸಲಾಗುತ್ತದೆ. ಅದರಂತೆ ಸಾಧಕ, ಶಿಷ್ಯ ಮತ್ತು ಮುಂದೆ ಭಕ್ತನಾಗಲು ‘ಭಾವಜಾಗೃತಿಗಾಗಿ ಹೇಗೆ ಪ್ರಯತ್ನಿಸುವುದು ? ಎನ್ನುವುದನ್ನೂ ಕಲಿಸಲಾಗುತ್ತದೆ.
೫. ಸಾಧಕರನ್ನು ಸಂತರನ್ನಾಗಿ ಸಿದ್ಧಗೊಳಿಸುವ ಸನಾತನ ಸಂಸ್ಥೆ : ಮೇಲಿನಂತೆ ಸಾಧನೆಯನ್ನು ಮಾಡಿಸಿ ಸಾಧಕರ ಶೀಘ್ರ ಆಧ್ಯಾತ್ಮಿಕ ಉನ್ನತಿಯಾಗಿ ಈಗ ಸನಾತನ ಸಂಸ್ಥೆಯಲ್ಲಿ ೨೦೨೪ ರ ವರೆಗೆ ೧೨೦ ಸಾಧಕರು ಸಂತರಾಗಿದ್ದಾರೆ ಹಾಗೂ ಒಂದೂವರೆ ಸಾವಿರಕ್ಕಿಂತ ಅಧಿಕ ಜನರು ಸಂತರಾಗುವವವರಿದ್ದಾರೆ. ಯಾರಿಗೆ ಸಾಧನೆಯನ್ನು ಮಾಡಿ ಈಶ್ವರಪ್ರಾಪ್ತಿ ಮಾಡಿಕೊಳ್ಳುವ ನಿಜವಾದ ಪ್ರಾಮಾಣಿಕ ಇಚ್ಛೆಯಿದೆಯೋ, ಅವರಿಗಾಗಿ ಸಾಧನೆಯ ಒಂದು ‘ಆದರ್ಶ ಅಭ್ಯಾಸಕ್ರಮ ಮತ್ತು ಅದರ ‘ಫಲನಿಷ್ಪತ್ತಿಯನ್ನು ಸನಾತನ ಸಂಸ್ಥೆಯು ಸಮಾಜದೆದುರು ಇಟ್ಟಿದೆ.
ಚೈತನ್ಯಪ್ರಸಾರದ ಸಮಾಜಾಭಿಮುಖ ಅಧ್ಯಾತ್ಮಕಾರ್ಯ
೧. ಸನಾತನದ ಸಂತರು ಹೇಳಿರುವ ನಾಮಜಪದಿಂದ ಆಗಿರುವ ಲಾಭ ! : ಕೊರೊನಾ ಸಾಂಕ್ರಾಮಿಕದ ಕಾಲದಲ್ಲಿ ಸನಾತನದ ಸಂತರು ಸಮಾಜಕ್ಕಾಗಿ ನಾಮಜಪವನ್ನು ನೀಡಿದರು. ಅನೇಕ ಜನರಿಗೆ ಈ ನಾಮಜಪ ಮಾಡಿದ್ದರಿಂದ ಆ ಸಾಂಕ್ರಾಮಿಕದಿಂದ ಶೀಘ್ರ ಗುಣಮುಖರಾದ ಅಥವಾ ಸೋಂಕು ತಗಲದ ವೈಶಿಷ್ಟ್ಯ ಪೂರ್ಣ ಅನುಭೂತಿ ಬಂದಿತು. ಸನಾತನದ ಸಂತರು ಹೇಳಿದ ನಾಮಜಪಾದಿ ಉಪಾಯದಿಂದ ಅನೇಕರಿಗೆ ಅವರ ಅಡಚಣೆಗಳು ದೂರವಾದ ಹಾಗೂ ಸನಾತನದ ಸಾಧಕರಿಗೂ ಕಾರ್ಯದಲ್ಲಿ ಎದುರಾಗುವ ಅಡಚಣೆಗಳು ದೂರವಾದ ಅನುಭೂತಿ ಬಂದಿವೆ.
೨. ವೈಶಿಷ್ಟ್ಯಪೂರ್ಣ ಆಧ್ಯಾತ್ಮಿಕ ಉಪಾಯಗಳ ಸಂಶೋಧನೆ ! : ಯಾವುದೇ ಶಾರೀರಿಕ, ಮಾನಸಿಕ ಅಥವಾ ಕೌಟುಂಬಿಕ ತೊಂದರೆ ಯಲ್ಲಿ; ಹೆಚ್ಚಿನ ಸಮಸ್ಯೆಗಳಲ್ಲಿ ಶೇ. ೮೦ ರಷ್ಟು ಕಾರಣ ಆಧ್ಯಾತ್ಮಿಕ ಸ್ವರೂಪದ್ದಾಗಿರುವುದರಿಂದ, ಅದರ ನಿವಾರಣೆಗಾಗಿ ನಾಮಜಪಾದಿ ಆಧ್ಯಾತ್ಮಿಕ ಉಪಾಯಗಳನ್ನು ಮಾಡುವುದರಿಂದ ತೊಂದರೆಯು ಬೇಗನೆ ಕಡಿಮೆಯಾಗುತ್ತದೆ. ಇಂತಹ ವಿವಿಧ ರೀತಿಯ ತೊಂದರೆಗಳಿಗೆ ಪ್ರಾಣಶಕ್ತಿ (ಚೇತನಾ)ವಹನ ಉಪಾಯ ಪದ್ಧತಿಯ ಮಾಧ್ಯಮದಿಂದ ನಾಮಜಪವನ್ನು ಹುಡುಕುವುದು, ಖಾಲಿ ಪೆಟ್ಟಿಗೆಗಳ ಉಪಯೋಗ, ಭೀಮಸೇನಿ ಕರ್ಪೂರ ಅಥವಾ ನೈಸರ್ಗಿಕ ಅತ್ತರ ಮುಂತಾದ ಸಾತ್ತ್ವಿಕ ವಸ್ತುಗಳ ಉಪಯೋಗ, ಉಪ್ಪು ನೀರಿನ ಉಪಯೋಗ, ದೃಷ್ಟಿ ತೆಗೆಯುವುದು, ಅಮಾವಾಸ್ಯೆ – ಹುಣ್ಣಿಮೆ ತಿಥಿಗಳ ೨ ದಿನ ಮೊದಲು ಮತ್ತು ನಂತರ ಕೆಟ್ಟ ಶಕ್ತಿಗಳ ತೊಂದರೆ ಹೆಚ್ಚಾದಾಗ ಹೆಚ್ಚು ಹೆಚ್ಚು ನಾಮಜಪ ಸೂಚಿಸುವುದು; ವಾಸ್ತುಶುದ್ಧಿಗಾಗಿ ವಾಸ್ತುವಿನ ಮೇಲ್ಛಾವಣಿಗೆ ನಾಮಪಟ್ಟಿಗಳ ಮಂಡಲವನ್ನು ಹಾಕುವುದು, ವಾಹನಶುದ್ಧಿ ಮುಂತಾದವುಗಳನ್ನು ಸೂಚಿಸಿದ್ದು, ಈ ಸರಳ ಮತ್ತು ಸುಲಭ ಉಪಾಯಗಳನ್ನು ಮಾಡಿ ಅನೇಕ ಜಿಜ್ಞಾಸುಗಳು ವೈಯಕ್ತಿಕ ತೊಂದರೆಗಳು ದೂರವಾಗಿದೆ.
೩. ದೇವತೆಯ ಶೇ. ೩೦ ತತ್ತ್ವ ಕಾರ್ಯನಿರತವಾಗಿರುವ ದೇವತೆಗಳ ಚಿತ್ರಗಳ ರಚನೆ ! : ಸಾಧನೆ ಮಾಡುವ ವ್ಯಕ್ತಿಗೆ ಈಶ್ವರನ ಅನುಸಂಧಾನ ಸಾಧಿಸಲು ಸುಲಭವಾಗಬೇಕು, ಆಯಾ ದೇವತೆಗಳ ಚೈತನ್ಯ, ಶಕ್ತಿಗಳು ಹೆಚ್ಚು ಹೆಚ್ಚು ಲಾಭವಾಗಬೇಕು, ಇದಕ್ಕಾಗಿ ಸನಾತನ ಸಂಸ್ಥೆಯ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನದಲ್ಲಿ ಶಿವ, ಶ್ರೀಕೃಷ್ಣ, ಶ್ರೀರಾಮ, ಹನುಮಾನ, ಗಣಪತಿ, ದತ್ತ, ಮಹಾಲಕ್ಷ್ಮೀ ಮತ್ತು ದುರ್ಗಾದೇವಿ ಈ ಅಷ್ಟದೇವತೆಗಳ ಚಿತ್ರಗಳನ್ನು ಸಿದ್ಧಗೊಳಿಸಿದೆ. ಧರ್ಮಶಾಸ್ತ್ರದಲ್ಲಿ ದೇವತೆಗಳ ವರ್ಣನೆಗನುಗುಣವಾಗಿ, ಈ ಚಿತ್ರಗಳನ್ನು ಸನಾತನದ ಸಾಧಕರು ಪರಾತ್ಪರ ಗುರು ಡಾ. ಆಠವಲೆಯವರ ಮಾರ್ಗದರ್ಶನ ದಲ್ಲಿ ಸಿದ್ಧಗೊಳಿಸಿದ್ದಾರೆ. ಈ ಚಿತ್ರಗಳಲ್ಲಿರುವ ದೇವತೆಗಳ ಕಡೆಗೆ ನೋಡಿ ನಾಮಜಪ ಮಾಡುವುದರಿಂದ ಅನೇಕರಿಗೆ ‘ಅನುಭೂತಿಗಳು ಬಂದಿವೆ. ಈ ಭಾವಚಿತ್ರಗಳಲ್ಲಿ ಮತ್ತು ಇತರ ದೇವತೆಗಳಲ್ಲಿ ಆಯಾ ದೇವತೆಯ ಅಧಿಕಾಧಿಕ ತತ್ವಗಳು ಬರಲು ಇಂದಿಗೂ ಸ್ಪಂದನಶಾಸ್ತ್ರ ಮತ್ತು ಸಂತರ ಮಾರ್ಗದರ್ಶನಕ್ಕನುಸಾರ ಸಂಶೋಧನೆ ನಡೆಸಲಾಗುತ್ತಿದೆ.
೪. ಸಾತ್ವಿಕ ಅಕ್ಷರಗಳ ನಾಮಪಟ್ಟಿ : ವಾಸ್ತುಶುದ್ಧಿ, ವಾಹನಶುದ್ಧಿ, ಹಾಗೆಯೇ ನಾಮಜಪ ಚೆನ್ನಾಗಿ ಆಗಲು ಅಕ್ಷರಯೋಗಾನುಸಾರ ಸಾತ್ತ್ವಿಕ ಅಕ್ಷರಗಳ ಆಧಾರದಲ್ಲಿ ವಿವಿಧ ನಾಮಜಪಗಳ ಸಾತ್ತ್ವಿಕ ನಾಮಪಟ್ಟಿಗಳನ್ನು ಸನಾತನ ಸಂಸ್ಥೆಯು ಒದಗಿಸಿದೆ.
೫. ದೇವತೆಗಳ ನಾಮಜಪ, ಆರತಿ ಮತ್ತು ಸ್ತೋತ್ರಗಳು ಯೋಗ್ಯ ರೀತಿಯಲ್ಲಿ ಹೇಳುವುದರ ಹಿಂದಿನ ಶಾಸ್ತ್ರ ಹೇಳುವುದು : ಉಪಾಸನೆ ಮಾಡುವಾಗ ಯಾವುದೇ ಕೃತಿಯನ್ನು ಅಧ್ಯಾತ್ಮಶಾಸ್ತ್ರದ ದೃಷ್ಟಿಯಲ್ಲಿ ಯೋಗ್ಯ ಪದ್ಧತಿಯಲ್ಲಿ ಮಾಡಬೇಕು ಆಗಲೇ ಪರಿಪೂರ್ಣ ಫಲ ಸಿಗುತ್ತದೆ ಮತ್ತು ಆ ವಿಷಯ ನಮ್ಮಿಂದ ಭಾವಪೂರ್ಣವಾಗಿ ಆಗುತ್ತದೆ. ಅದಕ್ಕಾಗಿ ಸನಾತನ ಸಂಸ್ಥೆಯು ದೇವತೆಗಳ ನಾಮಜಪ, ಆರತಿಗಳು ಮತ್ತು ಸ್ತೋತ್ರಗಳು ಇವುಗಳನ್ನು ಯೋಗ್ಯವಾಗಿ ಹೇಗೆ ಹೇಳುವುದು ? ಎಂದು ಹೇಳುತ್ತದೆ.
ಭಾವೀ ಭೀಕರ ಆಪತ್ಕಾಲವನ್ನು ಗಮನದಲ್ಲಿಟ್ಟುಕೊಂಡು ಪೂರ್ವಸಿದ್ಧತೆಯನ್ನು ಹೇಳುವ ಏಕೈಕ ಸಂಸ್ಥೆ
ಮುಂಬರುವ ಕಾಲದಲ್ಲಿ ಭೀಕರ ಮೂರನೇ ಮಹಾಯುದ್ಧ ನಡೆಯುವುದಾಗಿ ಅನೇಕ ಸಂತರು ಮತ್ತು ದಾರ್ಶನಿಕರು ಹೇಳಿದ್ದಾರೆ. ‘ಆಪತ್ಕಾಲದಲ್ಲಿ ಜೀವಿಸಲು ಅಥವಾ ಆಪತ್ಕಾಲದಿಂದ ಪಾರಾಗಲು ಗ್ರಂಥಗಳು, ಪತ್ರಿಕೆಗಳು, ಜಾಲತಾಣಗಳು, ಸಾಮಾಜಿಕ ಮಾಧ್ಯಮಗಳಿಂದ ಸನಾತನವು ಸವಿಸ್ತಾರವಾಗಿ ಹೇಳುತ್ತಿದೆ.
ಚೈತನ್ಯದಾಯಿ ಆಶ್ರಮಗಳ ನಿರ್ಮಾಣ
ಆನಂದಪ್ರಾಪ್ತಿಗಾಗಿ ನಿವೃತ್ತಿ ಮಾರ್ಗದಿಂದ ಪೂರ್ಣವೇಳೆ ಸಾಧನೆ ಮಾಡುವವರಿಗೆ, ಸನಾತನ ಸಂಸ್ಥೆಯು ಗುರುಕುಲದಂತಹ ಆಶ್ರಮಗಳನ್ನು ನಿರ್ಮಿಸಿದೆ. ಸನಾತನದ ಸೂಕ್ಷ್ಮದ ಕಾರ್ಯ ಮಹಾಭಾರತದ ಯುದ್ಧ ಪ್ರಾರಂಭವಾದಾಗ ಭಗವಾನ ಶ್ರೀಕೃಷ್ಣನು ಅರ್ಜುನನಿಗೆ ‘ನಿನಗೆ ಕೇವಲ ಸ್ಥೂಲದಲ್ಲಿ ಕೃತಿಯನ್ನು ಮಾಡುವುದಿದೆ. ಪ್ರತ್ಯಕ್ಷದಲ್ಲಿ ಯುದ್ಧವನ್ನು ನಾನು ಮೊದಲೇ (ಸೂಕ್ಷ್ಮದಿಂದ) ಮಾಡಿದ್ದೇನೆ, ಎಂದು ಹೇಳಿದ್ದನು. ಪ್ರತಿಯೊಂದು ಕಾಲದಲ್ಲಿ ಧರ್ಮ-ಅಧರ್ಮದ ಯುದ್ಧದಲ್ಲಿ ಭಗವಂತನು ಸೂಕ್ಷ್ಮದಿಂದ ಮೊದಲೇ ಯುದ್ಧವನ್ನು ಮಾಡುತ್ತಿರುತ್ತಾನೆ ಮತ್ತು ನಂತರ ಸ್ಥೂಲದಲ್ಲಿ ಯುದ್ಧ ಆಗುತ್ತದೆ. ಮುಂಬರುವ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿಯೂ ಅದೇ ರೀತಿ ಪ್ರಕ್ರಿಯೆಯಿದೆ. ಭಗವಂತನೇ ಸೂಕ್ಷ್ಮದಿಂದ ಈ ಪ್ರಕ್ರಿಯೆಯನ್ನು ಮೊದಲು ನಡೆಸುತ್ತಾನೆ ಮತ್ತು ನಂತರ ಅದು ಸ್ಥೂಲದಲ್ಲಿ ನಡೆಯುವುದು. ಸನಾತನ ಸಂಸ್ಥೆಯ ಸಂಸ್ಥಾಪಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಸೂಕ್ಷ್ಮದ ಅವತಾರಿ ಕಾರ್ಯವೂ ಹಿಮಾಲಯದ ಅನೇಕ ಋಷಿತುಲ್ಯ ಸಂತ-ಮಹಾತ್ಮರಂತೆಯೇ ಇದೆ.
ಸಂಕಲನಕಾರರು : – ಶ್ರೀ. ಅಭಯ ವರ್ತಕ, ಮಾಜಿ ರಾಷ್ಟ್ರೀಯ ವಕ್ತಾರರು, ಸನಾತನ ಸಂಸ್ಥೆ.
ಸನಾತನ ಸಂಸ್ಥೆಯು ಸ್ವರ್ಗ, ಮಹರ್, ಜನ ಮುಂತಾದ ಉಚ್ಚ ಲೋಕಗಳಿಂದ ಪೃಥ್ವಿಯ ಮೇಲೆ ಜನಿಸಿರುವ ೧ ಸಾವಿರ
ಕ್ಕಿಂತ ಅಧಿಕ ಬಾಲಕರನ್ನು ಸೂಕ್ಷ್ಮ ಪರೀಕ್ಷಣೆಯ ಮೂಲಕ ಗುರುತಿಸಿದೆ. ಅವರಿಗೆ ‘ದೈವಿ ಬಾಲಕ ಎಂದು ಹೇಳಿದೆ. ಈ ಬಾಲಕರು ಮುಂಬರುವ ಕಾಲದಲ್ಲಿ ಹಿಂದೂ ರಾಷ್ಟ್ರವನ್ನು ಮುನ್ನಡೆಸಲು ಸಕ್ಷಮರಾಗುವರು. ಸನಾತನ ಸಂಸ್ಕೃತಿಯು ಧರ್ಮಾಧಿಷ್ಠಿತ ರಾಜ್ಯವ್ಯವಸ್ಥೆಯಿಂದ ಲಕ್ಷಗಟ್ಟಲೆ ವರ್ಷಗಳಿಂದ ಸ್ಥಿರವಾಗಿದೆ. ಕಾಲಗತಿಗನುಸಾರ ಮತ್ತೊಮ್ಮೆ ಧರ್ಮ ಸಂಸ್ಥಾಪನೆಯಾಗಿ ಹಿಂದೂ ರಾಷ್ಟ್ರದ ಸ್ಥಾಪನೆಯಾಗಲಿದೆ, ಎಂದು ಅನೇಕ ಸಂತರು ಮತ್ತು ದಾರ್ಶನಿಕರು ಹೇಳಿದ್ದಾರೆ. ಇಂತಹ ಸಾಧನಾನಿರತ ಮತ್ತು ಧರ್ಮಾಧಿಷ್ಠಿತ ಪ್ರಜೆಗಳನ್ನು ರೂಪಿಸಲು ಸಮಾಜಕ್ಕೆ ಯೋಗ್ಯ ಸಾಧನೆಯನ್ನು ತಿಳಿಸಿ ಹೇಳಿ, ಧರ್ಮಾಚರಣೆಗೆ ಪ್ರವೃತ್ತಗೊಳಿಸುವುದು, ಧರ್ಮ ಶಿಕ್ಷಣದ ಮಹತ್ವವನ್ನು ಹೇಳುವುದು ಮುಂತಾದ ಧರ್ಮ ಮತ್ತು ಅಧ್ಯಾತ್ಮಗಳ ಪ್ರಸಾರವನ್ನು ಸನಾತನ ಸಂಸ್ಥೆಯು ಮಾಡುತ್ತಿದೆ. ಇದರಿಂದ ಒಂದು ರೀತಿಯಲ್ಲಿ ಮುಂಬರುವ ಕಾಲದ ರಾಮರಾಜ್ಯ ನಡೆಸುವ ಪೀಳಿಗೆ ಸಿದ್ಧಪಡಿಸುವಲ್ಲಿ ಸನಾತನ ಸಂಸ್ಥೆಯ ಅತುಲನೀಯ ಕೊಡುಗೆಯಿದೆ.
ಸಂಸ್ಥಾಪಕರ ಕಿರು ಪರಿಚಯ ಮತ್ತು ಸನಾತನ ಸಂಸ್ಥೆಯ ಸ್ಥಾಪನೆಅಂತಾರಾಷ್ಟ್ರೀಯ ಖ್ಯಾತಿಯ ಮಾನಸೋಪಚಾರತಜ್ಞರು ಮತ್ತು ಸಮ್ಮೋಹನ ಉಪಚಾರತಜ್ಞರಾಗಿದ್ದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು ೧೯೯೯ ರಲ್ಲಿ ‘ಸನಾತನ ಸಂಸ್ಥೆ ಯನ್ನು ಸ್ಥಾಪಿಸಿದರು. ಇಂದೂರ(ಮಧ್ಯಪ್ರದೇಶ)ದಲ್ಲಿ ಅವರ ಗುರು ಸಂತ ಭಕ್ತರಾಜ ಮಹಾರಾಜರು ಈ ಸಂಸ್ಥೆಯ ಪ್ರೇರಣಾಸ್ಥಾನವಾಗಿದ್ದಾರೆ. ‘ಜಿಜ್ಞಾಸುಗಳಿಗೆ ಅಧ್ಯಾತ್ಮವನ್ನು ಶಾಸ್ತ್ರೀಯ ಪರಿಭಾಷೆಯಲ್ಲಿ ಪರಿಚಯಿಸುವುದು ಮತ್ತು ‘ಸಾಧಕರಿಗೆ ವೈಯಕ್ತಿಕ ಸಾಧನೆಯ ವಿಷಯದಲ್ಲಿ ಮಾರ್ಗದರ್ಶನ ಮಾಡಿ, ಆನಂದಪ್ರಾಪ್ತಿಯವರೆಗಿನ ಮಾರ್ಗವನ್ನು ತೋರಿಸುವ ಉದ್ದೇಶದಿಂದ ಅವರು ಸನಾತನ ಸಂಸ್ಥೆಯನ್ನು ಸ್ಥಾಪಿಸಿದರು. ಅವರು ಸನಾತನ ಸಂಸ್ಥೆಯ ಮಾಧ್ಯಮದಿಂದ ಪ್ರಾರಂಭದಲ್ಲಿ ಅಭ್ಯಾಸವರ್ಗ ಬಳಿಕ ಸತ್ಸಂಗವನ್ನು ಪ್ರಾರಂಭಿಸಿದರು. ಸದ್ಯ ಸನಾತನ ಸಂಸ್ಥೆಯು ವಿವಿಧ ಮಾಧ್ಯಮಗಳಿಂದ ವ್ಯಾಪಕ ಸ್ತರದಲ್ಲಿ ಅಧ್ಯಾತ್ಮ ಮತ್ತು ಧರ್ಮ ಇವುಗಳ ಪ್ರಸಾರದ ಕಾರ್ಯವನ್ನು ಮಾಡುತ್ತಿದೆ. ‘ಅಧ್ಯಾತ್ಮವೇ ಮಾನವನ ಜೀವನದ ಸಾರವಾಗಿದೆ. ವಿಶ್ವದ ಮಾನವನ ಜೀವನ ಆನಂದಮಯವಾಗಲು ಸನಾತನ ಸಂಸ್ಥೆಯು ದೇವತೆಗಳ ಕೃಪೆ ಮತ್ತು ಸಂತರ ಆಶೀರ್ವಾದಗಳಿಂದ ಕಳೆದ ೨೫ ವರ್ಷಗಳಲ್ಲಿ ಅಧ್ಯಾತ್ಮಕ್ಷೇತ್ರದಲ್ಲಿ ಒಂದರ್ಥದಲ್ಲಿ ಮೂಲಭೂತ, ಪರಿಪೂರ್ಣ ಮತ್ತು ಉತ್ತುಂಗ ಕಾರ್ಯವನ್ನು ಮಾಡಿದೆ ! |