ಗುರುಕೃಪಾಯೋಗದ ಮೂಲಕ ಆನಂದ (ಮೋಕ್ಷ) ಪ್ರಾಪ್ತಿಯ ವಿಹಂಗಮ ಮಾರ್ಗ ತೋರಿಸುವ ಸನಾತನ ಸಂಸ್ಥೆ !
ಸನಾತನ ಸಂಸ್ಥೆಯು ೨೨ ಮಾರ್ಚ್ ೨೦೨೪ ರಂದು ತನ್ನ ಸ್ಥಾಪನೆಯ ೨೫ ವರ್ಷಗಳನ್ನು ಪೂರ್ಣಗೊಳಿಸುತ್ತಿದೆ. ಸನಾತನ ಸಂಸ್ಥೆಯ ರಜತ (೨೫ ನೇ ವರ್ಷದ) ಮಹೋತ್ಸವದ ನಿಮಿತ್ತ ‘ಸನಾತನ ಸಂಸ್ಥೆಯ ವ್ಯಾಪಕ ಕಾರ್ಯದ ಕೇವಲ ಪ್ರಾಥಮಿಕ ಪರಿಚಯ ಎಂದು ಹೇಳಬಹುದಾದ ಮಾಹಿತಿಯನ್ನು ‘ರಜತ ಮಹೋತ್ಸವ ವಿಶೇಷಾಂಕದಲ್ಲಿ ನೀಡಲಾಗಿದೆ. ಈ ವಿಶೇಷಾಂಕದಿಂದ ಸನಾತನ ಸಂಸ್ಥೆಯ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಬಗ್ಗೆ ಜಿಜ್ಞಾಸು, ವಾಚಕರು, ಸಾಧಕ ಮತ್ತು ಹಿತಚಿಂತಕರ ಭಾವಭಕ್ತಿಯು ಹೆಚ್ಚಾಗಲಿ ಹಾಗೂ ಅವರಿಗೆ ಶೀಘ್ರವಾಗಿ ಆಧ್ಯಾತ್ಮಿಕ ಉನ್ನತಿ ಮಾಡಿಕೊಳ್ಳುವ ಪ್ರೇರಣೆಯು ದೊರೆಯಲಿ, ಎಂದು ಭಗವಾನ್ ಶ್ರೀಕೃಷ್ಣ ಹಾಗೂ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಚರಣಗಳಲ್ಲಿ ಪ್ರಾರ್ಥನೆ. ಇದರೊಂದಿಗೆ ಸನಾತನ ಸಂಸ್ಥೆಯ ದಿವ್ಯ ಹಾಗೂ ಅಲೌಕಿಕ ಕಾರ್ಯವನ್ನು ವಾಚಕರ ವರೆಗೆ ತಲುಪಿಸಲು ನಮಗೆ ಅವಕಾಶ ನೀಡಿದ್ದಕ್ಕಾಗಿ ಕೃತಜ್ಞತೆಗಳು.