|
ನವ ದೆಹಲಿ – ಅಮೆರಿಕನ್ ಮೆಡಿಕಲ್ ಅಸೋಸಿಯೇಷನ್ ಜರ್ನಲ್ ನಲ್ಲಿ ಫೆಬ್ರುವರಿ ೧೨ ರಂದು ಒಂದು ಸಂಶೋಧನೆ ಪ್ರಕಟಿಸಿದೆ. ಅದರಲ್ಲಿ ಭಾರತದಲ್ಲಿನ ೬ ರಿಂದ ೨೩ ತಿಂಗಳ ವಯಸ್ಸಿನ ಮಕ್ಕಳ ಅಧ್ಯಯನ ನಡೆಸಿದ್ದಾರೆ. ಈ ವರದಿಯಲ್ಲಿ, ಭಾರತದಲ್ಲಿನ ೬೭ ಲಕ್ಷ (ಶೇಕಡ ೧೯.೩) ಮಕ್ಕಳು ಶೂನ್ಯ-ಅನ್ನ ಶ್ರೇಣಿಯಲ್ಲಿ (ಜೀರೋ ಫುಡ್) ಬರುತ್ತಾರೆ. ಇದರ ಅರ್ಥ ದೇಶದಲ್ಲಿ ೨೪ ಗಂಟೆಯಲ್ಲಿ ಹಾಲು ಅಥವಾ ಅನ್ನ ಸೇವಿಸದ ೬೭ ಲಕ್ಷ ಮಕ್ಕಳಿದ್ದಾರೆ ಎಂದು ದಾವೆ ಮಾಡಿದೆ.
ಭಾರತ ಮೂರನೇ ಸ್ಥಾನದಲ್ಲಿ
ಈ ಅಧ್ಯಯನದಲ್ಲಿ, ಶೂನ್ಯ-ಅನ್ನ ಶ್ರೇಣಿಯಲ್ಲಿ ಬರುವ ಜಗತ್ತಿನಲ್ಲಿನ ೯೨ ಅಲ್ಪ ಮತ್ತು ಮಧ್ಯಮ ಉತ್ಪನ್ನ ದೇಶದ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನದಲ್ಲಿದೆ. ಅಲ್ಲಿ ಇಷ್ಟು ಮಕ್ಕಳು ಜೀರೋ ಫುಡ್ ಮಕ್ಕಳ ಶ್ರೇಣಿಯಲ್ಲಿದ್ದಾರೆ. ಗಿನೀ (ಶೇಕಡ ೨೧.೮) ಮತ್ತು ಮಾಲಿ (ಶೇಕಡ ೨೦.೫) ಈ ದೇಶಗಳು ಅನುಕ್ರಮವಾಗಿ ಮೊದಲು ಮತ್ತು ಎರಡನೆಯ ಸ್ಥಾನದಲ್ಲಿವೆ. ಈ ದೇಶದ ಪರಿಸ್ಥಿತಿ ಭಾರತದಕ್ಕಿಂತಲೂ ಕೆಟ್ಟದಾಗಿದೆ. ಈ ಸಮಸ್ಯೆ ಪಶ್ಚಿಮ ಆಫ್ರಿಕಾ, ಮಧ್ಯ ಆಫ್ರಿಕಾ ಮತ್ತು ಭಾರತದಲ್ಲಿ ಎಲ್ಲಕ್ಕಿಂತ ಹೆಚ್ಚಾಗಿದೆ ಎಂದು ಹೇಳಿದೆ.
ವರದಿ ನಕಲಿ ಇರುವುದಾಗಿ ಭಾರತದ ಅಭಿಪ್ರಾಯ
ಕೇಂದ್ರ ಮಕ್ಕಳ ಅಭಿವೃದ್ಧಿ ಸಚಿವಾಲಯವು ಈ ಅಧ್ಯಯನವು ಆಧಾರರಹಿತ ಇದೆ ಎಂದು ಹೇಳಿದೆ. ಸಚಿವಾಲಯವು,
೧. ವರದಿ ಪ್ರಸ್ತುತಪಡಿಸುವಾಗ ಅದರಲ್ಲಿ ಪ್ರಾರ್ಥಮಿಕ ಸಂಶೋಧನೆ ನಡೆದಿಲ್ಲ. ಸುಳ್ಳು ವಾರ್ತೆ ಪಸರಿಸುವುದಕ್ಕಾಗಿ ಈ ಅಧ್ಯಯನ ನಡೆಸಿದ್ದಾರೆ. ಇದರಲ್ಲಿ ಮಾಡಿರುವ ದಾವೆ ಭ್ರಮೆ ನಿರ್ಮಾಣ ಮಾಡುವುದಾಗಿದೆ.
೨. ಸಂಶೋಧಕರ ಅಧ್ಯಯನದ ಮೇಲೆ ವಿಶ್ವಾಸವಿಡಲು ಸಾಧ್ಯವಿಲ್ಲ; ಕಾರಣ ಇದರಲ್ಲಿ ‘ಜೀರೋ-ಫುಡ್’ ಮಕ್ಕಳ ಶಾಸ್ತ್ರಿಯ ವ್ಯಾಖ್ಯೆ ಇಲ್ಲ.
೩. ಅಧ್ಯಯನದಲ್ಲಿ ಕೇವಲ ಪ್ರಾಣಿಯ ಹಾಲು ಅಥವಾ ಅನ್ನದ ಸೇವನೆಯ ಬಗ್ಗೆ ಮಾತನಾಡಿದ್ದಾರೆ; ಆದರೆ ಯಾವ ಮಕ್ಕಳು ತಾಯಿಯ ಹಾಲು ಕುಡಿಯುತ್ತಿದ್ದಾರೆ ಅದರ ಉಲ್ಲೇಖವಿಲ್ಲ.
೪. ಅಧ್ಯಯನದಲ್ಲಿ, ಭಾರತದಲ್ಲಿ ಶೇಕಡಾ ೧೯.೩ ಮಕ್ಕಳ ಪೈಕಿ ಶೇಕಡ ೧೭.೮ ಮಕ್ಕಳು ಸ್ತನಪಾನ ನೀಡಲಾಗುತ್ತದೆ ಎಂದೂ ಸಹ ದಾವೆ ಮಾಡಿದೆ. ಹೀಗಿದ್ದರೆ ಆ ಮಕ್ಕಳು ಶೂನ್ಯ-ಅನ್ನ ಶ್ರೇಣಿಯಲ್ಲಿ ಹೇಗೆ ಬರುತ್ತವೆ ?
೫. ಅಂಗನವಾಡಿ ಕೇಂದ್ರದ ಮೂಲಕ ದೇಶದ ೮ ಕೋಟಿ ಮಕ್ಕಳಿಗೆ ಆಹಾರ ಸೇವನೆಯ ಅಭ್ಯಾಸದ ಕಡೆಗೆ ಗಮನ ಇರಿಸಿದ್ದಾರೆ. ಇದಕ್ಕಾಗಿ ‘ನ್ಯೂಟ್ರಿಷನ್ ಟ್ರ್ಯಾಕರ್’ ಹೆಸರಿನ ಪೋರ್ಟಲ್ ತಯಾರಿಸಿದ್ದಾರೆ. ಅಧ್ಯಯನದಲ್ಲಿ ಪೋಷಣ ‘ಟ್ರ್ಯಾಕರ್ ಡೇಟಾ’ ಇದರ ಬಗ್ಗೆ ಗಮನ ಹರಿಸಿಲ್ಲ ಎಂದು ಹೇಳಿದ್ದಾರೆ.
ಸಂಪಾದಕೀಯ ನಿಲುವುಭಾರತದ ಪ್ರತಿಷ್ಠೆ ಕಳಂಕಿತಗೊಳಿಸುವುದಕ್ಕಾಗಿ ಅಮೇರಿಕಾದಲ್ಲಿನ ಸಂಸ್ಥೆಯು ಈ ರೀತಿ ವರದಿ ಪ್ರಸಿದ್ಧಿಗೊಳಿಸುತ್ತದೆ. ಆದ್ದರಿಂದ ಭಾರತವು ಕೇವಲ ಖಂಡಿಸಿ ಮೌನವಾಗಿರದೆ ಅಂತರಾಷ್ಟ್ರೀಯ ಮಟ್ಟದಲ್ಲಿ ಇಂತಹ ಸಂಸ್ಥೆಯ ಸುಳ್ಳುತನ ಬಹಿರಂಗಪಡಿಸಲು ಪ್ರಯತ್ನಿಸುವುದು ಅವಶ್ಯಕವಾಗಿದೆ ! |