DMK Minister Threatens PM : ‘ನಾನು ಸಚಿವನಾಗಿರದಿದ್ದರೆ, ಪ್ರಧಾನಮಂತ್ರಿ ಮೋದಿ ಅವರನ್ನು ತುಂಡು ತುಂಡು ಮಾಡುತ್ತಿದ್ದೆ ! (ಅಂತೆ) – ದ್ರಮುಕ ಸರಕಾರದ ಸಚಿವ ಟಿ.ಎಂ. ಅಂಬರಸನ್‌

ತಮಿಳುನಾಡಿನಲ್ಲಿನ ದ್ರಮುಕ ಸರಕಾರದ ಸಚಿವ ಟಿ.ಎಂ. ಅಂಬರಸನ್‌ ಇವರ ಹೇಳಿಕೆ !

(ದ್ರಮುಕ – ದ್ರಾವಿಡ ಮುನ್ನೆತ್ರಿ ಕಳಘಂ – ದ್ರಾವಿಡ ಪ್ರಗತಿ ಸಂಘ)

ಚೆನ್ನೈ (ತಮಿಳುನಾಡು) – ನಾನು ಸಚಿವನಾಗಿರುವುದರಿಂದ ಈಗ ಶಾಂತಿಯಿಂದ ಇದ್ದೇನೆ. ನಾನು ಸಚಿವ ನಾಗಿರದಿದ್ದರೆ ಪ್ರಧಾನಮಂತ್ರಿ ಮೋದಿ ಇವರನ್ನು ತುಂಡು ತುಂಡು ಮಾಡುತ್ತಿದ್ದೆ ಎಂದು ತಮಿಳುನಾಡಿನ ದ್ರಮುಕ ಸರಕಾರದಲ್ಲಿನ ಗ್ರಾಮೀಣ ಉದ್ಯೋಗ ಸಚಿವ ಟಿ.ಎನ್. ಅಂಬರಸನ್ ಇವರು ಹೇಳಿಕೆ ನೀಡಿರುವ ಒಂದು ವಿಡಿಯೋ ಕೆಲವು ದಿನಗಳ ಹಿಂದೆ ಪ್ರಸಾರವಾಗಿದೆ. ಈ ಪ್ರಕರಣದಲ್ಲಿ ಸರ್ವೋಚ್ಚ ನ್ಯಾಯಾಲಯದ ನ್ಯಾಯವಾದಿಯಿಂದ ದೆಹಲಿಯ ಸಂಸದ ಮಾರ್ಗ ಪೊಲೀಸ್ ಠಾಣೆಯಲ್ಲಿ ಅಂಬರಸನ್ ಇವರ ವಿರುದ್ಧ ದೂರು ದಾಖಲಿಸಿದ್ದಾರೆ.

ವಿಡಿಯೋದಲ್ಲಿ ಸಚಿವ ಅಂಬರಸನ್ ಮಾತು ಮುಂದುವರೆಸುತ್ತಾ, ನಮ್ಮ ಅನೇಕ ಪ್ರಧಾನಮಂತ್ರಿಗಳು ಆಗಿ ಹೋಗಿದ್ದಾರೆ, ಯಾರು ಈ ರೀತಿ ಮಾತನಾಡುತ್ತಿರಲಿಲ್ಲ. ಮೋದಿ ನಮ್ಮನ್ನು ಮುಗಿಸುವ ಬಗ್ಗೆ ಮಾತನಾಡುತ್ತಾರೆ; ಆದರೆ ನಾನು ನಿಮಗೆ ಒಂದು ವಿಷಯದ ನೆನಪು ಮಾಡಿಕೊಡುತ್ತೇನೆ, ದ್ರಮುಕ ಇದು ಸಾಮಾನ್ಯ ಸಂಘಟನೆ ಅಲ್ಲ. ಅನೇಕ ಬಲಿದಾನ ಮತ್ತು ರಕ್ತ ಹರಿಸಿದ ನಂತರ ಕಟ್ಟಿರುವ ಸಂಘಟನೆಯಾಗಿದೆ. ಯಾರು ದ್ರಮುಕವನ್ನು ನಾಶ ಮಾಡುವುದರ ಬಗ್ಗೆ ಮಾತನಾಡುತ್ತಾರೆ ಅವರೇ ನಾಶವಾಗುತ್ತಾರೆ. ಈ ಸಂಘಟನೆ ಶಾಶ್ವತವಾಗಿ ಉಳಿಯುತ್ತದೆ ಇದನ್ನು ನೆನಪಿನಲ್ಲಿಡಿ !

‘ಇಂಡಿ’ ಮೈತ್ರಿಕೂಟದ ನೀತಿ ಹೀಗೆ ಇದೆ ! – ಭಾಜಪದಿಂದ ಟೀಕೆ

ಭಾಜಪದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆಯ ಪ್ರಮುಖ ಅಮಿತ್ ಮಾಲವಿಯ ಇವರು ‘ಎಕ್ಸ್’ ನಲ್ಲಿ ಪೋಸ್ಟ್ ಮಾಡುತ್ತಾ, ‘ಇಂಡಿ’ ಮೈತ್ರಿಯ ನೀತಿ ಇದಕ್ಕಿಂತ ಹೆಚ್ಚು ಸ್ಪಷ್ಟವಾಗಲು ಸಾಧ್ಯವಿಲ್ಲ. ಸನಾತನ ಧರ್ಮ ಮತ್ತು ಅದರ ಮೇಲೆ ವಿಶ್ವಾಸ ಇಟ್ಟಿರುವವರನ್ನು ನಾಶ ಮಾಡುವುದೇ ಇವರ ಉದ್ದೇಶವಾಗಿದೆ ಎಂದು ಬರೆದಿದ್ದಾರೆ.

ಸಂಪಾದಕೀಯ ನಿಲುವು

ಈ ಹೇಳಿಕೆಯ ಕುರಿತು ವಿರೋಧ ಪಕ್ಷದಲ್ಲಿನ ಓರ್ವ ರಾಜಕಾರಣಿಯು ಖಂಡಿಸಿಲ್ಲ ಅಥವಾ ಅಂಬರಸನ್ ಇವರ ಮೇಲೆ ಕ್ರಮ ಕೈಗೊಳ್ಳಲು ಆಗ್ರಹಿಸಿಲ್ಲ. ತದ್ವಿರುದ್ಧ ಯಾವುದಾದರೂ ಭಾಜಪದ ಸಚಿವರು ವಿರೋಧ ಪಕ್ಷದ ನಾಯಕರ ವಿರುದ್ಧ ತಪ್ಪಿ ಈ ರೀತಿ ಹೇಳಿಕೆ ನೀಡಿದ್ದರೆ, ಇದೇ ಜನರು ಅವರ ಮೇಲೆ ಕ್ರಮ ಕೈಗೊಳ್ಳುವುದಕ್ಕಾಗಿ ಆಕಾಶ ಪಾತಾಳ ಒಂದು ಮಾಡುತ್ತಿದ್ದರು !