ಭಯೋತ್ಪಾದಕರ ಹೆಸರುಗಳನ್ನು ಸೇರಿಸಲು ಒಪ್ಪದ ಭದ್ರತಾ ಮಂಡಳಿಯಲ್ಲಿನ ದೇಶಗಳನ್ನು ಖಂಡಿಸಿದ ಭಾರತ

ನ್ಯೂಯಾರ್ಕ್ – ವಿಶೇಷಾಧಿಕಾರ (ವೀಟೋ ಪವರ) ಉಪಯೋಗಿಸಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಪಟ್ಟಿಯಲ್ಲಿ ಭಯೋತ್ಪಾದಕರ ಹೆಸರನ್ನು ಸೇರಿಸಲು ಅವಕಾಶ ನೀಡದಿರುವ ದೇಶಗಳನ್ನು ಭಾರತವು ಭದ್ರತಾ ಮಂಡಳಿಯಲ್ಲಿ ನಿಷೇಧಿಸಿದೆ. ಚೀನಾದ ಹೆಸರನ್ನು ಹೇಳದೇ ಭಾರತದ ಸ್ಥಾಯಿ ಪ್ರತಿನಿಧಿ ರುಚಿರಾ ಕಂಬೋಜ ಇವರು ಮಾತನಾಡಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಭಯೋತ್ಪಾದಕರನ್ನು ಎದುರಿಸುವ ಆಶ್ವಾಸನೆಯನ್ನು ನೀಡುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೆಲವು ದೇಶಗಳು ದ್ವಂದ್ವ ನಿಲುವನ್ನು ಹೊಂದಿವೆ. (ಭಯೋತ್ಪಾದಕತೆಗೆ ಸೊಪ್ಪು ಹಾಕುವ ಚೀನಾದಂತಹ ದೇಶಗಳ ವಿಶೇಷಾಧಿಕಾರವನ್ನು ರದ್ದುಗೊಳಿಸಬೇಕು. ಆಗಲೇ ಭಯೋತ್ಪಾದಕತೆ ನಿಜವಾದ ಅರ್ಥದಿಂದ ಮುಗಿಯುತ್ತದೆ. ಇದನ್ನು ಜಗತ್ತಿಗೆ ತಿಳಿಸಿ ಹೇಳುವಲ್ಲಿ ಭಾರತವು ಮುಂದಾಳತ್ವವನ್ನು ವಹಿಸಬೇಕಾಗಿದೆ – ಸಂಪಾದಕರು)

ಕಂಬೋಜ ಇವರು ಮಾತನ್ನು ಮುಂದುವರಿಸಿ, ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿರುವ ಹೆಸರನ್ನು ಘೋಷಿಸುತ್ತದೆ; ಆದರೆ ಯಾರ ಹೆಸರುಗಳನ್ನು ನಿರಾಕರಿಸಲಾಗುತ್ತದೆ ಆ ಹೆಸರಿನ ವಿಷಯದಲ್ಲಿ ಯಾವುದೇ ಪಟ್ಟಿ ಅಥವಾ ಕಾರಣವನ್ನು ಬಹಿರಂಗಪಡಿಸುವುದಿಲ್ಲ. ವಿಶ್ವಸಂಸ್ಥೆಯ ಅಂಗ ಸಂಸ್ಥೆಗಳ ಮುಖಂಡತ್ವದ ವಿಷಯದಲ್ಲಿ ತೆಗೆದುಕೊಂಡ ನಿರ್ಣಯಗಳಲ್ಲಿ ಪಾರದರ್ಶಕತೆ ತರುವುದು ಆವಶ್ಯಕವಿದೆ. ಪ್ರತಿಯೊಬ್ಬರನ್ನೂ ತನ್ನ ನಿರ್ಣಯದಲ್ಲಿ ಸೇರಿಸಿಕೊಳ್ಳಬೇಕು. ಭದ್ರತಾ ಮಂಡಳಿಯಲ್ಲಿ ಕಾರ್ಯದ ವರದಿಯನ್ನು ತೆಗೆದುಕೊಳ್ಳುವುದು ಮತ್ತು ಅದರಿಂದ ಅನಾವಶ್ಯಕ ವಿಷಯಗಳನ್ನು ತೆಗೆದು ಹಾಕುವುದು ಅತ್ಯಂತ ಆವಶ್ಯಕವಾಗಿದೆ ಎಂದು ಹೇಳಿದರು.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಆಗ್ರಹ

ರುಚಿರಾ ಕಾಂಬೋಜ್ ಇವರು ಮತ್ತೊಮ್ಮೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಬದಲಾವಣೆಗೆ ಒತ್ತಾಯಿಸಿದರು. ಅವರು, ಜಾಗತಿಕ ಭದ್ರತೆ ಮತ್ತು ಶಾಂತಿಗೆ ಅಪಾಯಗಳು ಹೆಚ್ಚುತ್ತಿದೆ. ಸಂಘಟನೆಯಲ್ಲಿ ಬದಲಾವಣೆಗೆ ಅಡ್ಡಿಯಾಗುತ್ತಿರುವ ಸದಸ್ಯರು ಒಗ್ಗೂಡಬೇಕು ಮತ್ತು ಇಪ್ಪತ್ತೊಂದನೇ ಶತಮಾನದ ಸವಾಲುಗಳನ್ನು ಎದುರಿಸಲು ಅವರನ್ನು ಸಕ್ರಿಯಗೊಳಿಸಲು ಕೊಡುಗೆ ನೀಡಬೇಕು.

ಏನಿದು ಪ್ರಕರಣ ?

ಚೀನಾವು ಸಾಜಿದ ಮೀರ ಹೆಸರನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲು ವಿರೋಧಿಸಿತ್ತು. ಕಳೆದ ವರ್ಷ ಭಾರತ ಮತ್ತು ಅಮೇರಿಕಾವು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ 26/11ರ ಮುಂಬಯಿ ದಾಳಿಯಲ್ಲಿ ಕೈವಾಡವಿದ್ದ ಲಷ್ಕರ-ಎ-ತೋಯ್ಬಾ ಭಯೋತ್ಪಾದಕರ ಸಾಜಿದ ಮೀರನನ್ನು ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸಲು ಪ್ರಸ್ತಾವನೆ ಮಂಡಿಸಿತ್ತು. ಆದರೆ ಚೀನಾ `ವಿಟೋ ಪವರ’ ಉಪಯೋಗಿಸಿ ಅದನ್ನು ತಿರಸ್ಕರಿಸಿತ್ತು. ಪಾಕಿಸ್ತಾನಿ ಭಯೋತ್ಪಾದಕರ ಮೌಲಾನಾ ಮಸೂದ ಅಝಹರನ ಸಹೋದರ ಅಬ್ದುಲ ರವೂಫ ಅಸಗರ ಉರ್ಫ ಅಬ್ದುಲ ರೌಫ ಇವನನ್ನು ವಿಶ್ವ ಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿ ಸೇರಿಸುವ ಅಮೇರಿಕಾ ಮತ್ತು ಭಾರತ ತಂದಿರುವ ಪ್ರಸ್ತಾವನೆಯನ್ನು 2022 ರಲ್ಲಿ ಚೀನಾ ವಿರೋಧಿಸಿತ್ತು. ಇದರೊಂದಿಗೆ ಲಷ್ಕರ-ಎ- ತೋಯಬಾ ಪ್ರಮುಖ ಹಾಫೀಜ ಸಯಿದ ಪುತ್ರ ತಲಹಾ ಸಯೀದನನ್ನು ಜಾಗತಿಕ ಭಯೋತ್ಪಾದಕನೆಂದು ಘೋಷಿಸುವ ವಿಷಯದ ಪ್ರಸ್ತಾವನೆಯನ್ನು ಚೀನಾ ನಿಲ್ಲಿಸಿತ್ತು.

ಸಂಪಾದಕೀಯ ನಿಲುವು

ಇಂತಹ ಹೆಸರುಗಳನ್ನು ಸೇರಿಸಲು ವಿರೋಧಿಸುವ ದೇಶಗಳ ಮೇಲೆ ಜಗತ್ತು ಬಹಿಷ್ಕರಿಸುವುದು ಆವಶ್ಯಕವಾಗಿದೆ !