Nuclear War Averted: ಪ್ರಧಾನಮಂತ್ರಿ ಮೋದಿಯಿಂದಾಗಿ ರಷ್ಯಾ ಮತ್ತು ಉಕ್ರೇನ್ ನಡುವೆ ನಡೆಯಲಿದ್ದ ಪರಮಾಣು ಯುದ್ಧ ತಪ್ಪಿತು ! – ಅಮೇರಿಕಾದ ದಾವೆ

ವಾಷಿಂಗ್ಟನ್ (ಅಮೇರಿಕಾ) – ಕಳೆದ 2 ವರ್ಷಗಳಿಂದ ರಷ್ಯಾ ಮತ್ತು ಉಕ್ರೇನ್ ನಡುವೆ ಯುದ್ಧ ನಡೆಯುತ್ತಿದೆ. ಈ ಯುದ್ಧದಲ್ಲಿ 2022 ರಲ್ಲಿ ರಷ್ಯಾದ ಅಧ್ಯಕ್ಷ ಪುಟಿನ್ ಉಕ್ರೇನ್ ಮೇಲೆ ಪರಮಾಣು ಬಾಂಬ್ ಅನ್ನು ಹಾಕುವವರಿದ್ದರು; ಆದರೆ ಭಾರತದ ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಪುಟಿನ್ ಇವರನ್ನು ಬಾಂಬ್ ಹಾಕದಂತೆ ಮಾಡಿದರು ಎಂದು ಅಮೇರಿಕೆಯ ಇಬ್ಬರು ಅಧಿಕಾರಿಗಳು ಹೇಳಿದ್ದಾರೆ.

1. ಸಿ.ಎನ್.ಎನ್. ಈ ಸುದ್ದಿವಾಹಿನಿಯು ಈ ಅಧಿಕಾರಿಗಳ ಉಲ್ಲೇಖಿಸುತ್ತಾ ಈ ಸಂದರ್ಭದಲ್ಲಿ ಸುದ್ದಿಯನ್ನು ಬಿತ್ತರಿಸಿದ್ದಾರೆ. ಇದರಲ್ಲಿ ಹಿರಿಯ ಅಧಿಕಾರಿಗಳು ಮಾತನಾಡಿ, ಪರಮಾಣು ಯುದ್ಧವನ್ನು ತಡೆಯಲು ಯಾವ ದೇಶಗಳ ಮಾತುಗಳು ಪುಟಿನ ವರೆಗೆ ತಲುಪಲು ಸಾಧ್ಯವಿತ್ತೋ, (ಯಾರ ಮಾತನ್ನು ಪುಟಿನ ಕೇಳುತ್ತಾರೆಯೋ) ಅವರ ಸಹಾಯವನ್ನು ಕೋರಿದೆವು. ಬಳಿಕ ಹೊರಗಿನ ಒತ್ತಡ ಚೆನ್ನಾಗಿ ಉಪಯೋಗಕ್ಕೆ ಬಂದಿತು. ಪ್ರಧಾನಮಂತ್ರಿ ನರೇಂದ್ರ ಮೋದಿ ಮತ್ತು ಇತರರ ಸಾರ್ವಜನಿಕ ಹೇಳಿಕೆಗಳು ಈ ಬಿಕ್ಕಟ್ಟು ದೂರವಾಗಲು ಸಹಾಯವಾಯಿತು.

2. 2022 ರ ಉತ್ತರಾರ್ಧದಲ್ಲಿ ‘ರಷ್ಯಾ ಪರಮಾಣು ದಾಳಿ ನಡೆಸಬಹುದು’, ಎನ್ನುವ ಮಾಹಿತಿ ಅಮೇರಿಕೆಗೆ ದೊರಕಿತ್ತು. ಉಕ್ರೇನ ಪಡೆಗಳು ದಕ್ಷಿಣದ ರಷ್ಯಾದ ವಶದಲ್ಲಿರುವ ಖೇರಸನ ಕಡೆಗೆ ವೇಗವಾಗಿ ಮುನ್ನಡೆಯುತ್ತಿತ್ತು. ಅವರು ರಷ್ಯಾದ ಸೈನ್ಯವನ್ನು ಸಂಪೂರ್ಣವಾಗಿ ಸುತ್ತುವರೆದಿದ್ದರು. ಅಂತಹ ಸಂದರ್ಭ ನಿರ್ಮಾಣವಾಗಿತ್ತು. ಇದು ರಷ್ಯಾಗೆ ತೊಂದರೆಯೆನಿಸುತ್ತಿತ್ತು. ‘ಖೇರಸನ ಸ್ಥಿತಿ ಪರಮಾಣು ದಾಳಿಯ ಪ್ರಮುಖ ಕಾರಣವಾಗಬಹುದು’, ಎಂದು ಅಮೇರಿಕೆಯ ಆಡಳಿತದಲ್ಲಿ ಚರ್ಚೆಯಾಗುತ್ತಿತ್ತು. ತದನಂತರ ಅಮೇರಿಕೆಯು ಭಾರತ ಸೇರಿದಂತೆ ಇತರ ದೇಶಗಳ ನೆರವು ಕೋರಿತ್ತು.

3. ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಕಳೆದ ವರ್ಷ ಉಜ್ಬೇಕಿಸ್ತಾನದಲ್ಲಿ ನಡೆದ ಶಾಂಘೈ ಶೃಂಗಸಭೆಯ ನಿಮಿತ್ತದಿಂದ ರಾಷ್ಟ್ರಾಧ್ಯಕ್ಷ ಪುಟಿನ್ ಅವರಿಗೆ ಇದು ಯುದ್ಧದ ಯುಗವಲ್ಲ ಎಂದು ಹೇಳಿದ್ದರು.