ಸಾಧಕರಿಗೆ ಸೂಚನೆ
ಅನೇಕ ಸಾಧಕರಿಗೆ ಇತರ ಸಾಧಕರ ಗುಣವೈಶಿಷ್ಟ್ಯಗಳು, ಹಾಗೆಯೇ ಸಾಧನೆಯಿಂದ ಅವರಲ್ಲಾದ ವೈಶಿಷ್ಟ್ಯಪೂರ್ಣ ಬದಲಾವಣೆಗಳು ಗಮನಕ್ಕೆ ಬರುತ್ತವೆ. ‘ಕೆಲವು ಸಾಧಕರು ಸಾಧನೆಯ ಒಳ್ಳೆಯ ಪ್ರಯತ್ನಗಳನ್ನು ಮಾಡುತ್ತಿದ್ದು ‘ಅವರ ಆಧ್ಯಾತ್ಮಿಕ ಉನ್ನತಿ ಆಗುತ್ತಿದೆ’, ಎಂದೂ ಕೆಲವರಿಗೆ ಗಮನಕ್ಕೆ ಬಂದಿರುತ್ತದೆ. ಕೆಲವು ಸಾಧಕರಿಗೆ ಇತರರ ಆಧ್ಯಾತ್ಮಿಕ ಉನ್ನತಿಯಾದ ಬಗ್ಗೆ ಮುನ್ಸೂಚನೆ ಸಿಕ್ಕಿರುತ್ತದೆ. ಹೀಗಿದ್ದರೂ ಸಾಧಕರು ಸಂಬಂಧಿತ ಸಾಧಕರ ಬಗ್ಗೆ ವೈಶಿಷ್ಟ್ಯಪೂರ್ಣ ವಿಷಯಮನ್ನು ತತ್ಪರತೆಯಿಂದ ಬರೆದು ಕೊಡುವುದಿಲ್ಲ. ಆದುದರಿಂದ ‘ಸನಾತನ ಪ್ರಭಾತ’ದಲ್ಲಿ ಈ ಲೇಖನವನ್ನು ಆಯಾ ಸಮಯದಲ್ಲಿ ಮುದ್ರಿಸಲು ಸಾಧ್ಯವಾಗುವುದಿಲ್ಲ.
ಈ ಮಧ್ಯೆ ಬಹಳಷ್ಟು ಸಾಧಕರು ಉತ್ತಮ ಸಾಧಕರ ಮತ್ತು ಹಿರಿಯ ಸಂತರ ಬಗ್ಗೆ ವೈಶಿಷ್ಟ್ಯಪೂರ್ಣ ಅಂಶಗಳನ್ನು ಅವರ ನಿಧನದ ನಂತರ ಬರೆದುಕೊಟ್ಟರು. ಅದರಿಂದ ಅವರು ಬದುಕಿರುವಾಗ ಅವರ ಗುಣವೈಶಿಷ್ಟ್ಯಗಳನ್ನು ‘ಸನಾತನ ಪ್ರಭಾತ’ದಲ್ಲಿ ಪ್ರಕಟಿಸಿ ಅವರ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಲು ಸಾಧ್ಯವಾಗಲಿಲ್ಲ. ಅವರು ಬದುಕಿರುವಾಗ ಅವರ ಬಗೆಗಿನ ಬರಹವನ್ನು ಮುದ್ರಿಸಿದ್ದರೆ, ಅವರಿಗೆ ಮತ್ತು ಅವರ ಕುಟುಂಬದವರಿಗೆ ಆನಂದ ಸಿಗುತ್ತಿತ್ತು, ಹಾಗೆಯೇ ಇತರ ಸಾಧಕರಿಗೆ ಅವರಿಂದ ಕಲಿಯಲು ಸಾಧ್ಯವಾಗುತ್ತಿತ್ತು.
ಸಾಧಕರು ಇನ್ನು ಮುಂದೆ ಉತ್ತಮ ಸಾಧಕರು ಮತ್ತು ಸಂತರ ಬಗ್ಗೆ ವೈಶಿಷ್ಟ್ಯಪೂರ್ಣ ಬರಹ, ಪ್ರಸಂಗ ಮತ್ತು ಸಂತರ ಸಂದರ್ಭದಲ್ಲಿ ಬಂದ ಅನುಭೂತಿಗಳನ್ನು ನಿಖರ ವಾಗಿ ಮತ್ತು ತತ್ಪರತೆಯಿಂದ ಬರೆದು ಕಳುಹಿಸಬೇಕು.’
– ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ, ಸನಾತನ ಆಶ್ರಮ, ರಾಮನಾಥಿ, ಗೋವಾ. (೨೪.೨.೨೦೨೪)