Adina Mosque Adinath Temple : ಮಾಲದಾ (ಬಂಗಾಲ) ಇಲ್ಲಿ ಹಿಂದುಗಳ ದೇವಸ್ಥಾನದ ಧ್ವಂಸಗೊಳಿಸಿ ಅದಿನಾ ಮಸೀದಿಯನ್ನು ಕಟ್ಟಿದ್ದರಿಂದ ಅಲ್ಲಿ ಹಿಂದುಗಳಿಗೆ ಪೂಜೆಗೆ ಅನುಮತಿ ನೀಡಿ !

ಸರ್ವೋಚ್ಚ ನ್ಯಾಯಾಲಯದ ಹಿರಿಯ ನ್ಯಾಯವಾದಿ (ಪೂ.) ಹರಿ ಶಂಕರ ಜೈನ ಇವರಿಂದ ಪ್ರಧಾನಮಂತ್ರಿ ಮೋದಿ ಇವರಿಗೆ ಪತ್ರದ ಮುಲಕ ಮನವಿ !

ನವ ದೆಹಲಿ – ಬಂಗಾಲದ ಮಾಲದಾ ಜಿಲ್ಲೆಯಲ್ಲಿನ ‘ಆದಿನಾ’ ಮಸೀದಿಯ ಜಾಗದಲ್ಲಿ ಹಿಂದೆ ದೇವಸ್ಥಾನವಿತ್ತು. ನೂರಾರು ವರ್ಷಗಳ ಹಿಂದೆ ಇಲ್ಲಿಯ ದೇವಸ್ಥಾನ ಧ್ವಂಸಗೊಳಿಸಿ ಮಸೀದಿ ಕಟ್ಟಿದ್ದಾರೆ. ಇಲ್ಲಿ ಇನ್ನು ಕೂಡ ದೇವಸ್ಥಾನದ ಅವಶೇಷಗಳು ಕಂಡು ಬರುತ್ತವೆ. ಈಗ ಈ ಭೂಮಿ ಮತ್ತೆ ಹಿಂದುಗಳಿಗೆ ಸಿಗಬೇಕು, ಎಂದು ಸರ್ವೋಚ್ಚ ನ್ಯಾಯಾಲಯದಲ್ಲಿನ ನ್ಯಾಯವಾದಿ (ಪೂ.) ಹರಿ ಶಂಕರ ಜೈನ್ ಇವರು ಮನವಿ ಸಲ್ಲಿಸಿದ್ದಾರೆ. ಈ ಜಾಗ ಪ್ರಸ್ತುತ ಭಾರತೀಯ ಪುರಾತತ್ವ ಸಮೀಕ್ಷಾ ಇಲಾಖೆಯ ನಿಯಂತ್ರಣದಲ್ಲಿದೆ. ಆದ್ದರಿಂದ ಪೂ. ಹರಿ ಶಂಕರ ಜೈನ ಇವರು ಪ್ರಧಾನಮಂತ್ರಿ ಮತ್ತು ಕೇಂದ್ರ ಗೃಹ ಸಚಿವರಿಗೆ ಪತ್ರ ಬರೆದು ‘ಈ ತಥಾಕಥಿತ ಮಸೀದಿಯಲ್ಲಿ ಹಿಂದೂಗಳಿಗೆ ಪೂಜೆಯ ಅಧಿಕಾರ ದೊರೆಯಬೇಕೆಂದು’ ಮನವಿ ಸಲ್ಲಿಸಿದ್ದಾರೆ. ಹಾಗೂ ಪೂ. ಹರಿ ಶಂಕರ ಜೈನ ಇವರು ದೇಶದಲ್ಲಿನ ಸಮಸ್ತ ಹಿಂದುಗಳಿಗೆ ಇದಕ್ಕಾಗಿ ಮುಂದೆ ಬರಲು ಕರೆ ಕೂಡ ನೀಡಿದ್ದಾರೆ.

ಸಿಕಂದರ್ ಶಾಹ ಎಂಬ ದಾಳಿಕೋರನು ೧೩೬೪ – ೭೪ ರ ಕಾಲಾವಧಿಯಲ್ಲಿ ಹಿಂದೂ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಆ ಸ್ಥಳದಲ್ಲಿ ಅದಿನಾ ಮಸೀದಿ ಕಟ್ಟಿದನು. ದೇವಸ್ಥಾನದ ಅವಶೇಷಗಳು ಅಲ್ಲಿ ದೊರೆತಿದ್ದು ಒಟ್ಟು ೩೨ ಸಾಕ್ಷಿಗಳು ಇವೆ, ಆ ಸ್ಥಳದಲ್ಲಿ ದೇವಸ್ಥಾನ ಇರುವ ಕುರುಹು ನೀಡುತ್ತವೆ.

ಸಂಪಾದಕೀಯ ನಿಲುವು

ವಾಸ್ತವದಲ್ಲಿ ಇಂತಹ ಬೇಡಿಕೆಗಳು ಸಲ್ಲಿಸುವ ಸಮಯ ಬರಬಾರದು. ದೇಶದಲ್ಲಿನ ಯಾವ ಸ್ಥಳಗಳಲ್ಲಿನ ದೇವಸ್ಥಾನಗಳನ್ನು ಧ್ವಂಸಗೊಳಿಸಿ ಮಸೀದಿಗಳು ಕಟ್ಟಿರುವ ಇತಿಹಾಸ ಮತ್ತು ಸಾಕ್ಷಿಗಳು ಇವೆ. ಅದು ಪುರಾತತ್ವ ಇಲಾಖೆಯಿಂದ ಸರಕಾರಕ್ಕೆ ಪ್ರಸ್ತುತಪಡಿಸಬೇಕು ಮತ್ತು ಸರಕಾರವು ಅಂತಹ ಎಲ್ಲಾ ಸ್ಥಳಗಳು ಹಿಂದುಗಳ ವಶಕ್ಕೆ ಒಪ್ಪಿಸಬೇಕು !