Pakistan Blasphemy : ಪಾಕಿಸ್ತಾನದಲ್ಲಿ ಮಹಮ್ಮದ್ ಪೈಗಂಬರ್ ಇವರ ಅವಮಾನ ಮಾಡಿದ ವಿದ್ಯಾರ್ಥಿಗೆ ಗಲ್ಲುಶಿಕ್ಷೆ

ಮತ್ತೊಬ್ಬ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ

ಇಸ್ಲಾಮಾಬಾದ್(ಪಾಕಿಸ್ತಾನ) – ಪಾಕಿಸ್ತಾನದಲ್ಲಿ ಓರ್ವ ೨೨ ವರ್ಷದ ವಿದ್ಯಾರ್ಥಿಗೆ ಪ್ರವಾದಿ ಮಹಮ್ಮದ್‌ ಪೈಗಂಬರ್ ಅವರನ್ನು ಅವಮಾನ ಮಾಡಿದ್ದಕ್ಕಾಗಿ ಪಂಜಾಬ್ ನ ಪ್ರಾಂತೀಯ ನ್ಯಾಯಾಲಯವು ಗಲ್ಲು ಶಿಕ್ಷೆ ವಿಧಿಸಿದೆ. ಇದರೊಂದಿಗೆ ೧೭ ವರ್ಷದ ಮತ್ತೊಬ್ಬ ವಿದ್ಯಾರ್ಥಿಗೆ ಜೀವಾವಧಿ ಶಿಕ್ಷೆ ವಿಧಿಸಲಾಗಿದೆ. ಈ ವಿದ್ಯಾರ್ಥಿಗಳು ವಾಟ್ಸಾಪ್‌ನಲ್ಲಿ ಮಹಮ್ಮದ್ ಪೈಗಂಬರ್ ಮತ್ತು ಅವರ ಪತ್ನಿಯರ ಬಗ್ಗೆ ಆಕ್ಷೇಪಾರ್ಹ ಪದಗಳನ್ನು ಒಳಗೊಂಡಿರುವ ಇಂತಹ ಚಿತ್ರಗಳನ್ನು ತಯಾರಿಸಿದ್ದರು. ೧೭ ವರ್ಷ‌ದ ವಿದ್ಯಾರ್ಥಿಯು ಚಿತ್ರಗಳನ್ನು ಮತ್ತು ವೀಡಿಯೋ ಪ್ರಸಾರ ಮಾಡಿದ್ದಾನೆ. ಪಾಕಿಸ್ತಾನದಲ್ಲಿ ಇಂತಹ ಪ್ರಕರಣಗಳಲ್ಲಿ ಗಲ್ಲುಶಿಕ್ಷೆಯ ಅವಕಾಶವಿದೆ.

ಸಂಪಾದಕೀಯ ನಿಲುವು

ಭಾರತದಲ್ಲಿ ಹಿಂದೂಗಳ ದೇವತೆ, ಧರ್ಮ, ದೇವಸ್ಥಾನ ಇತ್ಯಾದಿಗಳ ಮೇಲೆ ವಿವಿಧ ಮಾಧ್ಯಮಗಳ ಮೂಲಕ ಅವಮಾನ ಮಾಡುತ್ತಿರುವಾಗ ಎಂದಿಗೂ ಯಾರಿಗೂ ಶಿಕ್ಷೆಯಾಗುವುದಿಲ್ಲ, ಇದು ನಾಚಿಕೆಗೇಡು !