ನವ ದೆಹಲಿ – ಪೊಲೀಸರು ಯಾವುದೇ ವಿಶಿಷ್ಟ ಧಾರ್ಮಿಕ ಅಥವಾ ಸಾಂಸ್ಕೃತಿಕ ಸಮಾಜದ ಲಾಭಕ್ಕಾಗಿ ಅಲ್ಲ, ಎಂದು ದೆಹಲಿ ಉಚ್ಚ ನ್ಯಾಯಾಲಯ ಅಭಿಪ್ರಾಯ ಪಟ್ಟಿದೆ. ನ್ಯಾಯಾಲಯವು ಈ ಸಮಯದಲ್ಲಿ ಕಾನೂನನನ್ನು ಜಾರಿಗೊಳಿಸುವ ವ್ಯವಸ್ಥೆಗೆ ಮುಖ ಮುಚ್ಚಿಕೊಳ್ಳುವ ಮಹಿಳೆಯರ ಅವಶ್ಯಕತೆಯ ಕುರಿತು ಹೆಚ್ಚು ಸಂವೇದನಶೀಲತೆ ತೋರಿಸುವ ಕುರಿತು ಆದೇಶ ನೀಡಲು ನಿರಾಕರಿಸಿದೆ.
೧. ನ್ಯಾಯಮೂರ್ತಿ ಸ್ವರ್ಣಕಾಂತ ಶರ್ಮ ಇವರು ಬುರ್ಖಾಧಾರಿ ಮುಸಲ್ಮಾನ ಮಹಿಳೆಯು ಸಲ್ಲಿಸಿರುವ ಅರ್ಜಿಯ ಕುರಿತು ವಿಚಾರಣೆ ನಡೆಸುತ್ತಿದ್ದರು. ಪೊಲೀಸರು ಈ ಮಹಿಳೆಗೆ ಬುರ್ಖಾ ಧರಿಸದೆ ಆಕೆಯ ವಾಸಿಸುವ ಮನೆಯಿಂದ ಬಲವಂತವಾಗಿ ತಂದು ಮತ್ತು ಅಕ್ರಮವಾಗಿ ಪೊಲೀಸ್ ಠಾಣೆಯಲ್ಲಿ ಕೂಡಿ ಹಾಕಿದ್ದಾರೆ ಎಂದು ಅರ್ಜಿಯಲ್ಲಿ ಆರೋಪಿಸಿದ್ದಳು.
೨. ನ್ಯಾಯಮೂರ್ತಿ ಸ್ವರ್ಣಕಾಂತಾ ಶರ್ಮಾ ಇವರು, ತನಿಖಾ ವ್ಯವಸ್ಥೆಯು ನಿಸ್ಪಕ್ಷಪಾತ, ಸ್ಪಷ್ಟತೆ ಮತ್ತು ತರ್ಕಶಾಸ್ತ್ರ ತತ್ವದ ಪಾಲನೆ ಮಾಡಬೇಕು. ಅವರು ಸಮಾಜದ ಹಿತದ ವಿರುದ್ಧವಾಗಿರುವ ವಿಶಿಷ್ಟ ರೀತಿಯಲ್ಲಿ ಕೆಲಸ ಮಾಡುವ ಸೂಚನೆ ನೀಡುವುದು ಅನ್ಯಾಯಕರವಾಗಿದೆ ಮತ್ತು ಅದು ಅಕ್ರಮ ಎಂದು ತಿಳಿಯಲಾಗುವುದು ಎಂದು ಹೇಳಿದರು.
೩. ನ್ಯಾಯಾಲಯವು, ಕಾನೂನನನ್ನು ಜಾರಿಗೊಳಿಸುವ ವ್ಯವಸ್ಥೆ ಮತ್ತು ಅದರ ಸಮೀಕ್ಷೆ ಧಾರ್ಮಿಕ ರೀತಿಯಲ್ಲಿ ಮಾಡಲು ಸಾಧ್ಯವಿಲ್ಲ; ಆದರೆ ಈ ಜನಾಂಗ ಮತ್ತು ಸುರಕ್ಷಿತತೆ ಇದರಿಂದ ಪ್ರೇರಿತವಾಗಿರಬೇಕು ಎಂದು ಹೇಳಿದರು.