ಗಾಂಧಿನಗರ – ಪ್ರಧಾನಮಂತ್ರಿ ನರೇಂದ್ರ ಮೋದಿ ಇವರು ಗುಜರಾತ ಪ್ರವಾಸದಲ್ಲಿದ್ದಾರೆ. ಅವರು ಈ ಸಮಯದಲ್ಲಿ ೪೮ ಸಾವಿರ ಕೋಟಿ ರೂಪಾಯಿಗಳ ವಿವಿಧ ಅಭಿವೃದ್ಧಿಕಾರ್ಯದ ಉದ್ಘಾಟನೆ ಮಾಡಿದರು. ಈ ಸಮಯದಲ್ಲಿ ಅವರು ಸಮುದ್ರದ ತಳದಲ್ಲಿ `ಸ್ಕೂಬಾ ಡೈವಿಂಗ್’ ಮೂಲಕ ಹೋಗಿ ಪ್ರಾಚೀನ ದ್ವಾರಕಾದ ದರ್ಶನ ಪಡೆದರು. `ಸ್ಕೂಬಾ ಡೈವಿಂಗ್’ ಇದು ನೀರಿನ ಕೆಳಗೆ ಈಜುವ ಒಂದು ಪದ್ಧತಿಯಾಗಿದೆ. ಇದಕ್ಕಾಗಿ ವಿವಿಧ ಉಪಕರಣಗಳನ್ನು ಉಪಯೋಗಿಸಲಾಗುತ್ತದೆ. ಸಾಮಾನ್ಯವಾಗಿ ಸಮುದ್ರದ ಕೆಳಗಿನ ಜೀವಸೃಷ್ಟಿಯ ಅಧ್ಯಯನ ಅಥವಾ ಸಮುದ್ರದ ಕೆಳಗಿನ ಪರ್ಯಟನೆಗಾಗಿ ಅದನ್ನು ಉಪಯೋಗಿಸಲಾಗುತ್ತದೆ.
ಸಮುದ್ರದ ಆಳಕ್ಕೆ ಹೋದ ನಂತರ ನನಗೆ ದೇವತ್ವದ ಅನುಭವವಾಯಿತು ! – ಪ್ರಧಾನಮಂತ್ರಿ ಮೋದಿ
ನಾನು ಸಮುದ್ರದ ಆಳಕ್ಕೆ ಹೋಗಿ ಪ್ರಾಚೀನ ದ್ವಾರಕಾ ನಗರದ ದರ್ಶನ ಪಡೆದೆ. ಸಮುದ್ರದಲ್ಲಿ ಆಳಕ್ಕೆ ಹೋದ ನಂತರ ನನಗೆ ದೇವತ್ವದ ಅನುಭವ ಬಂದಿತು. ನಾನು ದ್ವಾರಕಾಧೀಶನ ಎದುರು ನತಮಸ್ತಕನಾದೆ. ನಾನು ನನ್ನ ಜೊತೆಗೆ ನವಿಲುಗರಿ ತೆಗೆದು ಕೊಂಡು ಹೋಗಿದ್ದೆ. ನಾನು ಅದನ್ನು ಶ್ರೀಕೃಷ್ಣನ ಚರಣದಲ್ಲಿ ಇರಿಸಿದೆ. ಪ್ರಾಚೀನ ದ್ವಾರಕಾ ನಗರಿಯ ಅವಶೇಷಗಳನ್ನು ಸ್ಪರ್ಶಿಸುವ ಉತ್ಸುಕತೆ ನನಗೆ ಯಾವಾಗಲೂ ಇತ್ತು. ಈ ದರ್ಶನದ ನಂತರ ನಾನು ಭಾವಪರವಶನಾದೆ.
ದೇಶದ ಅತಿ ದೊಡ್ಡ ಕೇಬಲ್‌ಬ್ರಿಜ್ ಉದ್ಘಾಟಿಸಿದ ಪ್ರಧಾನಿ
(ಕೇಬಲ್ ಬ್ರಿಜ್ ಎಂದರೆ ದೊಡ್ಡ ತಂತಿಗಳ ಮೂಲಕ ಕಟ್ಟಲಾದ ಸೇತುವೆ)
ಭಾರತದ ೪.೭೭ ಕಿಲೋಮೀಟರ್ ಉದ್ದದ ಕೇಬಲ್‌ಬ್ರಿಜ್ ಅನ್ನು `ಸುದರ್ಶನ ಸೇತು’ವನ್ನು ದ್ವಾರಕಾದಲ್ಲಿ ಪ್ರಧಾನಮಂತ್ರಿ ಮೋದಿ ಇವರು ಫೆಬ್ರವರಿ ೨೫ ರಂದು ಉದ್ಘಾಟಿಸಿದರು. ಈ ಸೇತುವೆಗೆ ೯೭೯ ಕೋಟಿ ರೂಪಾಯಿ ಖರ್ಚು ಮಾಡಲಾಗಿದೆ. ಓಖಾ ಮತ್ತು ಬೆಟ ದ್ವಾರಕ ಇವುಗಳನ್ನು ಈ ಸೇತುವೆ ಜೋಡಿಸುತ್ತದೆ. ಈ ಸೇತುವೆಯುÄ ೨೭.೨೦ ಮೀಟರ್‌ನÀಷ್ಟು ಅಗಲವಿದ್ದು ಇದರ ಮೇಲೆ ೪ ರಸ್ತೆಗಳಿವೆ. ಈ ರಸ್ತೆಯ ಎರಡು ಬದಿಗೆ ಸುಮಾರು ೨.೩೦ ಮೀಟರ್ ಉದ್ದದ ಪಾದಚಾರಿ ರಸ್ತೆಯ ಪಕ್ಕಕ್ಕೆ ಶ್ರೀಮದ್ ಭಗವತ ಗೀತೆಯಲ್ಲಿನ ಶ್ಲೋಕ ಮತ್ತು ಭಗವಾನ್ ಶ್ರೀಕೃಷ್ಣನ ಚಿತ್ರಗಳು ಅಂಟಿಸಲಾಗಿದೆ. ಇದೇ ಸೇತುವೆ ಹತ್ತಿರ ಭಗವಾನ್ ಶ್ರೀಕೃಷ್ಣನ ಪ್ರಸಿದ್ಧ ದ್ವಾರಕಾಧೀಶ ದೇವಸ್ಥಾನವೂ ಇದೆ.