ಇಲ್ಲಿಯವರೆಗೆ ಬಂಗಾಲದ ಬಗ್ಗೆ ಕೇಂದ್ರ ಸರಕಾರವು ಯಾವುದೇ ದೃಢವಾದ ಕ್ರಮಗಳನ್ನು ತೆಗೆದುಕೊಂಡಿರುವುದು ಕಂಡು ಬರುತ್ತಿಲ್ಲ; ಆದುದರಿಂದ ದೇಶದಾದ್ಯಂತದ ಹಿಂದೂಗಳು ಈಗ ಜಾಗೃತರಾಗಿ ಬಂಗಾಲವನ್ನು ರಕ್ಷಿಸಲು ದೇಶದಾದ್ಯಂತ ಸಾಮಾಜಿಕ ಮಾಧ್ಯಮ ಸಹಿತ ಇತರ ಕೆಲವು ಮಾಧ್ಯಮಗಳ ಮೂಲಕ ಜನಜಾಗೃತಿ ಮಾಡಿ ಸರಕಾರಕ್ಕೆ ಆ ಬಗ್ಗೆ ಪುನಃ ಪುನಃ ಹೇಳಬೇಕು. ದುರದೃಷ್ಟವಶಾತ್ ಇಂತಹ ಸಮಯ ಬಂದಿದೆ. ಇಲ್ಲದಿದ್ದರೆ ಕೆಲವು ತಿಂಗಳುಗಳ ನಂತರ ಕಾಶ್ಮೀರದಂತೆ ಬಂಗಾಲದ ನಿರಾಶ್ರಿತ ಹಿಂದೂಗಳೂ ಉಳಿದ ಭಾರತೀಯರಿಗೆ, “ಬಂಗಾಲಿ ಹಿಂದೂಗಳ ಜೀವನವು ನಾಶವಾಗುತ್ತಿರುವಾಗ ಇಡೀ ಭಾರತವು ಕೇವಲ ವೀಕ್ಷಕ ಭೂಮಿಕೆಯಲ್ಲಿತ್ತು !’’, ಎಂದು ಹೇಳುತ್ತಾರೆ. “ಎಲ್ಲವೂ ಮಮತಾ ಇವರ ಕೈಯಲ್ಲಿದೆ’, ಎಲ್ಲವೂ ರಾಜ್ಯದ ಅಧಿಕಾರದಲ್ಲಿದೆ’, ಎಂದು ಹೇಳಿ ಅಲ್ಲಿನ ಹಿಂದೂಗಳ ಅತ್ಯಾಚಾರಗಳನ್ನು ದುರ್ಲಕ್ಷಿಸುವುದು ಅಥವಾ ಅಲ್ಲಿನ ಹಿಂದೂಗಳನ್ನು ಸಾಯಲು ಅಥವಾ ಮರಣೋನ್ಮುಖ ಸ್ಥಿತಿಯಲ್ಲಿ ಬದುಕಲು ಬಿಟ್ಟುಬಿಡುವುದು, ಇದು ವಿಕಾಸದ ಇಚ್ಛೆಯನ್ನು ಇಟ್ಟುಕೊಳ್ಳುವ ಭಾರತಕ್ಕೆ ಶೋಭಿಸುವುದಿಲ್ಲ; ಏಕೆಂದರೆ ಇಷ್ಟು ಪರಾಕಾಷ್ಠೆಯ ಸಂವೇದನಾಶೂನ್ಯತೆ ನಮ್ಮ ಸಂಸ್ಕೃತಿಯಲ್ಲ. ‘ಎಷ್ಟೇ ಅಭಿವೃದ್ಧಿ ಹೊಂದಿದರೂ ಆ ಅಭಿವೃದ್ಧಿಯನ್ನು ಅನುಭವಿಸಲು ಹಿಂದೂಗಳೇ ಉಳಿಯದಿದ್ದರೆ ಆ ವಿಕಾಸದ ಉಪಯೋಗವೇನು ? ಎಂದು ಅತ್ಯಂತ ವಿಷಾದದಿಂದ ಈಗ ಬಂಗಾಲದ ಸ್ಥಿತಿ ನೋಡಿ ಹೇಳುವ ಸಮಯ ಬಂದಿದೆ. ಅಲ್ಲಿನ ಹಿಂದೂಗಳ ಸಂಖ್ಯೆಯು ಕಡಿಮೆಯಾಗುತ್ತಿದೆ.
ಪ್ರಸಾರಮಾಧ್ಯಮಗಳು ಏಕೆ ಬಾಯಿ ಮುಚ್ಚಿಕೊಂಡಿವೆ ?
ಅಲ್ಪಸ್ವಲ್ಪವಲ್ಲ, ಕಳೆದ ೪೦ ವರ್ಷಗಳಿಂದ ಸಂದೇಶಖಾಲಿ ಪ್ರದೇಶದಲ್ಲಿ ಅಲ್ಲಿನ ಸಾಮ್ಯವಾದಿಗಳು ಮತ್ತು ನಂತರ ತೃಣಮೂಲ ಕಾಂಗ್ರೆಸ್‌ನ ನೇತಾರರಿಂದ ಅಪಾರ ಅತ್ಯಾಚಾರಗಳಾಗುತ್ತಿವೆ. ಈಗ ಅವರು ಪುನಃ ಹೊರಗೆ ಬಂದಿದ್ದಾರೆ. ಇದರ ವಿರುದ್ಧ ಒಂದೆರಡು ವಾರ್ತಾವಾಹಿನಿಗಳನ್ನು ಬಿಟ್ಟರೆ, ಇಲ್ಲಿಯವರೆಗೆ ಯಾವುದೇ ಪ್ರಸಾರಮಾಧ್ಯಮಗಳಾಗಲಿ, ಸಾಮಾಜಿಕಮಾಧ್ಯಮಗಳಾಗಲಿ ತುಟಿ ಬಿಚ್ಚಿಲ್ಲ !
ಭಾರತದ ಉಳಿದ ಭಾಗಗಳಿಗೆ ಗಮನಕ್ಕೆ ಬರುತ್ತಿಲ್ಲ ಎಂದು ಊಹಿಸಿದರೂ ಸಂದೇಶಖಾಲಿಯ ಪ್ರಕರಣ ಬೆಳಕಿಗೆ ಬಂದು ಈಗ ಬಹಳ ದಿನಗಳಾಗಿವೆ. ಅನಂತರ ಕೇಂದ್ರ ಸಚಿವೆ ಸ್ಮತಿ ಇರಾಣಿ ಇವರು ಪತ್ರಿಕಾಗೋಷ್ಠಿಯನ್ನು ನಡೆಸಿದರೂ, ಎಷ್ಟು ಪ್ರಮಾಣದಲ್ಲಿ ಆ ಬಗ್ಗೆ ಚರ್ಚೆಯಾಗಬೇಕಿತ್ತೋ ಅಷ್ಟು ನಡೆದಿಲ್ಲ. ಮಾಧ್ಯಮಗಳು ಬಂಗಾಲದ ವಿಷಯದಲ್ಲಿ ಏಕೆ ಬಾಯಿ ಮುಚ್ಚಿಕೊಂಡಿವೆ ? ಎಲ್ಲ ಮಾಧ್ಯಮಗಳು ಈ ಬಗ್ಗೆ ಧ್ವನಿ ಎತ್ತಿದರೆ, ಅಲ್ಲಿನ ಹಿಂದೂಗಳಿಗೆ ಸ್ವಲ್ಪವಾದರೂ ಸಹಾಯವಾಗುವುದು.
ಬಂಗಾಲದಲ್ಲಿನ ಹಿಂದೂಗಳಿಗೆ ಸಹಾಯ ಬೇಕಿದೆ !
ಅಲ್ಲಿನ ಕೆಲವು ಪತ್ರಕರ್ತರು ಧೈರ್ಯ ಮಾಡಿ ಈ ಅತ್ಯಾಚಾರಗಳನ್ನು ಭಾರತದ ಉಳಿದ ಭಾಗಗಳಿಗೆ ತಲುಪಿಸಲು ಪ್ರಯತ್ನಿಸಿದ್ದಾರೆ. ಅವರಿಗೆ ಎಲ್ಲ ರೀತಿಯ ಬೆಂಬಲ ನೀಡುವುದು ಇದು ಇತರ ಪ್ರಸಾರಮಾಧ್ಯಮಗಳು ಮತ್ತು ಹಿಂದೂಗಳ ಕರ್ತವ್ಯವಾಗಿದೆ ಮತ್ತು ಅವರಿಗೆ ರಕ್ಷಣೆ ನೀಡುವುದು, ಇದು ಕೇಂದ್ರ ಸರಕಾರದ ಕರ್ತವ್ಯವಾಗಿದೆ. ಇಂದು ಅಲ್ಲಿನ ಮಹಿಳೆಯರು ಮತ್ತು ಪತ್ರಕರ್ತರು ಈ ಬಗ್ಗೆ ಮಾತನಾಡದಿದ್ದರೆ, ಪ್ರಾಯಶಃ ಇದು ದೇಶಕ್ಕೆ ತಿಳಿಯುತ್ತಿರಲಿಲ್ಲ. ಅಲ್ಲಿನ ಹಿಂದೂಗಳು ಅತ್ಯಾಚಾರದ ವಿರುದ್ಧ ನಿರಂತರ ಧ್ವನಿ ಎತ್ತುತ್ತಿದ್ದಾರೆ. ಅವರು ಮೌನವಾಗಿಲ್ಲ; ಆದರೆ ಹಿಂದೂಗಳು ಯಾವಾಗೆಲ್ಲ ಸಂಘಟಿತರಾಗುತ್ತಾರೆಯೋ ಮತ್ತು ಅನ್ಯಾಯದ ವಿರುದ್ಧ ಮಾತನಾಡಲು ಪ್ರಯತ್ನಿಸುತ್ತಾರೆಯೋ, ಆಗ ಸ್ವಲ್ಪ ಸಮಯದ
ನಂತರ ನೇರ ಅವರ ಹತ್ಯೆಯಾಗಿರುವುದು ಬಹಿರಂಗವಾಗುತ್ತದೆ.
ಓರ್ವ ಹಿಂದೂ ಎಂದು ನಾವೆಲ್ಲರೂ ಈಗ ಬಂಗಾಲದ ನಮ್ಮ ಹಿಂದೂ ಬಾಂಧವರ ಮೇಲಾದ ಅನ್ಯಾಯದ ಬಗ್ಗೆ ಚರ್ಚೆಯನ್ನು ಹೆಚ್ಚಿಸಿ ಆ ಬಗ್ಗೆ ಸಮಾಜಿಕಮಾಧ್ಯಮಗಳಿಂದ ಒಂದು ಚಳುವಳಿಯನ್ನು ನಡೆಸುವುದು ಆವಶ್ಯಕವಾಗಿದೆ. ಈ ಮೂಲಕ ಅಲ್ಲಿನ ಹಿಂದೂಗಳಿಗೆ ಬಲ ಸಿಗಬೇಕು. ಓರ್ವ ದೇಶಭಕ್ತನೆಂದು ನಾವು ಬಂಗಾಲಕ್ಕಾಗಿ ಏನೂ ಮಾಡದಿದ್ದರೆ, ಮುಂದೆ ನಮ್ಮನ್ನು ನಾವು ಓರ್ವ ಹಿಂದೂ ಎಂದು ಕ್ಷಮಿಸಲು ಸಾಧ್ಯವಿಲ್ಲ !