ಹಂಪಿಯ ಬಡವಿಲಿಂಗ ಶಿವ ದೇವಸ್ಥಾನ

ಶಿವಲಿಂಗದ ಪೂಜೆ ಮಾಡುತ್ತಿರುವ ಅರ್ಚಕರು

ಇದು ಹಂಪಿಯ ಅತ್ಯಂತ ಪ್ರಾಚೀನ ಶಿವ ದೇವಸ್ಥಾನ. ಬೃಹದಾಕಾರದ ಕಪ್ಪು ಕಲ್ಲಿನಿಂದ ಕೆತ್ತಲಾದ ಈ ಶಿವಲಿಂಗವು ಹಂಪಿಯ ಲಕ್ಷ್ಮಿ ನರಸಿಂಹ ದೇವಾಲಯದ ಬಳಿ ಇದೆ. ಈ ದೇವಾಲಯದ ಹೆಸರು ಬಡವಿ + ಲಿಂಗ (ಶಿವ) ಎಂಬ ಶಬ್ದಗಳಿಂದ ಉತ್ಪನ್ನವಾಗಿದೆ. ಬಡ ರೈತ ಮಹಿಳೆಯು ದೇವಾಲಯದ ಒಳಗೆ ಈ ಶಿವಲಿಂಗವನ್ನು ಇಟ್ಟ ಕಥೆ ಇದೆ.

ಬಡವಿಲಿಂಗ ದೇವಾಲಯದ ಮಹತ್ವ

ಬಡವಿಲಿಂಗ ದೇವಸ್ಥಾನವು ಅತಿದೊಡ್ಡ ಏಕ ಶಿಲೆಯ ಶಿವಲಿಂಗವಿರುವ ದೇವಾಲಯವಾಗಿದೆ. ಈ ಶಿವಲಿಂಗದ ಮೇಲೆ ಮೂರು ಕಣ್ಣುಗಳನ್ನು ಕೆತ್ತಲಾಗಿದೆ. ಶಿವಲಿಂಗವು ಇದು ಸುಮಾರು ೩ ಮೀಟರ್ ಎತ್ತರವಿದೆ. ವಿಜಯನಗರ ಸಾಮ್ರಾಜ್ಯದ ಕಾಲದಿಂದಲೂ ಇದು ಅಸ್ತಿತ್ವದಲ್ಲಿದೆ.

ಈ ಬಡವಿಲಿಂಗ ದೇವಾಲಯದ ಶಿವಲಿಂಗ ಒಂದು ಸಣ್ಣ ಕಲ್ಲಿನ ಕೋಣೆಯೊಳಗಿದ್ದು ಏಕೈಕ ಬಾಗಿಲಿನಿಂದ ಭಕ್ತರು ಈ ಶಿವಲಿಂಗ ದರ್ಶನಕ್ಕೆ ಪ್ರವೇಶಿಸಬಹುದು. ಹಗಲಿನಲ್ಲಿ ಸೂರ್ಯನ ಬೆಳಕು ಚಾವಣಿಯ ಕಿಟಕಿಯ ಮೂಲಕ ಪ್ರವೇಶಿಸುತ್ತದೆ. ಈ ಶಿವಲಿಂಗದ ಕೆಳಗೆ ನೀರಿನ ಕಾಲುವೆಯೊಂದು ಹರಿಯುತ್ತಿದ್ದರಿಂದ ಅಲ್ಲಿ ಸದಾ ನೀರಿರುತ್ತದೆ.