ಅಬುಧಾಬಿಯಲ್ಲಿ `ಬಿ.ಎ.ಪಿ.ಎಸ್. ಹಿಂದೂ ದೇವಾಲಯ’ದಿಂದ ಕಾರ್ಯಕ್ರಮದ ಆಯೋಜನೆ !
ಅಬುಧಾಬಿ – ಇಲ್ಲಿಯ ಮರುಭೂಮಿಯಲ್ಲಿ ನಿರ್ಮಿಸಲಾದ ಹಾಗೂ ಪಶ್ಚಿಮ ಏಷ್ಯಾದ ಅತಿದೊಡ್ಡ ಹಿಂದೂ ದೇವಾಲಯ `ಬಿ.ಎ.ಪಿ.ಎಸ್. ಹಿಂದೂ ಮಂದಿರ’ವನ್ನು ಫೆಬ್ರವರಿ ೧೪ ರಂದು ಭಾರತದ ಪ್ರಧಾನಿ ನರೇಂದ್ರ ಮೋದಿ ಅವರ ಉಪಸ್ಥಿತಿಯಲ್ಲಿ ಉದ್ಘಾಟಿಸಲಾಯಿತು. ಈ ಸಂದರ್ಭದಲ್ಲಿ ಫೆಬ್ರವರಿ ೧೫ ರಂದು ದೇವಸ್ಥಾನದ ವತಿಯಿಂದ ಆಯೋಜಿಸಿದ್ದ `ಹಾರ್ಮನಿ’ ಕಾರ್ಯಕ್ರಮಕ್ಕೆ ಸನಾತನ ಸಂಸ್ಥೆಯ ವತಿಯಿಂದ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಅವರ ಆಧ್ಯಾತ್ಮಿಕ ಉತ್ತರಾಧಿಕಾರಿಗಳಾದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರು ಉಪಸ್ಥಿತರಿದ್ದರು. ಈ ದೇವಸ್ಥಾನವು ೧ ಮಾರ್ಚ್ ೨೦೨೪ ರಿಂದ ದರ್ಶನಕ್ಕಾಗಿ ತೆರೆಯಲ್ಪಡುತ್ತದೆ.
`ಬಿ.ಎ.ಪಿ.ಎಸ್. ಮಂದಿರ’ದ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲು ಅಧಿಕೃತ ಆಮಂತ್ರಣ ದೇವಸ್ಥಾನದ ಪದಾಧಿಕಾರಿ ಶ್ರೀ. ರವೀಂದ್ರ ಕದಮ್ ಅವರು ಅಕ್ಟೋಬರ್ ೨೦೨೩ ರಲ್ಲಿ ದೇವಸ್ಥಾನದ ವತಿಯಿಂದ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ಉದ್ಘಾಟನಾ ಸಮಾರಂಭದಲ್ಲಿ ಉಪಸ್ಥಿತರಿರಲು ಆಮಂತ್ರಣವನ್ನು ಕಳುಹಿಸಿದ್ದರು.
`ಬಿ.ಎ.ಪಿ.ಎಸ್. ಹಿಂದೂ ಮಂದಿರದ ವೈಶಿಷ್ಟ್ಯಗಳು
`ಬಿ.ಎ.ಪಿ.ಎಸ್. ಹಿಂದೂ ಮಂದಿರವು’ವು ಯುನೈಟೆಡ್ ಅರಬ್ ಎಮಿರೇಟ್ಸ್ನ ಮೊದಲ ಹಿಂದೂ ದೇವಸ್ಥಾನವಾಗಿದ್ದು ಇದನ್ನು ಒಟ್ಟು ೨೭ ಎಕರೆ ಭೂಮಿಯಲ್ಲಿ ನಿರ್ಮಿಸಲಾಗಿದೆ. ಈ ದೇವಸ್ಥಾನದ ಗೋಡೆಗಳಲ್ಲಿ ರಾಮಾಯಣ, ಶಿವ ಪುರಾಣ ಮತ್ತು ಜಗನ್ನಾಥನ ರಥೋತ್ಸವದ ಚಿತ್ರಗಳಿವೆ. ಇದಲ್ಲದೇ ದೇವಸ್ಥಾನದ ಬಳಿ ಗಂಗಾ ಘಾಟ್ ನಿರ್ಮಿಸಲಾಗಿದೆ. ಈ ದೇವಸ್ಥಾನದಲ್ಲಿ ಗಂಗಾ-ಯಮುನಾ ಮತ್ತು ಸರಸ್ವತಿಯ ಸಂಗಮವನ್ನು ಸಹ ಚಿತ್ರಿಸಲಾಗಿದೆ. ಇದರೊಂದಿಗೆ ಈ ದೇವಸ್ಥಾನವು ಭಗವಾನ್ ಶ್ರೀ ಅಕ್ಷರ ಪುರುಷೋತ್ತಮ, ಭಗವಾನ್ ರಾಧಾ-ಕೃಷ್ಣ, ಭಗವಾನ್ ಶ್ರೀರಾಮ-ಸೀತಾ, ಭಗವಾನ್ ಶಿವ-ಪಾರ್ವತಿ, ಭಗವಾನ್ ಜಗನ್ನಾಥ, ಭಗವಾನ್ ಶ್ರೀನಿವಾಸ-ಪದ್ಮಾವತಿ ದೇವಿ, ಭಗವಾನ್ ಅಯ್ಯಪ್ಪ ಸ್ವಾಮಿಯ ದೇವಸ್ಥಾನಗಳಿವೆ.
ಉದ್ಘಾಟನೆ ನಿಮಿತ್ತ ಫೆಬ್ರವರಿ ೧೫ ರಂದು ದೇವಸ್ಥಾನದಿಂದ `ಹಾರ್ಮನಿ’ ಈ ವಿಶೇಷ ಕಾರ್ಯಕ್ರಮವನ್ನು ದೇವಸ್ಥಾನದ ಮುಖ್ಯಸ್ಥ ಮಹಂತ ಸ್ವಾಮಿ ಮಹಾರಾಜರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು. ಈ ಕಾರ್ಯಕ್ರಮದಲ್ಲಿ ಹಿಂದೂ ಧರ್ಮ ಸಹಿತ, ಮುಸಲ್ಮಾನ, ಕೈಸ್ತ್ರ, ಬೌದ್ಧ, ಜೈನ, ಯಹೂದಿ, ಸಿಕ್ಖ್ ಸೇರಿದಂತೆ ವಿವಿಧ ಪಂಗಡಗಳ ಗುರುಗಳು ಹಾಗೂ ಅವರ ಶಿಷ್ಯರು ಉಪಸ್ಥಿತರಿದ್ದರು. ಯುನೈಟೆಡ್ ಅರಬ್ ಎಮಿರೇಟ್ಸ್ ಅಧ್ಯಕ್ಷರ ವೈಯಕ್ತಿಕ ಸಲಹೆಗಾರರು ಕಾರ್ಯಕ್ರಮದ ನಿರೂಪಣೆಯನ್ನು ಹಾಗೂ ಸ್ವಾಮಿ ಬ್ರಹ್ಮವಿಹಾರಿದಾಸ ಮಹಾರಾಜರು ಸ್ವಾಗತ ಭಾಷಣ ಮಾಡಿದರು. ಈ ಕಾರ್ಯಕ್ರಮದಲ್ಲಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರು ಸಹ ಉಪಸ್ಥಿತರಿದ್ದರು. ಕಾರ್ಯಕ್ರಮಕ್ಕೂ ಮುನ್ನ ಗಣ್ಯರೆಲ್ಲರೂ ದೇವಸ್ಥಾನಕ್ಕೆ ತೆರಳಿ ದರ್ಶನ ಪಡೆದರು. ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಅವರಿಗೆ ದೇವಸ್ಥಾನದ ಸೇವಾಧಾರಿ ಸೌ. ಶೀತಲ ಟಂಕ ಇವರು ದೇವಸ್ಥಾನದ ಬಗ್ಗೆ ಮಾಹಿತಿ ನೀಡಿದರು. ಈ ವೇಳೆ ದೇವಸ್ಥಾನದ ಪದಾಧಿಕಾರಿ ಶ್ರೀ. ರವೀಂದ್ರ ಕದಮ್ ಉಪಸ್ಥಿತರಿದ್ದರು. ಈ ಸಂದರ್ಭದಲ್ಲಿ ಚಿತ್ರೀಕರಣಕ್ಕಾಗಿ ಸಾಧಕ ಶ್ರೀ. ಸ್ನೇಹಲ್ ರಾವುತ್ ಮತ್ತು ಶ್ರೀ. ವಿನಾಯಕ ಶಾನಭಾಗರಿಗೆ ದೇವಸ್ಥಾನದ ವತಿಯಿಂದ ವಿಶೇಷ ಪಾಸ್ ನೀಡಿ ಸಹಕರಿಸಿದರು.
ಸನಾತನ ಸಂಸ್ಥೆಯ ೩ ಗುರುಗಳ ಹೆಸರಿನಲ್ಲಿ ದೇವಸ್ಥಾನದ ನಿರ್ಮಾಣಕ್ಕೆ ೩ ಇಟ್ಟಿಗೆಗಳ ಕೊಡುಗೆ !
ಶ್ರೀ ಚಿತ್‌ಶಕ್ತಿ (ಸೌ) ಅಂಜಲಿ ಗಾಡಗೀಳರು ಸಂಶೋಧನೆ ನಿಮಿತ್ತ ಯುನೈಟೆಡ್ ಅರಬ್ ಎಮಿರೇಟ್ಸ್ಗೆ ಭೇಟಿ ನೀಡಿದಾಗ ೨೭ ಜುಲೈ ೨೦೨೨ ರಂದು `ಬಿ.ಎ.ಪಿ.ಎಸ್. ಹಿಂದೂ ಮಂದಿರ’ದಲ್ಲಿ ಸನಾತನ ಸಂಸ್ಥೆಯ ೩ ಗುರುಗಳ (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳರ) ಹೆಸರಿನಲ್ಲಿ ಮಂದಿರ ನಿರ್ಮಾಣಕ್ಕಾಗಿ ೩ ಇಟ್ಟಿಗೆಗಳನ್ನು ಪೂಜಿಸಿ ಅರ್ಪಿಸಿದರು.