ಕುಶಾಲನಗರ ಹಾಗೂ ಕುಮಟಾದಲ್ಲಿ ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತು !

ದೇವಸ್ಥಾನಗಳು ಹಿಂದೂ ಸಂಸ್ಕಾರಗಳ ಶಿಕ್ಷಣ ಕೇಂದ್ರಗಳಾಗಬೇಕು ! – ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು, ಶ್ರೀ ಅರಮೇರಿ ಕಳಂಚೇರಿ ಮಠ, ಅರಮೇರಿ, ವಿರಾಜಪೇಟೆ

ಎಡದಿಂದ ದೀಪಪ್ರಜ್ವಲನೆ ಮಾಡುತ್ತಿರುವ ಶ್ರೀ ಶಾಂತ ಮಲ್ಲಿಕರ‍್ಜುನ ಸ್ವಾಮಿಗಳು, ಪೂ. ರಮಾನಂದ ಗೌಡ, ಶ್ರೀ. ಎಂ.ಕೆ ದಿನೇಶ್, ಶ್ರೀ. ಮೋಹನ ಗೌಡ

ಕುಶಾಲನಗರ : ನಮ್ಮ ಅಂತಃಚಕ್ಷುಗಳನ್ನು ಜಾಗೃತಗೊಳಿಸುವ ಶಕ್ತಿ ನಮ್ಮ ದೇವಸ್ಥಾನಗಳಿಗಿದೆ. ನಮ್ಮ ಧರ್ಮದ ಪರಿಕಲ್ಪನೆಯೇ ನಮ್ಮ ದೇಶದ ಮೂಲ ಆಧಾರವಾಗಿದೆ. ಮಕ್ಕಳಿಗೆ ಶಾಲಾ ಶಿಕ್ಷಣದೊಂದಿಗೆ ಹಿಂದೂ ಸಂಸ್ಕಾರಗಳ ಶಿಕ್ಷಣ ನೀಡುವುದು ಅತ್ಯಗತ್ಯವಾಗಿ’ ಎಂದು ವಿರಾಜಪೇಟೆ ಅರಮೇರಿಯ ಶ್ರೀ ಅರಮೇರಿ ಕಳಂಚೇರಿ ಮಠದ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿಗಳು ಪ್ರತಿಪಾದಿಸಿದರು. ಅವರು ೨೩ ಫೆಬ್ರವರಿ ೨೦೨೪ ರಂದು ಇಲ್ಲಿನ ರೈತ ಸಹಕಾರ ಭವನದಲ್ಲಿ `ಕರ್ನಾಟಕ ದೇವಸ್ಥಾನ-ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘ’ ಹಾಗೂ `ಹಿಂದೂ ಜನಜಾಗೃತಿ ಸಮಿತಿ’ ವತಿಯಿಂದ ಆಯೋಜಿಸಿದ್ದ ಕೊಡಗು ಜಿಲ್ಲಾ ಮಟ್ಟದ ದೇವಸ್ಥಾನಗಳ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು. ೪೦೦ ಕ್ಕೂ ಹೆಚ್ಚು ದೇವಸ್ಥಾನಗಳ ವಿಶ್ವಸ್ಥರು, ಅರ್ಚಕರು ಹಾಗೂ ದೇವಸ್ಥಾನಗಳ ಪ್ರತಿನಿಧಿಗಳು ಈ ಪರಿಷತ್ತಿನಲ್ಲಿ ಉಪಸ್ಥಿತರಿದ್ದರು.

ಈ ವೇಳೆ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮಿ, ಸನಾತನ ಸಂಸ್ಥೆಯ ಧರ್ಮಪ್ರಚಾರಕರಾದ ಪೂ. ರಮಾನಂದ ಗೌಡ, ಕುಶಾಲನಗರ ದೇವಾಲಯಗಳ ಒಕ್ಕೂಟದ ಅಧ್ಯಕ್ಷರಾದ ಶ್ರೀ ಎಂ.ಕೆ ದಿನೇಶ್ ಹಾಗೂ ದೇವಸ್ಥಾನ ಮಹಾಸಂಘದ ರಾಜ್ಯ ಸಂಯೋಜಕರಾದ ಶ್ರೀ. ಮೋಹನ ಗೌಡ ಇವರು ದೀಪ

ಪ್ರಜ್ವಲನೆ ಮೂಲಕ ಪರಿಷತ್ತಿನ ಉದ್ಘಾಟನೆ ಮಾಡಿದರು. ದೇವಸ್ಥಾನಗಳ ರಕ್ಷಣೆಗೆ ಒಟ್ಟಾಗಿ ! – ಶ್ರೀ. ಮೋಹನ ಗೌಡ

ಕರ್ನಾಟಕದಲ್ಲಿ ೩೪,೦೦೦ ದೇವಸ್ಥಾನಗಳನ್ನು ಸರಕಾರ ನಿಯಂತ್ರಣ ಮಾಡುತ್ತಿದೆ. ಇದರಲ್ಲಿ ಹೆಚ್ಚಿನ ದೇವಸ್ಥಾನಗಳು ಅವ್ಯವಹಾರದ ಆಗರವಾಗಿದೆ. ಈ ದೇವಸ್ಥಾನಗಳನ್ನು ಸರಕಾರದ ಮುಷ್ಟಿಯಿಂದ ಹೊರ ತರಲು ನಾವೆಲ್ಲರೂ ಒಟ್ಟಾಗಿ ಹೋರಾಟವನ್ನು ಮಾಡಬೇಕಿದೆ.

ದೇವಸ್ಥಾನಗಳನ್ನು ಭಕ್ತರೇ ನಡೆಸಬೇಕು ! – ಶ್ರೀ ಶ್ರೀ ಪ.ಪೂ. ವಾಮನಾಶ್ರಮ ಮಹಾಸ್ವಾಮೀಜಿಗಳು

ಶ್ರೀ ಪ.ಪೂ. ವಾಮನಾಶ್ರಮ ಮಹಾಸ್ವಾಮೀಜಿಗಳು

ಕುಮಟಾ : ಸದ್ಯ ದೇವಸ್ಥಾನಗಳ ಸ್ಥಿತಿ ದಯನೀಯವಾಗಿದೆ. ಈಗ ದೇವಸ್ಥಾನದ ಮಹತ್ವವನ್ನು ಎಲ್ಲರಿಗೆ ತಿಳಿಸುವ ಆವಶ್ಯಕತೆಯಿದೆ, ದೇವಸ್ಥಾನಗಳನ್ನು ಭಕ್ತರೇ ನಡೆಸುವಂತಾಗಬೇಕು’ ಎಂದು ಹಳದೀಪುರ ಶ್ರೀಸಂನ್ಯಾಸ ಶಾಂತಾಶ್ರಮದ ಮಠಾಧಿಪತಿಗಳಾದ ಶ್ರೀ ಶ್ರೀ ಪರಮ ಪೂಜ್ಯ ವಾಮನಾಶ್ರಮ ಮಹಾಸ್ವಾಮೀಜಿಗಳು ಆಶೀರ್ವಾದ ನೀಡಿದರು. ಅವರು ಕರ್ನಾಟಕ ದೇವಸ್ಥಾನ ಮಠ ಮತ್ತು ಧಾರ್ಮಿಕ ಸಂಸ್ಥೆಗಳ ಮಹಾಸಂಘದ ವತಿಯಿಂದ ಕುಮಟಾದ ಶ್ರೀ ಮಹಾಲಸಾ ನಾರಾಯಣಿ ಕಲಾಕ್ಷೇತ್ರದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ದೇವಸ್ಥಾನ ಪರಿಷತ್ತಿನಲ್ಲಿ ಮಾತನಾಡುತ್ತಿದ್ದರು.

ಈ ವೇಳೆ ಗೋಕರ್ಣ ಸಸ್ಯ ಸಂಜೀವಿನಿ ಆಯುರ್ವೇದ ಆಸ್ಪತ್ರೆಯ ಡಾ. ಸೌಮ್ಯಶ್ರೀ ಶರ್ಮಾ, ಚಂದಾವರ ಸೀಮೆಯ ಹನುಮಂತ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಆನಂದ ನಾಯಕ್, ಮಹಾಲಸಾ ನಾರಾಯಣಿ ದೇವಸ್ಥಾನದ ವಿಶ್ವಸ್ಥರಾದ ಶ್ರೀ. ಎಂ. ಬಿ. ಪೈ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಜ್ಯ ಸಮನ್ವಯಕರಾದ ಶ್ರೀ. ಗುರುಪ್ರಸಾದ ಗೌಡ ಇವರು ಮಾರ್ಗದರ್ಶನ ಮಾಡಿದರು.