ರಾ.ಸ್ವ. ಸಂಘದ ರುದ್ರೇಶ್ ಹತ್ಯೆಯ ಆರೋಪಿ ಮೊಹಮ್ಮದ್ ಗೌಸ್ ದಕ್ಷಿಣ ಆಫ್ರಿಕಾದಿಂದ ಬಂಧನ !

(ಎಡಗಡೆ) ಆರೋಪಿ ಮೊಹಮ್ಮದ್ ಗೌಸ್ ನಿಯಾಜಿ, (ಬಲಗಡೆ) ಹತ್ಯೆಗೀಡಾದ ರುದ್ರೇಶ

 

ನವ ದೆಹಲಿ – 2016 ರಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಮುಖಂಡ ರುದ್ರೇಶ್ ಹತ್ಯೆ ಪ್ರಕರಣದ ಆರೋಪಿ ಮೊಹಮ್ಮದ್ ಗೌಸ್ ನಿಯಾಜಿಯನ್ನು ದಕ್ಷಿಣ ಆಫ್ರಿಕಾದಲ್ಲಿ ಬಂಧಿಸಲಾಗಿದೆ. ಇದೀಗ ಅವನನ್ನು ಮುಂಬಯಿಗೆ ಕರೆತರಲಾಗಿದೆ. ಈತ ನಿಷೇಧಿತ ಜಿಹಾದಿ ಭಯೋತ್ಪಾದಕ ಸಂಘಟನೆ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ನಾಯಕನಾಗಿದ್ದಾನೆ. ರಾಷ್ಟ್ರೀಯ ತನಿಖಾ ದಳ (ಎನ್.ಐ.ಎ.) ನಡೆಸಿದ ಪ್ರಯತ್ನದಿಂದಾಗಿ ಆತನ ಬಂಧನವಾಗಿವೆ. ಗೌಸ್‌ನ ಯಾವುದೇ ಸುಳಿವು ನೀಡಿದವರಿಗೆ ಅಥವಾ ಹಿಡಿದು ಕೊಟ್ಟವರಿಗೆ ಎನ್.ಐ.ಎ. 5 ಲಕ್ಷ ರೂಪಾಯಿ ಬಹುಮಾನ ಘೋಷಿಸಿತ್ತು. ಬೆಂಗಳೂರಿನಲ್ಲಿ ರುದ್ರೇಶ್ ಹತ್ಯೆಯ ನಂತರ, ಅವನು ಪರಾರಿಯಾಗಿ ಬೇರೆ ಬೇರೆ ದೇಶಗಳಲ್ಲಿ ವಾಸಿಸುತ್ತಿದ್ದನು.
ಈ ಹಿಂದೆ ರುದ್ರೇಶ್ ಹತ್ಯೆಗೆ ಸಂಬಂಧಿಸಿದಂತೆ 4 ಜನರನ್ನು ಬಂಧಿಸಲಾಗಿತ್ತು. ಇವರಲ್ಲಿ ಪ್ರಮುಖ ಆರೋಪಿ 40 ವರ್ಷದ ಅಜೀಂ ಷರೀಫ್ ನನ್ನು ಪೊಲೀಸರು ನವೆಂಬರ್ 2016ರಲ್ಲಿ ಬಂಧಿಸಿದ್ದರು. ಹಿಂದೂಗಳಲ್ಲಿ ಆತಂಕವನ್ನು ಹುಟ್ಟುಹಾಕುವ ಉದ್ದೇಶದಿಂದ ಈ ಹತ್ಯೆಯನ್ನು ಮಾಡಲಾಗಿದ್ದು, ಇದು ಭಯೋತ್ಪಾದಕ ಕೃತ್ಯವಾಗಿತ್ತು.

ಸಂಪಾದಕೀಯ

ಹಿಂದೂ ನಾಯಕರ ಕೊಲೆ ಮಾಡಿದ ನಂತರ ಜಿಹಾದಿ ಭಯೋತ್ಪಾದಕರು ದೇಶದಿಂದ ಹೇಗೆ ಪರಾರಿಯಾಗುತ್ತಾರೆ ? ಭದ್ರತಾ ವ್ಯವಸ್ಥೆಗಳು ನಿದ್ರಿಸುತ್ತಿವೆಯೇ ?