ಕೊನೆಗೂ ಹಿಂದೂ ಮಹಿಳೆಯರ ಲೈಂಗಿಕ ಶೋಷಣೆ ಮಾಡುತ್ತಿದ್ದ ತೃಣಮೂಲ ಕಾಂಗ್ರೆಸ ನಾಯಕ ಶಹಜಹಾನ ಶೇಖ್ ಬಂಧನ ! 

  • ಬಂಧನದ ಬಳಿಕವೂ ಶೇಖ ಶಾಹಜಹಾನ ಉದ್ಧಟತನದಿಂದ ನಡೆದುಕೊಂಡು ಹೋಗುತ್ತಿದ್ದ ! 

  • ಶಹಜಹಾನ ಶೇಖ್ 55 ದಿನಗಳಿಂದ ಪರಾರಿಯಾಗಿದ್ದ .

ಕೋಲಕಾತಾ (ಬಂಗಾಳ) – ಬಂಗಾಳದ ಉತ್ತರ 24 ಪರಗಣಾ ಜಿಲ್ಲೆಯ ಸಂದೇಶಖಾಲಿಯಲ್ಲಿ ಹಿಂದೂ ಮಹಿಳೆಯರ ಲೈಂಗಿಕ ಕಿರುಕುಳ ನೀಡಿದ ಪ್ರಕರಣದಲ್ಲಿ ಹಾಗೆಯೇ ಜಾರಿ ನಿರ್ದೇಶನಾಲಯದ ತಂಡದ ಮೇಲೆ ನಡೆಸಿದ್ದ ದಾಳಿಯ ಮುಖ್ಯ ರೂವಾರಿಯಾಗಿದ್ದ ತೃಣಮೂಲ ಕಾಂಗ್ರೆಸ್ ಮುಖಂಡ ಶೇಖ ಶಾಹಜಹಾನನ್ನು ಕೊನೆಗೂ ಬಂಗಾಳ ಪೊಲೀಸರು ಬಂಧಿಸಿದ್ದಾರೆ. ಆತನನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದಾಗ ನ್ಯಾಯಾಲಯವು ಅವನನ್ನು 10 ದಿನಗಳ ಪೊಲೀಸ್ ಕಸ್ಟಡಿಗೆ ನೀಡಿದೆ. ಶಾಹಜಹಾನ ಶೇಖ ಮೀನಾಖಾನ ಪರಿಸರದ ಮನೆಯಲ್ಲಿ ಬಚ್ಚಿಟ್ಟುಕೊಂಡಿದ್ದನು. ಅವನು 55 ದಿನಗಳಿಂದ ಪರಾರಿಯಾಗಿದ್ದನು. ಕೋಲಕಾತಾ ಉಚ್ಚ ನ್ಯಾಯಾಲಯವು ಶಾಹಜಹಾನ ಪ್ರಕರಣದಲ್ಲಿ ರಾಜ್ಯ ಸರಕಾರವನ್ನು ಕಠಿಣ ಶಬ್ದಗಳಲ್ಲಿ ಛೀಮಾರಿ ಹಾಕಿದ ಬಳಿಕ ಶಾಹಜಹಾನ ಶೇಖನನ್ನು ಬಂಧಿಸಲಾಗಿದೆ. ಶಾಹಜಹಾನನನ್ನು ಬಂಧಿಸಿದ ಬಳಿಕ ಸಂದೇಶಖಾಲಿಯ ಮಹಿಳೆಯರು ಹೋಳಿ ಆಡುವ ಮೂಲಕ ತಮ್ಮ ಸಂತಸವನ್ನು ವ್ಯಕ್ತಪಡಿಸಿದರು. ಇನ್ನೊಂದೆಡೆ ತೃಣಮೂಲ ಕಾಂಗ್ರೆಸ ಶಾಹಜಹಾನನನ್ನು 6 ವರ್ಷಗಳಿಗೆ ಪಕ್ಷದಿಂದ ಉಚ್ಛಾಟಿಸಿದೆ.

ಪೊಲೀಸರು ಶಾಹಜಹಾನನಿಗೆ ಫೈಸ್ರಾರ್‍ಸೌಲಭ್ಯಗಳನ್ನು ಒದಗಿಸುವರು ! – ಭಾಜಪ ಆರೋಪ 

ಬಂಗಾಳದ ಭಾಜಪ ನಾಯಕ ಸುವೆಂದು ಅಧಿಕಾರಿ ಮಾತನಾಡಿ, ಶಾಹಜಹಾನ ಶೇಖನನ್ನು ಪೊಲೀಸ ಕೊಠಡಿ ಮತ್ತು ನ್ಯಾಯಾಂಗ ಕೊಠಡಿಯಲ್ಲಿ ಚೆನ್ನಾಗಿ ನೋಡಿಕೊಳ್ಳಲಾಗುವುದು. ಅವನನ್ನು ಕಾರಾಗೃಹದಲ್ಲಿ ಫೈಸ್ಟಾರ್ ಹೋಟೆಲ್‌ನಂತಹ ಸೌಲಭ್ಯಗಳನ್ನು ಒದಗಿಸಲಾಗುವುದು. ಅವನಿಗೆ ಒಂದು ಮೊಬೈಲ ಕೂಡ ಒದಗಿಸಲಾಗುವುದು, ಅದರ ಸಹಾಯದಿಂದ ಅವನು ಪಕ್ಷವನ್ನು ಆನ್‌ಲೈನ್‌ ಮೂಲಕ ನಡೆಸುತ್ತಾನೆ ಎಂದು ಆರೋಪಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ರಾಜ್ಯದಲ್ಲಿ ಪೊಲೀಸರಿಗೆ ಯಾವುದೇ ಮರ್ಯಾದೆ ಉಳಿದಿಲ್ಲ, ಎನ್ನುವುದು ಇದರಿಂದ ಕಂಡು ಬರುತ್ತದೆ !

ಶಾಹಜಹಾನ ಶೇಖ ನನ್ನು ಬಂಧಿಸಿದ ನಂತರ, ಅವನನ್ನು ನ್ಯಾಯಾಲಯಕ್ಕೆ ಕರೆದೊಯ್ಯುತ್ತಿರುವಾಗಿನ ದೃಶ್ಯವನ್ನು ಸುದ್ದಿವಾಹಿನಿಗಳು ಪ್ರಸಾರ ಮಾಡಿದವು. ಆ ಸಮಯದಲ್ಲಿ `ಪೊಲೀಸರು ಅವನನ್ನು ಬಂಧಿಸಿದ್ದಾರೆ ಮತ್ತು ಅವನ ಮುಖದ ಮೇಲೆ ಭೀತಿಯ ಭಾವವಿದೆ’ ಎಂದು ಕಿಂಚಿತ್ತೂ ಕಂಡು ಬರುತ್ತಿರಲಿಲ್ಲ. ಅವನು ಒಬ್ಬ ರಾಜನಂತೆ ನಡೆಯುತ್ತಿದ್ದನು ಮತ್ತು ಪೊಲೀಸರು ಅವನ ಸೇವಕರಂತೆ ಕಾಣಿಸುತ್ತಿದ್ದರು. ಅವನು ಪ್ರಸಾರ ಮಾಧ್ಯಮಗಳ ಕ್ಯಾಮೆರಾ ಎದುರಿಗೆ ಕೈ ಬೆರಳುಗಳ ಮೂಲಕ ವಿಜಯದ ಮುದ್ರೆಯನ್ನು (ವಿ ಆಕಾರ) ಮಾಡಿ ತೋರಿಸುತ್ತಿದ್ದನು. ಇದರಿಂದ ಭಾಜಪ ಬಂಗಾಳದ ತೃಣಮೂಲ ಕಾಂಗ್ರೆಸ್ಸನ್ನು ಟೀಕಿಸಿದೆ.

ಸಂಪಾದಕೀಯ ನಿಲುವು

ಉಚ್ಚ ನ್ಯಾಯಾಲಯ ಆದೇಶ ನೀಡಿದ್ದರಿಂದ, ಬಂಗಾಳ ಸರಕಾರ ಜನರ ಕಣ್ಣಿಗೆ ಮಣ್ಣೆರೆಚುವುದಕ್ಕಾಗಿಯೇ ಅವನನ್ನು ಬಂಧಿಸಿದೆ. ತೃಣಮೂಲ ಕಾಂಗ್ರೆಸ್ ಸಂವೇದನಾಶೀಲವಾಗಿದ್ದರೆ, ಶಾಹಜಹಾನ್ 55 ದಿನಗಳ ವರೆಗೆ ಮುಕ್ತವಾಗಿ ತಿರುಗುತ್ತಿರಲಿಲ್ಲ. ಅವನನ್ನು ಬಂಧಿಸಿದ್ದರೂ, ಅವನ ವಿರುದ್ಧ ಕ್ರಮ ತೆಗೆದುಕೊಳ್ಳಲಾಗುತ್ತದೆಯೆಂದು ಹಿಂದೂಗಳಿಗೆ ಅನಿಸುವುದಿಲ್ಲ. ಆದ್ದರಿಂದ ಕೇಂದ್ರ ಸರಕಾರವೇ ಅವನ ಮೇಲೆ ಜಾರಿ ನಿರ್ದೇಶನಾಲಯದ ತಂಡದ ಮೇಲಿನ ಆಕ್ರಮಣ ನಡೆಸಿದ ಪ್ರಕರಣದಲ್ಲಿ ವಶಕ್ಕೆ ಪಡೆದು ಅವನ ನಿಜಸ್ವರೂಪವನ್ನು ಬಹಿರಂಗಪಡಿಸುವುದು ಅಗತ್ಯವಾಗಿದೆ !