ಚೆನ್ನೈಯಲ್ಲಿನ ಅಕ್ರಮ ಮಸಿದಿ ನೆಲೆಸಮ ಮಾಡಲು ಉಚ್ಚ ನ್ಯಾಯಾಲಯದ ಆದೇಶವನ್ನು ಎತ್ತಿ ಹಿಡಿದ ಸರ್ವೊಚ್ಚ ನ್ಯಾಯಾಲಯ ! 

ಚೆನ್ನೈ (ತಮಿಳುನಾಡು) – ಇಲ್ಲಿ ಅಕ್ರಮವಾಗಿ ಕಟ್ಟಿರುವ ‘ಮಸಿದಿ-ಏ-ಹಿದಾಯಾ’ ಮತ್ತು ಮದರಸಾ ನೆಲಸಮ ಮಾಡುವ ಚೆನ್ನೈ ಪಾಲಿಕೆಯ ನಿರ್ಣಯವನ್ನು ಸರ್ವೋಚ್ಚ ನ್ಯಾಯಾಲಯವು ಖಾಯಂಗೊಳಿಸಿದೆ. ಈ ಕಟ್ಟಡ ಅಕ್ರಮವಾಗಿ ಕಟ್ಟಲಾಗಿದೆ ಎಂದು ಸರ್ವೋಚ್ಚ ನ್ಯಾಯಾಲಯವು ಅದರ ತೀರ್ಪಿನಲ್ಲಿ ಹೇಳಿದೆ. ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಿರುವ ಎಲ್ಲಾ ಧಾರ್ಮಿಕ ಸ್ಥಳಗಳು ನೆಲೆಸಮ ಮಾಡುಲು ನ್ಯಾಯಾಲಯ ಆದೇಶ ನೀಡಿದೆ.

೧. ಈ ನಿರ್ಣಯ ಕೂಡ ಸರ್ವೋಚ್ಚ ನ್ಯಾಯಾಲಯವು ಕೊಯಂಬೇಡು, ಚೆನ್ನೈಯಲ್ಲಿಯ ಮಸಿದಿ ಮತ್ತು ಮದರಸಾ ಪ್ರಕರಣಗಳಲ್ಲಿ ಮದ್ರಾಸ್ ಉಚ್ಚ ನ್ಯಾಯಾಲಯ ಆದೇಶ ಎತ್ತಿ ಹಿಡಿದಿದೆ. ‘ದೇವಸ್ಥಾನ, ಮಸಿದಿ ಅಥವಾ ಚರ್ಚ್ ಇರಲಿ, ಸಾರ್ವಜನಿಕ ಸ್ಥಳಗಳಲ್ಲಿ ಕಟ್ಟಿರುವ ಅಕ್ರಮ ಧಾರ್ಮಿಕ ಕಟ್ಟಡಗಳು ಧರ್ಮಪ್ರಸಾರದ ಸ್ಥಳಗಳಾಗಲು ಸಾಧ್ಯವಿಲ್ಲ’ ಎಂದು ಸರ್ವೋಚ್ಚ ನ್ಯಾಯಾಲಯ ತೀರ್ಪಿನಲ್ಲಿ ಹೇಳಿದೆ. ನವೆಂಬರ್ ೨೨, ೨೦೨೩ ರಂದು ಮದ್ರಾಸ್ ಉಚ್ಚ ನ್ಯಾಯಾಲಯವು ನೀಡಿರುವ ತೀರ್ಪಿನ ವಿರುದ್ಧ ಮುಸಲ್ಮಾನರು ಸಲ್ಲಿಸಿರುವ ಅರ್ಜಿಯಲ್ಲಿ ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿತ್ತು.

೨. ಸರ್ವೋಚ್ಚ ನ್ಯಾಯಾಲಯವು ಎಲ್ಲಾ ರಾಜ್ಯಗಳಿಗೆ ಯಾವುದೇ ಸಾರ್ವಜನಿಕ ಸ್ಥಳಗಳಲ್ಲಿ ಅಕ್ರಮ ಧಾರ್ಮಿಕ ಕಟ್ಟಡಗಳು ಕಟ್ಟಲಾಗದು, ಇದರ ಕಾಳಜಿ ವಹಿಸುವಂತೆ ಆದೇಶ ನೀಡಿದೆ.

೩. ನ್ಯಾಯಾಲಯದ ಹೇಳಿಕೆಯ ಪ್ರಕಾರ ಎಲ್ಲಿ ಅಕ್ರಮ ಅತಿಕ್ರಮಣ ಆಗಿರುವ ಭೂಮಿಯು ಪ್ರತ್ಯಕ್ಷದಲ್ಲಿ ಚೆನ್ನೈ ಮೆಟ್ರೋಪಾಲಿಟನ್ ಡೆವಲಪ್ಮೆಂಟ್ ಅಥಾರಿಟಿಯ ಮಾಲಿಕತ್ವದಾಗಿದೆ. ಅರ್ಜಿ ಸಲ್ಲಿಸಿರುವವರು ಈ ಅಕ್ರಮ ವಹಿವಾಟದಾರರಾಗಿದ್ದಾರೆ. ಅರ್ಜಿ ಸಲ್ಲಿಸಿದವರು ಕಟ್ಟಡದ ಪ್ಲಾನ್‌ನ ಅನುಮತಿಗಾಗಿ ಎಂದೂ ಅರ್ಜಿ ಸಲ್ಲಿಸಲಿಲ್ಲ. ಡಿಸೆಂಬರ್ ೯, ೨೦೨೦ ರಂದು ಸರಕಾರಿ ಅಧಿಕಾರಿಗಳು ನೋಟಿಸ್ ನೀಡಿದರೂ ಅಕ್ರಮ ಕಾಮಗಾರಿ ಮುಂದುವರೆಸಿದ್ದರು.

ಸಂಪಾದಕೀಯ ನಿಲುವು

ಸರಕಾರಿ ಭೂಮಿಯಲ್ಲಿ ಮಸಿದಿ ಕಟ್ಟುವವರೆಗೆ ಸರಕಾರ ಯಾವಾಗಲು ನಿದ್ರೆ ಮಾಡುತ್ತದೆ ನಂತರ ಯಾರಾದರೂ ಬೆಂಬೆತ್ತಿದರೆ ನಿರುತ್ಸಾಹದಿಂದ ಕ್ರಮ ಕೈಗೊಳ್ಳಲು ಪ್ರಯತ್ನಿಸುತ್ತದೆ. ಆಡಳಿತಕ್ಕೆ ಸಂಬಂಧಪಟ್ಟರುವ ಇಂತಹ ಅಧಿಕಾರಿಗಳ ಮೇಲೆ ಕೂಡ ಈಗ ಕ್ರಮಕೈಗೊಳ್ಳುವುದು ಆವಶ್ಯಕವಾಗಿದೆ !