Gyanvapi Case Verdict : ಜ್ಞಾನವಾಪಿಯ ವ್ಯಾಸ ನೇಲಮಾಳಿಗೆಯಲ್ಲಿ ಪೂಜೆ ಮುಂದುವರಿಕೆ !

ಅಲಹಾಬಾದ ಉಚ್ಚ ನ್ಯಾಯಾಲಯವು ಮುಸಲ್ಮಾನ ಕಕ್ಷಿದಾರನ ಆಕ್ಷೇಪ ತಿರಸ್ಕರಿಸಿತು !

ವಾರಾಣಸಿ (ಉತ್ತರಪ್ರದೇಶ) – ಇಲ್ಲಿಯ ಜ್ಞಾನವಾಪಿಯ ವ್ಯಾಸ ನೆಲಮಾಳಿಗೆಯಲ್ಲಿ ಹಿಂದೂಗಳಿಗೆ ದೊರೆತಿರುವ ಪೂಜೆಯ ಅಧಿಕಾರ ಮುಂದುವರೆಯಲಿದೆ. ಫೆಬ್ರವರಿ ೨೬ ರಂದು ಅಲಹಾಬಾದ ಉಚ್ಚ ನ್ಯಾಯಾಲಯವು ಈ ಪೂಜೆಯ ವಿರುದ್ಧ ಮುಸಲ್ಮಾನ ಕಕ್ಷಿದಾರರು ದಾಖಲಿಸಿರುವ ಅರ್ಜಿಯನ್ನು ತಳ್ಳಿ ಹಾಕಿದೆ. ಈ ಸಂದರ್ಭದಲ್ಲಿ ಮುಸಲ್ಮಾನ ಪಕ್ಷ ಸರ್ವೋಚ್ಚ ನ್ಯಾಯಾಲಯಕ್ಕೆ ಮೊರೆ ಹೋಗುವ ಸಾಧ್ಯತೆ ಇದೆ. ಈ ನೆಲಮಾಳಿಗೆಯಲ್ಲಿ ೧೯೯೩ ರಿಂದ ಪೂಜೆಗೆ ನಿಷೇಧಿಸಲಾಗಿತ್ತು. ಅದರ ಹಿಂದೆ ಇಲ್ಲಿ ಪೂಜೆ ನಡೆಯುತ್ತಿತ್ತು. ಜನವರಿ ೩೧ ರಂದು ವಾರಣಾಸಿ ಜಿಲ್ಲಾ ನ್ಯಾಯಾಲಯವು ವ್ಯಾಸ ನೆಲಮಾಳಿಗೆಯಲ್ಲಿ ಹಿಂದುಗಳಿಗೆ ಪೂಜೆ ಮಾಡಲು ಅಧಿಕಾರ ನೀಡಿತ್ತು. ಅಂದಿನಿಂದ ಇಲ್ಲಿ ಪೂಜೆ ಆರಂಭಿಸಿದರು, ಎಂದು ಹಿಂದೂ ಪಕ್ಷದ ನ್ಯಾಯವಾದಿ ಮದನ ಮೋಹನ ಯಾದವ ಇವರು ಮಾಹಿತಿ ನೀಡಿದರು.

ಅಂಜುಮನ್ ಇಂತೆಜಾಮಿಯಾ ಮಸೀದ್ ಸಮಿತಿಯು ಉಚ್ಚ ನ್ಯಾಯಾಲಯದಲ್ಲಿ ವಾದ ಮಂಡಿಸುವಾಗ, ನೆಲಮಾಳಿಗೆ ನಮ್ಮ ಅಧಿಕಾರದಲ್ಲಿ ಬಹಳಷ್ಟು ಕಾಲ ಇದೆ. ಇದು ಜ್ಞಾನವಾಪಿಯ ಒಂದು ಭಾಗವಾಗಿದ್ದು ಜಿಲ್ಲಾ ಆಡಳಿತವು ನ್ಯಾಯಾಲಯದ ಆದೇಶದ ಪ್ರಕಾರ ಒಂದು ವಾರದ ಸಮಯ ಇರುವಾಗ ಗಡಿಬಿಡಿಯಿಂದ ಪೂಜೆ ಆರಂಭಿಸಿದೆ. ನೆಲಮಳೆಗೆಯಲ್ಲಿನ ಈ ಪೂಜೆ ತಕ್ಷಣ ನಿಲ್ಲಿಸಬೇಕು ಎಂದು ಹೇಳಿದೆ. ನ್ಯಾಯಮೂರ್ತಿ ರೋಹಿತ ರಂಜನ ಅಗ್ರವಾಲ ಇವರು ಹಿಂದೂ ಮತ್ತು ಮುಸಲ್ಮಾನ ಕಕ್ಷಿದಾರರ ವಾದ ಮಂಡನೆ ಕೇಳಿದ ನಂತರ ಫೆಬ್ರುವರಿ ೧೫ ರಂದು ಇದರ ಸಂದರ್ಭದಲ್ಲಿನ ತೀರ್ಪು ಕಾದಿರಿಸಿದೆ.