ಯುದ್ಧಕ್ಕೆ ಶಾಂತಿಯುತವಾದ ಪರಿಹಾರವನ್ನು ಕಂಡುಕೊಳ್ಳುವಲ್ಲಿ ಭಾರತವು ಪ್ರಮುಖ ಪಾತ್ರವನ್ನು ವಹಿಸುವುದು ಅವಶ್ಯಕ !

ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಐರಿನಾ ಬೊರೊವೆಟ್ಸ್ ಇವರಿಂದ ಭಾರತಕ್ಕೆ ಮನವಿ !

ಕೀವ್ (ಉಕ್ರೇನ) – ಉಕ್ರೇನ ಮತ್ತು ರಷ್ಯಾ ನಡುವೆ ನಡೆಯುತ್ತಿರುವ ಯುದ್ಧವು 2 ವರ್ಷಗಳನ್ನು ಪೂರೈಸಿದೆ. ಆದ್ದರಿಂದ ಉಕ್ರೇನ್ ಭಾರತವನ್ನು ಶಾಂತಿಯುತವಾಗಿ ಯುದ್ಧವನ್ನು ಅಂತ್ಯಗೊಳಿಸಲು ಪರಿಹಾರವನ್ನು ಕಂಡುಹಿಡಿಯುವಂತೆ ಕರೆ ನೀಡಿದೆ. ‘ರಷ್ಯಾ ವಿರುದ್ಧ ನಡೆಯುತ್ತಿರುವ ಯುದ್ಧಕ್ಕೆ ಶಾಂತಿಯುತ ಅಂತ್ಯ ಕಂಡುಕೊಳ್ಳುವಲ್ಲಿ ಭಾರತಕ್ಕೆ ಪ್ರಮುಖ ಪಾತ್ರ ವಹಿಸಬೇಕಾಗಿದೆಯೆಂದು’ ಉಕ್ರೇನ ಹೇಳಿದೆ. ಉಕ್ರೇನ ಭಾರತವನ್ನು ‘ವಿಶ್ವ ನಾಯಕ’ ಮತ್ತು `ಗ್ಲೋಬಲ ಸೌಥ’ (ದಕ್ಷಿಣ ಗೋಲಾರ್ಧದ ದೇಶ)ನ ಧ್ವನಿ’ ಎಂದು ಬಣ್ಣಿಸಿದೆ. ಇದಕ್ಕೂ ಮೊದಲು ರಷ್ಯಾದ ರಾಷ್ಟ್ರಾಧ್ಯಕ್ಷರೂ ಕೂಡ `ಭಾರತ ಯುದ್ಧಕ್ಕೆ ಶಾಂತಿಯುತ ಪರಿಹಾರ ಕಂಡು ಹಿಡಿಯಲು ಪ್ರಯತ್ನಗಳನ್ನು ಮಾಡಬಹುದು’, ಎಂಬ ಭರವಸೆಯನ್ನು ವ್ಯಕ್ತಪಡಿಸಿದ್ದರು.

1. ಉಕ್ರೇನ್‌ನ ಉಪ ವಿದೇಶಾಂಗ ಸಚಿವೆ ಐರಿನಾ ಬೊರೊವೆಟ್ಸ್ ಮಾತನಾಡುತ್ತಾ, ಭಾರತವು ಈಗ ಅಂತಾರಾಷ್ಟ್ರೀಯ ಮಟ್ಟದಲ್ಲಿ ನಾಯಕತ್ವದ ಪಾತ್ರವನ್ನು ವಹಿಸುತ್ತಿದೆ. ಹಾಗಾಗಿ ಅವರಿಂದ ಸಾಕಷ್ಟು ನಿರೀಕ್ಷೆಗಳಿವೆ. ಭಾರತವು ರಷ್ಯಾ ಮತ್ತು ಅಮೇರಿಕ ಈ ಎರಡೂ ದೇಶಗಳೊಂದಿಗೆ ಉತ್ತಮ ಸಂಬಂಧವನ್ನು ಹೊಂದಿದೆ. ಪ್ರಪ್ರಥಮವಾಗಿ ಭಾರತವು ವಿಶ್ವ ನಾಯಕನಾಗಿದೆ ಮತ್ತು ಇದು ಉಕ್ರೇನ್‌ನ ಪ್ರಾದೇಶಿಕ ಸಮಗ್ರತೆಯನ್ನು ಗೌರವಿಸುತ್ತದೆ. ರಷ್ಯಾ-ಉಕ್ರೇನ್ ಯುದ್ಧಕ್ಕೆ ಶಾಂತಿಯುತ ಪರಿಹಾರವನ್ನು ಕಂಡು ಹಿಡಿಯಲು ಅದು ಹೆಚ್ಚು ದೃಢವಾದ ಕ್ರಮವನ್ನು ತೆಗೆದುಕೊಳ್ಳಬಹುದು. ಪ್ರಧಾನಮಂತ್ರಿ ಮೋದಿ ಅವರು ಕಳೆದ ವರ್ಷ ಉಜ್ಬೇಕಿಸ್ತಾನ್‌ನಲ್ಲಿ ರಷ್ಯಾದ ಅಧ್ಯಕ್ಷರಿಗೆ ‘ಇದು ಯುದ್ಧದ ಯುಗವಲ್ಲ’ ಎಂದು ಹೇಳಿದ್ದರು. ಈ ಹೇಳಿಕೆಗೆ ಜಗತ್ತಿನಾದ್ಯಂತ ಬೆಂಬಲ ಸಿಕ್ಕಿತ್ತು. ಉಕ್ರೇನ ಭಾರತವನ್ನು ಮಾರ್ಚನಲ್ಲಿ ಸ್ವಿಟ್ಜರ್ಲೆಂಡ್‌ನಲ್ಲಿ ನಡೆಯಲಿರುವ ‘ಗ್ಲೊಬಲ್ ಪೀಸ್ ಸಮಿಟ’ಗೆ ಆಹ್ವಾನಿಸಿದೆ.

2. ಈ ಹಿಂದೆ ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾದಿಮೀರ ಪುಟಿನ್ ಇವರು ಪ್ರಧಾನಮಂತ್ರಿ ಮೋದಿಯವರು ರಷ್ಯಾ- ಉಕ್ರೇನ್ ವಿವಾದವನ್ನು ಶಾಂತಿಯುತವಾಗಿ ಪರಿಹರಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಹೇಳಿದ್ದರು. ನಮಗೆ ಪ್ರಧಾನಮಂತ್ರಿ ಮೋದಿಯವರ ನಿಲುವು ಅರ್ಥವಾಗುತ್ತದೆ. ಇದರ ಉಲ್ಲೇಖವನ್ನು ನಾವು ಅನೇಕ ಸಂದರ್ಭಗಳಲ್ಲಿ ಪ್ರಸ್ತಾಪಿಸಿದ್ದೇವೆ. ಭಾರತವು ಸಮಸ್ಯೆಯನ್ನು ಶಾಂತಿಯುತವಾಗಿ ಪರಿಹರಿಸಲು ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ನನಗೆ ತಿಳಿದಿದೆ. ನಾವಿಬ್ಬರೂ ಅಭಿವೃದ್ಧಿಯ ಹೊಸ ಆಯಾಮಗಳನ್ನು ತಲುಪುತ್ತಿದ್ದೇವೆ ಎಂದು ಹೇಳಿದ್ದರು.