ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಜಹೀರ್ ಬಾಬರ್ ಸಿದ್ಧೂ ಇವರ ಭ್ರಷ್ಟಾಚಾರ ಬಯಲಿಗೆಳೆದಿಕ್ಕೆ ‘ಶಿಕ್ಷೆ’ !

ಪಾಕ್ ವಾಯುಪಡೆಯ ೧೩ ಹಿರಿಯ ಅಧಿಕಾರಿಗಳ ಬಂಧನ !

ಇಸ್ಲಾಮಾಬಾದ್ – ಪಾಕಿಸ್ತಾನದ ವಾಯುಪಡೆಯು ೧೩ ಹಿರಿಯ ಅಧಿಕಾರಿಗಳನ್ನು ಬಂಧಿಸಿದೆ. ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಜಹೀರ್ ಬಾಬರ್ ಸಿದ್ದೂ ಇವರ ಭ್ರಷ್ಟಾಚಾರ ಬಯಲಿಗೆಳೆದ ನಂತರ ಅವರ ಮೇಲೆ ಕ್ರಮ ಕೈಗೊಂಡಿದ್ದಾರೆ ಎನ್ನಲಾಗಿದೆ. ಬಂಧಿತ ಕೆಲ ಅಧಿಕಾರಿಗಳು ಈಗ ನಿವೃತ್ತರಾಗಿದ್ದಾರೆ. ಈ ಅಧಿಕಾರಿಗಳಲ್ಲಿ ಏರ್ ಮಾರ್ಷಲ್ ಅಹಸಾನ್ ರಫೀಕ್, ಏರ್‌ಮಾರ್ಷಲ್ ತಾರಿಕ್ ಝಿಯಾ ಮತ್ತು ಏರ್‌ಮಾರ್ಷಲ್ (ನಿವೃತ್ತ) ಜಾವೇದ್ ಸಯೀದ್ ಸೇರಿದ್ದಾರೆ. ಅದೇ ಜಾವೆದ್ ಸಯೀದ್ ಅವರ ನೇತ್ರುತ್ವದಲ್ಲಿ ಭಾರತದ ಬಾಲಾಕೋಟ್ ದಾಳಿಯ ನಂತರ ಪಾಕಿಸ್ತಾದ ವಾಯುಪಡೆಯು ‘ಆಪರೇಷನ್ ಸ್ವಿಫ್ಟ್ ರಿಟಾರ್ಟ್‘ ಪ್ರಾರಂಭಿಸಿತ್ತು. ಫೆಬ್ರವರಿ 26, ೨೦೧೯ ರಂದು ಭಾರತವು ಪಾಕಿಸ್ತಾನದ ಬಾಲಾಕೋಟ್‌ ಮೇಲೆ ವೈಮಾನಿಕ ದಾಳಿ ನಡೆಸಿತ್ತು. ಇದಕ್ಕೆ ಪ್ರತ್ಯುತ್ತರ ಕೊಡಲು ಪಾಕಿಸ್ತಾನದ ಯುದ್ಧ ವಿಮಾನ ಫೆಬ್ರವರಿ 27, ೨೦೧೯ ರಂದು ಭಾರತದ ಗಡಿಯೊಳಗೆ ಪ್ರವೇಶಿಸಿತ್ತು. ಇದಕ್ಕೆ ‘ಆಪರೇಷನ್ ಸ್ವಿಫ್ಟ್ ರಿಟಾರ್ಟ್‘ ಎನ್ನಲಾಗುತ್ತದೆ.

ವಿರೋಧಿಗಳನ್ನು ಮುಗಿಸಲು ಅಧಿಕಾರಿಗಳ ಬಂಧನ

ಪಾಕಿಸ್ತಾನದ ವಾಯುಸೇನೆಯ ಮುಖ್ಯಸ್ಥ ಭ್ರಷ್ಟಾಚಾರವನ್ನು ಮುಚ್ಚಿಹಾಕುವ ಪ್ರಯತ್ನ ಮೊದಲೇ ನಡೆದಿತ್ತು; ಆದರೆ ಅದನ್ನು ಪ್ರಸಾರ ಮಾಧ್ಯಮಗಳು ಬಹಿರಂಗ ಪಡಿಸಿವೆ. ಆನಂತರ ಪಾಕಿಸ್ತಾನದ ವಾಯುಪಡೆಯು ತನಿಖೆಯನ್ನು ಪ್ರಾರಂಭಿಸಿತು ಮತ್ತು ಈಗ ಸುಮಾರು ೧೩ ಅಧಿಕಾರಿಗಳನ್ನು ಬಂಧಿಸಲಾಗಿದೆ. ತಜ್ಞರ ಪ್ರಕಾರ ಇವರೆಲ್ಲರೂ ಪ್ರಾಮಾಣಿಕ ಅಧಿಕಾರಿಗಳಾಗಿದ್ದಾರೆ. ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥರು ತಮ್ಮ ಅಧಿಕಾರಾವಧಿಯನ್ನು ಮಂದುವರೆಸಲು ಬಯಸುತ್ತಾರೆ ಮತ್ತು ಆದ್ದರಿಂದ ಅವರು ಅವರ ವಿರೋಧಿಗಳನ್ನು ಮುಗಿಸಲು ಬಯಸುತ್ತಾರೆ ಎಂದು ಹೇಳಲಾಗಿದೆ.

ಪಾಕಿಸ್ತಾನದ ಸೇನಾಮುಖ್ಯಸ್ಥನೂ ಭ್ರಷ್ಟ

ಈ ಹಿಂದೆ ಸೇನಾಮುಖ್ಯಸ್ಥರು ಶಸ್ತ್ರಾಸ್ತ ಖರೀದಿ ವ್ಯವಹಾರದಲ್ಲಿ ಕುತಂತ್ರ ಮಾಡಿ ಹಣಗಳಿಸಿರುವುದು ಬಹಿರಂಗವಾಗಿದೆ. ಭ್ರಷ್ಟಾಚಾರದ ಹಣದಲ್ಲಿ ಅವರು ದುಬಾರಿ ಕಾರುಗಳು ಮತ್ತು ಮನೆ ಖರೀದಿಸಿದ ಆರೋಪ ಅವರಮೇಲಿದೆ. ಪಾಕಿಸ್ತಾನದ ವಾಯುಪಡೆಯ ಮುಖ್ಯಸ್ಥ ಜಾಹೀರ್ ಶರೀಫ್ ಸಿದ್ದೂ ಅವರೊಂದಿಗೆ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಝ್ ಶರೀಫ ರ ನಂಟಿರುವ ಆರೋಪ ಕೇಳಿಬಂದಿದೆ.