ಅಯೋಧ್ಯೆಯಲ್ಲಿ ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆ ಸಮಾರಂಭದ ಹಿಂದಿನ ದಿನ ಸಾಯಂಕಾಲ ಸನಾತನದ ಸಂತರು ಮತ್ತು ಸಾಧಕರಿಗೆ ಕೆಟ್ಟ ಶಕ್ತಿಗಳ ತೊಂದರೆಯಾಗುವುದು !

೧. ಅಯೋಧ್ಯೆಯಲ್ಲಿ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಹಿಂದಿನ ದಿನ ಸಾಯಂಕಾಲ ತೊಂದರೆಯಾಗಲು ಪ್ರಾರಂಭವಾಗಿದ್ದರಿಂದ ಅದಕ್ಕೆ ಆಧ್ಯಾತ್ಮಿಕ ಉಪಾಯವನ್ನು ಕಂಡುಹಿಡಿದು ಅದನ್ನು ಮಾಡಲು ಪ್ರಾರಂಭಿಸುವುದು

(ಸದ್ಗುರು) ಡಾ. ಮುಕುಲ ಗಾಡಗೀಳ

‘೨೨.೧.೨೦೨೪ ರಂದು ಅಯೋಧ್ಯೆಯ ಶ್ರೀರಾಮಜನ್ಮ ಭೂಮಿಯ ಶ್ರೀರಾಮ ಮಂದಿರದಲ್ಲಿ ಶ್ರೀರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಆಗಲಿಕ್ಕಿತ್ತ್ತು. ಅದರ ಹಿಂದಿನ ದಿನ (೨೧.೧.೨೦೨೪) ಸಂಜೆ ೫.೪೫ ಕ್ಕೆ ನನಗೆ ಅಕಸ್ಮಿಕವಾಗಿ ಅಸ್ವಸ್ಥತೆ ಅರಿವಾಗತೊಡಗಿತು. ಹಾಗೆಯೇ ನನ್ನ ಹೊಟ್ಟೆಯು ಬಿಗಿದಂತೆ ಅನಿಸತೊಡಗಿತು. ಆದ್ದರಿಂದ ನಾನು ನನಗಾಗಿ ಆಧ್ಯಾತ್ಮಿಕ ಉಪಾಯವನ್ನು ಶೋಧಿಸಿದೆನು. ಆಗ ನನಗೆ ನನ್ನ ಆಜ್ಞಾಚಕ್ರ ಮತ್ತು ಮಣಿಪುರಚಕ್ರದ ಮೇಲೆ ತೊಂದರೆಯೆನಿಸತೊಡಗಿತು. ಉಪಾಯದಲ್ಲಿ ನನಗೆ ‘ನಿರ್ಗುಣ’ ನಾಮಜಪ ಬಂದಿತು. ಇದರಿಂದ ನಾನು ನನ್ನ ಬಲಗೈಯ ಅಂಗೈಯನ್ನು ಆಜ್ಞಾಚಕ್ರದ ಎದುರಿಗೆ ಮತ್ತು ಎಡಗೈ ಅಂಗೈಯನ್ನು ಮಣಿಪುರಚಕ್ರದ ಎದುರಿಗೆ ೧-೨ ಸೆಂ.ಮೀ. ಅಂತರದಲ್ಲಿ ಹಿಡಿದೆ ಮತ್ತು ‘ನಿರ್ಗುಣ’ ಈ ಜಪ ಮಾಡುತ್ತಾ ನನ್ನ ಮೇಲೆ ಆಧ್ಮಾತ್ಮಿಕ ಉಪಾಯವನ್ನು ಮಾಡಲು ಪ್ರಾರಂಭಿಸಿದೆನು.

೨. ಸತತವಾಗಿ ಒಂದೂ ಮುಕ್ಕಾಲು ಗಂಟೆ ನಾಮಜಪ ಮಾಡಿಯೂ ತೊಂದರೆ ಕಡಿಮೆಯಾಗದಿರುವುದು ಮತ್ತು ಇದರಿಂದ ‘ಕೆಟ್ಟ ಶಕ್ತಿಗಳು ಎಷ್ಟೊಂದು ಶಕ್ತಿಯನ್ನು ಒಗ್ಗೂಡಿಸಿ ದಾಳಿ ಮಾಡುತ್ತಿವೆ’, ಎನ್ನುವುದು ಗಮನಕ್ಕೆ ಬರುವುದು

ನಾನು ಸಾಯಂಕಾಲ ೫.೪೫ ರಿಂದ ೭.೩೦ ಹೀಗೆ ಸತತವಾಗಿ ಒಂದೂಮುಕ್ಕಾಲು ಗಂಟೆಗಳ ಕಾಲ ನಾಮಜಪವನ್ನು ಮಾಡಿದೆನು; ಆದರೂ ನನ್ನ ತೊಂದರೆ ಕಡಿಮೆಯಾಗಲಿಲ್ಲ. ನನ್ನ ಹೊಟ್ಟೆಯಲ್ಲಿ ಬಿಗಿತದಂತಾಗುವ ತೊಂದರೆಯು ಇಷ್ಟು ಹೊತ್ತು ಉಪಾಯವನ್ನು ಮಾಡಿಯೂ ಕಡಿಮೆಯಾಗಲಿಲ್ಲ. ಅದು ಮೊದಲಿನಂತೆಯೇ ಇತ್ತು. ಆದ್ದರಿಂದ ನನ್ನ ನಾಮಜಪವೂ ‘ನಿರ್ಗುಣ’ ನಾಮಜಪದಿಂದ ಅಲ್ಪಸ್ತರದ, ಅಂದರೆ ‘ಮಹಾಶೂನ್ಯ’ ಅಥವಾ ‘ಶೂನ್ಯ’ಕ್ಕೆ ಬರಲಿಲ್ಲ. ಇದರಿಂದ ‘ಕೆಟ್ಟ ಶಕ್ತಿಗಳು ಎಷ್ಟು ಬಲವನ್ನು ಒಟ್ಟುಗೂಡಿಸಿಕೊಂಡು ದಾಳಿ ಮಾಡುತ್ತಿವೆ’, ಎನ್ನುವುದು ನನ್ನ ಗಮನಕ್ಕೆ ಬಂದಿತು.

೩. ಎಲ್ಲಾ ಸಾಧಕರಿಗೆ ಮತ್ತು ಸನಾತನದ ಮೂವರು ಗುರುಗಳು ಇವರೆಲ್ಲರಿಗೆ ಆಧ್ಯಾತ್ಮಿಕ ಉಪಾಯವಾಗಬೇಕೆಂದು ಪ್ರಾರ್ಥಿಸಿ, ಶರಣಾಗತ ಭಾವದಿಂದ ಉಪಾಯ ಮಾಡಿದ ಬಳಿಕ ರಾತ್ರಿ ೮.೩೦ ಗಂಟೆಗೆ ನನಗೆ ಹಗುರವೆನಿಸಿತು, ಹಾಗೆಯೇ ವಾತಾವರಣದಲ್ಲಿಯೂ ಹಗುರತನ ಅನುಭವವಾಗತೊಡಗಿತು

‘ಇದು ಸಾಧಕರ ಮೇಲೆ ಕೆಟ್ಟ ಶಕ್ತಿಗಳಿಂದಾದ ಸಮಷ್ಟಿ ಆಕ್ರಮಣವಾಗಿದೆ’ ಎಂಬುದು ನನ್ನ ಗಮನಕ್ಕೆ ಬಂದಿತು. ನಂತರ ನನಗೆ ಕೇವಲ ನನ್ನ ಮೇಲಷ್ಟೇ ಅಲ್ಲ, ಎಲ್ಲ ಸಾಧಕರು ಹಾಗೆಯೇ ಸನಾತನದ ಮೂವರು ಗುರುಗಳು (ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ, ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ) ಇವರ ಮೇಲೆಯೂ ಆಧ್ಯಾತ್ಮಿಕ ಉಪಾಯವಾಗಬೇಕೆಂದು ಪ್ರಾರ್ಥನೆ ಮಾಡಿದೆನು. ಆ ಕ್ಷಮತೆ ನನ್ನಲ್ಲಿ ಬರಲು ಸಹ ನಾನು ಪ್ರಾರ್ಥನೆ ಮಾಡಿದೆನು ಮತ್ತು ಸಂಪೂರ್ಣ ಶರಣಾಗತಭಾವದಿಂದ ಉಪಾಯ ಮಾಡಲು ಪ್ರಾರಂಭಿಸಿದೆನು. ರಾತ್ರಿ ೮.೩೦ ಗಂಟೆಗೆ ನನಗೆ ಹಗುರವೆನಿಸತೊಡಗಿತು. ಆ ಸಮಯದಲ್ಲಿ ನನಗೆ ಆಗುತ್ತಿದ್ದ ತೊಂದರೆ ಸಂಪೂರ್ಣ ಕಡಿಮೆಯಾಗಿತ್ತು. ಹಾಗೆಯೇ ವಾತಾವರಣದಲ್ಲಿಯೂ ನನಗೆ ಹಗುರತನ ಅನಿಸತೊಡಗಿತು.

೪. ಆಶ್ರಮದಲ್ಲಿರುವ ಕೆಲವು ಸಾಧಕರಿಗೆ ಸಾಯಂಕಾಲ ೫.೪೫ ರಿಂದ ೮.೧೫ ಈ ಸಮಯದಲ್ಲಿ ಅಸ್ವಸ್ಥವೆನಿಸುತ್ತಿತ್ತು

ರಾತ್ರಿ ೯.೧೫ ಗಂಟೆಗೆ ನನಗೆ ಆಶ್ರಮದಲ್ಲಿನ ಸಾಧಕರಿಗೂ ಸಾಯಂಕಾಲ ೫.೪೫ ರಿಂದ ೮.೧೫ ಈ ಸಮಯದಲ್ಲಿ ತೊಂದರೆಯಾಗುತ್ತಿತ್ತು ಎಂದು ತಿಳಿಯಿತು. ಅವರಲ್ಲಿ ಕೆಲವರ ಮನಸ್ಸು ಅಸ್ವಸ್ಥವಾಗಿತ್ತು, ಕೆಲವರಿಗೆ ಹೊಟ್ಟೆ ನೋಯುತ್ತಿತ್ತು, ಇನ್ನೂ ಕೆಲವರಿಗೆ ವಾಕರಿಕೆ ಬಂದಂತೆ ಆಗುತ್ತಿತ್ತು.

೫. ಶ್ರೀ ರಾಮಲಲ್ಲಾನ ಮೂರ್ತಿಯ ಪ್ರಾಣಪ್ರತಿಷ್ಠಾಪನೆ ಎಂದರೆ, ಅದು ಒಂದು ರೀತಿಯಲ್ಲಿ ರಾಮರಾಜ್ಯ ಬರುವುದರ ನಾಂದಿಯೇ ಆಗಿದೆ, ಸನಾತನದ ಸಾಧಕರೂ ಕಳೆದ ೨೪ ವರ್ಷಗಳಿಂದ ರಾಮರಾಜ್ಯವನ್ನು ತರಲು ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ ಅದಕ್ಕಾಗಿ ಕೆಟ್ಟ ಶಕ್ತಿಗಳು ಶ್ರೀ ರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯ ಹಿಂದಿನ ದಿನ ಸಾಧಕರ ಮೇಲೆ ದೊಡ್ಡ ಆಕ್ರಮಣ ಮಾಡುವುದು

ಮರುದಿನ (೨೨.೧.೨೦೨೪ ರಂದು), ಅಯೋಧ್ಯೆಯ ಶ್ರೀರಾಮಜನ್ಮಭೂಮಿಯ ಶ್ರೀರಾಮಮಂದಿರದಲ್ಲಿ ಬಾಲರೂಪದಲ್ಲಿರುವ ಶ್ರೀರಾಮನ ಮೂರ್ತಿ ಸ್ಥಾಪನೆಯಾಗಲಿತ್ತು. ಇದು ಒಂದು ದೊಡ್ಡ ಸಮಷ್ಟಿ ಘಟನೆಯಾಗಿತ್ತು. ಅದಕ್ಕಾಗಿ ದೇಶಾದ್ಯಂತದ ಬಹುಸಂಖ್ಯಾತ ಹಿಂದೂಗಳು ಒಂದುಗೂಡಿದ್ದರು ಮತ್ತು ಉತ್ಸಾಹದಿಂದ ಈ ಘಟನೆಯ ಸಿದ್ಧತೆಯನ್ನು ಮಾಡುತ್ತಿದ್ದರು. ಶ್ರೀ ರಾಮಲಲ್ಲಾನಮೂರ್ತಿಯ ಪ್ರಾಣಪ್ರತಿಷ್ಠಾಪನೆಯೆಂದರೆ ಒಂದು ರೀತಿಯಲ್ಲಿ ಅದು ರಾಮರಾಜ್ಯ ಬರುವುದರ ನಾಂದಿಯಾಗಿತ್ತು. ಸನಾತನದ ಸಾಧಕರೂ ರಾಮರಾಜ್ಯ ತರಲು ಕಳೆದ ೨೪ ವರ್ಷ ಗಳಿಂದ ಸಮಾಜದಲ್ಲಿ ಜಾಗೃತಿ ಮೂಡಿಸುವುದು, ಧರ್ಮಜಾಗೃತಿ ಮಾಡುವುದು ಮತ್ತು ಸಮಾಜಕ್ಕೆ ಸಾಧನೆಯನ್ನು ಹೇಳುವುದು ಮುಂತಾದ ರೀತಿಯಲ್ಲಿ ಅಖಂಡ ಸಮಷ್ಟಿ ಸಾಧನೆಯನ್ನು ಮಾಡುತ್ತಿದ್ದಾರೆ. ಕೆಟ್ಟ ಶಕ್ತಿಗಳಿಗೆ ರಾಮರಾಜ್ಯ ಬೇಡವಾಗಿದೆ; ಅವು ರಾಮರಾಜ್ಯ ತರಲು ಪ್ರಯತ್ನಿಸುವ ಸಾಧಕರ ಮೇಲೆ ಶ್ರೀರಾಮಲಲ್ಲಾನ ಪ್ರಾಣಪ್ರತಿಷ್ಠಾಪನೆಯಾಗುವ ಹಿಂದಿನ ದಿನ ಸಾಯಂಕಾಲ ದೊಡ್ಡ ಆಕ್ರಮಣ ಮಾಡಿದ್ದವು. ಇದರಿಂದ ಸಾಧಕರು ರಾಮರಾಜ್ಯ ತರಲು ಸಾಧನೆಯನ್ನು ಮತ್ತಷ್ಟು ಹೆಚ್ಚಿಸಬೇಕು ಮತ್ತು ಜಾಗರೂಕತೆಯಿಂದಿರಬೇಕು ಎನ್ನುವುದು ಗಮನಕ್ಕೆ ಬರುತ್ತದೆ’.

– (ಸದ್ಗುರು) ಡಾ. ಮುಕುಲ ಗಾಡಗೀಳ, ಪಿಎಚ್ಡಿ ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೨೪.೧.೨೦೨೪)