೧. ‘ವೈಫಲ್ಯವನ್ನು ಸಹಿಸುವ ಧೈರ್ಯವಿರುವವರೇ ಯಶಸ್ಸಿನ ಕನಸನ್ನು ಕಾಣಬೇಕು.
೨. ಕೇವಲ ಪರಿಸ್ಥಿತಿಯನ್ನು ಸ್ವೀಕರಿಸುವುದು ಮಾತ್ರ ವಲ್ಲ ಎಲ್ಲ ರೀತಿಯ ಪರಿಸ್ಥಿತಿಯನ್ನು ಬಗೆಹರಿಸಲು (ಪರಿಹರಿಸಲು) ಪ್ರಯತ್ನಿಸುವುದು ಸಹ ಬಹಳ ಆವಶ್ಯಕವಾಗಿರುತ್ತದೆ.
೩. ‘ಸಾಧನೆಯಿಂದ ಆನಂದಪ್ರಾಪ್ತಿ’ಯನ್ನು ಸಾಧ್ಯ ಮಾಡಿಕೊಳ್ಳಲು ‘ಸಾಧನೆಯ ಪ್ರಯತ್ನಗಳನ್ನು ಇಷ್ಟ ಪಟ್ಟು ಮಾಡುವುದು’ ಎಂಬ ಸಾಧನವನ್ನು ಸಿದ್ಧಪಡಿಸಬೇಕಾಗುತ್ತದೆ.
೪. ‘ನಾನು ಯಾವ ಸೇವೆಯನ್ನು ಮಾಡುತ್ತೇನೆ’, ಎಂಬುದಕ್ಕಿಂತ ‘ಸೇವೆಯನ್ನು ಮಾಡುವಾಗ ತನ್ನಲ್ಲಿ ಗುಣಗಳು ನಿರ್ಮಾಣವಾಗುತ್ತಿದೆಯಲ್ಲ ?’, ಎಂಬುದು ಹೆಚ್ಚು ಮಹತ್ವದ್ದಾಗಿದೆ.’
– (ಪೂ.) ಸಂದೀಪ ಆಳಶಿ (೧೬.೧.೨೦೨೪)