ಸಾಧಕರ ಪ್ರಗತಿಯಲ್ಲಿ ಆನಂದ ಪಡೆಯುವ ಏಕಮೇವಾದ್ವಿತೀಯ ಗುರು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ !

೧. ಮೊದಲ ಪ್ರಯತ್ನದಲ್ಲಿ ಸಾಧಕನಿಗೆ ಯೋಗ್ಯ ಛಾಯಾಚಿತ್ರವನ್ನು ತೆಗೆಯಲು ಸಾಧ್ಯವಾದಾಗ ಪರಾತ್ಪರ ಗುರು ಡಾ. ಆಠವಲೆಯವರಿಗೆ ಆನಂದವಾಗಿ ಅವರು ಅವನನ್ನು ಪ್ರಶಂಸಿಸುವುದು: ಕೆಲವು ದಿನಗಳ ಹಿಂದೆ ಸದ್ಗುರು ಗಾಡಗೀಳ ಕಾಕಾರವರು ಪ್ರತಿದಿನ ಪರಾತ್ಪರ ಗುರು ಡಾಕ್ಟರರ ದೃಷ್ಟಿಯನ್ನು ತೆಗೆಯುತ್ತಿದ್ದರು. ಸಂಶೋಧನೆಯ ದೃಷ್ಟಿಯಿಂದ ದೃಷ್ಟಿಯನ್ನು ತೆಗೆಯುವ ಮೊದಲು ಮತ್ತು ತೆಗೆದ ನಂತರ ಪರಾತ್ಪರ ಗುರು ಡಾಕ್ಟರರ ಹಾಗೂ ಸದ್ಗುರು ಗಾಡಗೀಳಕಾಕಾರವರ ಛಾಯಾಚಿತ್ರಗಳನ್ನು ತೆಗೆಯುವುದಿತ್ತು.

ಶ್ರೀ. ಕೇದಾರ ನಾಯಿಕ

ಮೊದಲಿನ ಕೆಲವು ದಿನಗಳು ನಾನು ತೆಗೆದಿರುವ ಛಾಯಾಚಿತ್ರಗಳು ತಪ್ಪುತ್ತಿರುವುದರಿಂದ ಎರಡನೇ ಅಥವಾ ಮೂರನೇ ಬಾರಿ ತೆಗೆದ ಛಾಯಾಚಿತ್ರಗಳು ಅಂತಿಮವಾಗುತ್ತಿತ್ತು. ಒಂದು ದಿನ ನಾನು ಪರಾತ್ಪರ ಗುರು ಡಾಕ್ಟರರ ತೆಗೆದ ಛಾಯಾಚಿತ್ರ ಮೊದಲಬಾರಿಯೇ ಸರಿಯಾಗಿ ಬಂದಾಗ ಅವರು, “ಇಂದು ನೀನು ಮೊದಲ ಪ್ರಯತ್ನದಲ್ಲಿಯೇ ಉತ್ತೀರ್ಣನಾದೆ ಶಬ್ಬಾಸ್ ! ನೀನು ಮೊದಲನೇ ಪ್ರಯತ್ನದಲ್ಲಿ ಉತ್ತೀರ್ಣನಾದರೆ ನನಗೆ ಹೆಚ್ಚು ಆನಂದವಾಗುತ್ತದೆ”, ಎಂದರು.

೨. ಗರಬಾ ನೃತ್ಯದ ಪ್ರಸ್ತುತೀಕರಣ ಚಿತ್ರೀಕರಣವನ್ನು ನೋಡುವಾಗ ಗುರುದೇವರಿಗೆ ಆನಂದವಾಗಿ ಅವರು ‘ನಿಮ್ಮೆಲ್ಲ ಸಾಧಕರ ಪ್ರಗತಿಯೇ ನನ್ನ ಆನಂದವಾಗಿದೆ’, ಎಂದು ಹೇಳುವುದು : ‘ಗರಬಾ’ ನೃತ್ಯದ ಪ್ರಸ್ತುತೀಕರಣವನ್ನು ನೋಡಿದ ನಂತರ ಪರಾತ್ಪರ ಗುರು ಡಾಕ್ಟರರು, “ನನಗೆ ಇಂದು ತುಂಬಾ ಆನಂದ ಸಿಕ್ಕಿತು” ಎಂದು ಹೇಳಿದರು. ಅದಕ್ಕೆ ನಾನು, ‘ಪರಮ ಪೂಜ್ಯ, ಈ ರೀತಿಯ ಆನಂದವನ್ನು ನಾವು ನಿಮಗೆ ಕೊಡಲು ಸಾಧ್ಯವಿಲ್ಲ. ಚಿತ್ರೀಕರಣ ಮತ್ತು ಛಾಯಾಚಿತ್ರಗಳಲ್ಲಿ ತುಂಬಾ ತಪ್ಪುಗಳಾಗುತ್ತಿವೆ’ ಎಂದಾಗ ಅವರು, “ಹೀಗೆ ವಿಚಾರ ಮಾಡಬೇಡ. ‘ನಿಮ್ಮೆಲ್ಲ ಸಾಧಕರ ಪ್ರಗತಿಯೇ’ ನನ್ನ ಆನಂದವಾಗಿದೆ” ಎಂದು ಹೇಳಿದರು.

– ಶ್ರೀ. ಕೇದಾರ ನಾಯಿಕ, ಸನಾತನ ಆಶ್ರಮ, ರಾಮನಾಥಿ, ಗೋವಾ. (೭.೧೦.೨೦೨೦)