ಸನಾತನದ ಆಶ್ರಮದಲ್ಲಿದ್ದು ಸಾಧನೆ ಮಾಡುವುದರ ಲಾಭ !

ಸನಾತನದ ಯಾವುದೇ ಆಶ್ರಮದಲ್ಲಿದ್ದು ಸಾಧನೆ ಯನ್ನು ಮಾಡಿದಾಗ ಸಾಧಕರ ಸರ್ವತೋಮುಖ ಆಧ್ಯಾತ್ಮಿಕ ಉನ್ನತಿಯು ಆಗುತ್ತದೆ. ಅವನಿಗೆ ವಿವಿಧ ರೀತಿಯಲ್ಲಿ ಲಾಭವಾಗುತ್ತದೆ, ಉದಾ. ಸ್ವಚ್ಛತೆಯ ಸೇವೆ ಮಾಡುವುದರಿಂದ ಹಿಡಿದು ಸತ್ಸಂಗ ತೆಗೆದುಕೊಳ್ಳುವ ತನಕದ ಎಲ್ಲ ವರ್ಣಗಳ ಸೇವೆಯನ್ನು ದಿನವಿಡೀ ಮಾಡಬಹುದು. ಪ್ರಾರ್ಥನೆ, ಕೃತಜ್ಞತೆ, ನಾಮಜಪ ಇವುಗಳಂತಹ ಕೃತಿಗಳ ಮೂಲಕ ಭಕ್ತಿಯೋಗ, ಸತ್ಸಂಗದಿಂದ ಕಲಿಯುವಿಕೆಯ ಮೂಲಕ ಜ್ಞಾನಯೋಗ, ಅಪೇಕ್ಷಾರಹಿತ ಸೇವೆಯಿಂದ ಕರ್ಮಯೋಗ ಮತ್ತು ನಾಮಜಪಾದಿ ಉಪಾಯದಿಂದ ಧ್ಯಾನಯೋಗ ಇಂತಹ ವಿವಿಧ ಮಾರ್ಗಗಳಿಂದಲೂ ಸಾಧನೆಯಾಗುತ್ತದೆ. ಸಾಧಕರು ಪರಿಸ್ಪರರಿಗೆ ತಮ್ಮ ತಪ್ಪುಗಳನ್ನು ಹೇಳುತ್ತಾರೆ ಅಥವಾ ಕೇಳುತ್ತಾರೆ. ಇದರಿಂದ ಸತತವಾಗಿ ಅಂತರ್ಮುಖವಾಗಿರಬಹುದು. ಎಲ್ಲ ಸಾಧಕರು ‘ನಾನು ಇಲ್ಲಿ ಸಾಧನೆ ಮಾಡಲು ಬಂದಿದ್ದೇನೆ ಎಂಬ ಏಕೈಕ ವಿಚಾರದಿಂದ ಪ್ರೇರಿತರಾಗಿ ಕಾರ್ಯ ಮಾಡುವುದರಿಂದ ಆಶ್ರಮದ ಒಟ್ಟಾರೆ ವಾತಾವರಣವು ಸಾಧನೆಗಾಗಿ ಪೂರಕವಾಗುತ್ತದೆ.

‘ಕೊಡು-ಕೊಳ್ಳುವ ಲೆಕ್ಕಾಚಾರ ಉಂಟಾಗದಿರಲು ಯಾವತ್ತೂ ಯಾರಲ್ಲಿಯೂ ಏನ್ನೂ ಬೇಡಬೇಡಿ !

‘ವ್ಯಕ್ತಿಯು ಜನ್ಮ-ಮೃತ್ಯುವಿನ ಚಕ್ರದಲ್ಲಿ ಸಿಲುಕಲು ಅವನಿಗೆ ಇತರರೊಂದಿಗಿನ ‘ಕೊಡು-ಕೊಳ್ಳುವ ಲೆಕ್ಕಾಚಾರವೇ ಕಾರಣವಾಗಿರುತ್ತದೆ ! ಇಬ್ಬರು ವ್ಯಕ್ತಿಗಳಲ್ಲಿ ‘ಕೊಡು-ಕೊಳ್ಳುವ ಲೆಕ್ಕಾಚಾರ ಉಂಟಾಗುವುದರ ಒಂದು ಕಾರಣವೆಂದರೆ, ಒಬ್ಬ ವ್ಯಕ್ತಿಯು ಇನ್ನೊಬ್ಬ ವ್ಯಕ್ತಿಯಿಂದ ಏನಾದರೂ ಕೇಳಿ ಪಡೆಯುವುದು. ಇಂತಹ ಬೇಡಿಕೆಗಳಿಂದಾಗಿ ನಾವು ಇತರರಿಗೆ ಬಾಕಿದಾರರಾಗುತ್ತೇವೆ. ಹಾಗಾಗಿ ಸಾಧ್ಯವಿದ್ದಷ್ಟು ಯಾವತ್ತೂ ಯಾರಲ್ಲಿಯೂ ಏನನ್ನೂ ಬೇಡಬೇಡಿ. ಕಾರಣಾಂತರದಿಂದ ಕೇಳಬೇಕಾದ ಪ್ರಮೇಯ ಬಂದಲ್ಲಿ ಅದನ್ನು ಆದಷ್ಟು ಬೇಗ ತತ್ಪರತೆಯಿಂದ ಹಿಂದಿರುಗಿಸಿ. ಹೀಗಿದ್ದರೂ, ಧರ್ಮಕಾರ್ಯಕ್ಕಾಗಿ ಅರ್ಪಣೆ ಕೇಳುವುದರಲ್ಲಿ ಯಾರ ಸ್ವಾರ್ಥವೂ ಇರುವುದಿಲ್ಲ. ಹಾಗಾಗಿ ಕೇಳುವವನು ಮತ್ತು ಕೊಡುವವನು ಇವರಿಬ್ಬರ ಸಾಧನೆಯೂ ಆಗುತ್ತದೆ.

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆ (೫.೧.೨೦೨೪)