೨೫/೨೨ ರ ಸಂಚಿಕೆಯಲ್ಲಿ ಮುದ್ರಿಸಲಾದ ಸದ್ಗುರು ರಾಜೇಂದ್ರ ಶಿಂದೆಯವರ ಲೇಖನದಲ್ಲಿ ‘ಸಮಷ್ಟಿ ಸಾಧನೆಯ ಮಹತ್ವವನ್ನು ಮನಸ್ಸಿನ ಮೇಲೆ ಬಿಂಬಿಸಿದ್ದರಿಂದ ಸಮಷ್ಟಿ ಸೇವೆಯನ್ನು ಮಾಡಿದೆ ಮತ್ತು ಆ ಮಾಧ್ಯಮದಿಂದ ಆಧ್ಯಾತ್ಮಿಕ ಪ್ರಗತಿ ಹೇಗೆ ಆಯಿತು ?, ಎಂಬುದರ ಬಗ್ಗೆ ಓದಿದೆವು. ಈ ವಾರದ ಲೇಖನದಲ್ಲಿ ‘ಪರಾತ್ಪರ ಗುರುದೇವರು ಸಮಷ್ಟಿ ಸಾಧನೆಯನ್ನು ಯಾವ ರೀತಿ ಮಾಡಬೇಕು ? ಮತ್ತು ಅದರಂತೆ ಅದನ್ನು ಮಾಡಿಸಿಕೊಳ್ಳುವುದು, ಈ ವಿಷಯದಲ್ಲಿನ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇನೆ. (ಭಾಗ ೫)
೧. ಪರಾತ್ಪರ ಗುರು ಡಾ. ಆಠವಲೆಯವರು ‘ತುಂಬಾ ದೂರದಲ್ಲಿರುವ ಓರ್ವ ಸಾಧಕಿಯ ಸಾಧನೆಯಾಗಬೇಕು, ಎಂದು ಸಾಧಕನಿಂದ ಪ್ರಯತ್ನ ಮಾಡಿಸಿಕೊಳ್ಳುವುದು
೧ ಅ. ಪರಾತ್ಪರ ಗುರು ಡಾ. ಆಠವಲೆಯವರು ‘ತುಂಬಾ ದೂರದಲ್ಲಿರುವ ಓರ್ವ ಸಾಧಕಿಯ ಸಾಧನೆಯಾಗಬೇಕು, ಎಂದು ಸಾಧಕನಿಗೆ ಅಲ್ಲಿ ಹೋಗಿ ಮಾರ್ಗದರ್ಶನ ಮಾಡಲು ಹೇಳುವುದು : ಏಪ್ರಿಲ್ ೨೦೦೯ ರಲ್ಲಿ ನಾನು ಕರ್ನಾಟಕದಲ್ಲಿ ಸೇವೆಯನ್ನು ಮಾಡುತ್ತಿರುವಾಗ ಚೆನ್ನೈಯಲ್ಲಿ ಒಂದು ಕಾರ್ಯಕ್ರಮದ ಆಯೋಜನೆಯನ್ನು ಮಾಡಲು ಹೋಗಿದ್ದೆ. ಆ ಕಾರ್ಯಕ್ರಮ ಮುಗಿದ ನಂತರ ನಾನು ಪ.ಪೂ. ಡಾಕ್ಟರರ ಬಳಿ ಓರ್ವ ಸಾಧಕನ ಮಾಧ್ಯಮದಿಂದ ಚೆನ್ನೈಯಿಂದ ಪುನಃ ಕರ್ನಾಟಕಕ್ಕೆ ಹೋಗುವುದರ ಬಗ್ಗೆ ಕೇಳಿದೆನು. ಅವರು ನನಗೆ ಮದುರೈಗೆ ಹೋಗಲು ಹೇಳಿದರು. ಮದುರೈ ಚೈನ್ನೈಯಿಂದ ಸುಮಾರು ೫೦೦ ಕಿಲೋಮೀಟರ್ ದೂರದಲ್ಲಿದೆ. ‘ಅಲ್ಲಿ ಏಕೆ ಹೋಗಬೇಕು ? ಎಂದು ನನಗೆ ತಿಳಿಯಲಿಲ್ಲ. ಆಗ ಅವರು ನನಗೆ, “ಅಲ್ಲಿ ಓರ್ವ ಸಾಧಕಿಯಿದ್ದಾಳೆ. ಅವರನ್ನು ಭೇಟಿಯಾಗಿ ಎಂದು ಹೇಳಿದರು. ನನ್ನ ಮನಸ್ಸಿನಲ್ಲಿ, ‘ಒಬ್ಬ ಸಾಧಕಿಯನ್ನು ಭೇಟಿಯಾಗಲು ೫೦೦ ಕಿಲೋಮೀಟರ್ ದೂರ ಹೋಗಬೇಕೇ ? ಎಂಬ ವಿಚಾರ ಬಂದಿತು. ಆಗ ಅವರು, “ಪ.ಪೂ. ಭಕ್ತರಾಜ ಮಹಾರಾಜರು ಓರ್ವ ಭಕ್ತನನ್ನು ಭೇಟಿಯಾಗಲು ಸಾವಿರಾರು ಕಿಲೋಮೀಟರ್ ದೂರದ ಪ್ರವಾಸವನ್ನು ಮಾಡುತ್ತಿದ್ದರು, ಹಾಗೆ ನಾವು ನಮ್ಮ ಒಬ್ಬ ಸಾಧಕಿಯನ್ನು ಭೇಟಿಯಾಗಲು ಏಕೆ ಹೋಗಬಾರದು ?, ಎಂದು ಕೇಳಿದರು. ಇದನ್ನು ಕೇಳಿದ ನಂತರ ನಾನು ತಕ್ಷಣ ಅಲ್ಲಿಗೆ ಹೋಗುವ ಆಯೋಜನೆಯನ್ನು ಮಾಡಿದೆ.
೧ ಆ. ಮಧುರೈಯ ಸಾಧಕಿಯನ್ನು ಭೇಟಿಯಾದ ನಂತರ ಅವಳಿಗೆ ಮತ್ತು ಅವಳ ಕುಟುಂಬದವರಿಗೆ ತುಂಬಾ ಆನಂದವಾಗಿ ಅವರಿಗೆ ಸಾಧನೆ ಮಾಡಲು ಇನ್ನಷ್ಟು ಪ್ರೇರಣೆ ಸಿಗುವುದು : ಮಧುರೈಯಲ್ಲಿ ‘ಸೌ. ಕೃಷ್ಣವೇಣಿ ಎಂಬ ಓರ್ವ ಸಾಧಕಿ ಇದ್ದು ಅವಳಲ್ಲಿ ಪ.ಪೂ. ಡಾಕ್ಟರರ ಬಗ್ಗೆ ತುಂಬಾ ಭಾವ ಇತ್ತು. ನಾನು ಅಲ್ಲಿ ಹೋದ ನಂತರ ‘ಸೌ. ಕೃಷ್ಣವೇಣಿ, ಅವರ ಪತಿ ಮತ್ತು ಅವರ ೩ ಜನ ಹೆಣ್ಣು ಮಕ್ಕಳಲ್ಲಿಯೂ ಪ.ಪೂ. ಡಾಕ್ಟರರ ಬಗ್ಗೆ ತುಂಬಾ ಶ್ರದ್ಧೆಯಿದೆ, ಎಂಬುದು ನನ್ನ ಗಮನಕ್ಕೆ ಬಂದಿತು. ಇಷ್ಟು ದೂರದಿಂದ ‘ನಾನು ಮತ್ತು ನನ್ನೊಂದಿಗೆ ಕಲಿಯಲು ಬಂದಿರುವ ಇಬ್ಬರು ಸಾಧಕರು ಅವರ ಬಳಿಗೆ ಬಂದೆವು, ಎಂದು ಅವರಿಗೆ ತುಂಬಾ ಆನಂದವಾಯಿತು. ಇಷ್ಟು ದೂರದಲ್ಲಿದ್ದರೂ ಅವರ ಸಾಧನೆ ಮತ್ತು ಅಧ್ಯಾತ್ಮಪ್ರಸಾರ ಯಾರ ಮಾರ್ಗದರ್ಶನವಿಲ್ಲದೇ ನಡೆಯುತ್ತಿತ್ತು. ಅವರು ಅಲ್ಲಿ ಒಂದು ಸತ್ಸಂಗ ಮತ್ತು ಒಂದು ಬಾಲಸಂಸ್ಕಾರವರ್ಗವನ್ನು ನಡೆಸುತ್ತಿದ್ದರು. ನಾನು ಅಲ್ಲಿಗೆ ಹೋದ ನಂತರ ಅವರ ಸತ್ಸಂಗದಲ್ಲಿ ಬರುವ ಎಲ್ಲ ಸಾಧಕರಿಗೆ ಮತ್ತು ಬಾಲಸಂಸ್ಕಾರ ವರ್ಗದಲ್ಲಿನ ಮಕ್ಕಳಿಗೆ ಮಾರ್ಗದರ್ಶನವನ್ನು ಮಾಡಿದೆನು. ಇದರಿಂದ ಅವರ ಕುಟುಂಬದವರಿಗೆ ತುಂಬಾ ಆನಂದವಾಯಿತು ಮತ್ತು ಅವರಲ್ಲಿ ಸಾಧನೆ ಮಾಡುವ ಪ್ರೇರಣೆಯೂ ಹೆಚ್ಚಾಯಿತು.
೧ ಇ. ಮಧುರೈಯಲ್ಲಿ ಕಲಿಯಲು ಸಿಕ್ಕಿದ ಅಂಶಗಳು
೧ ಇ ೧. ಸಾಧನೆ ಮತ್ತು ಸೇವೆಗೆ ಪ್ರೇರಣೆ ಸಿಗುವುದು : ‘ಸನಾತನದ ಓರ್ವ ಸಾಧಕಿ ಇಷ್ಟೊಂದು ದೂರದಲ್ಲಿದ್ದರೂ ‘ಏಕಲವ್ಯನಂತೆ ಸಾಧನೆಯನ್ನು ಮಾಡುತ್ತಿದ್ದಾಳೆ, ಎಂಬುದನ್ನು ನೋಡಿ ಮತ್ತು ಅವಳನ್ನು ಭೇಟಿಯಾಗಿ ನನಗೆ ತುಂಬಾ ಆನಂದವಾಯಿತು ಮತ್ತು ನನಗೂ ಸಾಧನೆ ಮತ್ತು ಸೇವೆಯನ್ನು ಮಾಡಲು ಪ್ರೇರಣೆ ಸಿಕ್ಕಿತು.
೧ ಇ ೨. ಪರಾತ್ಪರ ಗುರು ಡಾ. ಆಠವಲೆಯವರಿಗೆ ‘ಪ್ರತಿಯೊಬ್ಬ ಸಾಧಕನ ಕಡೆಗೆ ಗಮನವಿದ್ದು ಅವರು ಅವನ ಸಾಧನೆಯಾಗಲು ಹೇಗೆ ಪ್ರಯತ್ನಿಸುತ್ತಾರೆ ? ಎಂಬುದು ಕಲಿಯಲು ಸಿಗುವುದು : ಸೌ. ಕೃಷ್ಣವೇಣಿಯವರ ಪ್ರಯತ್ನಗಳನ್ನು ನೋಡಿ ‘ಪ.ಪೂ. ಡಾಕ್ಟರರು ನನಗೆ ಅಲ್ಲಿಗೆ ಹೋಗಲು ಏಕೆ ಹೇಳಿದರು ?, ಎಂಬುದು ನನ್ನ ಗಮನಕ್ಕೆ ಬಂದಿತು. ‘ದೇವರು ಪ್ರತಿಯೊಬ್ಬ ಸಾಧಕನ ಕಡೆಗೆ ಹೇಗೆ ಗಮನವನ್ನು ಇಡುತ್ತಾನೆ ?, ಮತ್ತು ‘ಅವನ ಸಾಧನೆಯಾಗಬೇಕು, ಎಂದು ‘ದೇವರು ಹೇಗೆ ಪ್ರಯತ್ನಿಸುತ್ತಾನೆ ?, ಎಂಬುದು ನನ್ನ ಗಮನಕ್ಕೆ ಬಂದಿತು.
೧ ಇ ೩. ‘ಪ್ರತಿಯೊಬ್ಬ ಸಾಧಕನ ಸಾಧನೆಯಾಗಲು ಪ್ರಯತ್ನಿಸಬೇಕು, ಎಂಬುದು ಕಲಿಯಲು ಸಿಗುವುದು : ಮೇಲಿನ ಪ್ರಸಂಗದ ನಂತರ ಪ್ರಚಾರವನ್ನು ಮಾಡುವಾಗ ‘ಸಾಧಕರ ಸಂಖ್ಯೆ ಕಡಿಮೆ ಇದ್ದರೂ, ಪ್ರತಿಯೊಂದು ಕೇಂದ್ರ ಮತ್ತು ಉಪಕೇಂದ್ರಕ್ಕೆ ಹೋಗಬೇಕು. ಒಬ್ಬ ಸಾಧಕನು ಎಲ್ಲಿದ್ದು ಸಾಧನೆ ಮಾಡುತ್ತಿದ್ದರೂ ಅವನನ್ನು ಭೇಟಿಯಾಗಬೇಕು, ಎಂಬುದು ನನಗೆ ಕಲಿಯಲು ಸಿಕ್ಕಿತು.
೨. ಪರಾತ್ಪರ ಗುರು ಡಾ. ಆಠವಲೆಯವರು ಪರಿಸ್ಥಿತಿಗನುಸಾರ ಕಡಿಮೆ ಸಾಧಕರಿಂದ ದೊಡ್ಡ ಕಾರ್ಯಕ್ರಮಗಳ ಆಯೋಜನೆ ಮಾಡಲು ಕಲಿಸುವುದು
೨ ಅ. ಉತ್ತರ ಭಾರತದಲ್ಲಿನ ರಾಜ್ಯಗಳಲ್ಲಿ ಮೊದಲಬಾರಿ ಸಾಧನೆಯ ಬಗೆಗಿನ ಸಭೆಗಳ ಆಯೋಜನೆ ಮಾಡಲಾಯಿತು ಮತ್ತು ಆ ಸಭೆಗಳ ಆಯೋಜನೆ ಮಾಡುವ ಸೇವೆ ನನಗೆ ಸಿಗುವುದು : ಸೆಪ್ಟೆಂಬರ್ ನಿಂದ ಡಿಸೆಂಬರ್ ೨೦೦೮ ರ ಅವಧಿಯಲ್ಲಿ ಪ.ಪೂ. ಗುರುದೇವರ ಕೃಪೆಯಿಂದ ನನಗೆ ಉತ್ತರ ಭಾರತ ದಲ್ಲಿನ ಗುಜರಾತ, ರಾಜಸ್ಥಾನ, ಹರಿಯಾಣ, ಉತ್ತರಪ್ರದೇಶ ಮತ್ತು ಝಾರಖಂಡ ಈ ರಾಜ್ಯಗಳಲ್ಲಿ ಸಾಧನೆಯ ಬಗೆಗಿನ ಸಭೆಗಳ ಆಯೋಜನೆಯನ್ನು ಮಾಡುವ ಸೇವೆ ಸಿಕ್ಕಿತು. ಉತ್ತರ ಭಾರತದಲ್ಲಿ ಇಂತಹ ಸಭೆಗಳು ಆಗದಿರುವುದರಿಂದ ಅಲ್ಲಿನ ಸಾಧಕರಿಗೆ ಸಭೆಗಳ ಎಲ್ಲ ಸೇವೆಗಳೂ ಹೊಸದಾಗಿದ್ದವು. ಅವರಿಗೆ ಆ ಸಭೆಗಳ ಸೇವೆಯ ಬಗ್ಗೆ ಏನೂ ಗೊತ್ತಿರಲಿಲ್ಲ.
೨ ಆ. ಮಹಾರಾಷ್ಟ್ರದಲ್ಲಿ ಸಾಧಕರ ಸಂಖ್ಯೆ ತುಂಬಾ ಇರುವುದರಿಂದ ವಿವಿಧ ರೀತಿಯ ಸಭೆಗಳ ಆಯೋಜನೆಯನ್ನು ಮಾಡುವಾಗ ಎಲ್ಲ ಸೇವೆಗಾಗಿ ಸಾಧಕರು ಲಭ್ಯವಿರುವುದು : ಈ ಹಿಂದೆ ಮಹಾರಾಷ್ಟ್ರದಲ್ಲಿ ವಿವಿಧ ರೀತಿಯ ಸಭೆಗಳ ಆಯೋಜನೆಯಾಗಿತ್ತು. ಸಭೆಯ ಆಯೋಜನೆಯನ್ನು ಮಾಡಲು ೧೦೦ ರಿಂದ ೨೦೦ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಸಾಧಕರು ಬೇಕಾಗುತ್ತಿದ್ದರು.ಮಹಾರಾಷ್ಟ್ರದಲ್ಲಿನ ಪ್ರತಿಯೊಂದು ಜಿಲ್ಲೆಯಲ್ಲಿ ತುಂಬಾ ಸಾಧಕರಿರುವುದರಿಂದ ಸಭೆಗಾಗಿ ಆವಶ್ಯಕವಿರುವ ‘ಅನೇಕ ಸೇವೆಗಳ ಆಯೋಜನೆ, ಅದಕ್ಕಾಗಿ ವಿವಿಧ ಸೇವಾಸಮಿತಿಗಳನ್ನು ಸ್ಥಾಪಿಸುವುದು, ಇದಕ್ಕಾಗಿ ಸಾಧಕರು ಸಹಜವಾಗಿ ಲಭ್ಯವಾಗುತ್ತಿದ್ದರು.
೨ ಇ. ಉತ್ತರ ಭಾರತದಲ್ಲಿ ಸಾಧಕರ ಸಂಖ್ಯೆ ಕಡಿಮೆ ಇರುವುದರಿಂದ ಸಭೆಯ ಸೇವೆಗಳ ಆಯೋಜನೆ ಮಾಡಲು ಕಠಿಣವೆನಿಸುವುದು : ನಾನು ರಾಜಸ್ಥಾನಕ್ಕೆ ಮೊದಲನೇ ಬಾರಿ ಸಾಧನೆಯ ವಿಷಯದ ಸಭೆಯ ಆಯೋಜನೆಯನ್ನು ಮಾಡಲು ಹೋಗಿದ್ದೆನು. ನಾನು ಅಲ್ಲಿನ ಜವಾಬ್ದಾರ ಸಾಧಕರಿಗೆ, “ನಾಳೆ ಇಲ್ಲಿನ ಎಲ್ಲ ಸಾಧಕರನ್ನು ಸಭೆಯ ಆಯೋಜನೆಯ ಬೈಠಕಕ್ಕೆ ಕರೆಯಿರಿ, ಅಂದರೆ ನಾವು ಆಯೋಜನೆಯನ್ನು ಆರಂಭಿಸಬಹುದು ಎಂದು ಹೇಳಿದೆನು. ಮರುದಿನ ಅಲ್ಲಿನ ಎಲ್ಲ ಸಾಧಕರು ಬೈಠಕಕ್ಕೆ ಬಂದರು. ಅವರೆಲ್ಲರೂ ಸೇರಿ ಕೇವಲ ೧೦-೧೨ ಸಾಧಕರಿದ್ದರು. ಆಗ ನನ್ನ ಮನಸ್ಸಿನಲ್ಲಿ ‘ಇಷ್ಟೊಂದು ಕಡಿಮೆ ಸಾಧಕರಲ್ಲಿ ಸಭೆಯ ಸೇವೆಗಳ ಆಯೋಜನೆಯನ್ನು ಹೇಗೆ ಮಾಡುವುದು ?, ಎಂಬ ವಿಚಾರ ಬಂದಿತು.
(ಮುಂದುವರಿಯುವುದು)
ಇದಂ ನ ಮಮ | (ಅರ್ಥ : ಈ ಬರವಣಿಗೆ ನನ್ನದಲ್ಲ.)
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೫.೭.೨೦೨೩)