ನಿಮ್ಮಂತಹರಿಂದಲೇ ಜಿಹಾದಿಗಳ ಧೈರ್ಯ ಹೆಚ್ಚಾಗುತ್ತದೆ ! – ತಾರಾ ಸಹದೇವ
ದೆಹಲಿ – ‘ಲವ್ ಜಿಹಾದ್’ಗೆ ‘ಕಾಲ್ಪನಿಕ’ ಎಂದು ಹೇಳುವ ಹಿಂದೂ ದ್ವೇಷಿ ಪತ್ರಕರ್ತ ರವೀಶ ಕುಮಾರ ಅವರಿಗೆ ರಾಷ್ಟ್ರೀಯ ಶೂಟರ ತಾರಾ ಸಹದೇವ ಛೀಮಾರಿ ಹಾಕಿದ್ದಾರೆ. ತಾರಾ ಸಹದೇವ ಇವರು ಲವ್ ಜಿಹಾದಗೆ ಬಲಿಯಾಗಿದ್ದರು. ತಾರಾ ಸಹದೇವ್ ಇವರು ‘ಎಕ್ಸ್’ ನಲ್ಲಿ ತಮ್ಮ ಅಭಿಪ್ರಾಯವನ್ನು ಮಂಡಿಸುತ್ತಾ, `ರಕೀಬುಲನಂತಹ ಜಿಹಾದಿಗಳು ಮತಾಂತರಕ್ಕಾಗಿ ನನ್ನನ್ನು ದೈಹಿಕವಾಗಿ ಮತ್ತು ಮಾನಸಿಕವಾಗಿ ಹಿಂಸಿಸಿದನು. ಅವನು ‘ಲವ್ ಜಿಹಾದ್’ ಮೂಲಕ ನನ್ನನ್ನು ಗುರಿ ಮಾಡಿದನು. `ಇಂತಹ ಕ್ರೂರ ಕೃತ್ಯಗಳನ್ನು ಮಾಡುವ ಧೈರ್ಯ ಅವರಿಗೆ ಎಲ್ಲಿಂದ ಬರುತ್ತದೆ?’ ಎನ್ನುವುದು ನನಗೆ ತಿಳಿಯಲಿಲ್ಲ, ನಿಮ್ಮಂತಹರಿಂದಲೇ ರಕೀಬುಲನಂತಹ ಜಿಹಾದಿಗಳ ಧೈರ್ಯ ಹೆಚ್ಚಾಗುತ್ತದೆ’, ಎಂದು ಇಂದು ನನಗೆ ತಿಳಿಯಿತು, ಎಂದು ಬರೆದಿದ್ದಾರೆ.
रकीबुल जैसे जिहादी जिसने मुझे धर्म परिवर्तन #लवजिहाद के लिए जो शारीरिक और मानसिक प्रतरणाए दी , मैं उस समय समझ नही पाई थी की वो हवानियत करने की हिम्मत उसमे कहां से आई ,लेकिन आज समझ आया की वो हिम्मत उन जैसे लोगो को आप जैसे लोग ही देते हो।@SreenivasanJain@ravishndtv@AskAnshul https://t.co/fwxBZ7QrA4
— Tara Shahdeo (@ShahdeoTara) February 17, 2024
ಲವ್ ಜಿಹಾದ್ ಗೆ ಬಲಿಯಾದ ತಾರಾ ಸಹದೇವ್ !
ರಕಿಬುಲ್ ಹಸನ್ ಅಲಿಯಾಸ್ ‘ರಣಜೀತ ಕೊಹಲಿ’ ಎಂದು ಮೋಸಗೊಳಿಸಿ ತಾರಾ ಸಹದೇವಳನ್ನು ಪ್ರೀತಿಯ ಬಲೆಯಲ್ಲಿ ಸೆಳೆದನು. ತಾರಾ ಸಹದೇವ ಇವರಿಗೆ ಅವನ ನೈಜ ಬಣ್ಣ ತಿಳಿದಾಗ, ಅವಳು ಅವನನ್ನು ವಿರೋಧಿಸಿದರು. ಆ ಸಮಯದಲ್ಲಿ ರಕಿಬುಲ್ ಮತ್ತು ಆತನ ಕುಟುಂಬದವರು ಅವಳನ್ನು ಶಾರೀರಿಕವಾಗಿ ಹಾಗೂ ಮಾನಸಿಕ ಹಿಂಸಿಸಿದರು. ಈ ಪ್ರಸಂಗ 2014ರಲ್ಲಿ ಬೆಳಕಿಗೆ ಬಂದಿತ್ತು. 2015ರಲ್ಲಿ ಉಚ್ಚ ನ್ಯಾಯಾಲಯದ ಆದೇಶದಂತೆ ಸಿಬಿಐ ತನಿಖೆ ಆರಂಭಿಸಿತ್ತು. ಈ ಪ್ರಕರಣದಲ್ಲಿ ರಕೀಬುಲ್ಲಾನಿಗೆ ರಾಂಚಿಯ `ಸಿಬಿಐ’ ನ ವಿಶೇಷ ನ್ಯಾಯಾಲಯವು ಜೀವಾವಧಿ ಶಿಕ್ಷೆ ವಿಧಿಸಿತ್ತು. ಝಾರಖಂಡ ಉಚ್ಚ ನ್ಯಾಯಾಲಯವು ಆಗಿನ ರಜಿಸ್ಟ್ರಾರ್ ಮುಶ್ತಾಕ ಅಹಮದನಿಗೂ 15 ವರ್ಷಗಳ ಶಿಕ್ಷೆ ಹೇಳಿತ್ತು.
*ಕಮ್ಯುನಿಸ್ಟ ಮತ್ತು ಹಿಂದೂ ದ್ವೇಷಿ ಪತ್ರಕರ್ತ ರವೀಶ್ ಕುಮಾರ ಲವ್ ಜಿಹಾದ್’ ಅನ್ನು ಕಾಲ್ಪನಿಕವೆಂದು ಹೇಳುವ ಪುಸ್ತಕದ ಪ್ರಕಾಶನವನ್ನು ಫೆಬ್ರವರಿ 16 ರಂದು ‘ಎಕ್ಸ್’ ನಲ್ಲಿ ಒಂದು ಛಾಯಾಚಿತ್ರವನ್ನು ಪ್ರಸಾರ ಮಾಡಿದರು. ಇದರಲ್ಲಿ ಅವರು ‘ಲವ್ ಜಿಹಾದ್ ಮತ್ತು ಇತರೆ ಕಾಲ್ಪನಿಕ ಕಥೆಗಳು’ ಎಂಬ ಪುಸ್ತಕವನ್ನು ಹೊಗಳಿ ಒಂದು ರೀತಿಯಲ್ಲಿ ‘ಲವ್ ಜಿಹಾದ್’ ಕಾಲ್ಪನಿಕ ಎಂದು ಪ್ರಚಾರ ಮಾಡಿದರು. ತಾರಾ ಸಹದೇವ್ ಇದನ್ನು ಸಹಿಸಲಾರದೆ ರವೀಶ್ ಕುಮಾರಗೆ ತಕ್ಕ ಪ್ರತ್ಯುತ್ತರ ನೀಡಿದರು.
‘Jihadis like Rakibul get courage from people like you’: Tara Shahdeo slams Ravish Kumar for promoting a book by his ex-colleagues that calls love jihad ‘fiction’https://t.co/fSkek498IJ
— OpIndia.com (@OpIndia_com) February 17, 2024
ಸಂಪಾದಕೀಯ ನಿಲುವುಭಾರತ ಸರಕಾರ ಲವ್ ಜಿಹಾದ್ ಅನ್ನು ರಾಷ್ಟ್ರೀಯ ಸಮಸ್ಯೆ ಎಂದು ಘೋಷಿಸಿ, ಈ ಸಮಸ್ಯೆಯನ್ನು ನಂಬದೇ ಇರುವವರ ಮೇಲೆಯೂ ಕಠಿಣ ಕ್ರಮವನ್ನು ತೆಗೆದುಕೊಳ್ಳಬೇಕು. ಹೀಗೆ ಮಾಡಿದರೆ ಮಾತ್ರ ಜಿಹಾದಿಗಳನ್ನು ಬೆಂಬಲಿಸುವವರನ್ನು ಹದ್ದುಬಸ್ತಿನಲ್ಲಿಡಬಹುದು ! |