ಭಾರತಕ್ಕೆ ಬಂದಮೇಲೆ ನೂಪುರ ಶರ್ಮಾ ಅವರನ್ನು ಭೇಟಿಯಾಗುವೆ ! – ನೆದರಲ್ಯಾಂಡ್ಸ್‌ನ ನೂತನ ಪ್ರಧಾನಿ ಗೀರ್ಟ ವಿಲ್ಡರ್ಸ

ನೆದರಲ್ಯಾಂಡ್ಸ್‌ನ ನೂತನ ಪ್ರಧಾನಿ ಗೀರ್ಟ ವಿಲ್ಡರ್ಸ ಇವರ ಹೇಳಿಕೆ !

ಆಂಸ್ಟರ್‌ಡ್ಯಾಮ್ (ನೆದರ್‌ಲ್ಯಾಂಡ್ಸ್) – ಇಲ್ಲಿಯ ‘ಪಾರ್ಟಿ ಫಾರ್ ಫ್ರೀಡಂ‘ ಪಕ್ಷದ ಅಧ್ಯಕ್ಷ ಮತ್ತು ದೇಶದ ಮುಂದಿನ ಪ್ರಧಾನಿ ಸಂಸದ ಗೀರ್ಟ್ ವಿಲ್ಡರ್ಸ್ ಅವರು ಭಾಜಪದಿಂದ ಅಮಾನತುಗೊಂಡಿರುವ ಮಾಜಿ ವಕ್ತೆ ನೂಪುರ ಶರ್ಮಾ ಅವರಿಗಾಗಿ ಸಂದೇಶವನ್ನು ಬರೆದಿದ್ದಾರೆ. ಇದರಲ್ಲಿ ಅವರು ಶರ್ಮಾರವರನ್ನು ಬೆಂಬಲಿಸುವ ಜೊತೆಗೆ ಭೇಟಿಯಾಗುವ ಇಚ್ಷೆಯನ್ನು ವ್ಯಕ್ತಪಡಿಸಿದ್ದಾರೆ.

೧. ಗೀರ್ಟ್ ವಿಲ್ಡರ್ಸ್ ಅವರು ಸಾಮಾಜಿಕ ಮಾಧ್ಯಮದ ಮೂಲಕ ಬರೆದ ಪೋಸ್ಟ್‌ನಲ್ಲಿ, ನಾನು ಪರಾಕ್ರಮಿ ನೂಪುರ ಶರ್ಮಾ ಅವರನ್ನು ಬೆಂಬಲಿಸಲು ವೈಯುಕ್ತಿಕ ಸಂದೇಶವನ್ನು ಕಳುಹಿಸಿದ್ದೇನೆ. ಸತ್ಯ ಹೇಳಿದ್ದಕ್ಕೆ ಇಸ್ಲಾಮಿಗಳು ಅವರಿಗೆ ಬೆದರಿಕೆ ಹಾಕುತ್ತಿದ್ದಾರೆ. ಸ್ವಾತಂತ್ಯ್ರವನ್ನು ಬೆಂಬಲಿಸುವ ಇಡೀ ಪ್ರಪಂಚದ ಎಲ್ಲಾ ಜನರು ನೂಪುರ ಅವರನ್ನು ಬೆಂಬಲಿಸಬೇಕು, ಯಾವಾಗ ನಾನು ಭಾರತಕ್ಕೆ ಭೇಟಿ ನೀಡುವೆನೋ ಆಗ ನನಗೆ ಅವರನ್ನು ಭೇಟಿಯಾಗುವುದಿದೆ ಎಂದು ಹೇಳಿದ್ದಾರೆ.

೨. ಗೀರ್ಟ್ ವಿಲ್ಡರ್ಸ್ ಈ ಹಿಂದೆಯೂ ನೂಪುರ ಶರ್ಮಾ ಅವರು ಮಹಮ್ಮದ್ ಪೈಗಂಬರ್ ಬಗ್ಗೆ ತಥಾಕಥಿತ ಅವಹೇಳನಾಕಾರಿ ಹೇಳಿಕೆ ನೀಡಿದ್ದಕ್ಕಾಗಿ ಅವರನ್ನು ಸಮರ್ಥಿಸಿದ್ದರು. ‘ಪೈಗಂಬರ್ ಬಗ್ಗೆ ಸತ್ಯವನ್ನು ಮಾತನಾಡಿದ್ದಕ್ಕಾಗಿ ನೂಪುರ ಎಂದಿಗೂ ಕ್ಷಮೆಯಾಚಿಸಬಾರದು’, ಎಂದು ಹೇಳಿದ್ದರು. ಅಲ್ಲದೆ ‘ನೂಪುರ ಶರ್ಮಾ ಬಗ್ಗೆ ಜಗತ್ತು ಹೆಮ್ಮೆ ಪಡಬೇಕು. ಅವರಿಗೆ ನೊಬೆಲ್ ಪ್ರಶಸ್ತಿ ನೀಡಬೇಕು. ಭಾರತವು ಹಿಂದೂ ದೇಶವಾಗಿದ್ದು ಹಾಗೂ ಭಾರತ ಸರಕಾರವು ಇಸ್ಲಾಮಿ ದ್ವೇಶದಿಂದ ಹಿಂದೂಗಳ ಸಂರಕ್ಷಣೆ ಮಾಡಬೇಕು‘, ಎಂದೂ ಸಹ ಹೇಳಿದ್ದರು.

ಸಂಪಾದಕೀಯ ನಿಲುವು

ಭಾರತದ ಎಷ್ಟು ಹಿಂದೂ ನಾಯಕರು ನೂಪುರ ಶರ್ಮಾ ಅವರ ಭೇಟಿಮಾಡಿ ಅವರನ್ನು ಬೆಂಬಲಿಸಿದ್ದಾರೆ ?