ಮಹರ್ಷಿಗಳ ಆಜ್ಞೆಯಿಂದಾದ ‘ಆಯುಷ ಹೋಮದ ಸಂಶೋಧನೆ !

‘ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಉಪಕರಣದಿಂದ ಮಾಡಿದ ವೈಜ್ಞಾನಿಕ ಪರೀಕ್ಷಣೆ

ಯು.ಎ.ಎಸ್. ಉಪಕರಣದ ಮೂಲಕ ಪರೀಕ್ಷಣೆ ಮಾಡುತ್ತಿರುವ ಶ್ರೀ. ಆಶಿಷ್ ಸಾವಂತ್

‘ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಮಹಾಮೃತ್ಯುಯೋಗ ದೂರವಾಗಿ ಅವರಿಗೆ ಆರೋಗ್ಯಪೂರ್ಣ ದೀರ್ಘಾಯುಷ್ಯ ದೊರಕಬೇಕು, ಎಲ್ಲೆಡೆಯ ಸಾಧಕರ ಎಲ್ಲ ತೊಂದರೆಗಳು ದೂರವಾಗಬೇಕು ಮತ್ತು ಆದಷ್ಟು ಬೇಗನೆ ಹಿಂದೂ ರಾಷ್ಟ್ರದ ಸ್ಥಾಪನೆಯಾಗಬೇಕು, ಎಂದು ಮಹರ್ಷಿಗಳ ಆಜ್ಞೆಗನುಸಾರ ಗೋವಾದ ರಾಮನಾಥಿಯಲ್ಲಿನ ಸನಾತನ ಸಂಸ್ಥೆಯ ಆಶ್ರಮದಲ್ಲಿ ೨ ದಿನಗಳ (೫ ಮತ್ತು ೮.೧೨.೨೦೨೨ ರಂದು) ಆಯುಷ ಹೋಮವನ್ನು ಮಾಡಲಾಯಿತು. ಈ ಹೋಮಕ್ಕೆ ಯಜ್ಞಸ್ಥಳದಲ್ಲಿ ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆಯವರ ಆಧ್ಯಾತ್ಮಿಕ ಉತ್ತರಾಧಿಕಾರಿ ಶ್ರೀಸತ್‌ಶಕ್ತಿ (ಸೌ.) ಬಿಂದಾ ನೀಲೇಶ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಮುಕುಲ ಗಾಡಗೀಳ ಇವರ ವಂದನೀಯ ಉಪಸ್ಥಿತಿ ಲಭಿಸಿತು. ಹೋಮದ ರಚನೆಯಲ್ಲಿನ ಘಟಕಗಳು, ಪುರೋಹಿತರು ಮತ್ತು ಉಪಸ್ಥಿತ ಸದ್ಗುರುದ್ವಯರು, ಇವರೆಲ್ಲರ ಮೇಲೆ ಆಯುಷ ಹೋಮದಿಂದಾಗುವ ಪರಿಣಾಮವನ್ನು ವೈಜ್ಞಾನಿಕವಾಗಿ ಅಧ್ಯಯನ ಮಾಡಲಾಯಿತು. ಈ ಪರೀಕ್ಷಣೆಗಾಗಿ ‘ಯು.ಎ.ಎಸ್. (ಯುನಿವರ್ಸಲ್ ಔರಾ ಸ್ಕ್ಯಾನರ್) ಈ ಉಪಕರಣವನ್ನು ಬಳಸಲಾಯಿತು.

ಶ್ರೀಸತ್ ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀ ಚಿತ್ ಶಕ್ತಿ (ಸೌ.) ಅಂಜಲಿ ಗಾಡಗಿಳ

ಪರೀಕ್ಷಣೆಯಲ್ಲಿನ ನಿರೀಕ್ಷಣೆಗಳ ವಿವೇಚನೆ

೧ ಅ. ಆಯುಷ ಹೋಮದ ನಂತರ ರಚನೆಯಲ್ಲಿನ ಘಟಕಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಗಮನಾರ್ಹ ಹೆಚ್ಚಳ ವಾಗುವುದು : ಆಯುಷ ಹೋಮಕ್ಕಾಗಿ ರಚಿಸಲಾದ ಭಗವಾನ ಶಿವನ ಚಿತ್ರ, ಪಾರ್ವತಿ ಕಲಶ, ಶಿವ ಕಲಶ ಮತ್ತು ಸಚ್ಚಿದಾನಂದ ಪರಬ್ರಹ್ಮ ಡಾ. ಆಠವಲೆ ಯವರ ಛಾಯಾಚಿತ್ರಗಳನ್ನು ಹೋಮಕ್ಕೂ ಮೊದಲು ಮತ್ತು ೮.೧೨.೨೦೨೨ ರಂದು ಹೋಮದ ನಂತರ ಪರೀಕ್ಷಣೆಯನ್ನು ಮಾಡಲಾಯಿತು. ಹೋಮದ ನಂತರ ಇವೆಲ್ಲವುಗಳಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಅನೇಕ ಪಟ್ಟು ಹೆಚ್ಚಳವಾದುದು ಕಂಡು ಬಂದಿತು.

೧ ಆ. ಆಯುಷ ಹೋಮದಲ್ಲಿ ಆಹುತಿಯನ್ನು ನೀಡಲು ಬಳಸಲಾದ ಚೂರ್ಣದಲ್ಲಿ ಹೋಮದ ನಂತರ ನಕಾರಾತ್ಮಕ ಊರ್ಜೆಯು ಕಂಡು ಬರುವುದು ಮತ್ತು ಸಕಾರಾತ್ಮಕ ಊರ್ಜೆ ಕಡಿಮೆಯಾಗುವುದು : ಆಯುಷ ಹೋಮದಲ್ಲಿ ಆಹುತಿಯನ್ನು ನೀಡಲು ಬಳಸಲಾದ ಕರುಂಗಾಳಿ ಮತ್ತು ಮೂಲಿಕಾಚೂರ್ಣಗಳಲ್ಲಿ ಹೋಮದ ಮೊದಲು (೫.೧೨.೨೦೨೨ ರಂದು) ಮೂಲದಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ; ಸಕಾರಾತ್ಮಕ ಊರ್ಜೆ ಇತ್ತು. ಹೋಮದ ನಂತರ (೮.೧೨.೨೦೨೨ ರಂದು) ಮಾತ್ರ ಅವುಗಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು ಮತ್ತು ಸಕಾರಾತ್ಮಕ ಊರ್ಜೆ ಕಡಿಮೆಯಾಯಿತು.

ಕು. ಮಧುರಾ ಭೋಸಲೆ

೧ ಇ. ಯಜ್ಞಕುಂಡದಿಂದ ಹೊರಡುವ ಧೂಮದಲ್ಲಿನ ಸಕಾರಾತ್ಮಕ ಊರ್ಜೆಯಲ್ಲಿ ಉತ್ತರೋತ್ತರ ಹೆಚ್ಚಳವಾಗುವುದು : ಅಯುಷ ಹೋಮದಲ್ಲಿ ವಿವಿಧ ಘಟಕಗಳ ಆಹುತಿ ನೀಡಿದ ನಂತರ ಯಜ್ಞಕುಂಡದಿಂದ ಹೊರಡುವ ಧೂಮದಲ್ಲಿ ನಕಾರಾತ್ಮಕ ಊರ್ಜೆ ಇರಲಿಲ್ಲ; ಸಕಾರಾತ್ಮಕ ಊರ್ಜೆ ಕಂಡು ಬಂದಿತು. ಪ್ರತಿಯೊಂದು ಆಹುತಿಯ ನಂತರ ಧೂಮದಲ್ಲಿನ ಸಕಾರಾತ್ಮಕ ಊರ್ಜೆಯು ಉತ್ತರೋತ್ತರ ಹೆಚ್ಚಾಗುತ್ತಾ ಹೋಯಿತು.

೧ ಇ ೧. ಗುಗ್ಗಳ ಧೂಪದ ಹೊಗೆ, ಕರುಂಗಾಳಿ-ಮೂಲಿಕಾ ಚೂರ್ಣದ ಹೊಗೆ, ಮಾರವಾ ಅತ್ತರನ ಹೊಗೆ, ಮಹಾಮೃತ್ಯುಂಜಯ ಹವನದ ಹೊಗೆ ಮತ್ತು ಮಹಾಪೂರ್ಣಾಹುತಿಯ ಹೊಗೆ ಇವುಗಳಲ್ಲಿ ಉತ್ತರೋತ್ತರ ಹೆಚ್ಚಿನ ಪ್ರಮಾಣದಲ್ಲಿ ಸಕಾರಾತ್ಮಕ ಊರ್ಜೆಯು ಕಂಡು ಬರುವ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ ! : ಯಜ್ಞದಲ್ಲಿ ವಿವಿಧ ಪ್ರಕಾರಗಳ ಹವಿಸ್ಸುಗಳ (ಹವನೀಯ ದ್ರವ್ಯಗಳ ಅಥವಾ ಘಟಕಗಳ) ಆಹುತಿಯನ್ನು ನೀಡಿದ ನಂತರ ಅದರಿಂದ ಉತ್ಪನ್ನವಾದ ಯಜ್ಞದ ಧೂಮದಲ್ಲಿ ವಿವಿಧ ದೇವತೆಗಳ ವಾಯುಮಯತತ್ತ್ವಲಹರಿಗಳು ಕಾರ್ಯನಿರತವಾಗುತ್ತವೆ. ಆದುದರಿಂದ ‘ವಿವಿಧ ಘಟಕಗಳಿಂದ ಉತ್ಪನ್ನವಾದ ಯಜ್ಞದ ಧೂಮದಿಂದ ಆಧ್ಯಾತ್ಮಿಕ ಸ್ತರದಲ್ಲಿ ವಿವಿಧ ರೀತಿಯಲ್ಲಿ ಪರಿಣಾಮವಾಗಿ ಅವುಗಳಲ್ಲಿ ಸಕಾರಾತ್ಮಕ ಊರ್ಜೆ ಉತ್ತರೋತ್ತರ ಹೆಚ್ಚುತ್ತಾ ಹೋಯಿತು ಮತ್ತು ಅದರಿಂದ ಸಮಷ್ಟಿಗೆ ಬಹಳ ಲಾಭವಾಯಿತು, ಎಂಬುದು ಮುಂದಿನ (೯ ನೇ) ಪುಟದಲ್ಲಿ ನೀಡಿರುವ ಕೋಷ್ಟಕದಿಂದ ನಮ್ಮ ಗಮನಕ್ಕೆ ಬರುತ್ತದೆ.

೧ ಈ. ಆಯುಷ ಹೋಮಕ್ಕೆ ಉಪಸ್ಥಿತರಿದ್ದ ಪುರೋಹಿತರು ಮತ್ತು ಸದ್ಗುರುದ್ವಯರಲ್ಲಿನ ಸಕಾರಾತ್ಮಕ ಊರ್ಜೆ ಹೋಮದ ನಂತರ ಬಹಳ ಹೆಚ್ಚಾಗುವುದು : ಆಯುಷ ಹೋಮಕ್ಕೆ ಉಪಸ್ಥಿತರಿದ್ದ ಪುರೋಹಿತರಲ್ಲಿನ ನಕಾರಾತ್ಮಕ ಊರ್ಜೆಯು ಹೋಮದ ನಂತರ ಬಹಳ ಕಡಿಮೆಯಾಯಿತು ಮತ್ತು ಅವರಲ್ಲಿನ ಸಕಾರಾತ್ಮಕ ಊರ್ಜೆ ಬಹಳ ಹೆಚ್ಚಾಯಿತು. ಹೋಮಕ್ಕೆ ಮೊದಲೇ ಸದ್ಗುರುದ್ವಯರಲ್ಲಿ (ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ ಮತ್ತು ಶ್ರೀಚಿತ್‌ಶಕ್ತಿ (ಸೌ.) ಅಂಜಲಿ ಗಾಡಗೀಳ ಇವರಲ್ಲಿ) ಬಹಳ ಸಕಾರಾತ್ಮಕ ಊರ್ಜೆ ಇತ್ತು ಮತ್ತು ಹೋಮದ ನಂತರ ಅದರಲ್ಲಿ ಬಹಳ ಹೆಚ್ಚಳವಾಯಿತು.

೨. ಪರೀಕ್ಷಣೆಯ ನಿರೀಕ್ಷಣೆಗಳ ಅಧ್ಯಾತ್ಮಶಾಸ್ತ್ರೀಯ ವಿಶ್ಲೇಷಣೆ

೨ ಅ. ಆಯುಷ ಹೋಮದಲ್ಲಿ ಆಹುತಿಯನ್ನು ನೀಡಲು ಬಳಸಲಾದ ಚೂರ್ಣಗಳಲ್ಲಿ ಹೋಮದ ನಂತರ ನಕಾರಾತ್ಮಕ ಊರ್ಜೆಯು ಕಂಡು ಬರುವ ಕಾರಣ : ಕರುಂಗಾಳಿ ಚೂರ್ಣವು ವಾತಾವರಣದಲ್ಲಿನ ನಕಾರಾತ್ಮಕತೆಯನ್ನು ಹೀರಿಕೊಳ್ಳುತ್ತದೆ ಮತ್ತು ಮೂಲಿಕಾ ಚೂರ್ಣವು ವಾತಾವರಣವನ್ನು ನಿರ್ಜಂತುಕಿಕರಣ ಮಾಡುತ್ತದೆ. ಆಯುಷ ಹೋಮದ ಸಮಯದಲ್ಲಿ ಕರುಂಗಾಳಿ ಮತ್ತು ಮೂಲಿಕಾ ಚೂರ್ಣಗಳು ವಾತಾವರಣದಲ್ಲಿನ ನಕಾರಾತ್ಮಕ ಊರ್ಜೆಯನ್ನು ಹೀರಿಕೊಂಡವು ಮತ್ತು ಇದು ವೈಜ್ಞಾನಿಕ ಪರೀಕ್ಷಣೆಯಿಂದ ಕಂಡು ಬಂದಿತು. ಈ ಎರಡೂ ಚೂರ್ಣಗಳ ಆಹುತಿಯನ್ನು ನೀಡಿದ ನಂತರ ಯಜ್ಞಕುಂಡದಿಂದ ಹೊರಗೆ ಬೀಳುವ ಧೂಮದಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು. ಇದರ ಕಾರಣವೆಂದರೆ ಅಗ್ನಿಸಂಸ್ಕಾರವಾದುದರಿಂದ ಈ ಎರಡೂ ಚೂರ್ಣಗಳು ಹೀರಿಕೊಂಡ ವಾತಾವರಣದಲ್ಲಿನ ನಕಾರಾತ್ಮಕತೆಯು ನಾಶವಾಯಿತು ಮತ್ತು ಪರಿಣಾಮಸ್ವರೂಪ ಯಜ್ಞಕುಂಡದಿಂದ ಹೊರಗೆ ಬರುವ ಹೊಗೆಯಲ್ಲಿ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

೨ ಅ ೧. ಹೋಮದ ನಂತರ ಕರುಂಗಾಳಿ ಮತ್ತು ಮೂಲಿಕಾ ಈ ಚೂರ್ಣಗಳಲ್ಲಿ ನಕಾರಾತ್ಮಕ ಊರ್ಜೆ ಕಂಡುಬರುವ ಹಿಂದಿನ ಆಧ್ಯಾತ್ಮಿಕ ಕಾರ್ಯಕಾರಣಭಾವ ! : ಕರುಂಗಾಳಿ ಚೂರ್ಣದಲ್ಲಿ ದೇವಿತತ್ತ್ವ ಮತ್ತು ಮೂಲಿಕಾಚೂರ್ಣದಲ್ಲಿ ದತ್ತತತ್ತ್ವಕಾರ್ಯನಿರತ ವಾಗಿರುತ್ತದೆ. ಸನಾತನದ ಸಾಧಕರು ಸಮಷ್ಟಿ ಸಾಧನೆಯನ್ನು ಮಾಡಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡುವ ದೈವೀ ಕಾರ್ಯದಲ್ಲಿ ಭಾಗವಹಿಸುತ್ತಾರೆ ಮತ್ತು ಅವರು ವ್ಯಷ್ಟಿ ಸಾಧನೆಯನ್ನು ಮಾಡಿ ಈಶ್ವರನ ಕೃಪೆಯನ್ನು ಸಂಪಾದಿಸುತ್ತಾರೆ. ಆಯುಷ ಹೋಮದ ಸಮಯದಲ್ಲಿ ಸನಾತನದ ಸಾಧಕರ ಮೇಲೆ ಸಮಷ್ಟಿ ಸ್ತರದಲ್ಲಿ ಸೂಕ್ಷ್ಮದಲ್ಲಿ ಆಕ್ರಮಣಗಳನ್ನು ಮಾಡುವ ದೊಡ್ಡ ಕೆಟ್ಟ ಶಕ್ತಿಗಳು ಮಾಡಿದ ಸೂಕ್ಷ್ಮದಲ್ಲಿನ ಆಕ್ರಮಣಗಳು ಪಾರ್ವತಿದೇವಿಯ ಕೃಪೆಯಿಂದ ಕರುಂಗಾಳಿ ಚೂರ್ಣದಲ್ಲಿ ಆಕರ್ಷಿತವಾಯಿತು, ಹಾಗೆಯೇ ಸನಾತನದ ಸಾಧಕರಿಗೆ ವ್ಯಷ್ಟಿ ಸ್ತರದಲ್ಲಾಗುವ ಅತೃಪ್ತ ಪಿತೃಗಳ ತೊಂದರೆ ದತ್ತಕೃಪೆಯಿಂದ ಮೂಲಿಕಾ ಚೂರ್ಣದಲ್ಲಿ ಹೀರಿಕೊಳ್ಳಲಾಯಿತು. ಆದುದರಿಂದ ಸಾಧಕರಿಗಾಗುವ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಸ್ತರಗಳಲ್ಲಿನ ತೊಂದರೆ ಶೇ. ೩೫ ರಷ್ಟು ಕಡಿಮೆಯಾಯಿತು. ಮೇಲಿನ ಪ್ರಕ್ರಿಯೆ ಸೂಕ್ಷ್ಮ ಸ್ತರದಲ್ಲಿ ಘಟಿಸಿದುದರಿಂದ ಹೋಮದ ನಂತರ ಕರುಂಗಾಳಿ ಮತ್ತು ಮೂಲಿಕಾ ಈ ಚೂರ್ಣಗಳಲ್ಲಿ ನಕಾರಾತ್ಮಕ ಊರ್ಜೆ ಕಂಡು ಬಂದಿತು.

– ಸುಶ್ರೀ (ಕು.) ಮಧುರಾ ಭೋಸಲೆ (೨೬.೧೦.೨೦೨೩, ಸಾಯಂ. ೫.೪೦)

ಶ್ರೀ. ಗಿರೀಶ ಪಂಡಿತ ಪಾಟೀಲ

೨ ಆ. ಆಯುಷ ಹೋಮಕ್ಕೆ ಉಪಸ್ಥಿತರಿರುವ ಪುರೋಹಿತ ಮತ್ತು ಸದ್ಗುರುದ್ವಯರು ಹೋಮದಲ್ಲಿನ ಚೈತನ್ಯವನ್ನು ಗ್ರಹಣ ಮಾಡಿದುದರಿಂದ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಗುವುದು : ಆಯುಷ ಹೋಮವು ಚೈತನ್ಯದಾಯಕ ಊರ್ಜೆಯನ್ನು ಪ್ರದಾನಿಸುತ್ತದೆ. ಆಯುಷ ಹೋಮದ ಸಮಯದಲ್ಲಿ ಯಜ್ಞ ಕುಂಡದಿಂದ ಹೊರಡುವ ಸೂಕ್ಷ್ಮ ಊರ್ಜೆ ಮನುಷ್ಯನ ಚೇತನಾ ಶಕ್ತಿಯನ್ನು ಶುದ್ಧ ಮತ್ತು ಸಶಕ್ತ ಮಾಡುತ್ತದೆ. ಆಯುಷ ಹೋಮಕ್ಕೆ ಉಪಸ್ಥಿತ ಪುರೋಹಿತ ಮತ್ತು ಸದ್ಗುರುದ್ವಯರು ಹೋಮದಲ್ಲಿನ ಚೈತನ್ಯವನ್ನು ಗ್ರಹಣ ಮಾಡಿದುದರಿಂದ ಅವರಲ್ಲಿನ ಸಕಾರಾತ್ಮಕ ಊರ್ಜೆ ಹೆಚ್ಚಾಯಿತು.

– ಶ್ರೀ. ಗಿರೀಶ ಪಂಡಿತ ಪಾಟೀಲ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ಗೋವಾ (೧೩.೧೦.೨೦೨೩)

ವಿ-ಅಂಚೆ : [email protected]