ಇಂದು ‘ಸೂರ್ಯನಮಸ್ಕಾರದಿನ’ವಾಗಿದೆ. ಈ ನಿಮಿತ್ತ…
ಭಾರತೀಯ ಸಂಸ್ಕೃತಿಯಲ್ಲಿ ಆರೋಗ್ಯಕ್ಕಾಗಿ ಸೂರ್ಯನ ಉಪಾಸನೆ ಮಾಡಲಾಗುತ್ತದೆ. ಸೂರ್ಯನಮಸ್ಕಾರದ ಅಭ್ಯಾಸದಿಂದ ಆರೋಗ್ಯವಂತ ದೇಹ, ನಿರ್ಮಲ ಮನಸ್ಸು ಹಾಗೂ ಎಲ್ಲಾರೀತಿಯ ಆರೋಗ್ಯ ಪ್ರಾಪ್ತಿ ಆಗುತ್ತದೆ. ಸಣ್ಣವರಿಂದ ಹಿಡಿದು ವಯಸ್ಸಾದವರು ಎಲ್ಲರೂ ಸೂರ್ಯನಮಸ್ಕಾರದ ಅಭ್ಯಾಸ ಮಾಡಬಹುದು. ಸೂರ್ಯನಮಸ್ಕಾರವು ಬೀಜಮಂತ್ರವಾಗಿರುವುದರ ಜೊತೆಗೆ ಸೂರ್ಯದೇವತೆಯ ವಿವಿಧ ನಾಮಗಳ ಉಚ್ಚಾರಣೆ ಮಾಡುವುದರಿಂದ ಉಪಾಸನೆ ಮತ್ತು ವ್ಯಾಯಾಮ ಹೀಗೆ ಎರಡೂ ರೀತಿಯಲ್ಲಿ ನಮಗೆ ಲಾಭವಾಗುತ್ತದೆ. ಸೂರ್ಯನಮಸ್ಕಾರದಲ್ಲಿ ಆಸನ, ಪ್ರಾಣಾಯಾಮ, ಷಟಚಕ್ರ ಜಾಗರಣ ಅದೇ ರೀತಿ ಮಂತ್ರೋಚ್ಚಾರವಾಗಿರುವ ಇದೊಂದು ರೀತಿಯ ಪರಿಪೂರ್ಣ ಯೋಗಸಾಧನೆಯೇ ಆಗಿದೆ – ವೈದ್ಯೆ (ಸೌ.) ಮುಕ್ತಾ ಲೊಟಲಿಕರ, ಪುಣೆ (14.2.2024)