ಸನಾತನ ಸಂಸ್ಥೆಗೆ ‘ಹಿಂದುತ್ವ ಕೆ ಆಧಾರಸ್ತಂಭ ಪ್ರಶಸ್ತಿ’ ನೀಡಿ ಗೌರವ !

ಡೆಹರಾಡೂನ್ (ಉತ್ತರಖಂಡ) ಇಲ್ಲಿ ‘ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ ವತಿಯಿಂದ ಹಿಂದುತ್ವದ ಕಾರ್ಯ ಮಾಡುವವರಿಗೆ ‘ಹಿಂದುತ್ವ ಕೆ ಆಧಾರಸ್ತಂಭ’ ಮತ್ತು ‘ದೇವಭೂಮಿ ರತ್ನ’ ಪ್ರಶಸ್ತಿ ಪ್ರದಾನ !

ಶ್ರೀ. ಅಭಯ ವರ್ತಕ ಇವರಿಗೆ ಪ್ರಶಸ್ತಿ ಪ್ರಧಾನ ಮಾಡುವಾಗ ಭಗತಸಿಂಹ ಕೋಷ್ಯಾರಿ

ಡೆಹರಾಡೂನ್ (ಉತ್ತರಾಖಂಡ), ಫೆಬ್ರುವರಿ ೧೫ (ವಾರ್ತೆ) – ‘ವೇದ ಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಅಧ್ಯಕ್ಷ ಮತ್ತು ಆಮಂತ್ರಕರು ಡಾ. ವೈದೇಹಿ ತಾಮ್ಹಣ ಇವರು ಡೆಹರಾಡೂನ್ ಇಲ್ಲಿಯ ಸಾಂಸ್ಕೃತಿಕ ವಿಭಾಗದ ಸಭಾಗೃಹದಲ್ಲಿ ‘ದೇವಭೂಮಿ ರತ್ನ’ ಪ್ರಶಸ್ತಿ ಸಮ್ಮೇಳನದ ಆಯೋಜನೆ ಮಾಡಿದ್ದರು. ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಉತ್ತರಖಂಡದ ಮಾಜಿ ಮುಖ್ಯಮಂತ್ರಿ ಹಾಗೂ ಮಹಾರಾಷ್ಟ್ರದ ಮಾಜಿ ರಾಜ್ಯಪಾಲ ಭಗತಸಿಂಹ ಕೋಷ್ಯಾರಿ, ರಾಜ್ಯದ ಸಚಿವ ಸತಪಾಲ ಮಹಾರಾಜ್, ರಾಜ್ಯದ ಮಾಜಿ ಮುಖ್ಯಮಂತ್ರಿ ತೀರಥ ಸಿಂಹ ರಾವತ, ಶ್ರೀ ಹರಿ ಚೈತನ್ಯ ಪುರಿ ಮಹಾರಾಜ್, ಡಾ. ಉಮಾಕಾನಂದ ಸರಸ್ವತಿ ಮಹಾರಾಜ ಮತ್ತು ಹಿಂದೂ ಜನಜಾಗೃತಿ ಸಮಿತಿಯ ರಾಷ್ಟ್ರೀಯ ಮಾರ್ಗದರ್ಶಕ ಸದ್ಗುರು ಡಾ. ಚಾರದತ್ತ ಪಿಂಗಳೆ ಉಪಸ್ಥಿತರಿದ್ದರು. ಈ ಸಮಯದಲ್ಲಿ ‘ಹಿಂದುತ್ವ ಕೆ ಆಧಾರಸ್ತಂಭ’ ಎಂದು ಕಾರ್ಯ ಮಾಡುವವರಿಗೆ ಮತ್ತು ವಿವಿಧ ಕ್ಷೇತ್ರದಲ್ಲಿ ಶ್ಲಾಘನೀಯ ಕಾರ್ಯ ಮಾಡುವವರಿಗೆ ‘ದೇವಭೂಮಿ ರತ್ನ’ ಪ್ರಶಸ್ತಿ ಪ್ರದಾನ ಮಾಡಿದರು. ಸನಾತನ ಸಂಸ್ಥೆಗೆ ನೀಡಿರುವ ‘ಹಿಂದುತ್ವ ಕೆ ಆಧಾರಸ್ತಂಭ’ ಈ ಪ್ರಶಸ್ತಿ ಸಂಸ್ಥೆಯ ಧರ್ಮ ಪ್ರಚಾರಕ ಶ್ರೀ. ಅಭಯ ವರ್ತಕ ಇವರು ಸ್ವೀಕರಿಸಿದರು. ಈ ಕಾರ್ಯಕ್ರಮದಲ್ಲಿ ಡಾ. ವೈದೇಹಿ ತಾಮ್ಹಣ ಇವರು ಬರೆದಿರುವ ‘೨೭ ಸೋಲ್ಸ್ : ಸ್ಟೈಲ್ ಚಿಲ್ಲಿಂಗ ಸ್ಕೇರಿ ಸ್ಟೋರೀಸ್’ ಈ ಇಂಗ್ಲೀಷ್ ಭಾಷೆಯಲ್ಲಿನ ಪುಸ್ತಕದ ಪ್ರಕಾಶನ ಉಪಸ್ಥಿತ ಗಣ್ಯರಿಂದ ನಡೆಯಿತು.

‘ಹಿಂದುತ್ವ ಕೆ ಆಧಾರಸ್ತಂಭ’ ಪ್ರಶಸ್ತಿ ಪಡೆದಿರುವ ವ್ಯಕ್ತಿ ಮತ್ತು ಸಂಸ್ಥೆಯ ಪಟ್ಟಿ

೧. ಸ್ವಾಮಿ ಶ್ರೀ ಹರಿ ಚೈತನ್ಯ ಮಹಾರಾಜ
೨. ಶ್ರೀ. ಗೋಪಾಳ ಶೆಟ್ಟಿ ಶಾಸಕ, ಭಾಜಪ, ಮುಂಬಯಿ
೩. ಗೋಲಂದೆ ಮಹಾರಾಜ
೪. ಉದ್ಬೋದ ಮಹಾರಾಜ ಪೈಠಣಕರ
೫. ಸನಾತನ ಸಂಸ್ಥೆ
೬. ಕಳೆದ ೧೦೦ ವರ್ಷ ಹಿಂದೂ ಧರ್ಮಗ್ರಂಥಗಳ ಪ್ರಕಾಶನಗೊಳಿಸುವ ‘ಗೀತಾ ಪ್ರೆಸ್’
೭. ಮತಾಂತರ ವಿರೋಧಿ ಕಾರ್ಯ ಮಾಡುವ ‘ಕೂರ್ಮಾಗ್ರಾಮ ಆಶ್ರಮ’ದ ಪ್ರತಿನಿಧಿ
೮. ಶ್ರೀ. ಪ್ರದೋಷ ಚೌವ್ಹಾಣಕೆ, ಸುದರ್ಶನ
೯. ಶ್ರೀ. ಅತುಲ ಜೆಸ್ವಾನಿ

‘ದೇವಭೂಮಿ ರತ್ನ’ ಪ್ರಶಸ್ತಿ ಪಡೆದಿರುವ ವ್ಯಕ್ತಿ ಮತ್ತು ಸಂಸ್ಥೆಯ ಹೆಸರು

೧. ಸತಪಾಲ ಮಹಾರಾಜ
೨. ‘ಪದ್ಮಭೂಷಣ’ ಶ್ರೀ ಚಂಡಿ ಪ್ರಸಾದ ಭಟ್ಟ
೩. ಸ್ವಾಮಿ ದಿನೇಶಾನಂದ ಭಾರತಿ
೪. ಮಧು ಭಟ್ಟ
೫. ಕುಸುಮ ಖಂಡವಾಲ
೬. ಊರ್ಮಿ ನೇಗಿ
೭. ಡಾ. ಆಶೀಷ ಚೌಹಾನ, ಐ.ಎ.ಎಸ್.
೮. ಕರ್ನಲ್ ಡಿ.ಎಸ್. ಬರ್ತವಾಲ
೯. ಡಾ. ಯಶವೀರ ಸಿಂಹ
೧೦. ಲೈಫ್ಟನಂಟ್ ಜನರಲ್ ಜಯವೀರ ಸಿಂಹ ನೇಗಿ
೧೧. ‘ಸಾಧನಾ’ ಟಿವಿ

ಈ ಪ್ರಶಸ್ತಿ ನೀಡುವುದರ ಉದ್ದೇಶ ಸಮಾಜ ಮತ್ತು ಸಂಸ್ಕೃತಿಗಾಗಿ ಅಪಾರ ಕೊಡುಗೆ ನೀಡಿರುವವರಿಗೆ ಗೌರವ ನೀಡುವುದು ! – ಡಾ. ವೈದೇಹಿ ತಾಮ್ಹಣ

ಡಾ. ವೈದೇಹಿ ತಾಮ್ಹಣ ಇವರು, ಈ ಪ್ರಶಸ್ತಿ ಯಾರು ನಮ್ಮ ಸಮಾಜ ಮತ್ತು ಸಂಸ್ಕೃತಿಗಾಗಿ ಅಪಾರ ಕೊಡುಗೆ ನೀಡಿದ್ದಾರೆ. ಅವರನ್ನು ಗೌರವಿಸುವುದು ಇದರ ಹಿಂದಿನ ಉದ್ದೇಶವಾಗಿದೆ. ಇದು ದೇವಭೂಮಿ ಉತ್ತರಖಂಡದ ಪರಂಪರೆಯ ಮತ್ತು ಹಿಂದುತ್ವ ರಕ್ಷಣೆ ಮಾಡುವವರಿಗೆ ಪ್ರಶಂಸೆ ಆಗಿದೆ, ಎಂದು ಹೇಳಿದರು.

ವೇದ ಕಲಿಯುವುದಕ್ಕಾಗಿ ಅನೇಕ ಸಂಸ್ಥೆಗಳ ಅವಶ್ಯಕತೆ !- ಭಗತ ಸಿಂಹ ಕೊಷ್ಯಾರಿ

ಉತ್ತರಖಂಡದಲ್ಲಿ ಇಷ್ಟು ದೊಡ್ಡ ಪ್ರಶಸ್ತಿ ಸಮಾರಂಭದ ಆಯೋಜನೆ ಮಾಡಿರುವ ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್ ಮತ್ತು ಡಾ. ವೈದೇಹಿ ತಾಮ್ಹಣ ಇವರಿಗೆ ನಾನು ಆಭಾರ ಸಲ್ಲಿಸುತ್ತೇನೆ. ನಾನು ಅವರ ಪ್ರಯತ್ನವನ್ನು ಶ್ಲಾಘಿಸುತ್ತೇನೆ. ದೇವಭೂಮಿ ರತ್ನ ಪ್ರಶಸ್ತಿ ದೊರೆತಿರುವ ಬೇರೆ ಬೇರೆ ರಾಜ್ಯಗಳದವರಾಗಿದ್ದರು ಅವರನ್ನು ಆಯ್ಕೆ ಮಾಡುವುದು ಮತ್ತು ಅವರನ್ನು ಗೌರವಿಸುವುದು, ಇದಕ್ಕಾಗಿ ಯೋಜನಾಬದ್ಧ ಸಂಶೋಧನೆಯ ಅವಶ್ಯಕತೆ ಇರುತ್ತದೆ. ನನ್ನ ಅಪೇಕ್ಷೆ ಏನೆಂದರೆ ವೇದ ಕಲಿಯುವುದಕ್ಕಾಗಿ ಇಂತಹ ಇನ್ನಷ್ಟು ಸಂಸ್ಥೆಗಳಿರುವುದು ಅವಶ್ಯಕವಾಗಿದೆ ಎಂದು ಹೇಳಿದರು.

‘ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್’ನ ಕಾರ್ಯ ಸ್ತುತ್ಯಾರ್ಹವಾಗಿದೆ ! – ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತ್ಪಾಲ ಮಹಾರಾಜ

ಉತ್ತರಾಖಂಡದ ಪ್ರವಾಸೋದ್ಯಮ ಸಚಿವ ಸತಪಾಲ ಮಹಾರಾಜ ಇವರು ಮಾತನಾಡಿ, ವೇದಶಾಸ್ತ್ರ ರಿಸರ್ಚ್ ಅಂಡ್ ಫೌಂಡೇಶನ್ ವೇದದ ಶಿಕ್ಷಣಕ್ಕೆ ಸಮರ್ಪಿತವಾಗಿದೆ. ವೇದಗಳ ಜ್ಞಾನ ನಿಧಾನವಾಗಿ ಮರೆಯಾಗುತ್ತಿರುವಾಗ ಅದನ್ನು ರಕ್ಷಿಸುವುದು ಮತ್ತು ಸಂವರ್ಧನೆಗಾಗಿ ಉತ್ಕೃಷ್ಟ ಕಾರ್ಯ ಮಾಡುತ್ತಿದೆ ಈ ಸಂಸ್ಥೆಯ ಕಾರ್ಯ ಸ್ತುತ್ಯಾರ್ಹವಾಗಿದೆ ಎಂದು ಹೇಳಿದರು.