ಬ್ರಿಟನ್‌ನ ಯುನಿವರ್ಸಿಟಿ ಆಫ್ ಪೋರ್ಟ್ಸ್‌ಮೌತ್ ಗೆ ದಂಡ !
ಲಂಡನ್ (ಬ್ರಿಟನ್) – ಪೋರ್ಟ್ಸಮೌತ್ ವಿಶ್ವವಿದ್ಯಾಲಯವು ಭಾರತೀಯ ಮೂಲದ ಪ್ರಾಧ್ಯಾಪಕಿ ಡಾ. ಕಾಜಲ ಶರ್ಮಾ ಇವರಿಗೆ ವರ್ಣದ್ವೇಷದಿಂದಾಗಿ ಎರಡನೆಯ ಬಾರಿ ನೇಮಕಾತಿಯನ್ನು ನಿರಾಕರಿಸಿತು. ಈ ಪ್ರಕರಣದಲ್ಲಿ ತಪ್ಪಿತಸ್ಥರೆಂದು ಸಾಬೀತಾದನಂತರ ಪೋರ್ಟ್ಸ್‌ಮೌತ್ ವಿಶ್ವವಿದ್ಯಾಲಯಕ್ಕೆ ಸುಮಾರು ೪ ಕೋಟಿ ೬೯ ಲಕ್ಷ ರೂಪಾಯಿಗಳ ನಷ್ಟ ಕೊಡುವಂತೆ ಬ್ರಿಟನ್‌ನಿನ ಸೌದಮ್ಪಾಟನ್ ಲೇಬರ್ ಕೋರ್ಟ್ ಆದೇಶ ನೀಡಿತು. ಇದಲ್ಲದೆ ಪಿಂಚಣಿ ವೇತನವನ್ನು ಪರಿಗಣಿಸಿ, ಹೆಚ್ಚುವರಿಯಾಗಿ ೩ ಕೋಟಿ ೧೨ ಲಕ್ಷ ಒಟ್ಟು ೭ ಕೋಟಿ ೮೧ ಲಕ್ಷ ರೂಪಾಯಿಗಳು ಶರ್ಮಾರವರಿಗೆ ಪರಿಹಾರವಾಗಿ ಸಿಗುವುದು. ಈ ವಿಶ್ವವಿದ್ಯಾಲಯದಲ್ಲಿ ಜನಾಂಗೀಯ ಅಲ್ಪಸಂಖ್ಯಾತ ನೌಕರರ ಮೀಸಲಾತಿ ಗುಂಪಿನಲ್ಲಿ ಡಾ. ಶರ್ಮಾರವರಿಗೆ ನೇಮಕಾತಿ ನಿರಾಕರಿಸಲಾಗಿದ್ದು ಅವರು ಡಿಸೆಂಬರ್ ೨೦೨೨ ರಲ್ಲಿ ಲೇಬರ್ ಕೋರ್ಟ್‌ನಲ್ಲಿ ಈ ನಿರ್ಧಾರವನ್ನು ಪ್ರಶ್ನಿಸಿದ್ದರು.ಆ ಸಂದರ್ಭದಲ್ಲಿ ಅವರು ಪ್ರಕರಣವನ್ನು ಗೆದ್ದಿದ್ದರು. ಆದರೂ ಪೋರ್ಟ್ಸಮೌತ್ ವಿಶ್ವವಿದ್ಯಾಲಯವು ಅವರನ್ನು ವರ್ಣಭೇದ ನೀತಿಯಿಂದ ನಡೆಸಿಕೊಂಡಿತು.
ಈ ವಿಶ್ವವಿದ್ಯಾಲಯದಲ್ಲಿ ೧೨ ಸ್ಥಾನಗಳಲ್ಲಿ ೧೧ ಸ್ಥಾನಗಳಿಗೆ ಬಿಳಿಯರನ್ನು ನೇಮಕ ಮಾಡಲಾಯಿತು. ಆದರೆ ಜನಾಂಗೀಯ ಅಲ್ಪಸಂಖ್ಯಾತರ ಜಾಗದಲ್ಲಿ ಡಾ. ಶರ್ಮಾರವರಿಗೆ ಎರಡನೆಯಬಾರಿಗೆ ನಿರಾಕರಿಸಲಾಯಿತು. ಅವರ ತಂದೆಯ ಮರಣದ ನಂತರ ಅವರ ಮೇಲಾಧಿಕಾರಿಗಳು ಅವರನ್ನು ಭಾರತಕ್ಕೆ ಹೋಗಲು ಅನುಮತಿ ಕೊಡಲಿಲ್ಲ. ಅವರನ್ನು ೫ ವರ್ಷಗಳ ಕಾಲ ಕೀಳಾಗಿ ನಡೆಸಿಕೊಂಡರು.
ಸಂಪಾದಕೀಯ ನಿಲುವುಬ್ರಿಟನ್ನಲ್ಲಿ ವರ್ಣದ್ವೇಷ ಇನ್ನೂ ನಡೆಯುತ್ತಿದ್ದರೆ, ಇಡೀ ವಿಶ್ವವೇ ಬ್ರಿಟನ್ ಮೇಲೆ ಬಹಿಷ್ಕಾರ ಹಾಕುವುದು ಅವಶ್ಯಕವಾಗಿದೆ ! |