ಪರಾತ್ಪರ ಗುರು ಡಾ. ಆಠವಲೆಯವರು ಸಮಷ್ಟಿ ಸಾಧನೆಯ ಮಹತ್ವವನ್ನು ಮನಸ್ಸಿನಲ್ಲಿ ಬಿಂಬಿಸಿ ಧರ್ಮಪ್ರಚಾರದ ಸಮಷ್ಟಿ ಸೇವೆಯನ್ನು ಮಾಡಿಸಿಕೊಂಡಿರುವುದರಿಂದ ಆಧ್ಯಾತ್ಮಿಕ ಪ್ರಗತಿಯಾಗುವುದು

ಸದ್ಗುರು ರಾಜೇಂದ್ರ ಶಿಂದೆ

೨೫/೨೦ ರ ಸಂಚಿಕೆಯಲ್ಲಿ ಮುದ್ರಿಸಲಾದ ಸದ್ಗುರು ರಾಜೇಂದ್ರ ಶಿಂದೆಯವರ ಲೇಖನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ಆಯೋಜನಾಬದ್ಧ ಸೇವೆಯನ್ನು ತಪ್ಪುಗಳಾಗದಂತೆ ಮಾಡಲು ಕಲಿಸಿರುವುದರಿಂದ ಸೇವೆಯ ಫಲನಿಷ್ಪತ್ತಿ ಹೆಚ್ಚಾಗಿ ಸಾಧನೆಯಲ್ಲಿ ಪ್ರಗತಿ ಆಯಿತು’, ಎಂಬುದರ ಬಗ್ಗೆ ಓದಿದೆವು. ಇಂದು ‘ಸಮಷ್ಟಿ ಸಾಧನೆಯ ಮಹತ್ವವು ಮನಸ್ಸಿನಲ್ಲಿ ಮೂಡಿ ಸಮಷ್ಟಿ ಸೇವೆಯನ್ನು ಮಾಡಿದ್ದು ಮತ್ತು ಆ ಮಾಧ್ಯಮದಿಂದ ಆಧ್ಯಾತ್ಮಿಕ ಪ್ರಗತಿ ಹೇಗೆ ಆಯಿತು ?’, ಎಂಬುದರ ಮಾಹಿತಿಯನ್ನು ಈ ಲೇಖನದ ಮೂಲಕ ಇಲ್ಲಿ ಕೊಡುತ್ತಿದ್ದೇವೆ. (ಭಾಗ ೪)

೧. ಪರಾತ್ಪರ ಗುರು ಡಾ. ಆಠವಲೆಯವರು ಮನೆಮನೆಗಳಿಗೆ ಹೋಗಿ ಅಧ್ಯಾತ್ಮಪ್ರಚಾರ ಮಾಡಲು ಹೇಳಿದ ನಂತರ ‘ಸಮಾಜಕ್ಕೆ ಧರ್ಮಶಿಕ್ಷಣದ ಆವಶ್ಯಕತೆ ಬಹಳವಿದೆ’, ಎಂದು ಗಮನಕ್ಕೆ ಬರುವುದು

‘ಮನೆಮನೆಗೆ ಧರ್ಮಪ್ರಚಾರಕ್ಕಾಗಿ ಹೋಗಿರುವುದರಿಂದ ನನಗೆ ‘ಜನರಲ್ಲಿ ಧರ್ಮ ಮತ್ತು ಸಾಧನೆಯ ಬಗ್ಗೆ ತುಂಬಾ ಅಜ್ಞಾನವಿದೆ’, ಎಂದು ಗಮನಕ್ಕೆ ಬಂದಿತು. ಆ ಕುರಿತು ಅರಿವಾದ ಅಂಶಗಳನ್ನು ಮುಂದೆ ಕೊಡಲಾಗಿದೆ.

೧ ಅ. ದೇವರಕೋಣೆಯಲ್ಲಿ ದೇವರ ಜೋಡಣೆಯ ಬಗೆಗಿನ ಅಜ್ಞಾನ : ದೇವರುಧರ್ಮ (ಧಾರ್ಮಿಕ ಕೃತಿ)ಗಳನ್ನು ಮಾಡುವ ಅನೇಕ ಜನರು ಭೇಟಿಯಾದರು; ಆದರೆ ಆ ‘ಧಾರ್ಮಿಕ ಕೃತಿಗಳ ಹಿಂದಿನ ಧರ್ಮಶಾಸ್ತ್ರವೇನು ?’ ಅಥವಾ ‘ಧಾರ್ಮಿಕ ಕೃತಿಗಳನ್ನು ಯೋಗ್ಯ ರೀತಿಯಲ್ಲಿ ಹೇಗೆ ಮಾಡಬೇಕು ?’, ಎಂಬುದು ಹೆಚ್ಚಿನ ಜನರಿಗೆ ಗೊತ್ತಿಲ್ಲ, ಉದಾ. ಪ್ರತಿಯೊಬ್ಬರ ಮನೆಯಲ್ಲಿ ದೇವರಕೋಣೆಯಿತ್ತು. ಆದರೆ ‘ದೇವರಕೋಣೆಯಲ್ಲಿ ಯಾವ ದೇವರು ಇರಬೇಕು ?’, ದೇವರ ಕೋಣೆಯಲ್ಲಿ ದೇವತೆಗಳ ರಚನೆ ಹೇಗಿರಬೇಕು ?’ ಅಥವಾ ‘ಉಪವಾಸದ ಮಹತ್ವವೇನಿದೆ ?’, ಇವುಗಳ ಹಿಂದಿನ ಧರ್ಮಶಾಸ್ತ್ರವು ಯಾರಿಗೂ ಗೊತ್ತಿರಲಿಲ್ಲ.

೧ ಆ. ‘ಯಾವ ದೇವತೆಯ ಉಪಾಸನೆಯ ಆವಶ್ಯಕವಿದೆ ?’, ಎಂಬುದರ ಬಗ್ಗೆ ಅಜ್ಞಾನ : ಹೆಚ್ಚಿನ ಜನರು ತಮ್ಮ ಇಷ್ಟ ದೇವತೆಯ ಭಕ್ತಿಯನ್ನು ಮಾಡುತ್ತಾರೆ; ಆದರೆ ‘ಧರ್ಮಶಾಸ್ತ್ರಕ್ಕನುಸಾರ ಯಾವ ದೇವತೆಯ ಉಪಾಸನೆಯನ್ನು ಮಾಡಬೇಕು ?’, ಎಂಬುದರ ಬಗ್ಗೆ ಹಿಂದೂಗಳಲ್ಲಿ ಅಜ್ಞಾನವಿರುವುದು ಕಂಡುಬಂದಿತು.

೧ ಇ. ಪ್ರತಿದಿನ ಮಾಡುವ ಧಾರ್ಮಿಕ ಕೃತಿಗಳ ಹಿಂದಿನ ಶಾಸ್ತ್ರವು ತಿಳಿಯದಿರುವುದು : ಹಿಂದೂಗಳಿಗೆ ‘ಧರ್ಮಾಚರಣೆ ಎಂದರೇನು ?’, ಎಂಬುದೇ ಗೊತ್ತಿಲ್ಲ. ‘ನಮಸ್ಕಾರ ವನ್ನು ಹೇಗೆ ಮಾಡಬೇಕು ?’, ಹಣೆಗೆ ಕುಂಕುಮವನ್ನು ಏಕೆ ಹಚ್ಚಬೇಕು ?’, ಇಂತಹ ದಿನನಿತ್ಯ ಮಾಡುವ ಧಾರ್ಮಿಕ ವಿಷಯಗಳ ಬಗ್ಗೆಯೂ ಹಿಂದೂಗಳಲ್ಲಿ ತುಂಬಾ ಅಜ್ಞಾನವಿದೆ.

೧ ಈ. ಮನಸ್ಸಿನಿಂದ (ತನ್ನ ಇಚ್ಛೆಯಂತೆ) ಸಾಧನೆ ಮಾಡುವುದು : ಪ್ರತಿಯೊಬ್ಬ ಹಿಂದೂವಿಗೆ ‘ನಾನು ಯೋಗ್ಯ ಸಾಧನೆ ಮಾಡುತ್ತಿದ್ದೇನೆ’, ಎಂದು ಎನಿಸುತ್ತದೆ ಮತ್ತು ಅವನು ಅಧ್ಯಾತ್ಮದಲ್ಲಿನ ಎಲ್ಲ ಕೃತಿಗಳನ್ನು ತನ್ನ ಮನಸ್ಸಿನಿಂದಲೇ (ತನ್ನ ಇಚ್ಛೆಯಿಂದಲೇ) ಮಾಡುತ್ತಾನೆ.

೧ ಉ. ಜೀವನದಲ್ಲಿ ಸಾಧನೆಗಿರುವ ಮಹತ್ವವೇ ತಿಳಿಯದಿರುವುದು : ಬಹಳಷ್ಟು ಕುಟುಂಬದಲ್ಲಿ ಅಡಚಣೆಗಳಿದ್ದವು ಮತ್ತು ಅವರಲ್ಲಿ ನಿರಾಶೆ ಹಾಗೂ ಒತ್ತಡದ ಅರಿವಾಗುತ್ತಿತ್ತು; ಆದರೆ ‘ಅದಕ್ಕೆ ಪರಿಹಾರವೆಂದು ಸಾಧನೆಯನ್ನು ಮಾಡಬೇಕು’, ಎಂದು ಯಾರಿಗೂ ಗೊತ್ತಿರಲಿಲ್ಲ. ನೂರಾರು ಅಲ್ಲ, ಸಾವಿರಾರು ಜನರಲ್ಲ್ಲಿ ಒಬ್ಬನಿಗೂ ಜೀವನದಲ್ಲಿ ಸಾಧನೆಗಿರುವ ಮಹತ್ವವು ಗೊತ್ತಿರಲಿಲ್ಲ.

೧ ಊ. ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸೆ ಇಲ್ಲದಿರುವುದು : ‘ಸಾಧನೆಯಲ್ಲಿಯೂ ಮುಂದುಮುಂದಿನ ಹಂತವಿರುತ್ತದೆ’, ಇದು ಗೊತ್ತಿಲ್ಲದಿರುವುದರಿಂದ ‘ಈ ಹಂತದಿಂದ ಮುಂದಿನ ಹಂತಕ್ಕೆ ಹೋಗಲು ಕೆಲವೊಂದು ಪ್ರಯತ್ನಗಳನ್ನು ಮಾಡಬೇಕಾಗುತ್ತದೆ’, ಇದೇ ಹಿಂದೂಗಳಿಗೆ ಗೊತ್ತಿಲ್ಲ. ಆದ್ದರಿಂದ ದೇವರ ಪೂಜೆಯನ್ನು ಮಾಡುವ ವ್ಯಕ್ತಿಯು ಅನೇಕ ವರ್ಷಗಳ ವರೆಗೆ ಕೇವಲ ದೇವರ ಪೂಜೆಯನ್ನೇ ಮಾಡುತ್ತಿರುತ್ತಾನೆ. ಅನಂತದ ಜ್ಞಾನವಿರುವ ತಮ್ಮ ಹಿಂದೂ ಧರ್ಮದ ಬಗ್ಗೆ ತಿಳಿದುಕೊಳ್ಳುವ ಜಿಜ್ಞಾಸುವೃತ್ತಿ ಹಿಂದೂಗಳಲ್ಲಿ ಅತ್ಯಂತ ಕಡಿಮೆಯಿದೆ.

೧ ಎ. ಸುಖ ಮತ್ತು ಆನಂದದ ನಡುವಿನ ವ್ಯತ್ಯಾಸ ತಿಳಿಯದಿರುವುದು : ಜನರಿಗೆ ‘ನಿಜವಾದ ಆನಂದವೆಂದರೇನು ?’, ಎಂಬುದೇ ಗೊತ್ತಿಲ್ಲ. ‘ಆನಂದವು ಶಾಶ್ವತವಾಗಿರುವಂತಹದ್ದು ಮತ್ತು ಸುಖವು ಕ್ಷಣಿಕ ಅಥವಾ ತಾತ್ಕಾಲಿಕವಾದುದು ಮತ್ತು ‘ಶಾಶ್ವತ ಆನಂದವು ಕೇವಲ ಸಾಧನೆಯಿಂದಲೇ ಸಿಗುತ್ತದೆ’, ಎಂಬುದು ಸಮಾಜಕ್ಕೆ ಗೊತ್ತಿಲ್ಲದ ಕಾರಣ ಸಮಾಜವು ಸಾಧನೆಯನ್ನು ಮಾಡುವುದಿಲ್ಲ. ಆದ್ದರಿಂದ ಸಮಾಜವು ಆನಂದಪ್ರಾಪ್ತಿಗಾಗಿ, ಅಂದರೆ ಸಾಧನೆ ಮಾಡಲು ಪ್ರಯತ್ನಿಸುವುದಿಲ್ಲ.

೨. ಧರ್ಮಪ್ರಸಾರದ ತಳಮಳ ಹೆಚ್ಚಾಗುವುದು

ಸಮಾಜದ ಸ್ಥಿತಿ ಮೇಲೆ ಹೇಳಿದಂತೆ ಇದ್ದುದರಿಂದ ‘ನಮಗೆ ಮನೆಮನೆಗೆ ಹೋಗಿ ಧರ್ಮಶಿಕ್ಷಣವನ್ನು ನೀಡಬೇಕು’, ಎಂದು ಪ.ಪೂ. ಡಾಕ್ಟರರು ಏಕೆ ಹೇಳುತ್ತಾರೆ ?’, ಎಂಬುದು ನನ್ನ ಗಮನಕ್ಕೆ ಬಂದಿತು. ಸಮಾಜಕ್ಕೆ ಧರ್ಮದ ವಿಷಯದಲ್ಲಿರುವ ಅಜ್ಞಾನವು ನನ್ನ ಗಮನಕ್ಕೆ ಬಂದ ನಂತರ ನನ್ನಲ್ಲಿ ಧರ್ಮಪ್ರಸಾರವನ್ನು ಮಾಡುವ ತಳಮಳ ಹೆಚ್ಚಾಯಿತು.

೩. ಕಾಲಕ್ಕನುಸಾರ ಸಮಷ್ಟಿ ಸಾಧನೆಗೆ ಶೇ. ೬೫ ರಷ್ಟು ಮಹತ್ವವಿದೆ ಎಂದು ಪರಾತ್ಪರ ಗುರು ಡಾ. ಆಠವಲೆಯವರು ಮನಸ್ಸಿನ ಮೇಲೆ ಬಿಂಬಿಸುವುದು

ಪ.ಪೂ. ಡಾಕ್ಟರರು ಯಾವಾಗಲೂ ಸಾಧಕರಿಗೆ, ”ಕಾಲಕ್ಕನುಸಾರ ವ್ಯಷ್ಟಿ (ವೈಯಕ್ತಿಕ) ಸಾಧನೆಗೆ ಶೇ. ೩೫ ರಷ್ಟು ಮಹತ್ವವಿದೆ ಮತ್ತು ಸಮಷ್ಟಿ ಸಾಧನೆಗೆ (‘ಸಮಾಜದಲ್ಲಿ ಧರ್ಮಪ್ರಸಾರವನ್ನು ಮಾಡಿ ಸಮಾಜವನ್ನು ಸಾಧನೆಗಾಗಿ ಉದ್ಯುಕ್ತಗೊಳಿಸುವುದು’ ಇದಕ್ಕೆ) ಶೇ. ೬೫ ರಷ್ಟು ಮಹತ್ವವಿದೆ ಎಂದು ಹೇಳುತ್ತಿದ್ದರು. ಆದ್ದರಿಂದ ‘ಶೀಘ್ರಗತಿಯಿಂದ ಸಾಧನೆಯಾಗಲು ವ್ಯಕ್ತಿಯು ಸಾಧನೆಯೊಂದಿಗೆ ಸಮಷ್ಟಿ ಸಾಧನೆ ಮಾಡುವುದು ಆವಶ್ಯಕವಾಗಿದೆ’, ಎಂದು ನನ್ನ ಮನಸ್ಸಿನಲ್ಲಿ ಅಚ್ಚೊತ್ತಿತು.

೪. ಮನಃಪೂರ್ವಕವಾಗಿ ಸಮಷ್ಟಿ ಸಾಧನೆಯನ್ನು ಮಾಡಿರುವುದರಿಂದ ಆಧ್ಯಾತ್ಮಿಕ ಪ್ರಗತಿಯಾಗುವುದು

ಪ.ಪೂ. ಗುರುದೇವರು ನನ್ನ ಮನಸ್ಸಿನ ಮೇಲೆ ಸಮಷ್ಟಿ ಸಾಧನೆಯ ಮಹತ್ವವನ್ನು ಬಿಂಬಿಸಿರುವುದರಿಂದ ಧರ್ಮಪ್ರಸಾರದ ತಳಮಳವು ನನ್ನಲ್ಲಿ ಹೆಚ್ಚುತ್ತ ಹೋಯಿತು. ‘ಈ ಸಮಷ್ಟಿ ಸಾಧನೆಯಿಂದಲೇ ನನ್ನ ಆಧ್ಯಾತ್ಮಿಕ ಪ್ರಗತಿಯು ಶೀಘ್ರಗತಿ ಯಿಂದಾಯಿತು’, ಎಂದು ನನಗೆ ಎನಿಸುತ್ತದೆ. ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದಪುಷ್ಪ ಗಳು ಕೃತಜ್ಞತೆಯ ಭಾವದಿಂದ ಅವರ ಚರಣಗಳಲ್ಲಿ ಅರ್ಪಣೆ !

ಇದಂ ನ ಮಮ |’ (ಅರ್ಥ : ಈ ಬರವಣಿಗೆಯು ನನ್ನದಲ್ಲ.)

– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೨೧.೭.೨೦೨೩) (ಮುಂದುವರಿಯುವುದು)