ಮಣಿಕಟ್ಟಿನ ಅಸ್ಥಿಭಂಗವಾದ ನಂತರ ಸಕಾರಾತ್ಮಕ ಮತ್ತು ಭಾವದ ಸ್ಥಿತಿಯಲ್ಲಿದ್ದು ಅಖಂಡ ಗುರುಕೃಪೆಯನ್ನು ಅನುಭವಿಸಿದ ಶೇ. ೬೫ ರಷ್ಟು ಆಧ್ಯಾತ್ಮಿಕ ಮಟ್ಟವಿರುವ ಶಿವಮೊಗ್ಗದ ಸೌ. ಸ್ಮಿತಾ ಕಾನಡೆ (೫೬ ವರ್ಷಗಳು) !

೧. ಎಡವಿ ಬಿದ್ದು ಎಡಕೈಯ ಮಣಿಕಟ್ಟಿನ ಅಸ್ಥಿಭಂಗವಾದರೂ ಮನಸ್ಸು ಶಾಂತವಾಗಿರುವುದು

‘೧೩.೧೧.೨೦೨೨ ರಂದು ನಾನು ಶಿವಮೊಗ್ಗದಿಂದ ಹುಬ್ಬಳ್ಳಿಗೆ ಬಂದೆನು ಮತ್ತು ಹುಬ್ಬಳ್ಳಿಯ ಸೇವಾಕೇಂದ್ರಕ್ಕೆ ಹೋಗಲು ಆಟೋದ ಕಡೆಗೆ ಹೋಗುವಾಗ ಎಡವಿ ಬಿದ್ದೆನು. ಅಂತಹ ಸ್ಥಿತಿಯಲ್ಲಿಯೇ ಎದ್ದು ನಾನು ನನ್ನ ಸಾಮಾನುಗಳನ್ನು ಎತ್ತಿ ಆಟೋದಲ್ಲಿಟ್ಟೆನು ಮತ್ತು ಸೇವಾಕೇಂದ್ರದಕ್ಕೆ ಹೋದೆನು. ಅಲ್ಲಿಯವರೆಗೆ ನನ್ನ ಮಣಿಕಟ್ಟು ಮತ್ತು ಬೆರಳುಗಳಿಗೆ ತುಂಬಾ ಬಾವು ಬಂದಿತು. ಅದನ್ನು ನೋಡಿ ‘ನನ್ನ ಮಣಿಕಟ್ಟಿನ ಅಸ್ಥಿಭಂಗ ಆಗಿದೆ’, ಎಂದು ನನ್ನ ಗಮನಕ್ಕೆ ಬಂದಿತು. ಆದರೂ ಪರಾತ್ಪರ ಗುರು ಡಾಕ್ಟರರ ಕೃಪೆಯಿಂದ ನನ್ನ ಮನಸ್ಸು ಶಾಂತವಾಗಿತ್ತು.

೨. ‘ಅಸ್ಥಿಭಂಗವಾಗಿದೆ’, ಎಂದು ಗಮನಕ್ಕೆ ಬಂದರೂ ಮನಸ್ಸು ಸಕಾರಾತ್ಮಕವಾಗಿರುವುದು

೧೭.೧೧.೨೦೨೨ ರಿಂದ ಗೋವಾದ ರಾಮನಾಥಿ ಆಶ್ರಮದಲ್ಲ್ಲಿ ಒಂದು ಶಿಬಿರ ಇತ್ತು. ನನ್ನ ಮನಸ್ಸಿನಲ್ಲಿ ‘ಭಗವಂತನು ನನ್ನನ್ನು ೨ ದಿನಗಳಲ್ಲಿ ಗುಣಪಡಿಸುವನು ಮತ್ತು ನಾನು ರಾಮನಾಥಿಯಲ್ಲಿನ ಶಿಬಿರಕ್ಕೆ ಹೋಗಲಿದ್ದೇನೆ’, ಎಂಬ ಸಕಾರಾತ್ಮಕ ವಿಚಾರ ಇತ್ತು.

೩. ಹುಬ್ಬಳ್ಳಿ ಸೇವಾಕೇಂದ್ರಕ್ಕೆ ಹೋದ ನಂತರ ಸಂತರು ಮತ್ತು ಸಾಧಕರು ಪ್ರೀತಿಯಿಂದ ನೀಡಿದ ಆಧಾರ !

‘ನಾನು ಬಿದ್ದಿದ್ದೇನೆ’, ಎಂದು ತಿಳಿದ ನಂತರ ಹುಬ್ಬಳ್ಳಿಯಲ್ಲಿನ ಸೌ. ವಿದುಲಾ ಹಳದಿಪುರ ಮತ್ತು ಸೌ. ವಂದನಾ ಭೋಜ ಇವರು ಸೇವಾಕೇಂದ್ರಕ್ಕೆ ಬಂದು ನನ್ನ ಕೈಗೆ ‘ಬ್ಯಾಂಡೇಜ್‌ ಪಟ್ಟಿ’ಯನ್ನು ಕಟ್ಟಿದರು ಮತ್ತು ನನ್ನನ್ನು ಪ್ರೀತಿಯಿಂದ ವಿಚಾರಿಸಿಕೊಂಡು ನನಗೆ ಆಧಾರ ನೀಡಿದರು. ಆಗ ಗುರುದೇವರು ಹೇಳುತ್ತಿರುವ ಪ್ರಥಮೋಪಚಾರ ತರಬೇತಿಯ ಮಹತ್ವವು ನನ್ನ ಗಮನಕ್ಕೆ ಬಂದಿತು. ಪೂ. ರಮಾನಂದಣ್ಣ (ಸನಾತನದ ೭೫ ನೇ (ಸಮಷ್ಟಿ) ಸಂತರು) ಇವರೂ ತಕ್ಷಣ ದೂರವಾಣಿ ಮಾಡಿ ನನ್ನನ್ನು ವಿಚಾರಿಸಿದರು ಮತ್ತು ನನಗೆ ನಾಮಜಪ ಮುಂತಾದ ಉಪಾಯಗಳನ್ನು ಹೇಳಿದರು. ಅವರು ತಕ್ಷಣ ನನಗೆ ಸಹಾಯ ಮಾಡಲು ಸಾಧಕರ ಆಯೋಜನೆಯನ್ನು ಮಾಡಿದರು. ನಾನು ಶಿಬಿರಕ್ಕೆ ಗೋವಾಗೆ ಹೋಗುವವರೆಗೆ ಪೂ. ರಮಾನಂದಣ್ಣನವರು ಪ್ರತಿದಿನ ಸಂಚಾರವಾಣಿ ಮಾಡಿ ನನ್ನನ್ನು ವಿಚಾರಿಸುತ್ತಿದ್ದರು.

೪. ಭಾನುವಾರ ರಜೆ ಇದ್ದರೂ ಪೂ. ರಮಾನಂದಣ್ಣನವರ ಪ್ರೀತಿಯಿಂದ ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟಿರುವ ವೈದ್ಯರು ಸೇವಾಕೇಂದ್ರಕ್ಕೆ ಬಂದು ಪ್ರಥಮಚಿಕಿತ್ಸೆಯನ್ನು ಮಾಡಿದಾಗ ‘ಇದು ಗುರುಕೃಪೆ ಆಗಿದೆ’, ಎಂದೆನಿಸುವುದು

ನಾನು ಭಾನುವಾರದಂದು ಬಿದ್ದಿದುದರಿಂದ ಆ ದಿನ ಆಧುನಿಕ ವೈದ್ಯರು ಲಭ್ಯವಿರಲಿಲ್ಲ. ‘ನನಗೆ ಸೋಮವಾರ ಚಿಕಿತ್ಸೆ ದೊರಕಲಿದೆ’, ಎಂದು ಗಮನಕ್ಕೆ ಬಂದರೂ ನನ್ನ ಮನಸ್ಸು ಸಕಾರಾತ್ಮಕವಾಗಿತ್ತು. ಭಾನುವಾರವಿದ್ದರೂ ಪೂ. ರಮಾನಂದಣ್ಣನವರ ಪ್ರೀತಿಯಿಂದ ಸನಾತನ ಸಂಸ್ಥೆಯೊಂದಿಗೆ ಜೋಡಿಸಲ್ಪಟ್ಟಿರುವ ಓರ್ವ ಆಯುರ್ವೇದ ವೈದ್ಯರು ಸೇವಾಕೇಂದ್ರಕ್ಕೆ ಬಂದು ನನ್ನ ಮಣಿಕಟ್ಟಿನ ಮೇಲೆ ಪ್ರಥಮಚಿಕಿತ್ಸೆಯನ್ನು ಮಾಡಿದರು. ಅದಕ್ಕಾಗಿ ನಾನು ಕೃತಜ್ಞತೆಯನ್ನು ವ್ಯಕ್ತಪಡಿಸಿದ ನಂತರ ಅವರು, ”ಸಾಧಕರ ಸಹವಾಸ ದೊರಕಿರುವುದರಿಂದ ನನಗೂ ಆನಂದವಾಯಿತು” ಎಂದು ಹೇಳಿದರು. ಈ ಪ್ರಸಂಗದಿಂದ ನನಗೆ ‘ಗುರುದೇವರು ನನ್ನ ಕಾಳಜಿ ತೆಗೆದುಕೊಳ್ಳುತ್ತಿದ್ದಾರೆ’, ಎಂಬುದು ಅರಿವಾಯಿತು.

೫. ಅನುಭೂತಿ

೫ ಅ. ಆಧುನಿಕ ವೈದ್ಯರೊಂದಿಗೆ ಅಧ್ಯಾತ್ಮದ ಬಗ್ಗೆ ಚರ್ಚೆಯನ್ನು ಮಾಡಿದ ನಂತರ ‘ಸತ್ಸಂಗ’ವು ನೋವುನಿವಾರಕವಾಗಿದೆ’, ಎಂಬ ಅನುಭೂತಿ ಬರುವುದು ! : ಸೋಮವಾರದಂದು ಆಧುನಿಕ ವೈದ್ಯರ ಕಡೆಗೆ (ಅಸ್ಥಿರೋಗ ತಜ್ಞರಬಳಿ) (ಆರ್ಥೋಪೆಡಿಕ್‌ ಸರ್ಜನ್‌ ಬಳಿ)) ಹೋದಾಗ ಅವರು ಮಣ್ಣಿಕಟ್ಟಿನ ‘ಕ್ಷ’ ಕಿರಣ (ಎಕ್ಸ-ರೆ) ತೆಗೆದು ಪರಿಶೀಲಿಸಿದರು. ಆ ವರದಿಯನ್ನು ನೋಡಿ ಆಧುನಿಕ ವೈದ್ಯರು ನನಗೆ ಆಧಾರವನ್ನು ನೀಡಿದರು ಮತ್ತು ”ಕೇವಲ ಪ್ರಜ್ಞೆ ತಪ್ಪಿಸಿ ಮೂಳೆಯನ್ನು ಜೋಡಿಸಬೇಕಾಗುವುದು” ಎಂದು ಹೇಳಿದರು. ಆ ಆಧುನಿಕ ವೈದ್ಯರು ತುಂಬಾ ಸಾತ್ತ್ವಿಕ ಮತ್ತು ಆಧ್ಯಾತ್ಮಿಕ ಸ್ತರದವರಾಗಿದ್ದರು. ಅರವಳಿಕೆ ತಜ್ಞರು ಬರಲು ಸ್ವಲ್ಪ ಸಮಯವಿತ್ತು. ಅವರು ಬರುವವರೆಗೆ ಆಧುನಿಕ ವೈದ್ಯರು ನನ್ನೊಂದಿಗೆ ಅಧ್ಯಾತ್ಮದ ಬಗ್ಗೆ ಚರ್ಚೆಯನ್ನು ಮಾಡಿದರು. ಅವರು ನನಗೆ ಅವರ ಕ್ಷೇತ್ರದಲ್ಲಿನ ತಮ್ಮ ಅನುಭವಗಳನ್ನು ಹೇಳಿದರು. ಅವರೊಂದಿಗೆ ಮಾತನಾಡುವಾಗ ”ನನ್ನ ಅಸ್ಥಿಭಂಗವಾಗಿದೆ’, ಎಂಬುದನ್ನು ನಾನು ಮರೆತುಹೋಗಿದ್ದೆ. ಆಗ ನನಗೆ ‘ಅದು ಸತ್ಸಂಗದ ಪರಿಣಾಮವಾಗಿದ್ದು ‘ಸತ್ಸಂಗವು’ ನೋವುನಿವಾರಕವಾಗಿದೆ’, ಎಂದು ಅನಿಸಿತು.

ಅರವಳಿಕೆತಜ್ಞರು ಬಂದನಂತರ ಅವರು ನನ್ನ ಪ್ರಜ್ಞೆಯನ್ನು ತಪ್ಪಿಸಿದರು. ಆಧುನಿಕ ವೈದ್ಯರು ನನ್ನ ಮಣಿಕಟ್ಟಿನ ಮೂಳೆಯನ್ನು ಜೋಡಿಸಿದರು ಮತ್ತು ‘ಪ್ಲಾಸ್ಟರ್’ ಹಾಕಿದರು.

೫ ಆ. ಅಸ್ಥಿಭಂಗ ಮತ್ತು ನಂತರ ಶಸ್ತ್ರಚಿಕಿತ್ಸೆ ಆದನಂತರವೂ ಗುರುಕೃಪೆಯಿಂದ ನೋವು ತುಂಬಾ ಕಡಿಮೆಯಿತ್ತು : ನಾನು ಬಿದ್ದನಂತರ ನನ್ನ ಮಣಿಕಟ್ಟು ಮತ್ತು ಬೆರಳುಗಳ ಮೇಲೆ ಬಹಳಷ್ಟು ಪ್ರಮಾಣದಲ್ಲಿ ಬಾವು ಬಂದಿತ್ತು. ಸೇವಾಕೇಂದ್ರದಲ್ಲಿ ನನ್ನ ಮಣಿಕಟ್ಟಿನ ಮೇಲೆ ಪ್ರಾಥಮಿಕ ಚಿಕಿತ್ಸೆಯನ್ನು ಮಾಡುವ ಆಯುರ್ವೇದ ವೈದ್ಯರಿಗೆ ”ನನಗೆ ತುಂಬಾ ನೋವು ಆಗುತ್ತಿರಬಹುದು’, ಎಂದು ಅನಿಸಿತ್ತು; ಆದರೆ ಗುರುಕೃಪೆಯಿಂದ ಆಗ ಮತ್ತು ಮಣಿಕಟ್ಟಿನ ಶಸ್ತ್ರಚಿಕಿತ್ಸೆ ಆದನಂತರವೂ ನನಗೆ ಆಗುವ ನೋವು ಬಹಳ ಕಡಿಮೆಯಿತ್ತು. ಅದರ ಬಗ್ಗೆ ವೈದ್ಯರು ಮತ್ತು ಆಧುನಿಕ ವೈದ್ಯರು ಇವರಿಬ್ಬರಿಗೂ ತುಂಬಾ ಆಶ್ಚರ್ಯವೆನಿಸಿತ್ತು.

೬. ಆಸ್ಪತ್ರೆಯಲ್ಲಿದ್ದಾಗ ನನ್ನ ಭಾವ !

ಅ. ಆಸ್ಪತ್ರೆಯಲ್ಲಿ ಆಧುನಿಕ ವೈದ್ಯರ (ಅಸ್ಥಿರೋಗ ತಜ್ಞರ) ಗುರುಗಳ ಅತ್ಯಂತ ತೇಜಸ್ವಿ ಮತ್ತು ಮಂದಹಾಸದ ಛಾಯಾಚಿತ್ರವಿತ್ತು. ಅವರ ಕೈಯಲ್ಲಿ ಕಮಂಡಲ ಇತ್ತು. ‘ಅವರು ನನಗೆ ಅವರ ಕಮಂಡಲುವಿನಲ್ಲಿನ ತೀರ್ಥವನ್ನು ಕೊಡುತ್ತಿದ್ದಾರೆ.’ ಎಂದು ಅನಿಸುತ್ತಿತ್ತು.

ಆ. ಆಧುನಿಕ ವೈದ್ಯರ ಕೋಣೆಯಲ್ಲಿ ಹೋಗುವಾಗ ‘ನಾನು ಗುರುದೇವರ ಕೋಣೆಗೆ ಹೋಗುತ್ತಿದ್ದೇನೆ’ ಎಂದು ವಿಚಾರ ಮಾಡುತ್ತಿದ್ದೆ.

ಇ. ‘ಕ್ಷ’ ಕಿರಣದ (ಎಕ್ಸ ರೇ) ಪರಿಶೀಲನೆಗಾಗಿ ಹೋಗುವಾಗ ‘ಗುರುದೇವರ ಕೃಪೆಯಿಂದ ‘ಕ್ಷ’ ಕಿರಣವನ್ನು ಪರಿಶೀಲಿಸುವ ಯಂತ್ರದಿಂದ ನನ್ನ ಕೈಮೇಲೆ ಚೈತನ್ಯದ ಪ್ರಕ್ಷೇಪಣೆ ಆಗಲಿದೆ’ಎಂದು ವಿಚಾರ ಮಾಡುತ್ತಿದ್ದೆ.

ಈ. ಶಸ್ತ್ರಚಿಕಿತ್ಸೆಯ ಕೋಣೆಗೆ ಹೋಗುವಾಗ ಗುರುದೇವರು ನನ್ನ ಜೊತೆಯಲ್ಲಿದ್ದಾರೆ ಎಂದು ವಿಚಾರ ಮಾಡುತ್ತಿದ್ದೆ.

ಉ. ಶಸ್ತ್ರಚಿಕಿತ್ಸೆ ಆದನಂತರ ನನ್ನ ಅರವಳಿಕೆ ಸಂಪೂರ್ಣ ಇಳಿದಿರಲಿಲ್ಲ. ನಾನು ಅರೆನಿದ್ರೆಯಲ್ಲಿದ್ದಾಗ ನನಗೆ ‘ನಾನು ಮತ್ತು ನನ್ನ ಜೊತೆಯಲ್ಲಿರುವ ಸಾಧಕಿ ನಮ್ಮಿಬ್ಬರ ಸ್ಥಳದಲ್ಲಿ ನನಗೆ ದೇವಿಯ ರೂಪವು ಕಾಣಿಸುತ್ತಿತ್ತು. ನನಗೆ ಎಲ್ಲೆಡೆ ಹಳದಿ ಪ್ರಕಾಶ ಮತ್ತು ಸುಂದರವಾಗಿ ಕೆತ್ತಿರುವ ಚಿನ್ನದ ಗೋಡೆಗಳ ಭವ್ಯ ಸಭಾಂಗಣ ಕಾಣಿಸುತ್ತಿತ್ತು. ಆ ಗೋಡೆಗಳ ಮೇಲೆ ಹೂವಿನ ಸುಂದರ ಮಾಲೆಗಳಿದ್ದವು. ‘ನನಗೆ ನಾನು ಬೇರೆ ಲೋಕದಲ್ಲಿದ್ದೇನೆ’, ಎಂದು ಅನಿಸುತ್ತಿತ್ತು. ಅಲ್ಲಿ ನನ್ನ ಕಣ್ಣುಗಳು ಗುರುದೇವರನ್ನು ಹುಡುಕುತ್ತಿದ್ದವು. ಆಗ ಗುರುಕೃಪೆಯಿಂದ ನನ್ನ ಮನಸ್ಸಿನಲ್ಲಿ, ‘ಸುಂದರ, ಭವ್ಯ-ದಿವ್ಯ ಮತ್ತು ಪರಿಪೂರ್ಣವಾಗಿದೆಯೋ, ಅದೆಲ್ಲವೂ ಪ.ಪೂ. ಡಾಕ್ಟರರೇ ಆಗಿದ್ದಾರೆ. ಅವರು ಎಲ್ಲೆಲ್ಲೂ ಇದ್ದಾರೆ. ಅವರು ನನ್ನ ಹೃದಯದಲ್ಲಿಯೂ ಇದ್ದಾರೆ. ಜಗತ್ತಿನಲ್ಲಿ ಅವರು ಇರದಿರುವ ಒಂದು ಜಾಗವೂ ಇಲ್ಲ’ ಎಂಬ ಭಾವದ ವಿಚಾರಗಳು ಬಂದವು.

೭. ಕೃತಜ್ಞತೆ

ನಾನು ನನ್ನ ಪ್ರಾರಬ್ಧಕ್ಕನುಸಾರ ಬಿದ್ದೆನು; ಆದರೆ ಗುರುದೇವರ ಕೃಪೆಯಿಂದ ನನಗೆ ಆಗುವ ವೇದನೆಗಳು ತುಂಬಾ ಕಡಿಮೆಯಿತ್ತು. ಆ ಸ್ಥಿತಿಯಲ್ಲಿಯೂ ನಾನು ಗುರುಕೃಪೆಯಿಂದ ಸ್ಥಿರ ಮತ್ತು ಆನಂದದಲ್ಲಿದ್ದೆನು. ಆಸ್ಪತ್ರೆಯಲ್ಲಿರುವಾಗ ಭಗವಂತನು ನನಗೆ, ‘ಪ್ರಾರಬ್ಧವನ್ನು ಆನಂದದಿಂದ ಮತ್ತು ಭಾವದ ಸ್ಥಿತಿಯಲ್ಲಿದ್ದು ಅನುಭವಿಸೋಣ’, ಎಂಬ ವಿಚಾರವನ್ನು ಕೊಟ್ಟನು. ಭಗವಂತನೇ ನನ್ನಿಂದ ಭಾವದ ಪ್ರಯತ್ನಗಳನ್ನು ಮಾಡಿಸಿಕೊಂಡನು. ಅದಕ್ಕಾಗಿ ಭಗವಂತ ಮತ್ತು ಗುರುದೇವರ ಚರಣಗಳಲ್ಲಿ ಅದೆಷ್ಟು ಬಾರಿ ಕೃತಜ್ಞತೆಗಳನ್ನು ವ್ಯಕ್ತಪಡಿಸಿದರೂ ಅದು ಕಡಿಮೆಯೇ ಆಗಿದೆ. ಅಖಂಡ ಕೃತಜ್ಞತೆಗಳು !’

– ಸೌ. ಸ್ಮಿತಾ ಕಾನಡೆ (ಆಧ್ಯಾತ್ಮಿಕ ಮಟ್ಟ ಶೇ. ೬೫, ೫೬ ವರ್ಷಗಳು), ಶಿವಮೊಗ್ಗ. (೮.೧೨.೨೦೨೨)