ಭಾರತ ಗೆದ್ದಿದ್ದರಿಂದ ಬಾಂಗ್ಲಾದೇಶ ತಂಡ ಮತ್ತು ಪ್ರೇಕ್ಷಕರಿಂದ ಗೊಂದಲ ಮತ್ತು ಹಿಂಸಾಚಾರ !

  • ೧೯ ವರ್ಷದೊಳಗಿನ ದಕ್ಷಿಣ ಏಷ್ಯಾ ಮಹಿಳಾ ಫುಟ್ಬಾಲ್ ಸ್ಪರ್ಧೆಯ ಅಂತಿಮ ಪಂದ್ಯ !

  • ಎರಡೂ ದೇಶಗಳಿಗೂ ಪ್ರಶಸ್ತಿ !

ಢಾಕಾ (ಬಾಂಗ್ಲಾದೇಶ) – ಭಾರತ ಮತ್ತು ಬಾಂಗ್ಲಾದೇಶ ತಂಡಗಳ ೧೯ ವರ್ಷದೊಳಗಿನವರ ‘ದಕ್ಷಿಣ ಏಷ್ಯಾ ಪುಟ್ಬಾಲ್ ಫೆಡರೇಷನ್‘ ಮಹಿಳಾ ಪುಟ್ಬಾಲ್ ಚಾಂಪಿಯನ್‌ಶಿಪ್ ಅನ್ನು ಎರಡೂ ದೇಶಗಳಿಗೆ ನೀಡಲಾಯಿತು. ಎರಡೂ ತಂಡಗಳು ೧-೧ ಗೋಲು ಗಳಿಸಿದವು. ನಂತರ ನಡೆದ ಪೆನಾಲ್ಟಿ ಶೂಟೌಟ್ ನಲ್ಲಿ ಎರಡೂ ತಂಡಗಳು ಸಮಬಲ ಸಾಧಿಸಿದವು. ಅಂತಿಮವಾಗಿ ವಿಜೇತರನ್ನು ಘೋಷಿಸಲು ಟಾಸ್ಕ ಮಾಡಲಾಯಿತು. ಇದರಲ್ಲಿ ಭಾರತಕ್ಕೆ ಜಯ ಸಿಕ್ಕಿದೆ. ಇದಕ್ಕೆ ಬಾಂಗ್ಲಾದೇಶದ ಮಹಿಳಾ ಆಟಗಾರ್ತಿಯರು ತೀವ್ರ ವಿರೋಧ ಮಾಡಿದರು. ಹಾಗೆಯೇ ಕ್ರೀಡಾಂಗಣದಲ್ಲಿದ್ದ ಪ್ರೇಕ್ಷಕರು ಕೂಡ ಗೊಂದಲ ಆರಂಭಿಸಿದರು. ದೊಡ್ಡ ಸಮೂಹ ಮೈದಾನದಲ್ಲಿ ಬಾಟಲಿಗಳನ್ನು ಎಸೆಯುತ್ತಿರುವುದನ್ನು ಹಾಗೂ ಕೆಲವರು ಕಲ್ಲು ತೂರಾಟ ಮಾಡಿದ್ದು ಕಂಡುಬಂದಿತು. ಎಲ್ಲಡೆ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಆದ್ದರಿಂದ ಎರಡೂ ದೇಶಗಳನ್ನು ಜಂಟಿ ವಿಜೇತರು ಎಂದು ಘೋಷಿಸಲಾಯಿತು.

ಈ ಪಂದ್ಯ ಬಾಂಗ್ಲಾದೇಶದಲ್ಲಿ ನಡೆಯಿತು. ಪರಿಸ್ಥಿತಿ ಕೈಮೀರುತ್ತಿರುವುದನ್ನು ಕಂಡು ಪಂದ್ಯದ ಅಧಿಕಾರಿಗಳು ತಮ್ಮ ನಿರ್ಧಾರ ಬದಲಿಸಬೇಕಾಯಿತು. ಅವರು ಟಾಸ್ಕ ಎಸೆದ ನಿರ್ಣಯ ರದ್ದುಮಾಡಿ ಭಾರತ ಮತ್ತು ಬಾಂಗ್ಲಾದೇಶಕ್ಕೆ ಜಂಟಿ ವಿಜೇತರು ಎಂದು ಘೋಷಿಸಿದರು.

ಸಂಪಾದಕೀಯ ನಿಲುವು

ಇದು ಭಾರತದ ‘ಮಿತ್ರದೇಶ‘ ಬಾಂಗ್ಲಾದೇಶದ ಜನರ ಮತ್ತು ಆಟಗಾರರ ಮನಸ್ಥಿತಿಯನ್ನು ತೋರಿಸುತ್ತದೆ. ಇಂತಹವರ ಉದ್ಧಟತನ ತಗ್ಗಿಸಲು ಭಾರತ ಸರಕಾರ ಕ್ರಮ ಕೈಗೊಳ್ಳಬೇಕು !