ಪುಣೆ, ಫೆಬ್ರವರಿ 7 (ಸುದ್ದಿ.) – ಪುಣೆಯ ಸನಾತನ ಸಂಸ್ಥೆಯ 120ನೇ ವ್ಯಷ್ಟಿ ಸಂತ ಪೂ. (ಶ್ರೀಮತಿ) ಮಾಲತೀ ಶಾ ಅಜ್ಜಿ (86 ವರ್ಷ) ಇವರು 6 ಫೆಬ್ರವರಿ 2024 ರಂದು ರಾತ್ರಿ 8.30 ಕ್ಕೆ ದೇಹತ್ಯಾಗ ಮಾಡಿದರು. ವಯಸ್ಸಿಗಿದ್ದರಿಂದ ಅನಾರೋಗ್ಯಕ್ಕೆ ಒಳಗಾಗಿದ್ದರು. ಸನಾತನದ ಧರ್ಮ ಪ್ರಚಾರಕ ಸದ್ಗುರು ಸ್ವಾತಿ ಖಾಡ್ಯೆ ಅವರು ಆಗಸ್ಟ್ 4, 2022 ರಂದು ಅವರನ್ನು ‘ಸಂತ’ ಎಂದು ಘೋಷಿಸಿದ್ದರು. ಪೂ. (ಶ್ರೀಮತಿ) ಶಾ ಅಜ್ಜಿ ಇವರು ಪ್ರೇಮಮಯಿ ಮತ್ತು ಆನಂದಿ ಸ್ವಭಾವದವರು ಆಗಿದ್ದರು. ಸಹನಶೀಲತೆ ಮತ್ತು ಸ್ಥಿರತೆ ಗುಣಗಳ ಆಧಾರದ ಮೇಲೆ, ಅವರು ಪ್ರತಿ ಪ್ರತಿಕೂಲ ಪರಿಸ್ಥಿತಿಯಲ್ಲಿ ಸ್ಥಿರವಾಗಿ ಇದ್ದರು.
ಪುಣೆಯ ಸನಾತನ ಸಂಸ್ಥೆಯ ಸಾಧಕ ಶ್ರೀ. ಶಿರಿಶ್ ಶಾ (ಆಧ್ಯಾತ್ಮಿಕ ಮಟ್ಟ 62 ಪ್ರತಿಶತ) ಇವರ ತಾಯಿ ಆಗಿದ್ದರು. ಪೂ. ಅಜ್ಜಿ 2 ಮಕ್ಕಳು, 2 ಸೊಸೆಯಂದಿರು, 3 ಮೊಮ್ಮಕ್ಕಳು ಮತ್ತು ಮರಿಮೊಮ್ಮಗನನ್ನು ಅಗಲಿದ್ದಾರೆ. ಫೆಬ್ರವರಿ 7 ರಂದು ಮಧ್ಯಾಹ್ನ ನವಿ ಪೇಠ್‌ನ ವೈಕುಂಠ ಸ್ಮಶಾನದಲ್ಲಿ ಅವರ ದೇಹಕ್ಕೆ ಅಂತ್ಯಸಂಸ್ಕಾರ ಮಾಡಲಾಯಿತು. ಈ ಸಂದರ್ಭದಲ್ಲಿ ಸನಾತನ ಸಾಧಕರೂ ಉಪಸ್ಥಿತರಿದ್ದರು.