’ಭಾರತವು ನಮ್ಮ ದೇಶದೊಳಗೆ ನುಗ್ಗಿ ನಾಗರಿಕರನ್ನು ಕೊಲ್ಲುತ್ತಿದೆಯಂತೆ !’ – ಪಾಕಿಸ್ತಾನದ ಸೇನಾ ಮುಖ್ಯಸ್ಥ

ಭಾರತದ ಪ್ರತಿ ದಾಳಿಗೂ ತಕ್ಕ ಉತ್ತರ ನೀಡುತ್ತೇವೆ !

ಇಸ್ಲಾಮಾಬಾದ್ (ಪಾಕಿಸ್ತಾನ) – ಭಾರತವು ತನ್ನ ನೆಲದಲ್ಲಿ ಭಯೋತ್ಪಾದನೆಯನ್ನು ಹೆಚ್ಚಿಸುತ್ತಿದೆ. ಭಾರತ ಈಗ ಯಾವ ಹಂತಕ್ಕೆ ಹೋಗಿದೆಯೆಂದರೆ, ದೇಶದೊಳಗೆ ನುಗ್ಗಿ ಪಾಕಿಸ್ತಾನಿ ನಾಗರಿಕರನ್ನು ಹತ್ಯೆ ಮಾಡುತ್ತಿದೆ. ಅಂತರರಾಷ್ಟ್ರೀಯ ಕಾನೂನುಗಳನ್ನು ಉಲ್ಲಂಘಿಸುವುದು ಭಾರತದ ಅಭ್ಯಾಸವಾಗಿದೆ ಎಂದು ಸೇನಾ ಮುಖ್ಯಸ್ಥ ಜನರಲ್ ಅಸೀಮ್ ಮುನೀರ್ ಹಾಸ್ಯಾಸ್ಪದ ಹೇಳಿಕೆ ನೀಡಿದ್ದಾರೆ. ಫೆಬ್ರವರಿ 5 ರಂದು ’ಕಾಶ್ಮೀರ ಏಕತಾ ದಿನ’ ನಿಮಿತ್ತ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು.

ಮುನೀರ ತಮ್ಮ ಮಾತನ್ನು ಮುಂದುವರಿಸಿ,

1. ಈಗ ಅನೇಕ ದೇಶಗಳು ಇದರ ವಿರುದ್ಧ  ಧ್ವನಿ ಎತ್ತುತ್ತಿವೆ. ನಮ್ಮ ನಾಗರಿಕರ ಸುರಕ್ಷತೆಗಾಗಿ ನಾವು ಈ ಸಂಚನ್ನು ಧೂಳಿಪಟ ಮಾಡುತ್ತೇವೆ.

2. ಒಂದು ವೇಳೆ ದೇಶದ ಮೇಲೆ ದಾಳಿ ಮಾಡಿದರೆ ಅಥವಾ ನಮ್ಮ ಪ್ರಾದೇಶಿಕ ಸಮಗ್ರತೆಯನ್ನು  ಉಲ್ಲಂಘಿಸಿದರೆ, ಸೇನೆಯು ಸಂಪೂರ್ಣ ಬಲದಿಂದ ಪ್ರತ್ಯುತ್ತರ ನೀಡುತ್ತದೆ.

3. ಕಳೆದ 76 ವರ್ಷಗಳಲ್ಲಿ ಅನೇಕ ಕಾಶ್ಮೀರಿಗಳು ತ್ಯಾಗ ಮಾಡಿದ್ದಾರೆ. ಇಂದು ಅವರಿಗೆ ಗೌರವ ಸಲ್ಲಿಸುವ ಅವಕಾಶ ಒದಗಿ ಬಂದಿದೆ. ಕಾಶ್ಮೀರದಲ್ಲಿ ಭಾರತೀಯ ಸೇನೆ ನಿರಂತರವಾಗಿ ದೌರ್ಜನ್ಯ ನಡೆಸುತ್ತಿದೆ. (ಜಿಹಾದಿ ಭಯೋತ್ಪಾದಕರ ನಾಶಗೊಳಿಸುವುದು ಪಾಕಿಸ್ತಾನದಂತಹ ಜಿಹಾದಿ ದೇಶಕ್ಕೆ ದೌರ್ಜನ್ಯವೇ ಅನಿಸುವುದು ! – ಸಂಪಾದಕರು) ಅದರ ವಿರುದ್ಧ ಅಲ್ಲಿನ ಜನರು ಹೋರಾಡುತ್ತಿದ್ದಾರೆ ಎಂದು ಹೇಳಿದರು.

ಸಂಪಾದಕೀಯ ನಿಲುವು

ಕಳ್ಳನಿಗೊಂದು ಪಿಳ್ಳೆ ನೆವ ಎಂಬಂತೆ ಹಾಸ್ಯಾಸ್ಪದವಾಗಿದೆ, ಅದಕ್ಕಿಂತ ಅಧಿಕ ಹಾಸ್ಯಾಸ್ಪದವೆಂದರೆ ಜಿಹಾದಿ ಭಯೋತ್ಪಾದನೆಯ ಸೃಷ್ಟಿಕರ್ತ ಪಾಕಿಸ್ತಾನ ಭಯೋತ್ಪಾದನೆಯನ್ನು ನಾಶ ಮಾಡಲು ಸಜ್ಜಾಗಿರುವ ಭಾರತವನ್ನೇ ಆರೋಪಿಸುತ್ತಿರುವುದಾಗಿದೆ !

ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಮತ್ತು ಬಲೂಚಿಸ್ತಾನ್ ಪ್ರಾಂತ್ಯಗಳು ಪಾಕಿಸ್ತಾನದ ಕೈಯಿಂದ ಜಾರಿಹೋಗುವ ಮಾರ್ಗದಲ್ಲಿರುವಾಗ ಪಾಕಿಸ್ತಾನವು ಬಾಹ್ಯ ದಾಳಿಗಳಿಗಿಂತ ಆಂತರಿಕ ಬಂಡಾಯಗಳನ್ನು ಹೇಗೆ ನಿಯಂತ್ರಿಸಬಹುದು ಎನ್ನುವ ಕಡೆಗೆ ಗಮನ ಹರಿಸಿದರೆ, ಅದಕ್ಕೆ ಹಿತಕರವಾಗಿರಲಿದೆ !