ಅಯೋಧ್ಯೆಯು ಬಹಳ ಮೊದಲಿನಿಂದಲೇ ಶ್ರದ್ಧಾಕೇಂದ್ರವಾಗಿದೆ; ಆದರೆ ಮೊಘಲರ ಆಕ್ರಮಣದ ನಂತರ, ಇಲ್ಲಿಯ ಚಿತ್ರಣವನ್ನು ಸಂಪೂರ್ಣ ಬದಲಾಯಿಸಿ ಶ್ರದ್ಧೆಗೆ ಧಕ್ಕೆ ತರಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಲಾಯಿತು. ಈ ಕಾಲದಲ್ಲಿ ಅನೇಕ ಮಠಗಳ ಮಠಾಧಿಪತಿಗಳು ಮತ್ತು ದೇವಸ್ಥಾನಗಳ ಪೂಜಾರಿಗಳು ದೇವತೆಗಳ ಮೂರ್ತಿಗಳನ್ನು ರಕ್ಷಿಸಲು ಅವುಗಳನ್ನು ಶರಯೂ ನದಿಯಲ್ಲಿ ವಿಸರ್ಜಿಸುವುದು ಒಳ್ಳೆಯದೆಂದು ತಿಳಿದರು. ಇಂತಹ ಪರಿಸ್ಥಿತಿಯಲ್ಲಿ ಸನಾತನ ಧರ್ಮದ ಮೇಲಾಗುವ ಮೊಗಲರ ಆಕ್ರಮಣವನ್ನು ತಡೆಯಲು ಓರ್ವ ಪೂಜಾರಿಯು ಮುಂದಾಳತ್ವವನ್ನು ವಹಿಸಿದನು. ಅಯೋಧ್ಯೆಯಲ್ಲಿ ಮೊಗಲ ಸೈನ್ಯದ ವಿರುದ್ಧ ಹೋರಾಡುವ ಆ ಶೂರ ಯೋಧನ ಹೆಸರು ದೆವೀದಿನ ಪಾಂಡೆ ಆಗಿತ್ತು. ಈ ಹೆಸರಿನ ಪರಿಚಯ ಪ್ರತ್ಯೇಕವಾಗಿ ಮಾಡಿಕೊಡುವ ಆವಶ್ಯಕತೆಯಿಲ್ಲ. ಅವನು ಮೀರ ಬಾಂಕಿಯ ಸೈನ್ಯವನ್ನು ಒಬ್ಬನೇ ಸೋಲಿಸಿದನು. ಬಾಬರ್ ತನ್ನ ಆತ್ಮಚರಿತ್ರೆಯಲ್ಲಿ ‘ಒಬ್ಬನೇ ದೆವೀದಿನ ಪಾಂಡೆ ೭೦೦ ಮೊಘಲ್ ಸೈನಿಕರನ್ನು ಕೊಂದನು…’ ಎಂದು ಬರೆದಿದ್ದಾನೆ.
೧. ಸೂರ್ಯವಂಶಿ ಕ್ಷತ್ರೀಯರ ಪೂಜಾರಿ ದೆವೀದಿನ ಪಾಂಡೆ ಇವನ ಮಾಹಿತಿ
ಮೀರ್ ಬಾಂಕಿಯ ಸೇನೆಯೊಂದಿಗೆ ಹೋರಾಡಿದ ಅಯೋಧ್ಯೆಯ ದೆವೀದಿನ ಪಾಂಡೆ ಸೂರ್ಯವಂಶಿ ಕ್ಷತ್ರೀಯರ ಪೂಜಾರಿ ಆಗಿದ್ದನು. ಮಲ್ಲಕಂಬ, ಕುಸ್ತಿ ಇವುಗಳಲ್ಲದೇ ಅವನಿಗೆ ಶಸ್ತ್ರಾಸ್ತ್ರಗಳನ್ನು ಉಪಯೋಗಿಸುವುದರೊಂದಿಗೆ ಶಾಸ್ತ್ರಗಳ ಬಗ್ಗೆ ಆಸಕ್ತಿ ಇತ್ತು. ಅವನ ಪಾಂಡಿತ್ಯ ಮತ್ತು ಶೌರ್ಯವನ್ನು ದೂರದೂರದವರೆಗೆ ಚರ್ಚಿಸಲಾಗುತ್ತಿತ್ತು. ದೆವೀದಿನ ಪಾಂಡೆ ಧಾರ್ಮಿಕ ಬ್ರಾಹ್ಮಣ ಕುಟುಂಬಕ್ಕೆ ಸೇರಿದವನಾಗಿದ್ದನು.
೨. ಮೀರ ಬಾಂಕಿಯು ತೋಫುಗಳಿಂದ ರಾಮಮಂದಿರವನ್ನು ಬೀಳಿಸಿದನು !
ಬಂಗಾಳದ ಸುಲ್ತಾನ ಜಲಾಲ ಶಾಹನ ಕೃತಿಯಿಂದ ದೆವೀದಿನ ಪಾಂಡೆಯ ರಕ್ತ ಕುದಿಯತೊಡಗಿತು. ಯಾವಾಗ ಅಯೋಧ್ಯೆಯ ಇತಿಹಾಸವನ್ನು ಹೇಳಲಾಗುತ್ತದೆಯೋ, ಆಗ ದೆವೀದಿನ ಪಾಂಡೆಯ ಹೆಸರನ್ನು ‘ಯೋಧ’(ಸೈನಿಕ) ಎಂದು ನೆನಪಿಸಲಾಗುತ್ತದೆ. ಹ್ಯಾಮಿಲ್ಟನ್ ಬಾರಾಬಂಕಿ ಅವರು ‘ಗೆಝೆಟಿಯರ್’ನಲ್ಲಿ ಬರೆಯುತ್ತಾರೆ, ‘೨೧ ಮಾರ್ಚ್ ೧೫೨೮ ರಂದು, ಬಾಬರ್ ತನ್ನ ಸೇನಾಪತಿಯ ಮೀರ್ ಬಾಂಕಿ ನೇತೃತ್ವದಲ್ಲಿ ನಾಲ್ಕು ದಿಕ್ಕುಗಳಿಂದಲೂ ತೋಫುಗಳಿಂದ ಶ್ರೀರಾಮ ಮಂದಿರವನ್ನು ಧ್ವಂಸಗೊಳಿಸಿದನು. ಬಾಬರ ಇಷ್ಟಕ್ಕೆ ನಿಲ್ಲಲಿಲ್ಲ. ಅವನು ಮಸೀದಿಗಾಗಿ ತಯಾರಿಸಿದ ಇಟ್ಟಿಗೆಗಳಲ್ಲಿ ನೀರಿನ ಬದಲಿಗೆ ಹಿಂದೂ ಸೈನಿಕರ ರಕ್ತವನ್ನು ಉಪಯೋಗಿಸಿದನು. ಈ ಪವಿತ್ರ ಅಯೋಧ್ಯೆ ಎಷ್ಟು ರಕ್ತದಿಂದ ರಕ್ತರಂಜಿತವಾಗಿರಬಹುದು ಎನ್ನುವುದಷ್ಟು ಇದರಿಂದ ತಿಳಿಯುತ್ತದೆ.
೩. ಮೊಗಲ ಸೈನ್ಯವನ್ನು ಎದುರಿಸಲು ದೆವೀದಿನ ಪಾಂಡೆ ಸೈನ್ಯವನ್ನು ಸಿದ್ಧಪಡಿಸಿದನು
ಈ ಸಮಯದಲ್ಲಿ ಶ್ರೀರಾಮ ಜನ್ಮಭೂಮಿಯ ಮೇಲಿನ ಮಂದಿರವನ್ನು ಬೀಳಿಸಿರುವ ಸುದ್ದಿ ಗಾಳಿಯಂತೆ ಹರಡಿತು. ಸೂರ್ಯವಂಶಿ ಕ್ಷತ್ರೀಯರ ಪೂಜಾರಿ ದೇವಿದಿನ ಪಾಂಡೆ ಇದನ್ನು ಕೇಳುತ್ತಲೇ ಅವನ ರಕ್ತ ಕುದಿಯತೊಡಗಿತು. ಮೊಗಲ ಆಕ್ರಮಣದಿಂದ ಹಿಂದೂ ದೇವಸ್ಥಾನಗಳನ್ನು ಮತ್ತು ಸನಾತನ ಧರ್ಮದ ರಕ್ಷಣೆಗಾಗಿ ಅವನು ಪೂಜಾರಿಕರ್ತವ್ಯವನ್ನು ಪಾಲಿಸಿದನು ಮತ್ತು ಕ್ಷತ್ರೀಯರ ಕೈಕೆಳಗೆ ಗುರಾಣಿಯಾಗಿ ಕಾರ್ಯನಿರ್ವಹಿಸಲು ಮೊಘಲ್ ಸೈನ್ಯವನ್ನು ಎದುರಿಸಲು ಒಬ್ಬನೇ ಮುಂದೆ ಬಂದನು. ದೆವೀದಿನ ಪಾಂಡೆ ಊರಲ್ಲಿನ ಜನರಲ್ಲಿ ಹೊಸ ಸ್ಪೂರ್ತಿಯನ್ನು ಮತ್ತು ಹೊಸ ಚೈತನ್ಯವನ್ನು ತುಂಬಿದನು. ಇದರ ಪರಿಣಾಮದಿಂದ ಊರಲ್ಲಿ ೯೦ ಸಾವಿರ ಸೈನ್ಯವನ್ನು ಸಿದ್ಧಪಡಿಸಿದನು ಹಾಗೂ ಮೀರ ಬಾಂಕಿಯ ಸೈನ್ಯವನ್ನು ಎದುರಿಸಲು ಹೊರಟನು. ಇತಿಹಾಸಕಾರರ ಅಭಿಪ್ರಾಯದಂತೆ, ಪೂಜಾರಿ ದೆವೀದಿನ ಪಾಂಡೆ ಖಡ್ಗವನ್ನು ಕೈಗೆತ್ತಿಕೊಂಡನು. ಕ್ಷತ್ರೀಯರೂ ಅವನನ್ನು ಬೆಂಬಲಿಸಿದರು. ಮೊಗಲ ಸೈನ್ಯವನ್ನು ಎದುರಿಸಲು, ಬೃಹತ ಸಂಖ್ಯೆಯಲ್ಲಿ ಸೂರ್ಯವಂಶಿಯು ಬಾಬರನ ವಜೀರ ಮೀರ ಬಾಂಕಿಯ ತಾಷ್ಕೆಂದ ಸೈನ್ಯವನ್ನು ಸುತ್ತುಗಟ್ಟಿದರು. ಎಲ್ಲರೂ ‘ಹರ ಹರ ಮಹಾದೇವ’ ಎಂದು ಜಯಘೋಷ ಮಾಡುತ್ತಾ, ಮೊಗಲ ಸೈನ್ಯದ ಮೇಲೆ ದಾಳಿ ಮಾಡಿದರು. ಇಲ್ಲಿ ಅಪಾರ ರಕ್ತ ಹರಿಯಿತು.
೪. ಶ್ರೀರಾಮ ಮಂದಿರಕ್ಕಾಗಿ ದೆವೀದಿನ ಪಾಂಡೆಯವರ ಸಮರ್ಪಣೆ
ಈ ಯುದ್ಧವು ೫ ದಿನ ಹಗಲೂ ರಾತ್ರಿ ನಡೆಯಿತು; ಆದರೆ ವಂಚಕನೊಬ್ಬನು ಅವರಿಗೆ ಮೋಸ ಮಾಡಿದನು. ಈ ಯುದ್ಧದ ನೇತೃತ್ವವನ್ನು ವಹಿಸಿದ್ದ ದೆವೀದಿನ ಪಾಂಡೆಯವರನ್ನು ಅವರ ಅಂಗರಕ್ಷಕನು ಇಟ್ಟಿಗೆಯನ್ನು ಎಸೆದು ಹೊಡೆದನು ಮತ್ತು ಅವರನ್ನು ಗಾಯಗೊಳಿಸಿದನು. ಈ ಅವಕಾಶವನ್ನು ಸಾಧಿಸಿ ಮೀರ ಬಾಂಕಿಯು ದೆವೀದಿನ ಪಾಂಡೆಯ ಎದೆಯ ಮೇಲೆ ಗುಂಡು ಹಾರಿಸಿದನು. ಈ ೯೦ ಸಾವಿರ ಸೈನ್ಯದ ರಕ್ತದ ಸಮಿಧೆಯನ್ನು ಮತ್ತೊಮ್ಮೆ ಸ್ವಾಭಿಮಾನಕ್ಕಾಗಿ ಹರಿಸಲಾಯಿತು. ಶ್ರೀರಾಮಮಂದಿರಕ್ಕಾಗಿ ಇದು ಮೂರನೇ ಸಮರ್ಪಣೆಯಾಯಿತು.
(ಕೃಪೆ: ವಿವಿಧ ಜಾಲತಾಣಗಳು)