ಸಾಪ್ತಾಹಿಕ ‘ಸನಾತನ ಪ್ರಭಾತ’ ಪತ್ರಿಕೆಯು ೨೫ ವರ್ಷಗಳನ್ನು ಪೂರ್ಣಗೊಳಿಸಿದೆ. ರಾಷ್ಟ್ರ ಮತ್ತು ಧರ್ಮದ ಶ್ರೇಯೋಭಿವೃದ್ಧಿಯ ಉದಾತ್ತ ಉದ್ದೇಶದಿಂದ ಪ್ರಾರಂಭಿಸಲಾದ ಸನಾತನ ಪ್ರಭಾತದ ಸಿಂಹಾವಲೋಕನವನ್ನು ಮಾಡುವ ಸಮಯ ಈಗ ಬಂದಿದೆ ಮತ್ತು ಅದರ ಉದ್ದೇಶವು ಸಫಲವಾಗಿರುವುದು ಗಮನಕ್ಕೆ ಬರುತ್ತಿದೆ. ಇಂದು ಸಮಾಜದಲ್ಲಿ ಹಿಂದೂಗಳ ಮೇಲಾಗುತ್ತಿರುವ ಆಕ್ರಮಣಗಳು ಮತ್ತು ಹಿಂದೂ ಧರ್ಮದ ಮೇಲಾಗುತ್ತಿರುವ ಆಘಾತಗಳು ಕಡಿಮೆ ಆಗದೇ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೇ ಇವೆ. ಹೀಗಿದ್ದರೂ, ಅದರ ವಿರುದ್ಧ ಈಗ ಹಿಂದೂಗಳು ಜಾಗೃತ ಮತ್ತು ಸಂಘಟಿತರಾಗುತ್ತಿರುವ ಚಿತ್ರಣ ಕಂಡುಬರುತ್ತಿದೆ. ಕಳೆದ ಕೆಲವು ವರ್ಷಗಳಿಂದ ಹಿಂದೂಗಳಲ್ಲಿ ಆಗುತ್ತಿರುವ ಈ ವೈಚಾರಿಕ ಬದಲಾವಣೆಯ ಕಾರ್ಯದ ಅಡಿಪಾಯವು ‘ಸನಾತನ ಪ್ರಭಾತ’ ಸಾಪ್ತಾಹಿಕ ಪತ್ರಿಕೆಯ ರೂಪದಲ್ಲಿ ೨೫ ವರ್ಷಗಳ ಹಿಂದೆ ಆಗಿದೆ ಎಂದು ಖಂಡಿತವಾಗಿಯೂ ಹೇಳಬಹುದು. ಚಲನಚಿತ್ರ ಜಗತ್ತಿಗೆ ಸಂಬಂಧಿಸಿದ ವಿಷಯದ ಸಾಪ್ತಾಹಿಕಗಳು ಮತ್ತು ಮಾಸಿಕಗಳನ್ನು ಓದುವ ಅಭ್ಯಾಸವಿರುವ ಆ ಕಾಲದಲ್ಲಿ ಕೇವಲ ರಾಷ್ಟ್ರ ಮತ್ತು ಧರ್ಮ ಇವುಗಳ ಹಿತದೃಷ್ಟಿಯಿಂದ ಪ್ರಕಟವಾಗುತ್ತಿದ್ದ ಸಾಪ್ತಾಹಿಕ ‘ಸನಾತನ ಪ್ರಭಾತ’ದ ವೈಶಿಷ್ಟ್ಯವನ್ನು ಧರ್ಮಾಭಿಮಾನಿ ಮತ್ತು ದೇಶಭಕ್ತ ಜನತೆಯ ಗಮನವನ್ನು ಸೆಳೆಯದೇ ಇರಲಿಲ್ಲ. ಇಂದು ಜಾಗೃತರಾಗಿರುವ ಕನ್ನಡಿಗರು ಹಿಂದುತ್ವನಿಷ್ಠ ಜನತೆಯಲ್ಲಿ ಹಿಂದುತ್ವದ ವಿಚಾರಗಳ ಪೋಷಣೆಯಾಗಿದ್ದು, ಅದಕ್ಕೆ ಅಂದಿನ ಕಾಲದಲ್ಲಿ ‘ಸನಾತನ ಪ್ರಭಾತ’ ಸಾಪ್ತಾಹಿಕ ಪತ್ರಿಕೆ ಅಡಿಪಾಯವನ್ನು ಹಾಕಿದೆ. ನಿಃಸ್ವಾರ್ಥ ವೃತ್ತಿಯ ಸಾಧಕರು ತಮ್ಮ ಸಾಧನೆ ಎಂದು ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಓದುಗರ ಕೈಗೆ ಒಪ್ಪಿಸಿ ಹೋಗುತ್ತಿದ್ದರು. ಆಗ ಹಿಂದುತ್ವನಿಷ್ಠ ಓದುಗರಿಗೆ ಇವರೇ ‘ರಾಷ್ಟ್ರ-ಧರ್ಮಕ್ಕಾಗಿ ಏನಾದರೂ ಮಾಡಬಲ್ಲರು’, ಎಂದು ಅನಿಸುತ್ತಿತ್ತು ಮತ್ತು ಅದೀಗ ಸಾರ್ಥಕವಾಗಿರುವುದು ಕಂಡುಬರುತ್ತಿದೆ.
೧. ಅಧ್ಯಾತ್ಮಶಾಸ್ತ್ರವನ್ನು ತಿಳಿಸಿ ಹೇಳುವುದು !
ಮನುಷ್ಯ ಜನ್ಮದ ಉದ್ದೇಶ, ವ್ಯಕ್ತಿಯ ವ್ಯಷ್ಟಿ ಜೀವನದಲ್ಲಿ ಹಾಗೆಯೇ ಆದರ್ಶ ಸಮಾಜ ಮತ್ತು ರಾಷ್ಟ್ರವನ್ನು ರಚಿಸಲು ಆವಶ್ಯಕವಿರುವ ಸಾಧನೆಯ ಮಹತ್ವ; ಕಾಲಾನುಸಾರ ಯಾವ ಸಾಧನೆಯನ್ನು ಮಾಡಬೇಕು ಮತ್ತು ಅದನ್ನು ಹೇಗೆ ಮಾಡಬೇಕು ? ಮುಂತಾದ ವಿಷಯಗಳ ಬಗ್ಗೆ ನಿರಂತರವಾಗಿ ಮಾರ್ಗದರ್ಶನವನ್ನು ಸಾಪ್ತಾಹಿಕ ‘ಸನಾತನ ಪ್ರಭಾತ’ ಮಾಡಿದೆ. ಮನಸ್ಸು, ಬುದ್ಧಿ ಮತ್ತು ವಿಜ್ಞಾನದಾಚೆಗಿನ ‘ಸೂಕ್ಷ್ಮದ’ ಅಂದರೆ ಆಧ್ಯಾತ್ಮಿಕ ಜಗತ್ತಿನ ಅರಿವು ಮೂಡಿಸುವುದರಲ್ಲಿ ಇದು ಏಕಮೇವಾದ್ವಿತೀಯ ಸಾಪ್ತಾಹಿಕವಾಗಿದೆ. ಬುದ್ಧಿವಾದಿಗಳಿಗೆ ವಿಜ್ಞಾನನಿಷ್ಠ ಪ್ರಯೋಗಗಳ ಆಧಾರದಲ್ಲಿ ಸಾತ್ತ್ವಿಕ ವಿಷಯಗಳ ಮಹತ್ವವನ್ನು ತಿಳಿಸಿಕೊಟ್ಟು, ‘ಜೀವನವನ್ನು ಅಧ್ಯಾತ್ಮೀಕರಣ ಹೇಗೆ ಮಾಡಬೇಕು ?’ ಎನ್ನುವುದನ್ನು ತಿಳಿಸಿ ಆದರ್ಶ ಸಮಾಜ ರಚನೆಯ ಉದ್ಘೋಷವನ್ನು ಮಾಡುವ ಏಕೈಕ ಪತ್ರಿಕೆ ಇದಾಗಿದೆ.
೨. ಧರ್ಮಶಿಕ್ಷಣದ ಇನ್ನೊಂದು ಹೆಸರು..!
‘ಧರ್ಮಶಿಕ್ಷಣದ ಇನ್ನೊಂದು ಹೆಸರೇ ‘ಸನಾತನ ಪ್ರಭಾತ’ ವಾರಪತ್ರಿಕೆ, ಹೀಗೆಂದರೆ ಅತಿಶಯೋಕ್ತಿ ಆಗಲಿಕ್ಕಿಲ್ಲ. ಇದು ಹಿಂದೂ ಗಳಿಗೆ ಅವರ ದೇವತೆಗಳು, ಧರ್ಮ, ಹಬ್ಬ, ವ್ರತ, ಪರಂಪರೆ, ಸಂಸ್ಕ್ರತಿ, ಧಾರ್ಮಿಕ ವಿಧಿಗಳು, ಸಂಸ್ಕಾರ ಇತ್ಯಾದಿ ವಿಷಯಗಳ ಧರ್ಮ ಮತ್ತು ಅಧ್ಯಾತ್ಮಶಾಸ್ತ್ರವನ್ನು ಹೇಳಿ, ಅವರಿಗೆ ಧರ್ಮಶಿಕ್ಷಣ ನೀಡುವ ಒಂದು ಅಪರೂಪದ ವಾರಪತ್ರಿಕೆಯಾಗಿದೆ. ಧರ್ಮಶಾಸ್ತ್ರ ತಿಳಿದಿದ್ದರಿಂದ ಧರ್ಮಾಭಿಮಾನ ಜಾಗೃತರಾದÀ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಓದುಗರು ದೇವತೆಗಳ ವಿಡಂಬನೆಯನ್ನು ತಡೆಯಲು ಧರ್ಮಜಾಗೃತಿ ಕಾರ್ಯ ಮಾಡಲು ಸನ್ನದ್ಧರಾದರು ಮತ್ತು ಅರಿವಿಲ್ಲದೆ ರಾಷ್ಟ್ರ-ಧರ್ಮ ಕಾರ್ಯದಲ್ಲಿ ಸಕ್ರಿಯರಾದರು.
೩. ಕೃತಿಶೀಲ ಓದುಗರು !
ಹಬ್ಬ-ವ್ರತಗಳನ್ನು ಧರ್ಮಶಾಸ್ತ್ರಕ್ಕನುಸಾರ ಆಚರಿಸುವವರು, ತಿಲಕವನ್ನು ಹಚ್ಚಿಕೊಳ್ಳಲು ಪ್ರಾರಂಭಿಸಿದವರು, ಧರ್ಮಾನುಸಾರ ಹರಿಯುವ ನೀರಿನಲ್ಲಿ ಮೂರ್ತಿ ವಿಸರ್ಜಿಸಲು ಪ್ರಾಮುಖ್ಯತೆಯನ್ನು ನೀಡುವವರು, ರಾಷ್ಟ್ರಧ್ವಜದ ಅಪಮಾನವಾಗಬಾರದೆಂದು ಕಾಳಜಿ ವಹಿಸುವವರು, ಚೀನಿ ವಸ್ತುಗಳನ್ನು ಖರೀದಿಸದೇ ಇರುವವರು ಮುಂತಾದವರು ತಮ್ಮ ತಮ್ಮ ರೀತಿಯಲ್ಲಿ ರಾಷ್ಟ್ರ ಮತ್ತು ಧರ್ಮ ಕಾರ್ಯದಲ್ಲಿ ಭಾಗವಹಿಸುವ ಓದುಗರನ್ನು ಸಾಪ್ತಾಹಿಕ ‘ಸನಾತನ ಪ್ರಭಾತ’ ಸಿದ್ಧಪಡಿಸಿತು.
೪. ವೈಶಿಷ್ಟ್ಯಪೂರ್ಣ ಲೇಖನಗಳು !
ಚಿಕ್ಕ ಮಕ್ಕಳಿಗಾಗಿ ಬೋಧಪ್ರದ ವಿಷಯಗಳು, ಸಂತರ ವಿಷಯದಲ್ಲಿನ ಲೇಖನಗಳು, ಸೂಕ್ಷ್ಮ ಪ್ರಯೋಗಗಳು, ‘ಫಲಕ ಪ್ರಸಿದ್ಧಿ’ ಹೀಗೆ ಅತ್ಯಂತ ವೈಶಿಷ್ಟ್ಯಪೂರ್ಣ ಲೇಖನಗಳು ಈ ಸಾಪ್ತಾಹಿಕದಲ್ಲಿ ಆಗಾಗ ಮೂಡಿಬಂದಿವೆ ಮತ್ತು ಬರುತ್ತಿವೆ. ‘ಫಲಕ ಪ್ರಸಿದ್ಧಿ’ ಇದು ಸಾಪ್ತಾಹಿಕದಲ್ಲಿ ಪ್ರಕಟವಾಗುವ ಚೌಕಟ್ಟಿನ ಸಹಾಯದಿಂದ ಊರೂರುಗಳಲ್ಲಿ ಬೋಧನೆಯ ಫಲಕಗಳನ್ನು ಹಚ್ಚುವುದರಿಂದ ವ್ಯಾಪಕ ಸ್ತರದಲ್ಲಿ ರಾಷ್ಟ್ರ ಮತ್ತು ಧರ್ಮದ ವಿಷಯದಲ್ಲಿ ಜನರಿಗೆ ಬೋಧನೆಯಾಗುತ್ತದೆ. ಸಾಪ್ತಾಹಿಕ ‘ಸನಾತನ ಪ್ರಭಾತ’ದ ವೈಶಿಷ್ಟ್ಯವೆಂದರೆ ಅದು ತನ್ನ ಲೇಖನಗಳಿಂದ ‘ಕಲಿಯುಗಾಂತರ್ಗತ ಕಲಿಯುಗದ ಧರ್ಮದ ವಿರುದ್ಧ ಅಧರ್ಮದ ಹೋರಾಟ ಈ ಸೂಕ್ಷ್ಮ ಮತ್ತು ಸ್ಥೂಲ ಹೀಗೆ ಎರಡೂ ಹಂತಗಳಲ್ಲಿ ಪ್ರಾರಂಭವಾಗಿದ್ದು, ಇದರಲ್ಲಿ ನಾವು ಯಾವಾಗಲೂ ಧರ್ಮದ ಪರವಾಗಿದ್ದು, ನಮ್ಮ ಧರ್ಮ ಕರ್ತವ್ಯವನ್ನು (ಸಾಧನೆ) ಮಾಡುವುದಾಗಿದೆ’, ಎಂದು ೨೫ ವರ್ಷಗಳ ಹಿಂದಿನಿಂದಲೂ ಜನತೆಯ ಮನಸ್ಸಿನ ಮೇಲೆ ಬಿಂಬಿಸಲು ಪ್ರಾರಂಭಿಸಿತು ಮತ್ತು ವೈಚಾರಿಕ ಪರಿವರ್ತನೆಯ ವ್ರತವನ್ನು ಕೈಗೆತ್ತಿಕೊಂಡು ಸ್ವತಃ ಮುಂಚೂಣಿಯಲ್ಲಿ ನಿಂತು ಹೋರಾಡಲು ಪ್ರಾರಂಭಿಸಿತು !
೫. ವಿರೋಧಿಗಳಿಗೆ ತಪರಾಕಿ !
ಒಂದು ಧ್ಯೇಯನಿಷ್ಠೆಯಿಂದ ಮುನ್ನುಗ್ಗುತ್ತಿರುವ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಹೆಚ್ಚುತ್ತಿರುವ ಜನಪ್ರಿಯತೆಯ ನಡುವೆ ಅನೇಕ ಅಡಚಣೆಗಳು ಮತ್ತು ಅಡೆತಡೆಗಳು ಎದುರಾದವು. ರಾಷ್ಟ್ರ ಮತ್ತು ಧರ್ಮ ತೇಜದ ಜ್ಯೋತಿಯ ಬಿಸಿಯನ್ನು ಯಾರಿಗೆ ಸಹಿಸಿಕೊಳ್ಳಲು ಸಾಧ್ಯವಾಗಲಿಲ್ಲವೋ, ಅವರು ಇದನ್ನು ವಿರೋಧಿಸಲು ಪ್ರಾರಂಭಿಸಿದರು. ಸತ್ಯಾನ್ವೇಷಣೆ ಮತ್ತು ಖಂಡತುಂಡÀ ಲೇಖನಗಳು ಎಂಬ ವೈಶಿಷ್ಟ ವನ್ನು ಹೊಂದಿರುವ ‘ಸನಾತನ ಪ್ರಭಾತ’ ಸಾಪ್ತಾಹಿಕವನ್ನು ಕೆಲವು ಸಮಾಜಕಂಟಕರು ವಿರೋಧಿಸಿದರು. ಕೆಲವರು ಈ ಪತ್ರಿಕೆಗೆ ವಿದೇಶದಿಂದ ಧನಸಹಾಯ ಬರುತ್ತದೆ ಎಂದರು, ಕೆಲವರು ಅದನ್ನು ಕೋಮುವಾದಿ ಎಂದು ಟೀಕಿಸಿದರು, ಕೆಲವರು ಅದನ್ನು ನಿಷೇಧಿಸುವ ಬೆದರಿಕೆಯನ್ನು ಕೂಡ ಹಾಕಿದರು. ಕೆಲವರು ಅದನ್ನು ಸುಡಲು ಪ್ರಯತ್ನಿಸಿದರು. ಆದರೆ ‘ಸನಾತನ ಪ್ರಭಾತ’ವು ತನ್ನ ರಾಷ್ಟ್ರ ಮತ್ತು ಧರ್ಮ ನಿಷ್ಠೆಯಿಂದಿರುವ ಘೋಷವಾಕ್ಯದಿಂದ ಸ್ವಲ್ಪವೂ ವಿಚಲಿತವಾಗಲಿಲ್ಲ ಮತ್ತು ವಿರೋಧಿಗಳಿಗೂ ಅತ್ಯಂತ ಸಂಯಮದಿಂದ ಉತ್ತರಿಸಿತು. ‘ಸನಾತನ ಪ್ರಭಾತ’ದ ಲೇಖನಗಳು ಅನೇಕ ಅಡಚಣೆಗಳ ಬೆಂಕಿಯ ಕುಲುಮೆಯಲ್ಲಿ ಸುಟ್ಟು ಬೆಂದು ಹೊರಬಂದಿವೆ; ಇದಕ್ಕೆಲ್ಲ ಕಾರಣ ಈಶ್ವರನ ಅಧಿಷ್ಠಾನ, ಪ್ರಖರ ರಾಷ್ಟ್ರಾಭಿಮಾನ, ವ್ಯಾಪಕ ಮಾನವಹಿತದ ಉದಾತ್ತ ಧ್ಯೇಯ ಮತ್ತು ಆಂತರಿಕ-ಬಾಹ್ಯ ಪಾರದರ್ಶಕತೆಯೇ ಅದರ ಲೇಖನಿಯ ಸಾರವಾಗಿದೆ.
೬. ಮೊದಲಿನ ಸ್ಥಿತಿ !
ಸಾಪ್ತಾಹಿಕ ‘ಸನಾತನ ಪ್ರಭಾತ’ವು ಪ್ರಾರಂಭದ ಕಾಲದಲ್ಲಿ ಕಲಬೆರಕೆ ಮಾಡುವವರ, ತೂಕದಲ್ಲಿ ಮೋಸ ಮಾಡುವವರ ಮುಂತಾದ ಸಮಾಜದ್ರೋಹಿ ವಿಷಯಗಳ ವಿರುದ್ಧ ಪ್ರಪ್ರಥಮ ಬಾರಿಗೆ ಧ್ವನಿಯನ್ನು ಎತ್ತಿತ್ತು. ನ್ಯಾಯೋಚಿತ ಮಾರ್ಗದಿಂದ ಭ್ರಷ್ಟಾಚಾರದ ವಿರುದ್ಧ ದೂರು ನೀಡಲು ಹೋರಾಡಲು ಜನರಿಗೆ ಪ್ರಬೋಧನೆ ಮಾಡಲಾಯಿತು. ‘ರಾಷ್ಟ್ರ ಮತ್ತು ಧರ್ಮದ ಹಾನಿ ಅಂದರೇನು ? ಮತ್ತು ಅದನ್ನು ಹೇಗೆ ತಪ್ಪಿಸಬೇಕು ?’ ಎಂದು ಮಾರ್ಗದರ್ಶನ ಮಾಡಲಾಯಿತು. ಮನೋರಂಜನೆಯ ದಿನ ಪತ್ರಿಕೆಗಳನ್ನು ಓದುವ ರೂಢಿಯಿರುವ ಸಮಾಜಕ್ಕೆ ಈ ಪ್ರಬೋಧನೆ ಹೊಚ್ಚ ಹೊಸದಾಗಿತ್ತು; ಆದರೆ ಅವು ಅವರ ದೈನಂದಿನ ಜೀವನದ ಸಮಸ್ಯೆಗಳಿಗೆ ಸಂಬಂಧಿಸಿದ್ದವು. ಬೀದಿನಾಯಿಗಳ ಸಮಸ್ಯೆ, ರಸ್ತೆಗಳ ಮೇಲಿನ ಹೊಂಡಗಳು ಮತ್ತು ಬೀದಿ ದೀಪಗಳು ಇವುಗಳ ಸಮಸ್ಯೆಗಳೊಂದಿಗೆ ಇಂದು ರಾಷ್ಟ್ರೀಯ ಬಿಕ್ಕಟ್ಟಿನವರೆಗೆ ಅನೇಕ ವಿಷಯಗಳ ಬಗ್ಗೆ ಹೋರಾಡಲಾಗುತ್ತಿದೆ.
೭. ವೈಚಾರಿಕ ಕ್ರಾಂತಿಯ ಮಾಧ್ಯಮ !
‘‘ಸನಾತನ ಪ್ರಭಾತ’ ವಾರಪತ್ರಿಕೆ ಪ್ರಾರಂಭವಾಗುವ ಮೊದಲು ಅನೇಕ ವಿಷಯಗಳು ಜನಸಾಮಾನ್ಯ ಸಮಾಜಕ್ಕೆ ತಿಳಿದೇ ಇರಲಿಲ್ಲ’, ಇಂತಹ ಅಭಿಪ್ರಾಯಗಳು ಓದುಗರಿಂದ ಬಂದವು. ಅವುಗಳಲ್ಲಿ ಕೆಲವು ಪ್ರಮುಖವಾದವುಗಳೆಂದರೆ, ‘ಮೆಕಾಲೆ ಶಿಕ್ಷಣ ಪದ್ಧತಿಯ ದುಷ್ಪರಿಣಾಮಗಳು’, ಜಾತ್ಯತೀತವಾದದಿಂದ ಪ್ರಜಾಪ್ರಭುತ್ವಕ್ಕಾದ ದುಃಸ್ಥಿತಿ ಮತ್ತು ‘ಆದರ್ಶ ರಾಷ್ಟ್ರವನ್ನು ನಿರ್ಮಿಸಲು ಪಿತೃಪ್ರಭುತ್ವ ಮತ್ತು ಧರ್ಮನಿಷ್ಠ ರಾಜ್ಯವ್ಯವಸ್ಥೆಯ ಮಹತ್ವ’ ಇವುಗಳ ಅಧ್ಯಯನವನ್ನು ಸಮಾಜದಲ್ಲಿ ಮೊತ್ತಮೊದಲು ಮಂಡಿಸಲಾಯಿತು. ಇದರಿಂದ ಸಮಾಜದಲ್ಲಿ ಒಂದು ರೀತಿಯಲ್ಲಿ ವೈಚಾರಿಕ ಕ್ರಾಂತಿಯಾಗಿ ಜನರು ಈ ಬಗ್ಗೆ ವಿಚಾರ ಮಾಡತೊಡಗಿದರು.
೮. ಹಿಂದೂಗಳ ಮೇಲಾಗುವ ಆಘಾತಗಳನ್ನು ಪ್ರಶ್ನಿಸಿ ಪ್ರತಿಭಟಿಸುವುದು !
ರಾಷ್ಟ್ರ ಮತ್ತು ಧರ್ಮದ ಬಗ್ಗೆ ಜನಜಾಗೃತಿ ಮೂಡಿಸುವಲ್ಲಿ ಎಲ್ಲ ವರ್ತಮಾನಪತ್ರಿಕೆಗಳಲ್ಲಿ ‘ಸನಾತನ ಪ್ರಭಾತ’ದ ಕೈಯನ್ನು ಯಾರೂ ಹಿಡಿಯಲು ಸಾಧ್ಯವಿಲ್ಲ. ಎಲ್ಲ ರೀತಿಯ ‘ಜಿಹಾದ್’ ಗಳಿಗೆ ಮೊಟ್ಟಮೊದಲು ಪ್ರತಿಭಟಿಸಿರುವ ಈ ಸಾಪ್ತಾಹಿಕ ‘ಹಿಂದುತ್ವದ ರಕ್ಷಕ’ ಆಗಿದೆ. ಇಂದು ಸಾವಿರಾರು ಸಂಖ್ಯೆಯಲ್ಲಿ ಹಿಂದೂಗಳ ಆಂದೋಲನಗಳು ನಡೆಯುತ್ತಿವೆ; ಆದರೆ ಎರಡೂವರೆ ದಶಕಗಳ ಮೊದಲು ‘ಹಿಂದೂ‘ ಶಬ್ದವನ್ನು ಉಚ್ಚರಿಸುವುದನ್ನೂ ಕೋಮುವಾದಿ ಎಂದು ತಿಳಿಯಲಾಗುತ್ತಿರುವ ಸಮಯದಲ್ಲಿ ಸಾಪ್ತಾಹಿಕ ‘ಸನಾತನ ಪ್ರಭಾತ’ವು ಹಿಂದೂಗಳ ಮೇಲಾಗುತ್ತಿರುವ ಆಘಾತಗಳ ವಿಷಯದಲ್ಲಿ ಧ್ವನಿಯೆತ್ತಲು ಮೊಟ್ಟ ಮೊದಲು ಪ್ರಾರಂಭಿಸಿತು.
೯. ವೈಶ್ವಿಕ ಹಿಂದೂ ರಾಷ್ಟ್ರದ ಜನಕ !
‘ಕೇಸರಿ’ ದಿನಪತ್ರಿಕೆಯು ‘ಅಸಂತೋಷ’ದ (ಬ್ರಿಟಿಷರ ವಿರುದ್ಧದ) ಜನಕವಾಗಿತ್ತು, ಹಾಗೆಯೇ ‘ಸನಾತನ ಪ್ರಭಾತ’ ವಾರ ಪತ್ರಿಕೆಯು ‘ಹಿಂದೂ ರಾಷ್ಟ್ರ ನಿರ್ಮಾಣದ ಕಲ್ಪನೆ’ಯ ಜನಕವಾಗಿದೆ. ‘ಹಿಂದೂ’ ಶಬ್ದವನ್ನು ಉಚ್ಚರಿಸಲೂ ಕಠಿಣವಾಗಿದ್ದ ಸಮಯದಲ್ಲಿ, ಹಿಂದೂ ರಾಷ್ಟ್ರ ನಿರ್ಮಾಣದ ಉದಾತ್ತ ಧ್ಯೇಯದೊಂದಿಗೆ ‘ಸನಾತನ ಪ್ರಭಾತ’ ವಾರಪತ್ರಿಕೆಯು ತನ್ನ ಕೆಲಸವನ್ನು ಮಾಡುವುದನ್ನು ಮುಂದುವರೆಸಿತು. ಇಂದು ಕಾಲಾಂತರದಲ್ಲಿ ನಾಲ್ಕೂ ಕಡೆಯಿಂದ ಹಿಂದೂ ರಾಷ್ಟ್ರದ ಬೇಡಿಕೆಯು ತೀವ್ರತೆಯನ್ನು ಪಡೆಯುತ್ತಿದೆ. ಈ ಧ್ವನಿ ನಾಳೆ ಮತ್ತಷ್ಟು ಗಟ್ಟಿಯಾಗಲಿದೆ. ಸಾಪ್ತಾಹಿಕ ‘ಸನಾತನ ಪ್ರಭಾತ’ದ ಉದ್ದೇಶವು ಭವಿಷ್ಯದಲ್ಲಿ ಪೂರ್ಣವಾಗಲಿದೆ; ಆದರೆ ಅದಕ್ಕಿಂತಲೂ ಮುಂದೆ ಹೋಗಿ, ಅದಕ್ಕೆ ‘ವೈಶ್ವಿಕ ಹಿಂದೂ(ಆರ್ಯ) ರಾಷ್ಟ್ರ’ವನ್ನಾಗಿ ಮಾಡುವ ವಿಶಾಲ ಧ್ಯೇಯದಿಂದ ಮುಂಬರುವ ಕಾಲದಲ್ಲಿ ನಾಗಾಲೋಟದಲ್ಲಿ ಓಡಲು ಸಾಧ್ಯವಾಗಲಿ ಎಂದು ಈಶ್ವರನ ಚರಣಗಳಲ್ಲಿ ಪ್ರಾರ್ಥನೆ !
‘ಪೇಡ್ ನ್ಯೂಸ್ ಮತ್ತು ‘ಬ್ರೇಕಿಂಗ್ ನ್ಯೂಸ್’ಗಳ ಇಂದಿನ ಕಾಲದಲ್ಲಿ ಅತ್ಯಂತ ಸಂಯಮದಿಂದ, ಆದರೂ ಅತ್ಯಂತ ವಸ್ತುನಿಷ್ಠ ಪತ್ರಿಕಾ ವರದಿಯನ್ನು ಮಾಡುತ್ತಾ ಸಾಪ್ತಾಹಿಕ ‘ಸನಾತನ ಪ್ರಭಾತ’ ಕೇವಲ ರಾಷ್ಟ್ರ ಮತ್ತು ಧರ್ಮಕ್ಕೆ ಸಂಬಂಧಿಸಿದ ವಿಷಯಗಳಿಗೆ ಆದ್ಯತೆ ನೀಡಿತು. ಸದ್ಯದ ಜಾಹೀರಾತು ಯುಗದಲ್ಲಿ ಆರ್ಥಿಕ ಹಾನಿಯನ್ನು ಸಹಿಸುತ್ತಾ ಗುಟ್ಕಾ, ಮದ್ಯಪಾನಗಳಂತಹ ಸಮಾಜಘಾತುಕ ಜಾಹೀರಾತುಗಳನ್ನು ಪ್ರಕಟಿಸದಿರುವ ತನ್ನ ನೀತಿಯನ್ನು ‘ಸನಾತನ ಪ್ರಭಾತ’ ವಾರಪತ್ರಿಕೆ ಕಳೆದ ೨೫ ವರ್ಷಗಳಿಂದ ಕಾಯ್ದುಕೊಂಡಿದೆ. ‘ಸನಾತನ ಪ್ರಭಾತ’ ವಾರಪತ್ರಿಕೆಯು ತನ್ನ ತತ್ತ್ವನಿಷ್ಠೆಯನ್ನು ಕಾಪಾಡಿಕೊಂಡು ಬಂದಿದೆ.
ವ್ಯಾವಹಾರಿಕ ಅನುಭವ ಮತ್ತು ಆರ್ಥಿಕ ಬೆಂಬಲ ಇಲ್ಲದಿರುವಾಗಲೂ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಜ್ಯೋತಿ ಕಳೆದ ೨೫ ವರ್ಷಗಳಿಂದ ಬೆಳಗುತ್ತಿರುವುದು ಕೇವಲ ಪವಾಡವೇ ಆಗಿದೆ. ‘ಸಂತರ ಆಶೀರ್ವಾದ ಮತ್ತು ಈಶ್ವರನ ಕೃಪೆಯಿಂದಲೇ ಇದು ಸಾಧ್ಯವಾಗಿದೆ’, ಎನ್ನುವುದರ ಮೇಲೆ ನಮಗೆ ದೃಢ ಶ್ರದ್ಧೆಯಿದೆ. ಇದೊಂದೇ ವಿಷಯ ‘ಸನಾತನ ಪ್ರಭಾತ’ದ ಪ್ರತ್ಯೇಕತೆ ಗಮನಕ್ಕೆ ಬರಲು ಸಾಕಾಗುತ್ತದೆ.
– ಸೌ. ರೂಪಾಲಿ ವರ್ತಕ, ಸನಾತನ ಆಶ್ರಮ, ದೇವದ, ಪನವೇಲ