ಸನಾತನ ಪ್ರಭಾತದಲ್ಲಿನ ಪ್ರಬೋಧನೆಗನುಸಾರ ಇಂದಿನಿಂದಲೇ ಕೃತಿಯನ್ನು ಆರಂಭಿಸಿ !

ಸನಾತನ ಪ್ರಭಾತದ ರಜತ ಮಹೋತ್ಸವದ ಪ್ರಯುಕ್ತ ಸಂಸ್ಥಾಪಕ ಸಂಪಾದಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಬಾಳಾಜಿ ಆಠವಲೆಯವರ ಸಂದೇಶ

ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ

‘ವೈಯಂ ರಾಷ್ಟ್ರ ಜಾಗೃಯಾಮ ಪುರೋಹಿತಃ’ (ಯಜುರ್ವೇದ ಅಧ್ಯಾಯ ೯, ಋಚೆ ೨೩) ಅಂದರೆ ನಾವು ಪುರೋಹಿತ ರಾಷ್ಟ್ರವನ್ನು ಜಾಗೃತಗೊಳಿಸುತ್ತಲಿರುವೆವು ಎಂದರ್ಥ. ಇದರಲ್ಲಿ ಪುರೋಹಿತ ಶಬ್ದದ ಅರ್ಥ ಯಾರು ಪುರ ಅಂದರೆ ನಗರದ ಹಿತ ಕಾಯುತ್ತಾನೆಯೋ, ಅವನು ಪುರೋಹಿತ ! ಸನಾತನ ಪ್ರಭಾತದ ನಿಲುವು ಸಹ ಇದೇ ಆಗಿದೆ. ಸನಾತನ ಪ್ರಭಾತವು ಆಧುನಿಕ ಕಾಲದಲ್ಲಿ ಪುರೋಹಿತವಾಗಿದ್ದು ಅದು ಸತತ ದೇಶದಲ್ಲಿ ವಾಸಿಸುವ ಹಿಂದೂಗಳನ್ನು ಜಾಗೃತರನ್ನಾಗಿರಿಸಲು ಪ್ರಯತ್ನಿಸುತ್ತಿದೆ. ಸನಾತನ ಪ್ರಭಾತವು ಕಳೆದ ೨೫ ವರ್ಷಗಳಿಂದ ಸತತವಾಗಿ ಪ್ರಬೋಧನೆಯ ಮೂಲಕ ಸಮಾಜಕ್ಕೆ ಧರ್ಮಬೋಧನೆ, ರಾಷ್ಟ್ರಬೋಧನೆ ಮತ್ತು ಸಾಧನೆಯ ಬೋಧನೆ ಮಾಡುತ್ತಿದೆ. ಈ ಪ್ರಭೋದನೆಯಂತೆÀ ಆಚರಣೆ ಮಾಡಿದರೆ ಹಿಂದೂ ಸಮಾಜದ ಮತ್ತು ಹಿಂದೂ ರಾಷ್ಟ್ರದ ಕಲ್ಯಾಣವೇ ಆಗುವುದು. ಇದಕ್ಕಾಗಿ ಸನಾತನ ಪ್ರಭಾತದ ಬೋಧನೆಗನುಸಾರ ಇಂದಿನಿಂದಲೇ ಕೃತಿಯನ್ನು ಆರಂಭಿಸಿರಿ.

ಸನಾತನ ಪ್ರಭಾತದ ದೈನಂದಿನ ಕಾರ್ಯದಲ್ಲಿ ಕಳೆದ ೨೫ ವರ್ಷಗಳಿಂದ ಸಕ್ರಿಯವಾಗಿರುವ ಸಾಧಕರು, ಧರ್ಮಪ್ರೇಮಿಗಳು ಮತ್ತು ಜಾಹೀರಾತುದಾರರ ಆಧ್ಯಾತ್ಮಿಕ ಉನ್ನತಿ ಆಗಬೇಕು ಎಂದು ಶ್ರೀಗುರುಚರಣಗಳಲ್ಲಿ ಪ್ರಾರ್ಥನೆ !

– ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆ ಸಂಸ್ಥಾಪಕ ಸಂಪಾದಕ, ಸನಾತನ ಪ್ರಭಾತ, ಪತ್ರಿಕಾಸಮೂಹ (೪.೪.೨೦೨೩)