ಸಾಪ್ತಾಹಿಕ ‘ಸನಾತನ ಪ್ರಭಾತ’ವು ಲೋಕಮಾನ್ಯ ತಿಲಕರ ‘ಕೇಸರಿ’ಯ ಆದರ್ಶವನ್ನು ಮುಂದಿಟ್ಟುಕೊಂಡು ಹಿಂದೂಗಳ ಮೇಲಿನ ಆಘಾತ ಹಾಗೂ ಅತ್ಯಾಚಾರಗಳ ವಿರುದ್ಧ ಅತ್ಯಂತ ಪ್ರಖರವಾಗಿ ಕಳೆದ ೨೫ ವರ್ಷಗಳಿಂದ ನಿರಂತರವಾಗಿ ಹೋರಾಡುತ್ತಿದೆ. ಕಳೆದ ೨೫ ವರ್ಷಗಳಲ್ಲಿ ನಾವು ಬೇರೆಬೇರೆ ರೀತಿಯ ಕಾಲಘಟ್ಟಗಳನ್ನು ಅನುಭವಿಸಿದೆವು. ಸಾಪ್ತಾಹಿಕ ‘ಸನಾತನ ಪ್ರಭಾತ’ದ ಲೇಖನಿಯ ಮೂಲಕ ನಡೆಯುತ್ತಿರುವ ರಾಷ್ಟ್ರ-ಧರ್ಮ ಕಾರ್ಯವನ್ನು ಯಾವಾಗೆಲ್ಲ ಗೌರವಿಸಲಾಯಿತೋ, ಆಗ ಅದು ಸ್ಥಿರವಾಗಿತ್ತು ಹಾಗೂ ಕಠಿಣ ಕಾಲದಲ್ಲಿಯೂ ಪ್ರಖರ ಧ್ಯೇಯನಿಷ್ಠೆಯಿಂದ ದೃಢವಾಗಿ ನೆಲೆಯೂರಿತ್ತು ! ಭಗವಂತನ ಧರ್ಮ ಸಂಸ್ಥಾಪನೆಯ ಕಾರ್ಯದಲ್ಲಿ ಯೋಗದಾನ ನೀಡಲು ಕಟಿಬದ್ಧ ಸಾಪ್ತಾಹಿಕ ‘ಸನಾತನ ಪ್ರಭಾತ’ದ ಈ ಲೇಖನಿಯು ಆಪತ್ಕಾಲದಲ್ಲಿಯೂ ಪ್ರತಿದಿನ ಅದರ ಶಬ್ದಪುಷ್ಪಗಳನ್ನು ಭಗವಂತನ ಚರಣಗಳಲ್ಲಿ ಅರ್ಪಿಸುತ್ತಿದೆ ಹಾಗೂ ಅವನ ಕೃಪಾಶೀರ್ವಾದದಿಂದಲೇ ಭವಿಷ್ಯದಲ್ಲಿಯೂ ಮಾಡುತ್ತಿರುವುದು !
ಸತ್ಯಾನ್ವೇಷಕ ಲೇಖನಿ !
‘ಸನಾತನ ಪ್ರಭಾತ’ವು ಕಳೆದ ೨೫ ವರ್ಷಗಳಲ್ಲಿ ಬೇರೆ ಬೇರೆ ಕಾಲಘಟ್ಟಗಳನ್ನು ಅನುಭವಿಸಿತು. ಒಂದು ಆಧ್ಯಾತ್ಮಿಕ ಸಂಸ್ಥೆಯು ಪತ್ರಿಕೋದ್ಯಮದ ಕ್ಷೇತ್ರಕ್ಕೆ ಧುಮುಕಬೇಕಾದ ಪ್ರಮೇಯ ಬರುತ್ತದೆ ಎಂದರೆ ಅದು ರಾಷ್ಟ್ರದ ದುಃಸ್ಥಿತಿಯಿಂದಾಗಿಯೇ ಎಂದು ‘ಸನಾತನ ಪ್ರಭಾತ’ದ ಸ್ಥಾಪನೆಯ ಸಮಯದಲ್ಲಿಯೇ ನಾವು ಸ್ಪಷ್ಟಪಡಿಸಿದ್ದೆವು. ರಾಷ್ಟ್ರ ಹಾಗೂ ಧರ್ಮ ಜಾಗೃತಿಗಾಗಿ ಸೇವಾಭಾವದಿಂದ ಸಾಧಕರು ಸಾಪ್ತಾಹಿಕ ‘ಸನಾತನ ಪ್ರಭಾತ’ವನ್ನು ಒಂದು ಉದಾತ್ತ ಧ್ಯೇಯದಿಂದ ಆರಂಭಿಸಿದರು. ಇಲ್ಲಿ ಯಾವುದೇ ಪ್ರಕಾರದ ವ್ಯಾವಹಾರಿಕ ಉದ್ದೇಶವಿರಲಿಲ್ಲ. ಆರಂಭದಲ್ಲಿ ‘ಸನಾತನ ಪ್ರಭಾತ’ದ ಸಂಸ್ಥಾಪಕ ಸಂಪಾದಕರಾದ ಸಚ್ಚಿದಾನಂದ ಪರಬ್ರಹ್ಮ ಡಾ. ಜಯಂತ ಆಠವಲೆಯವರು, ‘ಇಂದು ನಿಮಗೆ ಬಹುಷಃ ವಾರ್ತೆಗಳು ಸಿಗಲು ಅಡಚಣೆಯಾಗಬಹುದು; ಆದರೆ ಮುಂದೊಂದು ದಿನ ನಾವೇ ವಾರ್ತೆಗಳನ್ನು ತಯಾರಿಸುವಂತಾಗುವುದು’ ಎಂದು ಹೇಳಿದ್ದರು. ದಾರ್ಶನಿಕ ಸಂತರ ವಚನವನ್ನು ಈಗ ನಾವು ಅಕ್ಷರಶಃ ಅನುಭವಿಸುತ್ತಿ ದ್ದೇವೆ. ಒಮ್ಮೆ ‘ಸನಾತನ ಪ್ರಭಾತ’ಕ್ಕೆ ನಿರ್ಬಂಧ ಬರುವುದೋ ಏನೋ’, ಎನ್ನುವ ಸ್ಥಿತಿಯನ್ನು ಅಂದಿನ ಹಿಂದೂದ್ವೇಷಿ ಸರಕಾರವೇ ಹುಟ್ಟುಹಾಕಿತ್ತ್ತು. ‘ಸನಾತನ ಪ್ರಭಾತ’ದ ಅಂದಿನ ಸಂಪಾದಕರು ವಿನಾಕಾರಣ ಸೆರೆಮನೆಗೂ ಹೋಗಬೇಕಾಯಿತು.
ಸತ್ಯಾನ್ವೇಷಕ ಹಾಗೂ ಪ್ರಖರ ‘ಸನಾತನ ಪ್ರಭಾತ’ದ ಮೇಲೆ ಭಾವನೆಗಳನ್ನು ಉದ್ರೇಕಿಸಿದ ಆರೋಪವನ್ನೂ ಮಾಡಲಾಯಿತು. ಇಷ್ಟೆಲ್ಲ ಗಂಡಾಂತರಗಳನ್ನು ಎದುರಿಸುತ್ತಾ ಎದೆತಟ್ಟಿ ನಿಂತಿರುವ ‘ಸನಾತನ ಪ್ರಭಾತ’ದ ‘ಆನ್‌ಲೈನ್’ ವಾಚಕವರ್ಗ ಮಾತ್ರ ದಿನಕಳೆದಂತೆ ಹೆಚ್ಚುತ್ತಲೇ ಇದೆ. ನಾವು ಮೊದಲಿನಿಂದಲೇ ಪಾರದರ್ಶಕ ಪತ್ರಿಕೋದ್ಯಮವನ್ನು ಆರಂಭಿಸಿದೆವು ಹಾಗೂ ಅದರಿಂದ ‘ಸನಾತನ ಪ್ರಭಾತ’ದ ಸೇವೆ ಮಾಡುವ ಸಾಧಕರ ತಪ್ಪುಗಳನ್ನು ಸಹ ನಾವು ಪದೇ ಪದೇ ಪತ್ರಿಕೆಯಲ್ಲಿ ಮುದ್ರಿಸಿ ದೆವು. ಇದೇ ಭಾವನೆಯಿಂದ ನಾವು ಹಿಂದೂಗಳಿಗಾಗಿ ಕಾರ್ಯ ಮಾಡುವ ಪ್ರತಿಯೊಂದು ಘಟಕದ ಕಡೆಗೆ ನೋಡಲು ಪ್ರಯತ್ನಿಸಿದೆವು. ‘ತ್ಯಾಗಿ ಹಾಗೂ ತಪ್ಪುರಹಿತ ಧರ್ಮಾಧಾರಿತ ರಾಷ್ಟ್ರವ್ಯವಸ್ಥೆಯೇ ಆದರ್ಶವಿರಲು ಸಾಧ್ಯ’, ಎಂಬುದು ಸನಾತನ ಪರಂಪರೆಯ ಅಲೌಕಿಕ ಗೌರವಶಾಲಿ ಇತಿಹಾಸವಾಗಿದೆ. ‘ಸನಾತನ ಪ್ರಭಾತ’ವನ್ನು ರಾಷ್ಟ್ರದ ಗೌರವಶಾಲಿ ಇತಿಹಾಸದ ಅಂಗರಕ್ಷಕನನ್ನಾಗಿ ಮಾಡಲಿಕ್ಕಿದೆ. ‘ಸನಾತನ ಪ್ರಭಾತ’ದ ಲೇಖನಿಯು ಯಾವುದೇ ರಾಜಕೀಯ ಪಕ್ಷದೊಂದಿಗೆ ಹೊಂದಾಣಿಕೆ
ಮಾಡಿಕೊಂಡಿಲ್ಲ ಹಾಗೂ ಅದರ ನಿಷ್ಠೆ ಕೇವಲ ಈ ಜಗತ್ತಿನ ಏಕೈಕ ‘ಸತ್ಯ’ವಾಗಿರುವ ಭಗವಂತನ ಚರಣಗಳಲ್ಲಿದೆ. ಇದೇ ಈ ಲೇಖನಿಯ ಶಕ್ತಿಯಾಗಿದೆ. ಆದ್ದರಿಂದಲೇ ಹಿಂದೂಗಳ ಮೇಲಿನ ಅನ್ಯಾಯ ಹಾಗೂ ಆಘಾತಗಳನ್ನು ಖಂಡತುಂಡವಾಗಿ ಹೇಳುವ ಧೈರ್ಯ ಅದಕ್ಕಿದೆ.
ಹಿಂದೂ ರಾಷ್ಟ್ರ ಸಂಕಲ್ಪನೆಯ ಮುಹೂರ್ತ !
ಇಂದು ಸಮಾಜದ ಹೆಚ್ಚಿನ ವರ್ತಮಾನಪತ್ರಿಕೆಗಳು ದೊಡ್ಡ ವಾಣಿಜ್ಯ ಸಂಸ್ಥೆಗಳಂತೆ ಆಗಿವೆ. ಆದರೆ ‘ಸನಾತನ ಪ್ರಭಾತ’ವು ಆರ್ಥಿಕ ಹಾನಿಯನ್ನು ಸಹಿಸಿ ಕಳೆದ ೨೫ ವರ್ಷಗಳಲ್ಲಿ ಒಂದೇ ಒಂದು ರಜೆ ತೆಗೆದುಕೊಳ್ಳದೆ ಭಗವಂತನ ಕೃಪೆಯಿಂದ ನಿರಂತರವಾಗಿ ಕಾರ್ಯನಿರತವಾಗಿದೆ. ಇಂದು ಸಂಪೂರ್ಣ ವಿಶ್ವದಾದ್ಯಂತದ ಮಾನವನ ಸಮಾಜ ಜೀವನದ ಪ್ರತಿಯೊಂದು ಕ್ಷೇತ್ರದಲ್ಲಿ ನೂರಾರು ಸಮಸ್ಯೆಗಳಿವೆ. ಯುಗಯುಗಾಂತರಗಳಿಂದ ಮಾನವನ ಸಂಘರ್ಷ ನಡೆಯುತ್ತಲೇ ಇದೆ; ಕೆಲವರ ಸಂಘರ್ಷ ಸ್ವಾರ್ಥಕ್ಕಾಗಿ ಮತ್ತು ಇನ್ನು ಕೆಲವರ ಸಂಘರ್ಷ ಈ ಸ್ವಾರ್ಥಿ ಜನರ ಜಗತ್ತಿನಲ್ಲಿ ನಿಃಸ್ವಾರ್ಥದಿಂದ ಜೀವಿಸಲು ಇದೆ ! ಮಾನವನ ವೈಯಕ್ತಿಕ ಜೀವನದಲ್ಲಿನ ಅಡಚಣೆಗಳು, ದುಃಖದಿಂದ ಹಿಡಿದು ಅವನ ಸಮಷ್ಟಿ ಜೀವನದಲ್ಲಿ ಬರುವ ಪ್ರತಿಯೊಂದು ಹೆಜ್ಜೆಗೂ ನಡೆಯುವ ಸಂಘರ್ಷಗಳ ವರೆಗೆ ಪ್ರತಿಯೊಂದಕ್ಕೆ ಸನಾತನ ಪರಂಪರೆಯ ಆಧಾರಸ್ತಂಭವಾಗಿರುವ ‘ಅಧ್ಯಾತ್ಮ’ದಲ್ಲಿ ಉತ್ತರವಿದೆ. ‘ರಾಷ್ಟ್ರಸ್ಯ ಮೂಲಂ ಇಂದ್ರಿಯನಿಗ್ರಹಃ |’ (ರಾಷ್ಟ್ರದ ಮೂಲ (ಯಶಸ್ಸು) ಇಂದ್ರಿಯಗಳ ನಿಗ್ರಹದಲ್ಲಿ, ಅಂದರೆ ಅಧ್ಯಾತ್ಮದಲ್ಲಿದೆ.) ಆರ್ಯ ಚಾಣಕ್ಯರ ಈ ವಚನವನ್ನು ಗಮನಿಸಿದರೆ ‘ಧರ್ಮವೇ ರಾಷ್ಟ್ರದ ಅಡಿಪಾಯವಾಗಿದೆ’ ಹಾಗೂ ಧರ್ಮಾಧಿಷ್ಠಿತ ರಾಷ್ಟ್ರವೇ ಪ್ರಜೆಗಳನ್ನು ಸುಖಿಯಾಗಿಡಬಹುದು. ಆದ್ದರಿಂದಲೇ ಇಂದು ರಾಷ್ಟ್ರದಲ್ಲಿನ ‘ಬಡವರಿಂದ ಹಿಡಿದು, ನಿರುದ್ಯೋಗ ಹಾಗೂ ಜನಸಂಖ್ಯೆ ಹೆಚ್ಚಳದ ವರೆಗೆ’, ‘ನಕ್ಸಲವಾದದಿಂದ ಹಿಡಿದು ಭಯೋತ್ಪಾದನೆಯ ವರೆಗೆ’, ಸ್ತ್ರೀಯರ ಮೇಲಿನ ಅತ್ಯಾಚಾರದಿಂದ ಹಿಡಿದು ಭ್ರಷ್ಟಾಚಾರದ ವರೆಗೆ’, ಹಾಗೂ ಹಿಂದೂಗಳ ಮೇಲಿನ ಎಲ್ಲ ಪ್ರಕಾರದ ಆಘಾತಗಳ ಉತ್ತರಗಳು ಧರ್ಮಾಧಿಷ್ಠಿತ ಹಿಂದೂ ರಾಷ್ಟ್ರದಲ್ಲಿದೆ. ಇಲ್ಲಿ ಹಿಂದೂ ರಾಷ್ಟ್ರವು ರಾಜಕೀಯ ಅರ್ಥದಲ್ಲಿ ಅಪೇಕ್ಷಿತವಿಲ್ಲ. ಅದು ರಾಮರಾಜ್ಯದಂತಹ ಒಂದು ‘ಆದರ್ಶ ಸಮಾಜವ್ಯವಸ್ಥೆ’ ಯಾಗಿದೆ. ಇದುವರೆಗೆ ಸಮಾಜದಲ್ಲಿ ಇದಕ್ಕೆ ಸಂಬಂಧಿಸಿದ ಸನಾತನ ವಿಚಾರಗಳ ಅಡಿಪಾಯವನ್ನು ‘ಸನಾತನ ಪ್ರಭಾತ’ ನಿಯತಕಾಲಿಕೆ ಸಮೂಹವು ೨೫ ವರ್ಷಗಳಿಂದ ಮಾಡುತ್ತಿದೆ. ಆದ್ದರಿಂದ ಇಂದು ದೇಶದಾದ್ಯಂತ ಚರ್ಚೆಯಲ್ಲಿರುವ ‘ಹಿಂದೂ ರಾಷ್ಟ್ರ’ ಸಂಕಲ್ಪನೆಯ ಮುಹೂರ್ತವನ್ನು ೨೫ ವರ್ಷಗಳ ಹಿಂದೆಯೇ ‘ಸನಾತನ ಪ್ರಭಾತ’ ಮಾಡಿತ್ತು’ ಎಂದು ಹೇಳಿದರೆ ಅದು ತಪ್ಪಾಗಲಾರದು. ಹಿಂದೂಗಳ ವಂಶರಕ್ಷಣೆಗಾಗಿ ಹಾಗೂ ಹಿಂದೂಯೇತರರ ಎಲ್ಲ ಪ್ರಕಾರದ ಆಘಾತಗಳಿಂದ ಹಿಂದೂಗಳನ್ನು ರಕ್ಷಿಸಲಿಕ್ಕಾಗಿ ಮಾತ್ರವಲ್ಲ, ಅದಕ್ಕೂ ಮುಂದೆ ಹೋಗಿ ಅದು ಒಂದು ಉಚ್ಚಮಟ್ಟದ ಆದರ್ಶ ಸಮಾಜ ನಿರ್ಮಾಣಕ್ಕಾಗಿ ಹಿಂದೂ ರಾಷ್ಟ್ರದ ಸ್ಥಾಪನೆ ಮಾಡಲಿಕ್ಕಿದೆ. ರಾಷ್ಟ್ರದ ಆಡಳಿತ ವ್ಯವಸ್ಥೆಯ ಆದರ್ಶವು ಅದರ ತ್ಯಾಗಿ, ವಿದ್ವಾಂಸ, ನೇತೃತ್ವಕುಶಲ ಹಾಗೂ ಧ್ಯೇಯನಿಷ್ಠ ಆಡಳಿತದಲ್ಲಿರುತ್ತದೆ. ಇಂದು ಶಿಕ್ಷಣ, ಸಂರಕ್ಷಣೆ, ವ್ಯಾಪಾರ, ಅರ್ಥ, ತಂತ್ರಜ್ಞಾನ, ವಾಸ್ತುಶಾಸ್ತ್ರ, ಕೃಷಿ, ಕಲೆ, ಪ್ರವಾಸ, ಕಾನೂನು ಇತ್ಯಾದಿ ಎಲ್ಲ ಕ್ಷೇತ್ರಗಳಲ್ಲಿ ಒಂದು ಆದರ್ಶ ವ್ಯವಸ್ಥೆಯಿರಬೇಕೆಂದು ಪ್ರತಿಯೊಬ್ಬ ರಾಷ್ಟ್ರಪ್ರೇಮಿಗೆ ಅನಿಸುತ್ತಿದೆ. ಈ ಆದರ್ಶ ವ್ಯವಸ್ಥೆಯನ್ನು ನಿರ್ಮಾಣ ಮಾಡುವುದರ ಮೂಲ ಸನಾತನ ಧರ್ಮದ ಸಂಸ್ಕಾರದಲ್ಲಿದೆ. ‘ಸನಾತನ ಪ್ರಭಾತ’ ಅದರ ಘೋಷಣೆಯನ್ನು ಮಾಡಿ ಸಮಾಜಕ್ಕೆ ಸ್ವತಃ ಆದರ್ಶ ಜೀವನ ನಡೆಸುವ ಹಾಗೂ ಆದರ್ಶ ರಾಷ್ಟ್ರ ನಿರ್ಮಾಣ ಮಾಡುವುದರ ಸಾರವನ್ನು ನಿಯಮಿತವಾಗಿ ಹೇಳುತ್ತಿದೆ. ‘ಈಶ್ವರಪ್ರಾಪ್ತಿ’ ಎಂಬ ಮಾನವನ ಜನ್ಮದ ಮೂಲ ಉದ್ದೇಶವನ್ನು ತಿಳಿದುಕೊಂಡು ಸಾಧನೆ ಮಾಡಲು ಆರಂಭಿಸಿದರೆ, ಆದರ್ಶ ರಾಷ್ಟ್ರನಿರ್ಮಾಣಕ್ಕೆ ಬೇಕಾಗುವ ಸಂಯಮ ಹಾಗೂ ಸಾಮರ್ಥ್ಯಶಾಲಿ ಪ್ರಜೆಗಳು ತಯಾರಾಗಲು ಸಾಧ್ಯವಿದೆ. ಸಾಪ್ತಾಹಿಕ ‘ಸನಾತನ ಪ್ರಭಾತ’ ನಿಯಮಿತವಾಗಿ ಇದೇ ಮಾರ್ಗವನ್ನು ತೋರಿಸುತ್ತಿದೆ. ಆದ್ದರಿಂದ ‘ಸನಾತನ ಪ್ರಭಾತ’ ‘ಹಿಂದೂ ರಾಷ್ಟ್ರ’ ಸ್ಥಾಪನೆಯ ಕಾರ್ಯದಲ್ಲಿ ಸಾಕಷ್ಟು ವೈಚಾರಿಕ ಯೋಗದಾನವನ್ನು ನೀಡಿ ಅದನ್ನು ಸ್ಥಾಪಿಸುವ ಪೀಳಿಗೆಯನ್ನು ಸಿದ್ಧಪಡಿಸಿದೆ. ಕಲಿಯುಗಾಂತರ್ಗತ ಕಲಿಯುಗದಲ್ಲಿನ ಧರ್ಮಸಂಸ್ಥಾಪನೆಯ, ಅಂದರೆ ಮುಂಬರುವ ಕಾಲದ ಹಿಂದೂ ರಾಷ್ಟ್ರ ಸ್ಥಾಪನೆಯ ಇತಿಹಾಸದಲ್ಲಿ ‘ಸನಾತನ ಪ್ರಭಾತ’ದ ಹೆಸರು ಸುವರ್ಣಾಕ್ಷರಗಳಲ್ಲಿ ಬರೆಯಲಾಗುವುದು. ಈಶ್ವರನು ನಮಗೆ ಅವನ ಕಾರ್ಯದಲ್ಲಿ ಅಳಿಲು ಸೇವೆ ಮಾಡುವ ಅವಕಾಶ ನೀಡಿದ್ದಾನೆ, ಅದಕ್ಕಾಗಿ ‘ಸನಾತನ ಪ್ರಭಾತ’ದ ಕಾರ್ಯ ಕ್ಕಾಗಿ ಸಮರ್ಪಿಸಿಕೊಂಡಿರುವ ನಾವು ಅವನ ಚರಣಗಳಲ್ಲಿ ಕೃತಜ್ಞ ರಾಗಿದ್ದೇವೆ. ರಾಷ್ಟ್ರರಕ್ಷಣೆ ಹಾಗೂ ಧರ್ಮಜಾಗೃತಿಯ ವ್ರತವನ್ನು ಆಚರಿಸುತ್ತಿರುವ ಸನಾತನ ಪ್ರಭಾತ’ದ ನಾಗಾಲೋಟ ಹೀಗೆಯೇ ಮುಂದುವರಿಯಲಿಯೆಂದು ಭಗವಂತನ ಚರಣಗಳಲ್ಲಿ ಪ್ರಾರ್ಥನೆ !