ಪುರಾತನ ಶ್ರೀರಾಮ ಮಂದಿರದ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನ !

ರಾಜ್ಯ ಸರಕಾರದ ನಿರ್ಧಾರ

ಬೆಂಗಳೂರು – ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಪುರಾತನ ಶ್ರೀರಾಮ ದೇವಾಲಯಗಳ ಜೀರ್ಣೋದ್ಧಾರಕ್ಕೆ 100 ಕೋಟಿ ರೂಪಾಯಿ ಅನುದಾನವನ್ನು ಮೀಸಲಿಟ್ಟಿದೆ. ಇದು 2024-25ನೇ ಸಾಲಿನ ರಾಜ್ಯದ ಬಜೆಟ್‌ನಲ್ಲಿ ಘೋಷಣೆಯಾಗುವ ಸಾಧ್ಯತೆ ಇದೆ. ಧಾರ್ಮಿಕ ದತ್ತಿ ಇಲಾಖೆಯ ಯೋಜನೆಗಳಲ್ಲಿ ಈ ಯೋಜನೆಯನ್ನು ಸೇರಿಸಲು ಚರ್ಚೆ ನಡೆಯುತ್ತಿದೆ.

ಇದು ಶ್ರೀರಾಮಮಂದಿರದ ಮೇಲಿನ ರಾಜಕೀಯವಲ್ಲ ! – ದಾರ್ಮಿಕ ದತ್ತಿ ಸಚಿವ ರಾಮಲಿಂಗಾ ರೆಡ್ಡಿ

ಧಾರ್ಮಿಕ ದತ್ತಿ ಇಲಾಖೆಯ ಸಚಿವ ರಾಮಲಿಂಗಾ ರೆಡ್ಡಿಯವರು ಮಾತನಾಡಿ, ನಾವು ಮುಖ್ಯಮಂತ್ರಿಗಳಿಗೆ ಜೀರ್ಣೋದ್ಧಾರಕ್ಕಾಗಿ ಅನುದಾನವನ್ನು ನೀಡುವಂತೆ ಪ್ರಸ್ತಾವನೆಯನ್ನು ನೀಡಿದ್ದೆವು. ರಾಜ್ಯದಲ್ಲಿ ಯಾವ ಮಂದಿರಗಳಲ್ಲಿ ಜನರು ಬಹಳ ವರ್ಷಗಳಿಂದ ಪೂಜೆಯನ್ನು ಮಾಡುತ್ತಾರೆ, ಆ ಮಂದಿರಗಳ ಜೀರ್ಣೋದ್ಧಾರ ಮಾಡಬೇಕಾಗಿದೆ. ಈ ಯೋಜನೆ ಕೇವಲ ಶ್ರೀರಾಮಮಂದಿರಕ್ಕೆ ಮಾತ್ರ ಸೀಮಿತವಾಗಿಲ್ಲ, ಈ ಪ್ರಸ್ತಾಪಿಸಿರುವ ಯೋಜನೆಯ ಅಡಿಯಲ್ಲಿ ಇತರೆ ಮಂದಿರಗಳ ಜೀರ್ಣೋದ್ಧಾರವನ್ನು ಮಾಡಲಾಗುವುದು ಎಂದು ಹೇಳಿದ್ದಾರೆ.

ಕಾಂಗ್ರೆಸ್ಸಿನವರಿಗೆ ದೇವರು ಮತ್ತು ಧರ್ಮ ರಾಜಕೀಯದ ವಿಷಯವಲ್ಲ ! – ಕಾಂಗ್ರೆಸ್

ಈ ವಿಷಯದ ಕುರಿತು ಕಾಂಗ್ರೆಸ್ ಪಕ್ಷವು ಪೋಸ್ಟ ಮಾಡಿ, ಶ್ರೀರಾಮ ರಾಜ್ಯದಲ್ಲಿಯೂ ಇದ್ದಾನೆ. ಈ ಸಂದರ್ಭದಲ್ಲಿ ನಮ್ಮ ಸರಕಾರವು ಪ್ರಾಚೀನ ಮಂದಿರಗಳ ಜೀರ್ಣೋದ್ಧಾರಕ್ಕಾಗಿ ಹೆಜ್ಜೆ ಇಟ್ಟಿದೆ. ದೇವರು ಮತ್ತು ಧರ್ಮವು ನಮಗೆ ರಾಜಕಾರಣದ ವಿಷಯವಲ್ಲ. ಇದು ಕೇವಲ ಶ್ರದ್ಧೆ ಮತ್ತು ಭಕ್ತಿಗೆ ಸಂಬಂಧಿಸಿದೆ ಎಂದು ಹೇಳಿದೆ.

(ಸೌಜನ್ಯ – Times Now)

ಹಿಂದುತ್ವದಲ್ಲಿ ನಂಬಿಕೆ ಇರುವವರು ಕಾಂಗ್ರೆಸ್ಸಿಗೆ ಚುನಾವಣೆಯಲ್ಲಿ ಉತ್ತರ ಕೊಡುತ್ತಾರೆ ! – ಭಾಜಪ

ವಿಧಾನಸಭೆಯ ವಿರೋಧ ಪಕ್ಷದ ನಾಯಕ ಮತ್ತು ಭಾಜಪ ಶಾಸಕ ಆರ್. ಅಶೋಕ್ ಇವರು ಮಾತನಾಡಿ, “’ಸರಕಾರವು ಅಯೋಧ್ಯೆ ಚಳವಳಿಯಲ್ಲಿ ಭಾಗವಹಿಸಿದ ಕಾರ್ಯಕರ್ತರನ್ನು ಬಂಧಿಸುವ ಆದೇಶ ನೀಡಿತು, ಅವರನ್ನು ಕಾರಾಗೃಹಕ್ಕೆ ಅಟ್ಟಿತು. ಅವರನ್ನು ನಿರಂತರವಾಗಿ ಪೀಡಿಸಲಾಗುತ್ತಿದೆ. ಕಾಂಗ್ರೆಸ್ಸಿನವರು ಏನೇ ಮಾಡಿದರೂ, ಮತದಾನ ಮಾಡುವವರು ಮತ್ತು ಹಿಂದುತ್ವದ ಮೇಲೆ ವಿಶ್ವಾಸವಿಟ್ಟಿರುವ ಜನರು ಮುಂಬರುವ ಚುನಾವಣೆಯಲ್ಲಿ ಕಾಂಗ್ರೆಸ್ಸಿಗೆ ಉತ್ತರ ನೀಡಲಿದ್ದಾರೆ ಎಂದು ಹೇಳಿದ್ದಾರೆ.