ಜನಾಭಿಪ್ರಾಯದ ಸಂದರ್ಭದಲ್ಲಿ ಖಲಿಸ್ತಾನಿ ಬೆಂಬಲಿಗರ ಮಧ್ಯೆ ಹೊಡೆದಾಟ
ವಾಷಿಂಗ್ಟನ್ (ಅಮೇರಿಕ) – ಸ್ಯಾನ್ ಫ್ರಾನ್ಸಿಸ್ಕೊದಲ್ಲಿ ಜನವರಿ ೨೮ ರಂದು ಸ್ವತಂತ್ರ ಖಲಿಸ್ತಾನ್ ಬಗ್ಗೆ ಜನಾಭಿಪ್ರಾಯ ಸಂಗ್ರಹಣೆ ನಡೆಸಲಾಯಿತು. ಆ ಸಂದರ್ಭದಲ್ಲಿ ಖಲಿಸ್ತಾನಿ ಬೆಂಬಲಿಗರ ಮಧ್ಯೆ ಘರ್ಷಣೆ ನಡೆದಿದೆ. ಈ ಸ್ಥಳದಲ್ಲಿ ಭಾರತದ ವಿರುದ್ಧ ಫಲಕಗಳನ್ನು ಹಾಕಲಾಗಿತ್ತು. ಖಲಿಸ್ತಾನ್ ಬೆಂಬಲಿಗರ ನಡುವೆ ನಡೆದ ಹೊಡೆದಾಟದ ವೀಡಿಯೊ ಪ್ರಸಾರಿತವಾಗಿದೆ. ಈ ವೀಡಿಯೊದಲ್ಲಿ ಎರಡು ಗುಂಪಿನ ಬೆಂಬಲಿಗರು ಒಬ್ಬರಿಗೊಬ್ಬರು ಒದ್ದು ಹಲ್ಲೆ ಮಾಡುತ್ತಿರುವುದು ಕಂಡು ಬಂದಿದೆ. ಒಂದು ಗುಂಪಿನ ನೇತ್ರುತ್ವವನ್ನು ಮೇಜರ ಸಿಂಗ್ ನಿಜ್ಜರ, ಮತ್ತೊಂದು ಗುಂಪಿನ ‘ಸಾಬಿ‘ ಅಡ್ಡ ಹೆಸರಿನ ಸರಬಜೀತ ಸಿಂಗ್ ಮುನ್ನಡೆಸಿದರು.
೧. ವರದಿಯೊಂದರ ಪ್ರಕಾರ, ಮೇಜರ ಸಿಂಗ್ ನಿಜ್ಜರ ಅವರ ಗುಂಪನ್ನು ಖಲಿಸ್ತಾನಿ ಭಯೋತ್ಪಾದಕ ಗುರುಪತವಂತ ಸಿಂಗ್ ಪನ್ನು ಬದಿಗಿಟ್ಟಿದ್ದಾರೆ. ಈ ಆಪಾದಿತ ಜನಾಭಿಪ್ರಾಯ ಸಂಗ್ರಹಣೆಯಲ್ಲಿ ಪನ್ನೂ ಸಹ ಉಪಸ್ಥಿತನಿದ್ದನು.
೨. ಕೆನಡಾದಲ್ಲಿ ಇತ್ತಿಚೆಗೆ ಖಲಿಸ್ತಾನಿ ಬೆಂಬಲಿಗರೊಬ್ಬರ ಮನೆಯ ಮೇಲೆ ಗುಂಡಿನ ದಾಳಿ ನಡೆಸಲಾಗಿತ್ತು. ಕೆನಡಾದ ಪೊಲೀಸರು ಈ ದಾಳಿಯ ಪ್ರಕರಣದ ತನಿಖೆಯನ್ನು ಮಾಡುತ್ತಿದ್ದಾರೆ; ಆದರೆ ಯಾವುದೇ ತನಿಖೆ ನಡೆಸದೆ ಭಾರತದ ವಿರುದ್ಧ ಆರೋಪ ಮಾಡಲಾಗಿದೆ.
(ಸೌಜನ್ಯ: TOI)
ಸಂಪಾದಕರ ನಿಲುವು* ಅಮೇರಿಕಾ ತನ್ನ ನೆಲದಲ್ಲಿ ಸ್ವತಂತ್ರ ಖಲಿಸ್ತಾನ್‌ಗಾಗಿ ಜನಾಭಿಪ್ರಾಯಕ್ಕೆ ಅನುಮತಿ ನೀಡಿದೆ. ಈಮೂಲಕ ಅದರ ಭಾರತ ದ್ವೇಷ ಕಾಣುತ್ತಿದೆ. ಭಾರತವು ಅಮೇರಿಕಾಗೆ ಅರ್ಥವಾಗುವ ಭಾಷೆಯಲ್ಲಿ ಪ್ರತ್ಯುತ್ತರ ಕೊಡುವುದು ಅವಶ್ಯಕವಾಗಿದೆ ! |