ಭಾರತದಿಂದ ಕಾಶ್ಮೀರದ ಮೇಲೆ ಅನಧಿಕೃತ ನಿಯಂತ್ರಣ ! – ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ ಅಬ್ಬಾಸ ಜಿಲಾನಿ

  • ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ ಅಬ್ಬಾಸ ಜಿಲಾನಿ ಇತಿಹಾಸಪುಟ ಸೇರಿದ ಹೇಳಿಕೆ !

  • ಕಾಶ್ಮೀರಿಗಳು ಭಾರತದ ದೌರ್ಜನ್ಯವನ್ನು ಧೈರ್ಯದಿಂದ ಎದುರಿಸುತ್ತಿದೆ !

ಬ್ರಸೆಲ್ಸ್ (ಬೆಲ್ಜಿಯಂ) – ಜಮ್ಮು ಮತ್ತು ಕಾಶ್ಮೀರದ ಪ್ರಶ್ನೆಯನ್ನು ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ನಿರ್ಣಯದ ಪ್ರಕಾರ ಮತ್ತು ಕಾಶ್ಮೀರಿಗಳ ಆಶಯದಂತೆ ಪರಿಹರಿಸಿದಾಗಲೇ ದಕ್ಷಿಣ ಏಷ್ಯಾದಲ್ಲಿ ಶಾಂತಿ ಸ್ಥಾಪನೆಯಾಗುತ್ತದೆ. ಭಾರತ ಅಕ್ರಮವಾಗಿ ಜಮ್ಮು ಮತ್ತು ಕಾಶ್ಮೀರದ ಮೇಲೆ ನಿಯಂತ್ರಣ ಸಾಧಿಸಿದೆ ಎಂದು ಪಾಕಿಸ್ತಾನದ ವಿದೇಶಾಂಗ ಸಚಿವ ಜಲೀಲ್ ಅಬ್ಬಾಸ ಜಿಲಾನಿ ಹೇಳಿಕೆ ನೀಡಿದ್ದಾರೆ. ಬೆಲ್ಜಿಯಂನ ರಾಜಧಾನಿ ಬ್ರಸೆಲ್ಸ್‌ನಲ್ಲಿರುವ ಪಾಕಿಸ್ತಾನಿ ರಾಯಭಾರ ಕಚೇರಿಯಲ್ಲಿ ಆಚರಿಸಿದ ‘ಕಾಶ್ಮೀರ ಏಕತಾ ದಿನ’ ದ ಸಂದರ್ಭದಲ್ಲಿ ಜಿಲಾನಿ ಮಾತನಾಡುತ್ತಿದ್ದರು. ಈ ಕಾರ್ಯಕ್ರಮದಲ್ಲಿ ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದಿಂದ ತಥಾಕಥಿತ ದೌರ್ಜನ್ಯ ನಡೆಸಿದ್ದರಿಂದ ಕಾಶ್ಮೀರಿಗಳ ದುಃಸ್ಥಿತಿ ಆಗಿರುವ ಒಂದು ಪ್ರದರ್ಶನವನ್ನು ಹಚ್ಚಲಾಗಿತ್ತು.

1. ಈ ಸಮಯದಲ್ಲಿ ಜಿಲಾನಿ ಮಾತನಾಡಿ, ಭಾರತ ಬಲವಂತವಾಗಿ ಜಮ್ಮು ಮತ್ತು ಕಾಶ್ಮೀರವನ್ನು ನಿಯಂತ್ರಿಸಲು ಪ್ರಯತ್ನಿಸುತ್ತಿದೆ. ಕಾಶ್ಮೀರಿಗಳ ಇಚ್ಛೆಯನ್ನು ಹತ್ತಿಕ್ಕುವಲ್ಲಿ ಭಾರತ ವಿಫಲವಾಗಿದೆ.

2. ಅವರು ಮಾತು ಮುಂದುವರೆಸುತ್ತಾ, ಇಂದು ನಾವು ಕಾಶ್ಮೀರಕ್ಕಾಗಿ ಭಾರತೀಯ ದೌರ್ಜನ್ಯಗಳ ವಿರುದ್ಧ ಹೋರಾಡಿ ಪ್ರಾಣ ಕಳೆದುಕೊಂಡ ಹುತಾತ್ಮರಿಗೆ ಶ್ರದ್ಧಾಂಜಲಿ ಅರ್ಪಿಸುತ್ತಿದ್ದೇವೆ, ಅವರ ಬಲಿದಾನ ಇತಿಹಾಸದಲ್ಲಿ ನೆನಪಿನಲ್ಲಿ ಉಳಿಯುತ್ತದೆ. (ದೌರ್ಜನ್ಯ ಎಸಗುವವರ ಇತಿಹಾಸವನ್ನೂ ಕಲಿಸಲಾಗುತ್ತದೆ. ಅದರಲ್ಲಿ ಇಂತಹ ಜಿಹಾದಿಗಳ ಹೆಸರಿ ಖಂಡಿತವಾಗಿಯೂ ಸೇರ್ಪಡೆಯಾಗಲಿದೆ ! – ಸಂಪಾದಕರು)

3. ಜಮ್ಮು ಮತ್ತು ಕಾಶ್ಮೀರದಲ್ಲಿ ಭಾರತದಿಂದ ಆಗುತ್ತಿರುವ ಮಾನವ ಹಕ್ಕುಗಳ ಉಲ್ಲಂಘನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯವು ಮುಂದೆ ಬಂದು ಪ್ರತಿಭಟಿಸುವಂತೆ ಅವರು ಈ ಸಂದರ್ಭದಲ್ಲಿ ಕರೆ ನೀಡಿದರು. ಈ ಮೂಲಕ ಭಾರತ ಸರಕಾರದ ಅಗಸ್ಟ 5, 2019 ರ ಕಲಂ 370 ರದ್ದುಗೊಳಿಸಿರುವ ನಿರ್ಣಯವನ್ನು ಹಿಂದಕ್ಕೆ ಪಡೆಯಬಹುದು ಮತ್ತು ಕಾಶ್ಮೀರದಲ್ಲಿ ಕಲಂ 370 ಅನ್ನು ಪುನರ್-ಅನುಷ್ಠಾನಗೊಳಿಸಬಹುದು. (ಹಗಲುಗನಸು ಕಾಣುತ್ತಿರುವ ಪಾಕಿಸ್ತಾನ ! ಅಂದರೆ, ಇದರಿಂದ ಭಾರತ ಲಾಭ ಪಡೆದು ಪಾಕಿಸ್ತಾನಕ್ಕೆ ಅರ್ಥವಾಗುವುದರೊಳಗೆ ಭಾರತದ ಪಾಕಿಸ್ತಾನ ಆಕ್ರಮಿತ ಕಾಶ್ಮೀರದ ಮೇಲೆ ಭಾರತದ ರಾಷ್ಟ್ರಧ್ವಜ ಹಾರಾಡಬಹುದು ! – ಸಂಪಾದಕರು)

ಸಂಪಾದಕೀಯ ನಿಲುವು

ಪಾಕಿಸ್ತಾನದ ಇಂತಹ ಹೇಳಿಕೆಗಳನ್ನು ಚೀನಾ, ಟರ್ಕಿ ಅಥವಾ ಯಾವುದೇ ಇಸ್ಲಾಮಿಕ್ ದೇಶವು ಬೆಂಬಲಿಸಬಹುದು. ಯುದ್ಧದಲ್ಲಿ ಸೋತು ಸುಣ್ಣ ಆಗಿರುವ ಉಕ್ರೇನ್ ಕೂಡ ಈಗ ಭಾರತದ ಪರವಾಗಿಯೇ ಇದೆ. ಆದ್ದರಿಂದ ಹಸಿವಿನಿಂದ ಕಂಗೆಟ್ಟಿರುವ ಪಾಕಿಸ್ತಾನದ ವಿದೇಶಾಂಗ ಸಚಿವರ ಬುದ್ಧಿಯ ದಿವಾಳಿತನದ ಬಗ್ಗೆ ಎಷ್ಟು ಕನಿಕರ ಪಟ್ಟರೂ ಕಡಿಮೆಯೇ !

ಜಿಹಾದಿ ಭಯೋತ್ಪಾದನೆಯ ಜನಕನಾಗಿರುವ ಪಾಕಿಸ್ತಾನಕ್ಕೆ ಕಾಶ್ಮೀರದಲ್ಲಿರುವ ಭಯೋತ್ಪಾದಕರನ್ನು ನಿಯಂತ್ರಿಸಲು ಭಾರತ ನಡೆಸುತ್ತಿರುವ ನಿರಂತರ ಪ್ರಯತ್ನಗಳು ದೌರ್ಜನ್ಯವೆಂದೇ ಅನಿಸಬಹುದು !