ಜ್ಞಾನವಾಪಿಯ ಪ್ರಕರಣದಲ್ಲಿ ಭಾರತದ ಪುರಾತತ್ವ ಇಲಾಖೆಯ ವರದಿಯು ನಿರ್ಣಾಯಕ ಸಾಕ್ಷಿಯಲ್ಲ!

‘ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ’ಯ ಹೇಳಿಕೆ

ವಾರಣಾಸಿ (ಉತ್ತರ ಪ್ರದೇಶ) – ಜ್ಞಾನವಾಪಿಯ ಪ್ರಕರಣದಲ್ಲಿ ಭಾರತೀಯ ಪುರಾತತ್ವ ಸರ್ವೇಕ್ಷಣೆಯ ವರದಿಯು ನಿರ್ಣಾಯಕ ಪುರಾವೆಯಲ್ಲ ಎಂದು `ಆಲ್ ಇಂಡಿಯಾ ಮುಸ್ಲಿಂ ಪರ್ಸನಲ ಲಾ ಬೋರ್ಡ’ ಹೇಳಿದೆ. ‘ಇಂತಹ ವರದಿಯನ್ನು ಸಲ್ಲಿಸುವ ಮೂಲಕ ವಿರೋಧ ಪಕ್ಷಗಳು ಸಮಾಜದಲ್ಲಿ ಅರಾಜಕತೆ ಮತ್ತು ಅಭದ್ರತೆಯ ಭಾವನೆ ಮೂಡಿಸಲು ಪ್ರಯತ್ನಿಸುತ್ತಿವೆ’ ಎಂದು ಮಂಡಳಿಯ ವಕ್ತಾರ ಡಾ.ಸೈಯದ್ ಖಾಸಿಂ ರಸೂಲ್ ಇಲಿಯಾಸ ಪ್ರಸಾರ ಮಾಧ್ಯಮಗಳೆದುರಿಗೆ ಈ ವಿಷಯದ ಕುರಿತು ಮಾತನಾಡುತ್ತಾ ಆರೋಪಿಸಿದರು.

ಡಾ.ಸೈಯದ್ ಇಲ್ಯಾಸ್ ಇವರು ಮಂಡಿಸಿರುವ ಸೂತ್ರಗಳು!

1. ಜ್ಞಾನವಾಪಿ ವಿಷಯದಲ್ಲಿ ಹಿಂದೂ ಜಾತಿವಾದಿ ಸಂಘಟನೆಗಳು ಹಲವು ವರ್ಷಗಳಿಂದ ಸಾರ್ವಜನಿಕರನ್ನು ದಾರಿ ತಪ್ಪಿಸುತ್ತಿವೆ. ಇದಕ್ಕೆ ತಾಜಾ ಉದಾಹರಣೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆಯ ವರದಿ! ಈ ವರದಿಯು ಅವರ ಅಭ್ಯಾಸಕ್ಕಾಗಿ ಸಾಬೀತುಪಡಿಸುವ ಸಲುವಾಗಿ ಇತ್ತು; ಆದರೆ ಅದನ್ನು ಪ್ರಸಾರ ಮಾಧ್ಯಮಗಳಲ್ಲಿ ಪ್ರಸಾರ ಮಾಡಿ ವಿರೋಧಿ ಪಕ್ಷವು ನ್ಯಾಯಾಲಯದ ಅಪಮಾನವನ್ನು ಮಾಡಿರುವುದಷ್ಟೇ ಅಲ್ಲ, ದೇಶದ ಸಾಮಾನ್ಯ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡಿದೆ.

2. ಕೆಲ ತಿಂಗಳ ಹಿಂದೆ ನ್ಯಾಯಾಲಯ ಕಮಿಷನರ್ ಪಹಣಿ ಸಿಬ್ಬಂದಿಯವರು ಅವರ ವರದಿಯಲ್ಲಿ ಜಲಾಶಯದಲ್ಲಿರುವ ಕಾರಂಜಿಯನ್ನು ‘ಶಿವಲಿಂಗ’ ಎಂದು ಬಣ್ಣಿಸಿದ್ದರು. ಆಗ ವಿರೋಧ ಪಕ್ಷಗಳು ಜನತೆಯ ದಾರಿ ತಪ್ಪಿಸುವ ಮೂಲಕ ಸಮಾಜದಲ್ಲಿ ಅಶಾಂತಿ ಮೂಡಿಸಲು ಇನ್ನಿಲ್ಲದ ಪ್ರಯತ್ನ ನಡೆಸಿದ್ದವು. ಆದರೂ, ಅದನ್ನು ತಜ್ಞರಿಂದ ತನಿಖೆ ನಡೆಸಲಾಗಲಿಲ್ಲ ಅಥವಾ ನ್ಯಾಯಾಲಯವು ಅದರ ಬಗ್ಗೆ ಯಾವುದೇ ನಿರ್ಣಯವ ನೀಡಿರುವುದಿಲ್ಲ.

3. ಈ ಹಿಂದೆ, ಬಾಬರಿ ಪ್ರಕರಣದಲ್ಲಿಯೂ, ಪುರಾತತ್ವ ಇಲಾಖೆಯು ಬಾಬರಿಯ ಖಾಲಿ ಭವ್ಯ ದೇವಾಲಯ ಇರುವುದಾಗಿ ಹೇಳಿತ್ತು; ಆದರೆ ಯಾವಾಗ ಮಂಡಳಿಯ ಪರವಾಗಿ ದೇಶದ 10 ಖ್ಯಾತ ಪುರಾತತ್ವಶಾಸ್ತ್ರಜ್ಞರು ನ್ಯಾಯಾಲಯದಲ್ಲಿ ಇದನ್ನು ಪರೀಕ್ಷಿಸಿದಾಗ ಅದು ತಪ್ಪಾಗಿದೆಯೆಂದು ಬಹಿರಂಗವಾಗಿದೆ. ಉತ್ಖನನದಲ್ಲಿ ಸಿಕ್ಕಿರುವ ವಿಷಯಗಳಿಂದ ಬಾಬರಿಯನ್ನು ಬೆಂಬಲಿಸಿ ವಾದಗಳನ್ನು ಮಾಡಿದಾಗ, ಅಲಹಾಬಾದ್ ಉಚ್ಚನ್ಯಾಯಾಲಯದ ಲಕ್ನೋ ಪೀಠವು ಈ ವರದಿಯನ್ನು ಪರಿಗಣನೆಗೆ ಸ್ವೀಕರಿಸಲಿಲ್ಲ. ಸರ್ವೋಚ್ಚ ನ್ಯಾಯಾಲಯವು ಉತ್ಖನನದಲ್ಲಿ ಸಿಕ್ಕಿರುವ ವಸ್ತುಗಳು ಬಾಬರಿ ಮಸೀದಿ ನಿರ್ಮಾಣಕ್ಕೆ ನಾಲ್ಕು ಶತಮಾನಗಳ ಹಿಂದಿನವು ಎಂದು ಹೇಳಿದೆ. ಆದುದರಿಂದ ಈಗಿನ (ಜ್ಞಾನವಾಪಿಯ) ವರದಿಯ ಮೇಲೆ ನ್ಯಾಯಾಲಯದ ಅಂತಿಮ ತೀರ್ಮಾನ ಏನಿರಬಹುದು ಎಂದು ಕಾಲವೇ ಹೇಳಲಿದೆ. (ನಿರ್ಣಯ ಏನಿರಬಹುದು,ಎಂದು ಹಿಂದೂಗಳಿಗೆ ತಿಳಿದಿದೆ ಮತ್ತು ಮುಸ್ಲಿಮರಿಗೂ ತಿಳಿದಿದೆ. ಆದರೂ ಅವರು ‘ ಬಿದ್ದರೂ ಮೀಸೆ ಮಣ್ಣಾಗಲಿಲ್ಲ’ ಅಥವಾ ಏನೂ ತಿಳಿಯದೇ ಇರುವ ರೀತಿಯಲ್ಲಿ ಇರಲು ಪ್ರಯತ್ನಿಸುತ್ತಾರೆ! – ಸಂಪಾದಕರು)

4. ಬಾಬರಿ ಪ್ರಕರಣದಲ್ಲಿ ಪುರಾತತ್ವ ಇಲಾಖೆಯ ವರದಿಯಂತೆಯೇ ಈ ವರದಿಯ ತೀರ್ಪು ಬರಲಿದೆಯೆಂದು ನಮಗೆ ವಿಶ್ವಾಸವಿದೆ. ನಮ್ಮ ಪ್ರಮುಖ ಸಂಸ್ಥೆ ಜಾತಿವಾದಗಳ ಕೈಯಲ್ಲಿರುವ ಆಟಿಗೆಯಾಗಿ ತಮ್ಮ ಪ್ರಾಮುಖ್ಯತೆಯನ್ನು ಕಳೆದುಕೊಂಡಿದ್ದಾರೆ. ಇದರ ದುಃಖವೆನಿಸುತ್ತಿದೆ.

5. ಮಂಡಳಿಯ ಕಾನೂನು ಸಮಿತಿ ಹಾಗೂ ನಮ್ಮ ನ್ಯಾಯವಾದಿಗಳು ಈ ವರದಿಯ ವಿಸ್ತೃತವಾಗಿ ಪರಿಶೀಲನೆ ನಡೆಸುತ್ತಾರೆ ಮತ್ತು ಜ್ಞಾನವಾಪಿಯ ಅಂಜುಮನ ಆಡಳಿತ ಮಂಡಳಿ ವತಿಯಿಂದ ನ್ಯಾಯಾಲಯಕ್ಕೆ ಒಪ್ಪಿಸಲಾಗುವುದು.

6. ಈ ಪ್ರಕರಣದಲ್ಲಿ, ಸಾಧ್ಯವಿರುವ ಎಲ್ಲ ಪ್ರಯತ್ನಗಳನ್ನು ಮಾಡಲಾಗುವುದು. ಮುಸ್ಲಿಮರು ಭರವಸೆ ಕಳೆದುಕೊಳ್ಳಬಾರದು ಮತ್ತು ಪ್ರಾರ್ಥನೆಯನ್ನು ಮಾಡುತ್ತಿರಬೇಕು. ಸರ್ವಶಕ್ತಿಮಾನ ಅಲ್ಲಾನಲ್ಲಿ ಕ್ಷಮೆಯಾಚಿಸಬೇಕು, ಅವನು ಎಲ್ಲಾ ಕಾರಣಗಳ ಸೃಷ್ಟಿಕರ್ತನಾಗಿದ್ದಾನೆ. ನ್ಯಾಯಾಲಯದ ಅಂತಿಮ ತೀರ್ಪಿನವರೆಗೆ ಯಾವುದೇ ವರದಿಯ ಮೇಲೆ ಯಾವುದೇ ಅಭಿಪ್ರಾಯವನ್ನು ಹೊಂದಬೇಡಿರಿ ಎಂದು ನಾವು ದೇಶದ ಜನರಿಗೆ ಮನವಿ ಮಾಡುತ್ತೇವೆ.

ಸಂಪಾದಕರ ನಿಲುವು

* ಬಾಬರಿ ಸಮಯದಲ್ಲಿಯೂ ಮುಸ್ಲಿಂ ಪಕ್ಷವು ಇದೇ ರೀತಿ ಹೇಳಿಕೆಗಳನ್ನು ನೀಡಿತ್ತು; ಆದರೆ ಸರ್ವೋಚ್ಚ ನ್ಯಾಯಾಲಯವು ಪುರಾತತ್ವ ಇಲಾಖೆ ಅಲ್ಲಿ ನಡೆಸಿದ ಸರ್ವೇಕ್ಷಣೆಯ ವರದಿಯ ಆಧಾರದಿಂದಲೇ ಅಲ್ಲಿ ಮೊದಲು ಮಂದಿರವಿತ್ತು, ಇದನ್ನು ಒಪ್ಪಿಕೊಳ್ಳುತ್ತಾ, ಹಿಂದೂಗಳ ಪರವಾಗಿ ನಿರ್ಣಯವನ್ನು ನೀಡಿತ್ತು. ಇದು ವಾಸ್ತವ ಸ್ಥಿತಿ.