ಕನ್ನಡ ಸಾಪ್ತಾಹಿಕ ಸನಾತನ ಪ್ರಭಾತದ ೨೪/೪೬ ನೇ ಸಂಚಿಕೆಯಲ್ಲಿ ಶ್ರೀ. ರಾಜ ಕರ್ವೆ ಇವರ ‘ಜ್ಯೋತಿಷ್ಯಶಾಸ್ತ್ರದ ಮಾರ್ಗದರ್ಶನ ಪಡೆಯುವ ಬಗ್ಗೆ ಗಮನದಲ್ಲಿಡಬೇಬೇಕಾದ ಅಂಶಗಳು !’ ಈ ಲೇಖನ ಮುದ್ರಣವಾಗಿತ್ತು. ಈ ಲೇಖನ ಓದುವಾಗ ನನಗೆ ನಮ್ಮ ಸಂದರ್ಭದಲ್ಲಿ ನಡೆದಿರುವ ಘಟನೆ ನೆನಪಿಗೆ ಬಂದಿತು.
ಮಾರ್ಚ್ ೨೦೨೩ರಲ್ಲಿ ನಮ್ಮ ಮನೆಯಲ್ಲಿನ ಎಲ್ಲರಿಗೂ ಅನಾರೋಗ್ಯವಾಗಿತ್ತು. ಪೂ. ರಾಧಾ ಪ್ರಭು ಇವರಿಗೆ ಬಹಳ ಕೆಮ್ಮು ಬಂದಿತ್ತು. ಅವರು ಸತತ ಕೆಮ್ಮುತ್ತಿರುವುದರಿಂದ ಅವರಿಗೆ ಸೊಂಟ ನೋವು ಬಂದಿತ್ತು. ಆದ್ದರಿಂದ ಅವರಿಗೆ ಸಾಧಕರಿಗಾಗಿ ನಾಮಜಪಾದಿ ಉಪಾಯ ಮಾಡಲು ಆಶ್ರಮಕ್ಕೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ನನ್ನ ಮಗ ಶ್ರೀ. ಭರತ ಇವನಿಗೆ ಶ್ವಾಸ ಸಂಬಂಧಿತ ತೀವ್ರ ತೊಂದರೆ ಆಗಿತ್ತು. ನನಗೆ ಅನೇಕ ದಿನಗಳಿಂದ ಬೆನ್ನು ನೋವು ಇರುವುದರಿಂದ ಮಲಗಲು ಸಾಧ್ಯವಾಗುತ್ತಿರಲಿಲ್ಲ. ಔಷಧೋಪಚಾರ ಮಾಡಿದರೂ ನಮ್ಮ ತೊಂದರೆ ಕಡಿಮೆ ಆಗುತ್ತಿರಲಿಲ್ಲ. ಸುಮಾರು ಒಂದರಿಂದ ಒಂದೂವರೆ ತಿಂಗಳು ಪರಿಸ್ಥಿತಿ ಹೀಗೆ ಇತ್ತು.
ಆಗ ನಾವು ವಾಸ್ತುವಿನಲ್ಲಿ ಏನಾದರೂ ದೋಷ ಅಥವಾ ತೊಂದರೆ ಇರಬಹುದೇ ? ಅದಕ್ಕೆ ಏನಾದರೂ ಉಪಾಯ ಮಾಡಬೇಕಾಗಬಹುದೇ ? ಎಂದು ನಮ್ಮ ಪುರೋಹಿತರಲ್ಲಿ ಕೇಳೋಣ ಎಂದು ವಿಚಾರ ಮಾಡಿದೆವು. (ಪುರೋಹಿತರು ಜ್ಯೋತಿಷ್ಯದ ಅಭ್ಯಾಸ ಮಾಡಿದ್ದು ಪೌರೋಹಿತ್ಯದಲ್ಲಿ ಶಿರೋಮಣಿ ಪದವಿ ಪಡೆದಿದ್ದಾರೆ.) ಅವರಿಗೆ ನಮ್ಮ ನಾಲ್ಕು ಜನರ (ನನ್ನ ಮಗ ಶ್ರೀ ಭರತ, ಸೊಸೆ ಸೌ. ಭವಾನಿ, ಮೊಮ್ಮಗ ಸನಾತನದ ಮೊದಲ ಬಾಲಕಸಂತ ಪೂ. ಭಾರ್ಗವರಾಮ ಮತ್ತು ನನ್ನದು) ಜಾತಕ ತೋರಿಸಿದೆವು. ಆಗ ಎಲ್ಲರ ಜಾತಕ ನೋಡಿ ಅವರು ಹೇಳಿದರು, ‘ನಿಮ್ಮ ವಾಸ್ತು ಬಹಳ ಒಳ್ಳೆಯದಾಗಿದೆ. ಅದಕ್ಕಿಂತಲೂ ಮಹತ್ವದೆಂದರೆ ನಿಮ್ಮ ಎಲ್ಲರ ಜಾತಕದಲ್ಲಿ ಗುರುಗ್ರಹ ಬಲವಾಗಿ ಇದ್ದಾನೆ. ನೀವು ಯಾವುದೇ ವಿಧಿ ಮಾಡುವ ಅವಶ್ಯಕತೆ ಇಲ್ಲ. ನಿಮ್ಮ ಸಮಾಧಾನಕ್ಕಾಗಿ ಪಂಚಮಿಯ ದಿನ ನಿಮ್ಮ ಮೂಲ ಸ್ಥಳಕ್ಕೆ ಹೋಗಿ ನಾಗದೇವತೆಗೆ ಅಭಿಷೇಕ ಮಾಡಿ ಮತ್ತು ಶಿವನ ದೇವಸ್ಥಾನಕ್ಕೆ ಹೋಗಿ ಬನ್ನಿ. ಅವರ ಮಾತು ಕೇಳಿ, ಗುರುಕೃಪೆ ಅತ್ಯಂತ ಮಹತ್ವದ್ದಾಗಿದೆ. ಆದ್ದರಿಂದ ಪ್ರಾರಬ್ಧ ಭೋಗಿಸಲು ಶಕ್ತಿ ಸಿಗುತ್ತದೆ, ಇದರ ಬಗ್ಗೆ ನಮಗೆ ಮತ್ತೊಮ್ಮೆ ನಂಬಿಕೆ ಬಂದಿತ್ತು.
– ಶ್ರೀಮತಿ ಅಶ್ವಿನಿ ಪ್ರಭು (ಆಧ್ಯಾತ್ಮಿಕ ಮಟ್ಟ ಶೇಕಡಾ ೬೨, ವಯಸ್ಸು ೫೮ ವರ್ಷ) ಮಂಗಳೂರು (೧೨.೩.೨೦೨೩)