ಸಂಚಿಕೆ ಕ್ರ. ೨೫/೧೭ ರಲ್ಲಿ ಮುದ್ರಿಸಲಾದ ಸದ್ಗುರು ರಾಜೇಂದ್ರ ಶಿಂದೆ ಇವರ ಲೇಖನದಲ್ಲಿ ‘ಸಾಧಕರ ಮನಸ್ಸಿನಲ್ಲಿನ ಸಂದೇಹಗಳಿಗೆ ಸಂಪೂರ್ಣ ಸಮಾಧಾನ ನೀಡಿ ಮತ್ತು ಅಧ್ಯಾತ್ಮದಲ್ಲಿನ ಸಿದ್ಧಾಂತಗಳನ್ನು ವೈಜ್ಞಾನಿಕ ಭಾಷೆಯಲ್ಲಿ ಮಂಡಿಸಿ ಸಾಧಕರನ್ನು ಸಾಧನೆಯಲ್ಲಿ ಮುಂದೆ ಕರೆದುಕೊಂಡು ಹೋಗುವ ಅದ್ವಿತೀಯ ಮಹಾನ ಪರಾತ್ಪರ ಗುರು ಡಾ. ಆಠವಲೆ’, ಈ ವಿಷಯದ ಬಗ್ಗೆ ಓದಿದೆವು. ಈ ವಾರದ ಲೇಖನದಲ್ಲಿ ‘ಪರಾತ್ಪರ ಗುರು ಡಾ. ಆಠವಲೆಯವರು ಆಯೋಜನಬದ್ಧ ರೀತಿಯಲ್ಲಿ ಸೇವೆಯನ್ನು ಮಾಡಲು ಕಲಿಸಿದುದರಿಂದ ಸಾಧನೆಯಲ್ಲಿ ಶೀಘ್ರ ಪ್ರಗತಿ ಮಾಡಿಕೊಳ್ಳಲು ಹೇಗೆ ಲಾಭವಾಯಿತು ?’, ಎಂಬುದರ ಬಗ್ಗೆ ಕೊಡಲಾಗಿದೆ. (ಭಾಗ ೩)
೧. ಸಾಮೂಹಿಕ ಪ್ರಸಾರದ ಅದ್ವಿತೀಯ ಕಲ್ಪನೆ !
೧ ಅ. ಸಾಮೂಹಿಕ ಪ್ರಸಾರ ಅಭಿಯಾನಕ್ಕಾಗಿ ಮಾಡಲಾಗುವ ಪೂರ್ವತಯಾರಿ : ‘೨೦೦೦ ನೇ ಇಸವಿಯಲ್ಲಿ ಪ್ರತಿ ರವಿವಾರ ದೈನಿಕ ‘ಸನಾತನ ಪ್ರಭಾತ’ದ ಚಂದಾದಾರರನ್ನಾಗಿ ಮಾಡುವ ಅಭಿಯಾನ, ಸನಾತನದ ಗ್ರಂಥ ಮತ್ತು ಸಾಪ್ತಾಹಿಕ ‘ಸನಾತನ ಪ್ರಭಾತ’ ಇವುಗಳ ವಿತರಣೆ’, ಇವುಗಳ ಸಾಮೂಹಿಕ ಪ್ರಚಾರವಿರುತ್ತಿತ್ತು. ಅದಕ್ಕಾಗಿ ಅದರ ಪೂರ್ವತಯಾರಿಯನ್ನು ಮಾಡಲಾಗುತ್ತಿತ್ತು.
೧. ಪ್ರತಿವಾರ ‘ಠಾಣೆ ನಗರದ ಯಾವ ಭಾಗದಲ್ಲಿ ಪ್ರಚಾರ ಮಾಡಬೇಕು ? ಎಂಬುದನ್ನು ಜವಾಬ್ದಾರ ಸಾಧಕರು ಮೊದಲೇ ನಿರ್ಧರಿಸುತ್ತಿದ್ದರು. ಅವರು ೬ ತಿಂಗಳುಗಳ ಪ್ರಸಾರದ ಆಯೋಜನೆಯನ್ನು ಮೊದಲೇ ಮಾಡುತ್ತಿದ್ದರು.
೨. ಯಾವ ಸ್ಥಳದಲ್ಲಿ ಪ್ರಚಾರ ಮಾಡಬೇಕಿದೆಯೋ, ಅಲ್ಲಿನ ಸಾಧಕರಿಗೆ ಅಭಿಯಾನದ ದಿನಾಂಕವನ್ನು ಮೊದಲೇ ತಿಳಿಸಲಾಗುತ್ತಿತ್ತು. ಇದರಿಂದ ಅಲ್ಲಿನ ಸಾಧಕರು ಆ ಭಾಗದಲ್ಲಿನ ಮಾರ್ಗ, ವಸತಿ ಸಂಕೀರ್ಣ, ವಠಾರ ಇತ್ಯಾದಿಗಳ ಆಳವಾದ ಅಧ್ಯಯನ ಮಾಡಿ ‘ಸ್ಥಳೀಯ ಪರಿಸ್ಥಿತಿಗನುಸಾರ ಯಾವ ಪ್ರದೇಶದಲ್ಲಿ ಉತ್ತಮ ರೀತಿಯಲ್ಲಿ ಪ್ರಚಾರ ಆಗಬಹುದು ?’, ಎಂಬುದರ ಬಗ್ಗೆ ಅಧ್ಯಯನ ಮಾಡುತ್ತಿದ್ದರು.
೩. ಈ ಅಭಿಯಾನದಲ್ಲಿ ೫೦ ರಿಂದ ೧೦೦ ರವರೆಗೆ ಸಾಧಕರು ಭಾಗವಹಿಸುತ್ತಿದ್ದರು. ಲಭ್ಯವಿರುವ ಸಾಧಕರಿಗನುಸಾರ ‘ಒಟ್ಟು ಎಷ್ಟು ಗುಂಪುಗಳನ್ನು ಮಾಡಬೇಕು ?’ ಮತ್ತು ‘ಯಾವ ಗುಂಪನ್ನು ಎಲ್ಲಿ ಕಳುಹಿಸಬೇಕು ?’, ಎಂಬುದರ ಎಲ್ಲ ಆಯೋಜನೆಯನ್ನು ಕಾಗದದ ಮೇಲೆ ಬರೆದು ತಯಾರಿಸಲಾಗುತ್ತಿತ್ತು.
೪. ಪ್ರಚಾರ ಮತ್ತು ವಿತರಣೆಗಾಗಿ ಬೇಕಾಗುವ ಸನಾತನದ ಗ್ರಂಥಗಳು, ಸಾಪ್ತಾಹಿಕ ‘ಸನಾತನ ಪ್ರಭಾತ’ ಮತ್ತು ‘ಸನಾತನ ಪ್ರಭಾತ’ ನಿಯತಕಾಲಿಕೆಗಳ ಚಂದಾದಾರರನ್ನಾಗಿ ಮಾಡಲು ಬೇಕಾಗುವ ರಶೀದಿ ಪುಸ್ತಕಗಳ ಬೇಡಿಕೆಯನ್ನು ಮೊದಲೇ ನೀಡಿ ಪ್ರತಿಯೊಂದು ಗುಂಪಿಗಾಗಿ ಅವುಗಳ ಕಟ್ಟುಗಳನ್ನು (ಬಂಡಲ್)ಮಾಡಿ ಇಡಲಾಗುತ್ತಿತ್ತು.
೫. ಪ್ರಚಾರದ ಸಮಯದಲ್ಲಿ ಯಾರಿಗಾದರೂ ಪ್ರಚಾರಸಾಹಿತ್ಯ ಗಳು ಕಡಿಮೆ ಬಿದ್ದರೆ ಅವುಗಳನ್ನು ಪಡೆಯಲು ಒಂದು ಸ್ಥಳದಲ್ಲಿ ವಿತರಣೆಕಕ್ಷೆಯನ್ನು ಏರ್ಪಡಿಸಲಾಗುತ್ತಿತ್ತು.
೬. ಆ ಭಾಗದಲ್ಲಿ ವಾಸಿಸುವ ಸಾಧಕರ ಮನೆ ದೊಡ್ಡದಾಗಿದ್ದರೆ ಅಲ್ಲಿ ಅಥವಾ ಯಾವುದಾದರೊಂದು ದೇವಸ್ಥಾನ ಅಥವಾ ಆ ಪ್ರದೇಶದಲ್ಲಿನ ಶಾಲೆಯ ಯಾವುದಾದರೊಂದು ತರಗತಿಯಲ್ಲಿ ಸಾಧಕರು ಮಧ್ಯಾಹ್ನದ ಊಟಕ್ಕೆ ಕುಳಿತುಕೊಳ್ಳುವ ವ್ಯವಸ್ಥೆಯನ್ನು ಮಾಡಲಾಗುತ್ತಿತ್ತು.
೧ ಆ. ಪ್ರತ್ಯಕ್ಷ ಪ್ರಚಾರ
೧. ಸಾಧಕರಿಗೆ ‘ಅವರು ತಮ್ಮ ಗುಂಪಿಗನುಸಾರ ಯಾವ ಪ್ರದೇಶದಲ್ಲಿ ಪ್ರಚಾರಕ್ಕೆ ಹೋಗಬೇಕು ?’, ಎಂಬುದನ್ನು ಮೊದಲೇ ಹೇಳಲಾಗುತ್ತಿತ್ತು. ಆದುದರಿಂದ ಬೆಳಗ್ಗೆ ೮ ಅಥವಾ ೯ ಗಂಟೆಯಿಂದ ಪ್ರಚಾರ ಆರಂಭವಾಗುತ್ತಿತ್ತು.
೨. ಮನೆಮನೆಗಳಿಗೆ ಹೋಗಿ ಜನರಿಗೆ ಸಾಧನೆಯನ್ನು ಹೇಳುವುದು, ‘ಸನಾತನ ಪ್ರಭಾತ, ನಿಯತಕಾಲಿಕೆಗಳ ಚಂದಾದಾರರನ್ನಾಗಿ ಮಾಡುವುದು, ಸನಾತನದ ಗ್ರಂಥಗಳ ಮಾಹಿತಿಯನ್ನು ಹೇಳಿ ಅವುಗಳನ್ನು ವಿತರಿಸುವುದು (ಮಾರಾಟ)’, ಹೀಗೆ ಸೇವೆಯನ್ನು ಮಾಡಲಾಗುತ್ತಿತ್ತು.
೩. ಮಧ್ಯಾಹ್ನ ಊಟಕ್ಕಾಗಿ ಎಲ್ಲರೂ ಒಟ್ಟಿಗೆ ಸೇರುತ್ತಿದ್ದರು. ಊಟದಲ್ಲಿ ಕೇವಲ ಕಿಚಡಿ, ಮಜ್ಜಿಗೆ ಮತ್ತು ಉಪ್ಪಿನಕಾಯಿ ಇರುತ್ತಿತ್ತು.
(ಟಿಪ್ಪಣಿ : ಇದರಿಂದ ಪ.ಪೂ. ಡಾಕ್ಟರರ ದೂರದೃಷ್ಟಿ ಗಮನಕ್ಕೆ ಬಂದಿತು. ‘ತಿನ್ನುವ-ಕುಡಿಯುವ ಆಯೋಜನೆ ಮತ್ತು ಅಡುಗೆ ಮಾಡುವುದು’, ಇವುಗಳಲ್ಲಿ ಸಾಧಕರ ಸಮಯ ಹೋಗಬಾರದು, ಮುಂಬರುವ ಆಪತ್ಕಾಲಕ್ಕೆ ಈಗಿನಿಂದಲೇ ಸಿದ್ಧತೆಯಾಗಬೇಕು, ಸಾಧಕರ ಬೇಕು-ಬೇಡಗಳು ಕಡಿಮೆಯಾಗಬೇಕು ಮತ್ತು ಅವರ ಹೆಚ್ಚೆಚ್ಚು ಸಮಯ ಪ್ರಚಾರಸೇವೆಗಾಗಿ ಬಳಕೆಯಾಗಬೇಕು’, ಎಂಬುದಕ್ಕಾಗಿ ಮೊದಲಿನಿಂದಲೂ ಅವರು ಗುರುಪೂರ್ಣಿಮೆಯ ಉತ್ಸವ ಅಥವಾ ಸತ್ಸಂಗ ಸಮಾರಂಭಗಳಂತಹ ಕಾರ್ಯಕ್ರಮ ಗಳಲ್ಲಿಯೂ ಕೇವಲ ಕಿಚಡಿ, ಮಜ್ಜಿಗೆ ಮತ್ತು ಉಪ್ಪಿನಕಾಯಿ ಇಷ್ಟೇ ಪದಾರ್ಥಗಳನ್ನು ಊಟದಲ್ಲಿಡಲು ಹೇಳುತ್ತಿದ್ದರು. (ರವಿವಾರ ಹೆಚ್ಚಿನ ಮನೆಗಳಲ್ಲಿ ವಿಶೇಷ ರುಚಿಕರ ಪದಾರ್ಥಗಳನ್ನು ಮಾಡಲಾಗುತ್ತದೆ; ಆದರೆ ಗುರುಸೇವೆಗಾಗಿ ಸಾಧಕರು ತಿನ್ನುವ-ಕುಡಿಯವ ಇಷ್ಟಾನಿಷ್ಟಗಳನ್ನು ತ್ಯಾಗ ಮಾಡಿದರು. ಸಾಧನೆಯ ಆರಂಭಿಕ ಹಂತದಲ್ಲಿ ಈ ರೀತಿಯ ತ್ಯಾಗ ಮಾಡುವುದು ಕಠಿಣವಿರುತ್ತದೆ; ಆದರೆ ಸೇವೆಯಿಂದ ದೊರಕುವ ಆನಂದದಿಂದ ಸಾಧಕರಿಗೆ ಅದು ಸಾಧ್ಯವಾಯಿತು.)
೪. ಊಟದ ನಂತರ, ಬೆಳಗ್ಗೆ ಮಾಡಲಾದ ಪ್ರಚಾರದ ವರದಿಯನ್ನು ತೆಗೆದುಕೊಳ್ಳಲಾಗುತ್ತಿತ್ತು. ಅನಂತರ ಕೆಲವು ಸೂಚನೆಗಳನ್ನು ನೀಡಿದ ನಂತರ ಮಧ್ಯಾಹ್ನ ೩ ಗಂಟೆಗೆ ಪುನಃ ಪ್ರಚಾರ ಆರಂಭವಾಗುತ್ತಿತ್ತು.
೫. ಸಾಯಂಕಾಲ ಪ್ರಚಾರ ಮುಗಿದ ನಂತರ ಎಲ್ಲರ ವರದಿಯಾಗಿ ದಿನವಿಡಿಯ ವಿತರಣೆಯ ಲೆಕ್ಕಾಚಾರ ಆಗುವ ವರೆಗೆ ಸಾಯಂಕಾಲ ೭ ರಿಂದ ರಾತ್ರಿ ೮ ಆಗುತ್ತಿತ್ತು.
೨. ಪ್ರಚಾರ ಅಭಿಯಾನದಿಂದಾದ ಲಾಭ !
ಅ. ನೌಕರಿಗೆ ಹೋಗುವವರು ಮತ್ತು ವಿದ್ಯಾರ್ಥಿ ಸಾಧಕರಿಗೆ ಈ ಪ್ರಚಾರ ಅಭಿಯಾನದಿಂದ ಬಹಳ ಲಾಭವಾಗುತ್ತಿತ್ತು; ಏಕೆಂದರೆ ರವಿವಾರದಂದು ಈ ಅಭಿಯಾನಗಳನ್ನಿಟ್ಟ ಕಾರಣ ಅವರ ರಜೆಯ ದಿನಗಳು ಸಂಪೂರ್ಣ ಸಾಧನೆಗಾಗಿ ಬಳಕೆಯಾಗುತ್ತಿದ್ದವು.
ಆ. ಪ್ರಚಾರಸೇವೆಯು ಸಾಧಾರಣ ಒಂದು ವರ್ಷವಿಡೀ ನಡೆಯುತ್ತಿತ್ತು. ಇದರಿಂದ ಸಾಧಕರಿಗೆ ಹೆಚ್ಚೆಚ್ಚು ಕಾಲ ಸತ್‌ನಲ್ಲಿರುವ ಅಭ್ಯಾಸವಾಯಿತು.
ಇ. ಎಲ್ಲ ಸಾಧಕರಿಗೆ ಪರಸ್ಪರ ಪರಿಚಯವಾಗಿ ಅವರಿಗೆ ಪರಸ್ಪರರರಿಂದ ಕಲಿಯಲು ಸಿಕ್ಕಿತು ಮತ್ತು ಅವರ ಪರಸ್ಪರರಲ್ಲಿ ಪ್ರೇಮಭಾವವೂ ಹೆಚ್ಚಾಯಿತು.
ಈ. ‘ನೇತೃತ್ವ ಗುಣ ಹೇಗಿರಬೇಕು ?’ ಮತ್ತು ‘ಸಾಧಕರೊಂದಿಗೆ ಆತ್ಮೀಯತೆಯನ್ನು ಹೇಗೆ ಬೆಳೆಸಬೇಕು ?’, ಇದೂ ಕಲಿಯಲು ಸಿಕ್ಕಿತು.
೩. ದೇವರ ಸಹಾಯ ಪಡೆಯುವ ಮಹತ್ವವು ಮನಸ್ಸಿನ ಮೇಲೆ ಬಿಂಬಿತವಾಗುವುದು
೩ ಅ. ಸೇವೆಯ ಆಯೋಜನೆಯನ್ನು ಮಾಡಲು ಸಾಧ್ಯವಾಗದಿರುವುದು, ಆಗ ಶ್ರೀಕೃಷ್ಣ ಮತ್ತು ಪರಾತ್ಪರ ಗುರು ಡಾ. ಆಠವಲೆಯವರಿಗೆ ಶರಣಾಗಿ ಪ್ರಾರ್ಥಿಸಿದಾಗ ಆಯೋಜನೆಯಲ್ಲಿ ಅನೇಕ ಹೊಸ ಅಂಶಗಳು ಹೊಳೆಯುವುದು : ಸಾಧನೆಗೆ ಮೊದಲು ನನ್ನಲ್ಲಿ ಆಯೋಜನಾ ಕೌಶಲ್ಯ ಇರಲಿಲ್ಲ. ಸಾಧನೆಗೆ ಬಂದ ನಂತರ ‘ಪ್ರತಿಯೊಂದು ಸೇವೆಯ ಆಯೋಜನೆಯನ್ನು ಮಾಡಬೇಕು’, ಎಂಬುದು ನನ್ನ ಗಮನಕ್ಕೆ ಬಂದಿತು; ಆದರೆ ಆರಂಭದಲ್ಲಿ ನನಗೆ ಆಯೋಜನೆ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಆಗ ಸಹಸಾಧಕರು ಮತ್ತು ಜವಾಬ್ದಾರ ಸಾಧಕರು ನನಗೆ ಪ್ರಾರ್ಥನೆ ಮಾಡಲು ಹೇಳುತ್ತಿದ್ದರು. ಶ್ರೀಕೃಷ್ಣ ಮತ್ತು ಪ.ಪೂ. ಡಾಕ್ಟರರಿಗೆ ಶರಣಾಗಿ ಪ್ರಾರ್ಥನೆ ಮಾಡಿದ ನಂತರ ನನಗೆ ಅನೇಕ ಅಂಶಗಳು ಹೊಳೆಯುತ್ತಿದ್ದವು. ಆಗ ‘ಬುದ್ಧಿಯಿಂದ ಆಯೋಜನೆ ಮಾಡುವುದು ಬೇರೆ ಮತ್ತು ಆಧ್ಯಾತ್ಮಿಕ ಸ್ತರದಲ್ಲಿ ಆಯೋಜನೆ ಮಾಡುವುದು ಬೇರೆಯಾಗಿದೆ’, ಎಂಬುದು ನನ್ನ ಗಮನಕ್ಕೆ ಬಂದಿತು.
೩ ಆ. ‘ದೇವರ ಸಹಾಯದಿಂದ ಆಯೋಜನೆಯನ್ನು ಮಾಡಿದಾಗ ಯಾವುದೇ ಕೃತಿಯ ಆಯೋಜನೆ ಮಾಡಲು ಸಾಧ್ಯವಾಗಿ ಅದು ಪರಿಪೂರ್ಣವಾಗುತ್ತದೆ’, ಎಂಬುದು ಕಲಿಯಲು ಸಿಕ್ಕಿತು : ನಮಗೆ ಯಾವ ಕ್ಷೇತ್ರದ ಬಗ್ಗೆ ಜ್ಞಾನವಿರುತ್ತದೆಯೋ, ಆ ಕ್ಷೇತ್ರದ ಬಗ್ಗೆ ಬುದ್ಧಿಯಿಂದ ಆಯೋಜನೆಯನ್ನು’, ಮಾಡಲು ಬರುತ್ತದೆ; ಆದರೆ ದೇವರ ಸಹಾಯ ಪಡೆದರೆ, ಅಂದರೆ ‘ಕೃತಿಗೆ ಭಾವವನ್ನು ಜೋಡಿಸಿದರೆ ನಾವು ಯಾವುದೇ ಕೃತಿಯ ಆಯೋಜನೆಯನ್ನು ಮಾಡಬಹುದು’, ಎಂಬುದು ನನ್ನ ಗಮನಕ್ಕೆ ಬಂದಿತು. ಇದರಿಂದ ‘ಪರಿಪೂರ್ಣ ಆಯೋಜನೆ ಮಾಡುವುದಿದ್ದರೆ, ದೇವರ ಸಹಾಯ ಪಡೆಯುವುದು ಆವಶ್ಯಕವಾಗಿದೆ’, ಎಂಬುದು ನನ್ನ ಮನಸ್ಸಿನ ಮೇಲೆ ಬಿಂಬಿತವಾಯಿತು.
೪. ಪರಾತ್ಪರ ಗುರು ಡಾ. ಆಠವಲೆಯವರು ಸಾಧಕರಿಗೆ ಆಯೋಜನಾಬದ್ಧ ರೀತಿಯಲ್ಲಿ ಸೇವೆಯನ್ನು ಮಾಡಲು ಕಲಿಸಿದುದರಿಂದ ಆಗಿರುವ ಲಾಭಗಳು !
೪ ಅ. ಸಾಧಕರಿಗೆ ಪ್ರಚಾರಸೇವೆಯ ಆಯೋಜನೆಯಲ್ಲಿ ಕಲಿಯಲು ಸಿಕ್ಕಿದ ಅನೇಕ ಸೂಕ್ಷ್ಮ(ಚಿಕ್ಕಪುಟ್ಟ) ವಿಷಯಗಳು ! : ಪರಾತ್ಪರ ಗುರು ಡಾಕ್ಟರರು ಹೇಳಿದ ಪ್ರಚಾರದ ಈ ಅಭಿನವ ಕಲ್ಪನೆಯನ್ನು ಎಲ್ಲ ಜಿಲ್ಲೆಗಳಲ್ಲಿ ನಡೆಸಲಾಗುತ್ತಿತ್ತು. ಆದುದರಿಂದ ಎಲ್ಲೆಡೆಯ ಸಾಧಕರಿಗೆ ಆಯೋಜನೆಯಲ್ಲಿನ ಅನೇಕ ಚಿಕ್ಕಪುಟ್ಟ ವಿಷಯಗಳು ಕಲಿಯಲು ಸಿಕ್ಕವು, ಉದಾ. ‘ಇಷ್ಟು ದೊಡ್ಡ ಪ್ರಮಾಣದಲ್ಲಿ ಸಾಧಕರ ಆಯೋಜನೆಯನ್ನು ಹೇಗೆ ಮಾಡಬೇಕು ?’, ‘ಪೂರ್ವತಯಾರಿ ಮಾಡುವಾಗ ಎಲ್ಲ ಆಯೋಜನೆಗಳನ್ನು ಕಾಗದದ ಮೇಲೆ ಬರೆಯುವುದು ಎಷ್ಟು ಆವಶ್ಯಕವಾಗಿದೆ ?’, ‘ಕೆಲವೊಮ್ಮೆ ಸಾಧಕರ ಸಂಖ್ಯೆ ಕಡಿಮೆ-ಹೆಚ್ಚು ಆದರೆ ಏನು ಮಾಡಬೇಕು ?’, ‘ಸೇವೆಗಾಗಿ ಸಾಧಕರನ್ನು ಹೇಗೆ ಪ್ರೇರೇಪಿಸಬೇಕು ?’, ‘ಅನೇಕ ಸಾಧಕರು ಸೇವೆಗಾಗಿ ಬಂದರೆ ಅವರೊಂದಿಗೆ ಹೇಗೆ ಮಾತನಾಡಬೇಕು ?’,
‘ವಿವಿಧ ಪ್ರಕೃತಿಗಳೊಂದಿಗೆ ಹೇಗೆ ಹೊಂದಿಕೊಳ್ಳಬೇಕು ?’, ‘ಸೇವೆಯ ಸಮಯ ನಿರ್ಧರಿಸಲಾಗಿದ್ದರೂ, ಕೆಲವೊಮ್ಮೆ ಅಡಚಣೆ ಗಳಿಂದಾಗಿ ಕೆಲವು ಸಾಧಕರು ತಡವಾಗಿ ಬರುತ್ತಿದ್ದರು, ಆಗ ಅವರಿಗೆ ಯಾವ ಸೇವೆಯನ್ನು ಲಭ್ಯ ಮಾಡಿಕೊಡಬೇಕು ? ‘ಪ್ರಚಾರ ಮಾಡುವ ಸಾಧಕರ ಊಟ ಅಥವಾ ಸಾಯಂಕಾಲದ ಚಹಾ-ತಿಂಡಿ ಇದರ ವ್ಯವಸ್ಥೆ ಮಾಡಬೇಕು’ ಇತ್ಯಾದಿ.
೪ ಆ. ಸಾಧಕರ ಮನಸ್ಸಿನ ಮೇಲೆ ‘ಪ್ರತಿಯೊಂದು ಸೇವೆಯ ಆಯೋಜನೆಯನ್ನು ಮಾಡಬೇಕು’, ಎಂಬ ಸಂಸ್ಕಾರವಾಗುವುದು : ‘ಹಬ್ಬ-ಉತ್ಸವಗಳ ಸಮಯದಲ್ಲಿ ಗ್ರಂಥಪ್ರದರ್ಶನ ಏರ್ಪಡಿಸುವುದು ಅಥವಾ ಪ್ರವಚನಗಳ ಆಯೋಜನೆಯನ್ನು ಮಾಡುವುದು, ಸತ್ಸಂಗದ ಪ್ರಚಾರ ಮಾಡುವುದು’, ಇಂತಹ ಸೇವೆಗಳ ಮೊದಲು ಆ ಸೇವೆಯಲ್ಲಿರುವ ಸಾಧಕರು ಒಟ್ಟಿಗೆ ಸೇರಿ ಆಯೋಜನೆ ಮಾಡುತ್ತಿದ್ದರು. ಆದುದರಿಂದ ‘ಪ್ರತಿಯೊಂದು ಸೇವೆಯನ್ನು ಆಯೋಜನಾಬದ್ಧವಾಗಿಯೇ ಮಾಡಬೇಕು’, ಎಂಬ ಸಂಸ್ಕಾರ ಸಾಧಕರ ಮೇಲಾಯಿತು.
೪ ಇ. ಆಯೋಜನಾಬದ್ಧ ರೀತಿಯಲ್ಲಿ ಸೇವೆಯನ್ನು ಮಾಡಿದ್ದರಿಂದ ಸೇವೆಯು ಸಹಜವಾಗಿ ಮತ್ತು ತಪ್ಪುರಹಿತವಾಗುವುದು : ಪ.ಪೂ. ಗುರುದೇವರು ಎಲ್ಲ ಸೇವೆಗಳನ್ನು ಆಯೋಜನಾಬದ್ಧ ರೀತಿಯಲ್ಲಿ ಮಾಡುವ ಕಾರ್ಯಪದ್ಧತಿಯನ್ನು ಹಾಕಿದುದರಿಂದ ‘ಸೇವೆಯನ್ನು ಮಾಡುವಾಗ ಎಲ್ಲಿಯೂ ಗಡಿಬಿಡಿ-ಅಡಚಣೆ ಇತ್ಯಾದಿ ಆಗದಿರುವುದು, ಒತ್ತಡರಹಿತ ಮತ್ತು ತಪ್ಪುಗಳಿಲ್ಲದೇ ಸೇವೆ ಆಗುವುದು ಇದು ನಮಗೆ ಕಲಿಯಲು ಸಿಕ್ಕಿತು. ಇದರಿಂದ ಪ. ಪೂ. ಡಾಕ್ಟರರು ‘ಸೇವೆಯನ್ನು ಭಾವಪೂರ್ಣ ಮತ್ತು ಪರಿಪೂರ್ಣವಾಗಿ ಹೇಗೆ ಮಾಡಬೇಕು ?’, ಎಂಬುದರ ಪರಿಪಾಠವನ್ನೇ ಸಾಧಕರಿಗೆ ಹಾಕಿ ಕೊಟ್ಟಿದ್ದಾರೆ.
೪ ಈ. ಚಿಕ್ಕ ವಿಷಯಗಳ ಆಯೋಜನೆಯನ್ನು ಮಾಡುವ ಅಭ್ಯಾಸವಾದುದರಿಂದ ವ್ಯವಹಾರದಲ್ಲಿನ ಕೆಲಸಗಳನ್ನು ಮತ್ತು ಮುಂದೆ ಸಾಧನೆಯಲ್ಲಿನ ದೊಡ್ಡ ಸೇವೆಗಳ ಆಯೋಜನೆ ಮಾಡುವಾಗ ಸುಲಭವಾಗುವುದು : ಚಿಕ್ಕ ಚಿಕ್ಕ ವಿಷಯಗಳ ಆಯೋಜನೆ ಮಾಡುವ ಅಭ್ಯಾಸವಾದುದರಿಂದ ನನಗೆ ವ್ಯವಹಾರದಲ್ಲಿನ ಕೆಲಸಗಳನ್ನು ಮತ್ತು ಮುಂದೆ ಸಾಧನೆಯಲ್ಲಿ ದೊಡ್ಡ ದೊಡ್ಡ ಸೇವೆಗಳ ಆಯೋಜನೆಯನ್ನು ಮಾಡಲು ಸಾಧ್ಯವಾಯಿತು, ಉದಾ. ಸಮಾಜದಲ್ಲಿ ದೊಡ್ಡ ಪ್ರಮಾಣದಲ್ಲಿ ಧರ್ಮಜಾಗೃತಿ ಮಾಡುವ ‘ಹಿಂದೂ ಧರ್ಮಜಾಗೃತಿ ಸಭೆ’ಗಳ ಆಯೋಜನೆ ಮಾಡುವುದು, ರಾಷ್ಟ್ರ ಮತ್ತು ಧರ್ಮದ ಮೇಲಾಗುವ ಆಘಾತಗಳ ವಿರುದ್ಧ ಜಾಗೃತಿ ಮಾಡುವ ಪ್ರದರ್ಶನ ಅಥವಾ ಕ್ರಾಂತಿಕಾರರ ಬಗ್ಗೆ ಮಾಹಿತಿ ನೀಡುವ ಪ್ರದರ್ಶನಗಳನ್ನು ಏರ್ಪಡಿಸುವುದು ಇತ್ಯಾದಿ.
೫. ಆಯೋಜನಾಬದ್ಧ ರೀತಿಯಲ್ಲಿ ಸೇವೆಯನ್ನು ಮಾಡಿದುದರಿಂದ ಸೇವೆಗಳ ಫಲನಿಷ್ಪತ್ತಿ ಹೆಚ್ಚಾಗುವುದು
ಪ.ಪೂ. ಡಾಕ್ಟರರು, ”ಈಶ್ವರನು ಪರಿಪೂರ್ಣನಾಗಿದ್ದಾನೆ. ನಾವು ಅವನೊಂದಿಗೆ ಏಕರೂಪವಾಗಬೇಕಿದ್ದರೆ, ಅವನ ಎಲ್ಲ ಗುಣಗಳು ನಮ್ಮಲ್ಲಿ ಬರಬೇಕು. ಈಶ್ವರನು ಬ್ರಹ್ಮಾಂಡದ ವ್ಯವಸ್ಥೆಯನ್ನು ಅತ್ಯಂತ ಆಯೋಜನಾಬದ್ಧ ರೀತಿಯಲ್ಲಿ ನಡೆಸುತ್ತಾನೆ. ಆದುದರಿಂದ ನಮ್ಮಲ್ಲಿಯೂ ಆಯೋಜನೆಯ ಕೌಶಲ್ಯ ಬರುವುದು ಆವಶ್ಯಕವಾಗಿದೆ”, ಎಂದು ಹೇಳುತ್ತಾರೆ. ಆದುದರಿಂದ ಈಗ ಯಾವುದೇ ಸಾಧಕ ಯಾವುದೇ ಸೇವೆಯನ್ನು ಮಾಡುವ ಮೊದಲು ಅದರ ಆಯೋಜನೆ ಮಾಡುತ್ತಾನೆ. ಇದರ ಪರಿಣಾಮ ದಿಂದ ಸನಾತನ ಸಂಸ್ಥೆಯಲ್ಲಿ ಸಾಧಕರ ಸಂಖ್ಯೆ ಕಡಿಮೆ ಇದ್ದರೂ ಉತ್ಕೃಷ್ಟ ಆಯೋಜನೆ ಮಾಡಿದುದರಿಂದ ಸಮಷ್ಟಿಯಲ್ಲಿ ದೊಡ್ಡ ಕಾರ್ಯಕ್ರಮಗಳೂ ನಿರ್ವಿಘ್ನವಾಗಿ ನೆರವೇರುತ್ತವೆ ಮತ್ತು ಸೇವೆಗಳ ಫಲನಿಷ್ಪತ್ತಿ ಹೆಚ್ಚಾಗುತ್ತದೆ.
‘ಪರಾತ್ಪರ ಗುರು ಡಾಕ್ಟರರು ಆಯೋಜನೆಯ ಕೌಶಲ್ಯವನ್ನು ಕಲಿಸಿದುದರಿಂದ ಸೇವೆಗಳ ಫಲನಿಷ್ಪತ್ತಿ ಹೆಚ್ಚಾಯಿತು. ಇದರಿಂದ ಸಾಧನೆಯಲ್ಲಿ ಪ್ರಗತಿಯಾಯಿತು’, ಎಂದು ನನಗೆ ಅನಿಸುತ್ತದೆ.
ಸಚ್ಚಿದಾನಂದ ಪರಬ್ರಹ್ಮ ಗುರುದೇವರು ಸೂಚಿಸಿದ ಶಬ್ದ ಪುಷ್ಪಗಳನ್ನು ಕೃತಜ್ಞತೆಯ ಭಾವದಿಂದ ಅವರ ಚರಣಗಳಲ್ಲಿ ಅರ್ಪಿಸುತ್ತೇನೆ ! (ಮುಂದುವರಿಯುವುದು)
‘ಇದಂ ನ ಮಮ |’ (ಅರ್ಥ : ಈ ಬರಹ ನನ್ನದಲ್ಲ.)
– (ಸದ್ಗುರು) ರಾಜೇಂದ್ರ ಶಿಂದೆ, ಸನಾತನ ಆಶ್ರಮ, ದೇವದ, ಪನವೇಲ. (೧.೧.೨೦೨೩)