ಮನೆಯಲ್ಲಿಯೇ ಮಾಡಬಹುದಾದ ‘ಹೊಮಿಯೋಪಥಿ ಉಪಚಾರ !’ (ಲೇಖನಮಾಲೆ ೧೭) !
ಇಂದಿನ ಒತ್ತಡಮಯ ಜೀವನದಲ್ಲಿ ಎಲ್ಲರಿಗೂ ಮತ್ತು ಯಾವುದೇ ಸಮಯ ದಲ್ಲಿಯೂ ಸಾಂಕ್ರಾಮಿಕ ರೋಗಗಳನ್ನು ಅಥವಾ ಇತರ ಯಾವುದೇ ಕಾಯಿಲೆಗಳನ್ನು ಎದುರಿಸ ಬೇಕಾಗುತ್ತದೆ. ಇಂತಹ ಸಮಯದಲ್ಲಿ ಯಾವಾಗಲೂ ತಕ್ಷಣ ವೈದ್ಯರ ಸಲಹೆ ದೊರಕುತ್ತದೆ ಎಂದೇನಿಲ್ಲ. ಶೀತ, ಕೆಮ್ಮು, ಜ್ವರ, ವಾಂತಿ, ಭೇದಿ, ಮಲಬದ್ಧತೆ, ಆಮ್ಲಪಿತ್ತ ಇಂತಹ ವಿವಿಧ ಕಾಯಿಲೆಗಳಿಗಾಗಿ ಮನೆಯಲ್ಲಿಯೇ ಚಿಕಿತ್ಸೆಯನ್ನು ಮಾಡಲು ಹೋಮಿಯೋಪತಿ ಚಿಕಿತ್ಸಾಪದ್ಧತಿಯು ಜನಸಾಮಾನ್ಯರಿಗೆ ತುಂಬಾ ಉಪಯುಕ್ತವಾಗಿದೆ. ಮನೆಯಲ್ಲಿಯೇ ಈ ಚಿಕಿತ್ಸೆ ಯನ್ನು ಹೇಗೆ ಮಾಡಬಹುದು ? ಹೋಮಿಯೋಪತಿ ಔಷಧಿಗಳನ್ನು ಯಾವ ರೀತಿ ತಯಾರಿಸಬೇಕು ? ಅವುಗಳನ್ನು ಹೇಗೆ ಸಂಗ್ರಹಿಸ ಬೇಕು ? ಇಂತಹ ಮಾಹಿತಿಯನ್ನು ಇಲ್ಲಿ ಕೊಡುತ್ತಿದ್ದೇವೆ.
ಸಂಚಿಕೆ ೨೫/೯ ರಿಂದ ನಾವು ಪ್ರತ್ಯಕ್ಷ ರೋಗಗಳ ಮೇಲೆ ಸ್ವಯಂಚಿಕಿತ್ಸೆ ಪದ್ಧತಿಯನ್ನು ತಿಳಿದುಕೊಳ್ಳುತ್ತಿದ್ದೇವೆ. ಅದರ ಅಡಿಯಲ್ಲಿ ೨೫/೧೯ ನೇ ಸಂಚಿಕೆಯಲ್ಲಿ ನಾವು ”ಹಸಿವಾಗದಿರುವುದು’ (Loss of Appetite)’’ ರೋಗಕ್ಕೆ ತೆಗೆದುಕೊಳ್ಳಬೇಕಾದ ಆರೈಕೆ ಮತ್ತು ಅದಕ್ಕೆ ತೆಗೆದುಕೊಳ್ಳಬೇಕಾದ ಔಷದಿಗಳ ಮಾಹಿತಿಯನ್ನು ಓದಿದೆವು. ಕಾಯಿಲೆಗಳಿಗೆ ನೇರವಾಗಿ ಸ್ವಯಂಚಿಕಿತ್ಸೆ ಮಾಡುವ ಮೊದಲು ೨೫/೧, ೨೫/೨ ಮತ್ತು ೨೫/೩ ನೇ ‘ಸನಾತನ ಪ್ರಭಾತ’ ಪತ್ರಿಕೆಯಲ್ಲಿ ಪ್ರಕಟಿಸಲಾದ ಲೇಖನಗಳಲ್ಲಿನ ‘ಹೋಮಿಯೋಪತಿ ಸ್ವಯಂಚಿಕಿತ್ಸೆಯ ಬಗ್ಗೆ ಇರುವ ಮಾರ್ಗದರ್ಶನದ ಅಂಶಗಳು ಮತ್ತು ಪ್ರತ್ಯಕ್ಷ ಔಷಧಿಗಳನ್ನು ಹೇಗೆ ಆಯ್ಕೆ ಮಾಡಬೇಕು ?’, ಎಂಬುದರ ಮಾಹಿತಿಯನ್ನು ವಾಚಕರು ಈ ಮೊದಲು ಓದಬೇಕೆಂದು ವಿನಂತಿ !
ಪರಿಪೂರ್ಣ ಆರೋಗ್ಯಕ್ಕಾಗಿ ಪ್ರೌಢರಿಗೆ ಸರಾಸರಿ ೭ ರಿಂದ ೮ ಗಂಟೆ ನಿದ್ರೆ ಬೇಕಾಗುತ್ತದೆ. ‘ಸ್ವಲ್ಪವೂ ನಿದ್ರೆ ಬಾರದಿರುವುದು, ಅಪೇಕ್ಷಿತ ಹಾಗೂ ಆವಶ್ಯಕವಿರುವಷ್ಟು ಗಂಟೆ ನಿದ್ರೆ ಬಾರದಿರುವುದು, ರಾತ್ರಿ ನಿದ್ರೆಯಿಂದ ಎಚ್ಚರವಾಗುವುದು ಮತ್ತು ಪುನಃ ನಿದ್ರೆ ಬಾರದಿರುವುದು, ಮುಂಜಾನೆ ಬೇಗ ಎಚ್ಚರವಾಗುವುದು’, ಇವೆಲ್ಲ ಲಕ್ಷಣಗಳಿಗೆ ‘ನಿದ್ರಾನಾಶ’ ಎನ್ನುತ್ತಾರೆ. ಸಾಕಷ್ಟು ನಿದ್ರೆ ಆಗದಿರುವುದರಿಂದ ಹಗಲಿ ನಲ್ಲಿ ನಿದ್ರೆ ಬರುವುದು, ಆಯಾಸವಾಗುವುದು, ಕಿರಿಕಿರಿ ಆಗುವುದು, ನಿರುತ್ಸಾಹದಂತಹ ದುಷ್ಪರಿಣಾಮಗಳಾಗುವುದು ಮುಂತಾದ ತೊಂದರೆಗಳು ಆಗುತ್ತವೆ.
೧. ನಿದ್ರಾನಾಶವನ್ನು ನಿವಾರಿಸಲು ಮಾಡಬೇಕಾದ ಸಾಮಾನ್ಯ ಪ್ರಯತ್ನಗಳು
ಅ. ಆರಾಮದಾಯಕ ಹಾಸಿಗೆ ಹಾಗೂ ದಿಂಬನ್ನು ಉಪಯೋಗಿಸಬೇಕು
ಆ. ರಾತ್ರಿ ನಿರ್ಧಿಷ್ಟ ಸಮಯದಕ್ಕೆ ಮಲಗುವ ಅಭ್ಯಾಸ ಮಾಡಬೇಕು
ಇ. ಮಲಗುವ ೧ ಗಂಟೆ ಮೊದಲು ಬಿಸಿ ನೀರಿನಿಂದ ಸ್ನಾನ ಮಾಡಬೇಕು
ಈ. ಕಾಫಿ ಕುಡಿಯಬಾರದು
ಉ. ಹಗಲಿನ ಸಮಯದಲ್ಲಿ ನಿದ್ರೆಯನ್ನು ಮಾಡಬಾರದು
ಊ. ಮಲಗುವ ಮೊದಲು ಕನಿಷ್ಟ ೧ ಗಂಟೆ ಟಿ.ವಿ. ಮೋಬೈಲ್, ಗಣಕಯಂತ್ರ ಇತ್ಯಾದಿಗಳನ್ನು ಬಳಸದಿರುವುದು.
ಎ. ಮಲಗುವ ಮೊದಲು ಹೆಚ್ಚು ಪ್ರಮಾಣದಲ್ಲಿ ಊಟ ಮಾಡಬಾರದು
ಏ. ಮಲಗುವ ಕೋಣೆಯಲ್ಲಿ ದೊಡ್ಡ ಧ್ವನಿ ಹಾಗೂ ಹೆಚ್ಚು ಬೆಳಕು (bright light) ಇರಬಾರದು
ಓ. ಸಕ್ರಿಯವಾಗಿರಬೇಕು, ಯೋಗಾಸನಗಳನ್ನು ಮಾಡಬೇಕು
ಔ. ಒತ್ತಡವನ್ನು ಯಶಸ್ವಿಯಾಗಿ ಎದುರಿಸುವ ಕ್ಷಮತೆಯನ್ನು ನಿರ್ಮಿಸಬೇಕು
ಅಂ. ಶಿಥಿಲತೆಗಾಗಿ ಧ್ಯಾನಧಾರಣೆ ಮಾಡಬೇಕು
೨. ಹೋಮಿಯೋಪಥಿ ಔಷಧಗಳು
೨ ಅ. ಕಾಫಿಯಾ ಕ್ರೂಡಾ (Coffea Cruda)
೨ ಅ ೧. ನಿದ್ರೆ ಬಾರದಿರಲು ಈ ಮುಂದಿನ ಯಾವುದಾದರೊಂದು ಕಾರಣ ಇರಬಹುದು
ಅ. ಯಾವುದಾದರೂ ಒಳ್ಳೆಯ ವಾರ್ತೆ ಕೇಳುವುದು
ಆ. ಮನಸ್ಸಿನಲ್ಲಿ ಅನೇಕ ವಿಚಾರಗಳಿರುವುದರಿಂದ ಮನಸ್ಸು ಉದ್ವಿಗ್ನವಾಗುವುದು
೨ ಅ ೨. ಸಣ್ಣ ಮಕ್ಕಳಲ್ಲಿ ನಿದ್ರಾನಾಶ
೨ ಅ ೩. ಸಣ್ಣ ಮಕ್ಕಳಲ್ಲಿ ಹಲ್ಲು ಬರುವ ಸಮಯದಲ್ಲಿನ ನಿದ್ರಾನಾಶ
ಟಿಪ್ಪಣಿ : ಈ ಔಷಧಗಳನ್ನು ತೆಗೆದುಕೊಳ್ಳುವಾಗ ಕಾಫಿ ಕುಡಿಯಬಾರದು.
೨ ಆ. ನಕ್ಸ್ ವೊಮಿಕಾ (Nux Vomica)
೨ ಆ ೧. ನಿದ್ರೆ ಬಾರದಿರಲು ಈ ಮುಂದಿನ ಯಾವುದೇ ಕಾರಣ ಇರಬಹುದು
೧. ಹೆಚ್ಚು ಪ್ರಮಾಣದಲ್ಲಿ ಕಾಫಿ, ಚಹಾ ಅಥವಾ ಮದ್ಯಪಾನ ಮಾಡುವುದು
೨. ಬೌದ್ಧಿಕ ಒತ್ತಡ ಇರುವುದು
೩. ಬೆಳಗ್ಗೆ ಏಳುವಾಗ ಉಲ್ಲಾಸವಿಲ್ಲದಿರುವುದು
೨ ಇ. ಸಲ್ಫರ್ (Sulphur) : ಅಂಗಾಲುಗಳು ಉರಿಯುವುದರಿಂದ ನಿದ್ರೆ ಬಾರದಿರುವುದು; ಬಂದರೂ ಉಸಿರುಗಟ್ಟಿದಂತಾಗಿ ಎಚ್ಚರವಾಗುವುದು
೨ ಈ. ಎಕೊನಾಯಿಟ್ ನಪೆಲ್ಲಸ್ (Aconite Napellus) : ತುಂಬಾ ಚಿಂತೆ, ಅಸ್ವಸ್ಥತೆ ಹಾಗೂ ಮರಣದ ಭಯದಿಂದ ನಿದ್ರೆ ಬಾರದಿರುವುದು
೨ ಉ. ಪಲ್ಸೆಟಿಲಾ ನಿಗ್ರಿಕನ್ಸ್ (Pulsatilla Nigricans)
೨ ಉ ೧. ನಿದ್ರೆ ಬಾರದಿರಲು ಈ ಮುಂದಿನ ಯಾವುದೇ ಕಾರಣವಿರಬಹುದು
ಅ. ಸಮಯಮೀರಿ ಹಾಗೂ ಹೆಚ್ಚು ಪ್ರಮಾಣದಲ್ಲಿ ಭೋಜನ ಮಾಡುವುದರಿಂದ ಅಜೀರ್ಣವಾಗುವುದು
ಆ. ಮನಸ್ಸಿನಲ್ಲಿ ಅನೇಕ ವಿಚಾರಗಳಿರುವುದು
೨ ಉ ೨. ಮುಂದೆ ಬಗ್ಗಿ ಅಥವಾ ಒಂದು ಬದಿಗೆ ಒರಗಿ ಕುಳಿತಾಗ ನಿದ್ರೆ ಬರುವುದು
೨ ಉ ೩. ಸಮಸ್ಯೆಗಳ ಕನಸುಗಳು ಬೀಳುವುದು
೨ ಊ. ಕ್ಯಾಂಫರ್ (Camphor) : ಚಿಂತೆಯಲ್ಲಿರುವುದರಿಂದ ಮನಸ್ಸು
ಉದ್ವಿಗ್ನ ಸ್ಥಿತಿಯಲ್ಲಿ ಇರುವುದರಿಂದ ನಿದ್ರೆ ಬಾರದಿರುವುದು
೨ ಎ. ಅರ್ನಿಕಾ ಮೊಂಟಾನಾ : (Arnica Montana)
೨ ಎ ೧. ನಿದ್ರೆ ಬಾರದಿರಲು ಈ ಮುಂದಿನ ಯಾವುದೇ ಕಾರಣವಿರಬಹುದು
೧. ಗುದ್ದಿದ ಪೆಟ್ಟು, ಶರೀರಕ್ಕೆ ಗಾಯಗಳಾಗುವುದು
೨. ಅತಿಯಾದ ಪರಿಶ್ರಮ
೨ ಎ ೨. ಮಲಗಿದಾಗ ಹಾಸಿಗೆ ತುಂಬಾ ಗಟ್ಟಿಯಾಗಿದೆಯೆಂದು ಅನಿಸುವುದು
೨ ಏ. ಹಾಯೋಸಾಯಮಸ್ ನಾಯಗರ್ (Hyoscyamus Niger)
೨ ಏ ೧. ನಿದ್ರೆ ಬರದಿರಲು ಈ ಮುಂದಿನ ಯಾವುದೇ ಕಾರವಿರಬಹುದು
೧. ಪ್ರೇಮ ಭಂಗವಾಗುವುದು
೨. ‘ವ್ಯವಸಾಯದಲ್ಲಿ ನಷ್ಟ ಆಗದಿದ್ದರೂ, ಅದು ಆಗಿದೆ ಎಂದು ಅನಿಸುವುದು
೩. ಕೋಪ, ಕಿರಿಕಿರಿ, ಮತ್ಸರ ಇವುಗಳಿಂದ ಮನಸ್ಸಿನಲ್ಲಿ ತೀವ್ರ ಅಸ್ಥಿರತೆ ಇರುವುದು
೨ ಏ ೨. ಅದರಲ್ಲಿ ನಿದ್ರೆ ಬಂದರೂ ಬಡಬಡಿಸುವುದು ಅಥವಾ ನಗುವುದು
೨ ಓ. ಓಪಿಯಮ್ (Opium)
೧. ಮಲಗಲು ಹೋದಾಗ ಹಾಸಿಗೆ ತುಂಬಾ ಬಿಸಿ ಅನಿಸುವುದು
೨. ಹಾಸಿಗೆಯಲ್ಲಿರುವಾಗ ದೂರದ ಧ್ವನಿಯೂ ಸ್ಪಷ್ಟವಾಗಿ ಕೇಳಿಸುವುದರಿಂದ ನಿದ್ರೆ ಬಾರದಿರುವುದು
೨ ಔ. ಪ್ಯಾಸಿಫ್ಲೋರಾ ಇನ್ಕಾರ್ನಾಟಾ ಮೂಲ ಅರ್ಕ (Passiflora Incarnata Mother tincture)
೧. ಮೇಲಿನ ‘೧ ರಿಂದ ೯’ ಈ ಔಷಧಗಳಲ್ಲಿ ‘ಲಕ್ಷಣಗಳಿಗನುಸಾರ ತಮಗೆ ಅನ್ವಯವಾಗುವ ಔಷಧವನ್ನು ಹುಡುಕಿ ಅದನ್ನು ತೆಗೆದುಕೊಳ್ಳಬೇಕು. ಅದರ ಜೊತೆಗೆ ಪ್ಯಾಸಿಫ್ಲೋರಾ ಇನ್ಕಾರ್ನಾಟಾ ಮೂಲ ಅರ್ಕವನ್ನೂ ತೆಗೆದುಕೊಳ್ಳಬೇಕು.
೨. ಲಕ್ಷಣಗಳಿಗನುಸಾರ ನಮಗೆ ಅನ್ವಯವಾಗುವ ಔಷಧ’ ಸಿಗದಿದ್ದರೆ ಕೇವಲ ಪ್ಯಾಸಿಫ್ಲೋರಾ ಇನ್ಕಾರ್ನಾಟಾ ಮೂಲ ಅರ್ಕವನ್ನು ತೆಗೆದುಕೊಳ್ಳಬೇಕು.
ಸೂ.ಕ್ರ. ‘೨ ಔ.’ ನಲ್ಲಿನ ೧ ಮತ್ತು ೨ ಇವೆರಡೂ ಪರಿಸ್ಥಿತಿ ಯಲ್ಲಿ ಈ ಔಷಧದ ೩೦ ಹನಿಗಳನ್ನು ರಾತ್ರಿ ಮಲಗುವಾಗ ತೆಗೆದುಕೊಳ್ಳಬೇಕು. ನಿಯಮಿತ ಶಾಂತ ನಿದ್ರೆ ಬರಲು ಆರಂಭವಾದಾಗ ಈ ಔಷಧವನ್ನು ನಿಲ್ಲಿಸಬೇಕು.
೩. ಹನ್ನೆರಡುಕ್ಷಾರ ಔಷಧ
೩ ಅ. ಕಲಿಯಮ್ ಫಾಸ್ಫೋರಿಕಮ್ (Kalium Phosphoricum 6x) : ಈ ಔಷಧದ ೪ ಮಾತ್ರೆಗಳನ್ನು ಉಗುರುಬಿಸಿ ಹಾಲು ಅಥವಾ ನೀರಿನಲ್ಲಿ ಕರಗಿಸಿ ರಾತ್ರಿ ಮಲಗುವ ಮೊದಲು ತೆಗೆದುಕೊಳ್ಳಬೇಕು.