‘ವಿಟಾಮಿನ್‌ (ಜೀವಸತ್ವ) ಬಿ ೧೨’ ಕೊರತೆ ಇದ್ದರೆ, ಯಾವ ಆಹಾರವನ್ನು ಸೇವಿಸಬೇಕು ?

(ಟಿಪ್ಪಣಿ : ‘ವಿಟಾಮಿನ್‌ ಬಿ ೧೨’ ನ್ನು ‘ಸೈನೊಕೊಬಾಲಾಮಿನ್’ ಎಂದೂ ಕರೆಯುತ್ತಾರೆ. ಇದು ಕೋಶಗಳ ವರೆಗಿನ ಚಯಾಪಚಯ, ವಿಶೇಷವಾಗಿ ‘ಡಿ.ಎನ್‌.ಎ.’ ಸಂಶ್ಲೇಷಣೆ (ಅನುವಂಶಿಕ ಜೀನ್‌ಗಳು) ಮತ್ತು ಊರ್ಜೆಯ ಉತ್ಪಾದನೆಯಲ್ಲಿ ಮಹತ್ವಪೂರ್ಣ ಪಾತ್ರವನ್ನು ವಹಿಸುತ್ತದೆ.)

ಇತ್ತೀಚೆಗಿನ ಬಹಳಷ್ಟು ರೋಗಗಳ ಮೂಲ ಜೀವನಶೈಲಿಯಲ್ಲಿರು ವುದು ಕಂಡುಬರುತ್ತಿದೆ. ‘ವಿಟಾಮಿನ್‌ ಬಿ ೧೨’ನ ಕೊರತೆಯೂ ಜೀವನಶೈಲಿಗೆ ಸಂಬಂಧಿಸಿದೆ ಮತ್ತು ಇದು ವಿವಿಧ ಔಷಧಿಗಳ ದುಷ್ಪರಿಣಾಮಗಳಿಂದಲೂ ಸಾಭೀತಾಗುತ್ತದೆ. ಅನೇಕ ರೋಗಿಗಳಲ್ಲಿ ‘ವಿಟಾಮಿನ್‌ ಬಿ ೧೨’ನ ಕೊರತೆ ಕಂಡು ಬರುತ್ತದೆ. ನಂತರ ಇದಕ್ಕಾಗಿ ಚುಚ್ಚುಮದ್ದು, ಮಾತ್ರೆಗಳು ಮುಂತಾದ ವಿವಿಧ ಚಿಕಿತ್ಸೆ ಆರಂಭವಾಗುತ್ತದೆ.

೧. ‘ವಿಟಾಮಿನ್‌ ಬಿ ೧೨’ನ ಕೊರತೆ ಯಾವುದರಿಂದ ಆಗುತ್ತದೆ ?

‘ವಿಟಾಮಿನ್‌ ಬಿ ೧೨’ ಇದು ನೀರಿನಲ್ಲಿ ಕರಗುವ (ವಾಟರ ಸಾಲ್ಯುಬಲ್) ಜೀವಸತ್ವವಾಗಿದೆ. ಆದ್ದರಿಂದ ಅದು ಶರೀರದಲ್ಲಿ ಹೀರಲ್ಪಡುತ್ತದೆ. ‘ಕೊಬಾಲ್ಟ್‌’ ಈ ಮಿನರಲ್‌ (ಖನಿಜ ಪದಾರ್ಥ) ‘ವಿಟಾಮಿನ್‌ ಬಿ ೧೨’ನಲ್ಲಿದೆ. ”ವಿಟಾಮಿನ್‌ ಬಿ ೧೨’ ಶರೀರಕ್ಕೆ ಬಹಳ ಕಡಿಮೆ ಪ್ರಮಾಣದಲ್ಲಿ ಬೇಕಾಗುತ್ತದೆ. ಪಿತ್ತಜನಕಾಂಗದಲ್ಲಿ (ಲಿವರ್) ಅದರ ಸಂಗ್ರಹವಿರುತ್ತದೆ. ಎಲ್ಲಿಯವರೆಗೆ ಈ ಸಂಗ್ರಹ ಮುಗಿಯುವುದಿಲ್ಲವೋ, ಅಲ್ಲಿಯವರೆಗೆ ‘ವಿಟಾಮಿನ್‌ ಬಿ ೧೨’ನ ಕೊರತೆಯಾಗಲು ಸಾಧ್ಯವಿಲ್ಲ. ನಮ್ಮ ಆಹಾರ ಸಮತೋಲನ ದಲ್ಲಿದ್ದರೆ, ಅಂದರೆ ಎಲ್ಲ ಘಟಕಗಳು ಆಹಾರದ ಮಾಧ್ಯಮದಿಂದ ನಮ್ಮ ಶರೀರಕ್ಕೆ ಸಿಗುತ್ತಿದ್ದರೆ, ‘ವಿಟಾಮಿನ್‌ ಬಿ ೧೨’ನ ಕೊರತೆ ಸಾಮಾನ್ಯವಾಗಿ ಆಗುವುದಿಲ್ಲ. ‘ವಿಟಾಮಿನ್‌ ಬಿ ೧೨’ನ ಕೊರತೆ ಇದ್ದರೆ ಆರೋಗ್ಯ ಕೆಡುತ್ತದೆ ಎಂದು ತಿಳಿಯಬೇಕು. ಬದಲಾದ ಜೀವನಶೈಲಿಯೇ ‘ವಿಟಾಮಿನ್‌ ಬಿ ೧೨’ನ ಕೊರತೆಯಾಗುವುದರ ಮುಖ್ಯ ಕಾರಣವಾಗಿದೆ.

ಡಾ. ಪ್ರಣಿತಾ ಅಶೋಕ

೨. ‘ಬಿ ೧೨’ ನ ಕೊರತೆ ಏಕೆ ಆಗುತ್ತದೆ ?

ಒಂದು ವೇಳೆ ಸಾಕಷ್ಟು ಲಾಲಾರಸ ಉತ್ಪಾದನೆ ಆಗದಿದ್ದರೆ, ‘ವಿಟಾಮಿನ್‌ ಬಿ ೧೨’ ಆರ್‌ ಪ್ರೋಟಿನ್‌ನೊಂದಿಗೆ ಸೇರಿಕೊಳ್ಳುವುದಿಲ್ಲ. ಇದರಿಂದ ಶರೀರದ ‘ವಿಟಾಮಿನ್‌ ಬಿ ೧೨’ಅನ್ನು ಹೀರಿಕೊಳ್ಳುವ ಕ್ಷಮತೆ ಕಡಿಮೆಯಾಗುತ್ತದೆ.

ಅನೇಕ ಬಾರಿ ವಿವಿಧ ಔಷಧಿಗಳಿಂದ ನಮ್ಮ ಬಾಯಿ ಒಣಗುತ್ತದೆ. ಸಾಕಷ್ಟು ಲಾಲಾರಸದ ಉತ್ಪಾದನೆ ಆಗುವುದಿಲ್ಲ. ರಕ್ತದೊತ್ತಡದ (ಬ್ಲಡ್‌ ಪ್ರೇಶರ್‌ನ) ಔಷಧಿಗಳು, ಹಾಗೆಯೇ ನಿರಾಶೆಯ ಚಿಕಿತ್ಸೆಗಾಗಿ ತೆಗೆದುಕೊಳ್ಳಲಾಗುವ ಔಷಧಿಗಳಿಂದ (ಎಂಟಿ ಡಿಪ್ರೆಶನ್) ಅನೇಕ ಬಾರಿ ಬಾಯಿ ಒಣಗುತ್ತದೆ. ಹೊಟ್ಟೆಯಲ್ಲಿ ಆಮ್ಲ (ಯಾಸಿಡ್) ಕಡಿಮೆ ಪ್ರಮಾಣದಲ್ಲಿ ಸ್ರವಿಸುತ್ತಿದ್ದರೆ, ‘ಬಿ ೧೨’ನ ಕೊರತೆ ಉಂಟಾಗುತ್ತದೆ. ಹೊಟ್ಟೆಯ ಹುಣ್ಣುಗಳಿಗೆ (ಅಲ್ಸರ) ಚಿಕಿತ್ಸೆ ನೀಡಲು ಬಳಸಲಾಗುವ ಔಷಧಿಗಳು ಆಮ್ಲದ ಉತ್ಪಾದನೆಯನ್ನು ಕಡಿಮೆ ಮಾಡುತ್ತವೆ. ‘ವಿಟಾಮಿನ್‌ ಬಿ ೧೨’ನ ಕೊರತೆ ಮತ್ತು ‘ಅಲ್ಸರ್‌ನ ಮಾತ್ರೆಗಳಲ್ಲಿ ಸಂಬಂಧವಿರುವುದು ಸಂಶೋಧನೆಯಲ್ಲಿ ಕಂಡು ಬಂದಿದೆ.

ವಯಸ್ಸಾಗುತ್ತಾ ಹೋದಂತೆ ಹೊಟ್ಟೆಯಲ್ಲಿನ ‘ಯಾಸಿಡ್’ ಸ್ರವಿಸುವಿಕೆಯ ಪ್ರಕ್ರಿಯೆ ಮಂದವಾಗುತ್ತದೆ. ‘ಗ್ಯಾಸ್ಟ್ರಿಕ್‌ ಸರ್ಜರಿ’ (ಜಠರಕ್ಕೆ ಸಂಬಂಧಿಸಿದ ಶಸ್ತ್ರಚಿಕಿತ್ಸೆ), ಹಳೆಯ ಬಾವು (ಊದುವಿಕೆ), ದೀರ್ಘಕಾಲದಿಂದ ಇರುವ ‘ಎನಿಮಿಯಾ’ (ರಕ್ತಕ್ಷಯ), ಆಯಾಸ ಇಂತಹ ಕಾರಣಗಳಿಂದ ಹೊಟ್ಟೆಯ ಸಮಸ್ಯೆಗಳು ಉಂಟಾಗುತ್ತವೆ. ಮೇದೋಜ್ಜಿರಕ ಗ್ರಂಥಿಯ ವೈಫಲ್ಯವು ‘ವಿಟಾಮಿನ್‌ ಬಿ ೧೨’ನ ಕೊರತೆಯ ಮುಖ್ಯ ಕಾರಣವಾಗಿದೆ. ‘ಟೈಪ್‌ ೨’ ಮಧುಮೇಹದಲ್ಲಿ ಚಿಕಿತ್ಸೆಗಾಗಿ ಬಳಸಲಾಗುವ ‘ಮೆಟಫಾರ್ಮಿನ್‌ ‘ಬಿ ೧೨’ ಕೊರತೆಗಾಗಿ ಕಾರಣವಾಗಿದೆ.

೩. ‘ವಿಟಾಮಿನ್‌ ಬಿ ೧೨’ನ ಕೊರತೆಯ ಲಕ್ಷಣಗಳು

ಹಸಿವಾಗದಿರುವುದು, ಮಲಬದ್ಧತೆ, ನಿಃಶಕ್ತಿ, ಕೈಕಾಲುಗಳು ಜುಮ್ಮೆನ್ನುವುದು ಈ ಲಕ್ಷಣಗಳಿದ್ದರೆ ಡಾಕ್ಟರರು ರಕ್ತಪರೀಕ್ಷೆ ಮಾಡಲು ಹೇಳುತ್ತಾರೆ. ಅವಶ್ಯಕತೆ ಇದ್ದರೆ, ಪೂರಕ ಔಷಧಿಗಳನ್ನು ತೆಗೆದುಕೊಳ್ಳಲು ಸಲಹೆ ನೀಡಲಾಗುತ್ತದೆ. ‘ವಿಟಾಮಿನ್‌ ಬಿ ೧೨’ ರ ಮಟ್ಟ ಬಹಳ ಕಡಿಮೆ ಇದ್ದರೆ, ಹಾಗೆಯೇ ಕೊರತೆಯ ಲಕ್ಷಣಗಳಿದ್ದರೆ, ಮಾತ್ರ ಔಷಧಿಯನ್ನು ಶಿಫಾರಸು ಮಾಡಲಾಗುತ್ತದೆ. ಒಂದು ವೇಳೆ ಕರುಳಿಗೆ ‘ವಿಟಾಮಿನ್‌ ಬಿ ೧೨’ಯನ್ನು ಸರಿಯಾಗಿ ಹೀರಿಕೊಳ್ಳಲು ಸಾಧ್ಯವಾಗದಿದ್ದರೆ, ಚುಚ್ಚುಮದ್ದು ಒಂದು ಮಹತ್ವದ ಪರಿಹಾರವಾಗಿದೆ.

೪. ಆಹಾರ ಹೇಗಿರಬೇಕು ?

ಅ. ‘ವಿಟಾಮಿನ್‌ ಬಿ ೧೨’ನ ಸ್ರೋತಗಳಾದ – ಹಾಲು, ಮೊಸರು, ಮಜ್ಜಿಗೆ, ಪ್ರಾಣಿಜನ್ಯ ಪದಾರ್ಥಗಳು, ಮೀನು, ಮೊಟ್ಟೆ, ಚಿಕನ್, ಇವುಗಳಲ್ಲಿ ‘ವಿಟಾಮಿನ್‌ ಬಿ ೧೨’ನ ಪ್ರಮಾಣ ಚೆನ್ನಾಗಿರುತ್ತದೆ; ಆದರೆ ಅನೇಕ ಸಸ್ಯಾಹಾರಿ ವ್ಯಕ್ತಿಗಳಿಗೆ ‘ಬಿ ೧೨’ ಹೆಚ್ಚಿಸಲು ನಾವೇನು ಮಾಡಬೇಕು ? ಎಂಬ ಪ್ರಶ್ನೆ ಮೂಡುತ್ತದೆ. ಸಸ್ಯಾಹಾರಿ ಜನರಿಗಾಗಿ ಈ ಪ್ರಮಾಣ ಹೆಚ್ಚಿರುವ ಹಣ್ಣುಗಳು ಮತ್ತು ತರಕಾರಿಗಳು ನಮ್ಮ ಬಳಿ ಧಾರಾಳವಾಗಿ ಸಿಗುತ್ತವೆ. ಉದಾಹರಣೆಗೆ ಪಾಲಕ್, ಬೀಟರೂಟ್, ‘ಬಟರ್‌ನಟ್‌ ಸ್ಕ್ವ್ಯಾಶ್’ (ಹಣ್ಣುಗಳಿಂದ ತಯಾರಿಸಿದ ಪಾನೀಯ), ಮಶರುಮ್‌ ಮತ್ತು ಬಟಾಟೆ ಇವುಗಳಂತಹ ತರಕಾರಿಗಳು ‘ವಿಟಾಮಿನ್‌ ಬಿ ೧೨’ನ ಒಳ್ಳೆಯ ಸ್ರೋತಗಳಾಗಿವೆ. ಒಂದು ವೇಳೆ ನೀವು ಸಸ್ಯಾಹಾರಿಯಾಗಿದ್ದರೆ, ಆಹಾರದಲ್ಲಿ ನೀವು ಈ ಪದಾರ್ಥಗಳನ್ನು ಸೇವಿಸಬೇಕು.

ಆ. ಹಸಿವಾಗದಿರುವುದು, ಏಕಾಗ್ರತೆಯ ಅಭಾವ, ಬಾಯಿಯಲ್ಲಿ ಅಥವಾ ನಾಲಿಗೆಯ ಮೇಲೆ ಹುಣ್ಣುಗಳಾಗುವುದು ಇವು ‘ವಿಟ್ಯಾಮಿನ್‌ ಬಿ ೧೨’ನ ಕೊರತೆಯ ಲಕ್ಷಣಗಳಾಗಿವೆ ಮತ್ತು ಈ ಲಕ್ಷಣಗಳು ಕಾಣಿಸುತ್ತಲೇ ಹಣ್ಣುಗಳನ್ನು ಮತ್ತು ತರಕಾರಿಗಳ ಸೇವನೆಯನ್ನು ಆರಂಭಿಸಬೇಕು.

ಇ. ಮಶ್ರುಮ : ಮಶ್ರ್ರುಮ್‌ಗಳಲ್ಲಿ ‘ವಿಟಾಮಿನ್‌ ಬಿ ೧೨’ ಹೆಚ್ಚಿರುತ್ತದೆ. ‘ವಿಟಾಮಿನ್‌ ಬಿ ೧೨’ನ ಶರೀರಕ್ಕೆ ಬೇಕಾಗುವ ಪ್ರತಿದಿನದ ಆವಶ್ಯಕತೆಯನ್ನು ಪೂರ್ಣಗೊಳಿಸಲು ಸುಮಾರು ೫೦ ಗ್ರಾಮ್‌ ಒಣಗಿದ ಮಶ್ರುಮ್‌ನ ಸೇವನೆ ಮಾಡಬೇಕಾಗುತ್ತದೆ, ಹಾಗೆಯೇ ಸೇಬು, ಬಾಳೆಹಣ್ಣು, ಬ್ಲೂ ಬೆರಿ ಮತ್ತು ಕಿತ್ತಳೆಹಣ್ಣು ಇತ್ಯಾದಿಗಳಲ್ಲಿಯೂ ‘ವಿಟಾಮಿನ್‌ ಬಿ ೧೨’ನ ಹೆಚ್ಚು ಕಡಿಮೆ ಪ್ರಮಾಣದಲ್ಲಿ ಸಿಗುತ್ತದೆ.

೫. ಯೋಗ್ಯ ಆಹಾರ ಮತ್ತು ನಿಯಮಿತ ವ್ಯಾಯಾಮ ಬೇಕು !

ಜೀವನಶೈಲಿಗೆ ಸಂಬಂಧಿಸಿದ ಯಾವುದೇ ರೋಗವನ್ನು ದೂರ ಇಡಬೇಕಿದ್ದರೆ, ಸಮತೋಲನ ಆಹಾರ ಸೇವಿಸುವುದು ಆವಶ್ಯಕವಾಗಿದೆ. ಯೋಗ್ಯ ಆಹಾರ ಮತ್ತು ನಿಯಮಿತ ವ್ಯಾಯಾಮ ಈ ಎರಡು ವಿಷಯಗಳು ನಮ್ಮನ್ನು ಯಾವುದೇ ರೋಗದಿಂದ ದೂರ ಇಡಬಹುದು. ಇಂದಿನಿಂದಲೇ ನಿಮ್ಮ ಆಹಾರವನ್ನು ಬದಲಾಯಿಸಿ. ನಿಮ್ಮ ಜೀವನ ನಿಶ್ಚಿತವಾಗಿಯೂ ಬದಲಾಗುವುದು.

– ಡಾ. ಪ್ರಣಿತಾ ಅಶೋಕ, ಎಮ್‌.ಬಿ.ಬಿ.ಎಸ್‌., ಎಮ್‌.ಡಿ., ಪಿಎಚ್‌.ಡಿ. (ಆಹಾರ ಸಲಹೆಗಾರರು) (ಆಧಾರ : ಫೆಸ್‌ಬುಕ್)