ನವ ದೆಹಲಿ – ಜನವರಿ ೨೨ ರಂದು ರಾತ್ರಿ ೧೧.೩೯ ಕ್ಕೆ ಚೀನಾ ಕಿರ್ಗಿಸ್ತಾನ ಗಡಿಯಲ್ಲಿ ೭.೨ ರಿಕ್ಟರ್ ಭೂಕಂಪ ಸಂಭವಿಸಿದೆ. ಈ ಭೂಕಂಪದಲ್ಲಿ ಅನೇಕ ಕಟ್ಟಡಗಳು ಕುಸಿದಿದ್ದು ಅನೇಕ ಜನರು ಗಾಯಗೊಂಡಿದ್ದಾರೆ. ಭೂಕಂಪದ ನಂತರ ೪೦ ಕಂಪನಗಳು ಕೂಡ ಸಂಭವಿಸಿವೆ. ಉರುಮಕಿ, ಕೊರಲಾ, ಕಾಶಗರ ಮತ್ತು ಯಿನಿಂಗ ಇಲ್ಲಿ ಭೂಕಂಪದ ಹೆಚ್ಚಿನ ಪ್ರಭಾವ ಬೀರಿದೆ. ಚೀನಾದಲ್ಲಿನ ಭೂಕಂಪದ ಪರಿಣಾಮ ಭಾರತದಲ್ಲಿ ಕೂಡ ಕಂಡು ಬಂದಿದೆ. ದೆಹಲಿ-ಎನ್.ಸಿ.ಆರ್. ನಲ್ಲಿ ಜನರಿಗೆ ಭೂಕಂಪದ ಕಂಪನ ಅರಿವಿಗೆ ಬಂದಿದೆ. ಹೆದರಿರುವ ಜನರು ಮನೆಯ ಹೊರಗೆ ಬಂದು ಬೈಲು ಪ್ರದೇಶಕ್ಕೆ ತಲುಪಿದ್ದರು. ಭೂಕಂಪನದ ತೀವ್ರತೆ ರಿಕ್ಟರ್ ನಲ್ಲಿ ೬.೧ ರಷ್ಟು ಕಂಡು ಬಂದಿದೆ.
(ಸೌಜನ್ಯ: Oneindia News)